Recipe: ಹಾಗಲಕಾಯಿ ತವ್ವಾ ಫ್ರೈ (Bitter guard Thavva Fry)
ಬೇಕಾಗುವ ಸಾಮಗ್ರಿ: 1 ಹಾಗಲಕಾಯಿ, ಸ್ವಲ್ಪ ಅರಿಶಿನ, 1 ಸ್ಪೂನ್ ಖಾರದ ಪುಡಿ, ಧನಿಯಾ ಪುಡಿ, ಅಕ್ಕಿ ಹುಡಿ, ಕಡಲೆ ಹುಡಿ, ಅಗತ್ಯವಿರುವಷ್ಟು ಎಣ್ಣೆ ಮತ್ತು ಉಪ್ಪು.
ಮಾಡುವ ವಿಧಾನ: ಹಾಗಲಕಾಯಿಯ ಬೀಜಗಳನ್ನು ಬೇರ್ಪಡಿಸಿ, ರಿಂಗ್‌ನಂತೆ ಗೋಲಾಕಾರದಲ್ಲಿ ಕತ್ತರಿಸಿ. ಇದನ್ನು 1 ಬೌಲ್‌ಗೆ ಹಾಕಿ, ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ. ಸ್ವಲ್ಪ ಸಮಯ ಹಾಗೆ ಇರಿಸಿ. ಇದರಿಂದ ಅದರ ಕಹಿ ಕಡಿಮೆಯಾಗುತ್ತದೆ.
ಬಳಿಕ ಕಿಚನ್ ಟವೆಲ್‌ನಿಂದ ಚೆನ್ನಾಗಿ ಡ್ರೈ ಮಾಡಿ. ಮತ್ತೆ ಬೌಲ್‌ಗೆ ಹಾಗಲಕಾಯಿ ಹಾಕಿ, ಅರಿಶಿನ, ಖಾರದ ಪುಡಿ, ಧನಿಯಾಪುಡಿ, ಹಿಂಗು, ಆಮ್ಚುರ್ ಪುಡಿ ಹಾಕಿ ಮಿಕ್ಸ್ ಮಾಡಿ. ಬಳಿಕ ಅಕ್ಕಿ ಹುಡಿ, ಮತ್ತು ಕಡಲೆಹುಡಿ, ಸ್ವಲ್ಪ ಎಣ್ಣೆ ಮಿಕ್ಸ್ ಮಾಡಿ.
ಈಗ ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ ಸವರಿ. ರೆಡಿ ಮಾಡಿದ ಹಾಗಲಕಾಯಿಯನ್ನು ಅದರ ಮೇಲೆ ಹರಡಿ, ತವ್ವಾ ಫ್ರೈ ಮಾಡಿ. ಮಂದ ಉರಿಯಲ್ಲಿಯೇ ಇದು ಫ್ರೈ ಆಗಬೇಕು. ಆಗ ಹಾಗಲಕಾಯಿ ಫ್ರೈ ರೆಡಿ. ಊಟದ ಜತೆ ಇದನ್ನು ಸೇವಿಸಬಹುದು.
Recipe: ಲಿಚಿ ಕೋಕೋನಟ್ ಪಂಚ್ (Litchi Coconut punch)
ಬೇಕಾಗುವ ಸಾಮಗ್ರಿ: ಎಳನೀರು, ಲಿಚಿ ಹಣ್ಣು, 1 ಸ್ಪೂನ್ ನೆನೆಸಿದ ಚೀಯಾ ಸೀಡ್ಸ್. ಗಾರ್ನಿಶ್ ಮಾಡಲು, ಲಿಚಿ ಹಣ್ಣು, ಟೆಂಡರ್‌್ ಕೋಕೋನಟ್.
ಮಾಡುವ ವಿಧಾನ: ಲಿಚ್ಚಿ ಹಣ್ಣಿನ ಸಿಪ್ಪೆ ತೆಗೆದು, ಕುಟ್ಟಣಿಗೆ ಸಹಾಯದಿಂದ ಕುಟ್ಟಿ, ಸ್ವಲ್ಪ ಪೇಸ್ಟ್ ಮಾಡಿ. ಇದನ್ನು ಸರ್ವಿಂಗ್ ಗ್ಲಾಸ್‌ಗೆ ಹಾಕಿ, ಇದರ ಮೇಲೆ ಚೀಯಾ ಸೀಡ್ಸ್, ಎಳನೀರು ಹಾಕಿ, ಮಿಕ್ಸ್ ಮಾಡಿ, ಲಿಚಿ ಮತ್ತು ಟೆಂಡರ್ ಕೋಕೋನಟ್‌ನಿಂದ ಗಾರ್ನಿಶ್ ಮಾಡಿದ್ರೆ, ಲಿಚಿ ಕೋಕೋನಟ್ ಪಂಚ್ ರೆಡಿ.
Recipe: ನೇರಳೆ ಹಣ್ಣಿನ ಪಾನೀಪುರಿ ರೆಸಿಪಿ (Jamoon Panipuri Recipe)
ಬೇಕಾಗುವ ಸಾಮಗ್ರಿ: 1 ಬೌಲ್ ನೇರಳೆ ಹಣ್ಣು, 1 ಸ್ಪೂನ್ ಕಪ್ಪುಪ್ಪು, ಬಿಳಿ ಉಪ್ಪು, ಜೀರಿಗೆ ಪುಡಿ, ನಿಂಬೆರಸ, 1 ಹಸಿಮೆಣಸು, ಸಣ್ಣಗೆ ಕತ್ತರಿಸಿದ, ಪುದೀನಾ, ಕೊತ್ತೊಂಬರಿ ಸೊಪ್ಪು, ಐಸ್‌ಕ್ಯೂಬ್ಸ್.
ಮಾಡುವ ವಿಧಾನ: ನೇರಳೆ ಹಣ್ಣಿನ ಬೀಜ ತೆಗೆದು, ಬ್ಲೆಂಡರ್‌ಗೆ ಹಾಕಿ, ಅದರ ಜ್ಯೂಸ್ ಮಾಡಿ. ಅದನ್ನು 1 ಬೌಲ್‌ಗೆ ಹಾಕಿ, ಅದಕ್ಕೆ ಕಪ್ಪುಪ್ಪು, ಬಿಳಿ ಉಪ್ಪು, ಜೀರಿಗೆ ಪುಡಿ, ನಿಂಬೆರಸ, 1 ಮೆಣಸು, ಪುದೀನಾ, ಕೊತ್ತೊಂಬರಿ ಸೊಪ್ಪು, ಐಸ್‌ಕ್ಯೂಬ್ಸ್, ಮಸಾಲಾ ಬೂಂದಿ ಹಾಾಕಿ ಮಿಕ್ಸ್ ಮಾಡಿದ್ರೆ ಪಾನಿ ರೆಡಿ.
ಈಗ ಪೂರಿ ಕರಿದು, ಆಲೂಗಡ್ಡೆ ಮಸಾಲೆ ತಯಾರಿಸಿ, ಈ ಜಾಮೂನ್ ಪಾನಿಯನ್ನು ಸೇರಿಸಿ, ಪಾನಿಪುರಿ ತಿನ್ನಿ.
Recipe: ಸಿಹಿಗೆಣಸಿನ ಚಾಟ್ ರೆಸಿಪಿ (Sweet potato Chat recipe)
ಬೇಕಾಗುವ ಸಾಮಗ್ರಿ: 2 ಸಿಹಿಗೆಣಸು, 1 ಸ್ಪೂನ್ ನಿಂಬೆ ರಸ, 2 ಸ್ಪೂನ್ ಜೇನುತುಪ್ಪ, 3 ಸ್ಪೂನ್ ಆಲಿವ್ ಎಣ್ಣೆ, 1 ಸ್ಪೂನ್ ಚಿಲ್ಲಿ ಫ್ಲೇಕ್ಸ್, 2 ಸ್ಪೂನ್ ಬಿಳಿ ಎಳ್ಳು, 1 ಸ್ಪೂನ್ ಎಣ್ಣೆ ಅಥವಾ ತುಪ್ಪ, ಸ್ವಲ್ಪ ದಾಳಿಂಬೆ, ಸ್ವಲ್ಪ ಪನೀರ್ ತುರಿ, ಉಪ್ಪು.
ಮಾಡುವ ವಿಧಾನ: ಸಿಹಿಗೆಣಸನ್ನು ಕುಕ್ಕರ್‌ಗೆ ಹಾಕಿ ಮಂದ ಉರಿಯಲ್ಲಿ 3 ವಿಶಲ್ ಬರುವವರೆಗೂ ಬೇಯಿಸಿ. ಇದು ತಣಿದ ಬಳಿಕ ಸಿಪ್ಪೆ ತೆಗೆದು, ಗೋಲಾಕಾರದಲ್ಲಿ ಕತ್ತರಿಸಿ, ಇದು ಬಿಲ್ಲೆಯ ರೀತಿ ಶೇಪ್ ಇರಲಿ.
1 ಮಿಕ್ಸಿಂಗ್ ಬೌಲ್‌ಗೆ ನಿಂಬೆ ರಸ, ಜೇನುತುಪ್ಪ, ಆಲಿವ್ ಎಣ್ಣೆ, ಚಿಲ್ಲಿ ಫ್ಲೇಕ್ಸ್, ಬಿಳಿ ಎಳ್ಳು, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಪಕ್ಕಕ್ಕಿರಿಸಿ. ಈಗ ದೋಸೆ ಪ್ಯಾನ್ ಬಿಸಿ ಮಾಡಿ, ಅದರ ಮೇಲೆ ಎಣ್ಣೆ ಅಥವಾ ತುಪ್ಪವನ್ನು ಹರಡಿ, ಅದರ ಮೇಲೆ ಬೇಯಿಸಿದ ಸಿಹಿಗೆಣಸನ್ನು ಇಡಿ. ಸ್ವಲ್ಪ ರೋಸ್ಟ್ ಮಾಡಿ, ಗ್ಯಾಸ್ ಆಫ್ ಮಾಡಿ.
ಬಳಿಕ ಪ್ಯಾನ್ ಮೇಲೆ ರೆಡಿ ಮಾಡಿದ ಕೋಟಿಂಗ್ ಹಾಕಿ, ಮಿಕ್ಸ್ ಮಾಡಿ. ಬಳಿಕ 1 ಬೌಲ್‌ಗೆ ಇದನ್ನು ಹಾಕಿ, ಉಪ್ಪು ಹಾಕಿ ಮಾಡಿದ ಪನೀರ್‌ನ್ನು ತರಿ ತರಿ ಮಾಡಿ ಹಾಕಿ. ಇದರ ಜತೆ ದಾಳಿಂಬೆ ಕೂಡ ಹಾಕಿದ್ರೆ, ಸಿಹಿಗೆಣಸಿನ ಚಾಟ್ ರೆಡಿ.
Recipe: ಧೀಡಿರ್ ಆಗಿ ತಯಾರಿಸಬಹುದಾದ ಈರುಳ್ಳಿ ಉಪ್ಪಿನಕಾಯಿ ರೆಸಿಪಿ (onion pickle Recipe)
ಬೇಕಾಗುವ ಸಾಮಗ್ರಿ: ಬೇಕಾಗಿರುವಷ್ಟು ಈರುಳ್ಳಿ, 1 ಸ್ಪೂನ್ ಜೀರಿಗೆ, ಮೆಂತ್ಯೆ, ಜೀರಿಗೆ, ಹಸಿಮೆಣಸು, ಕೊತ್ತೊಂಬರಿ ಸೊಪ್ಪು, ಶುಂಠಿ, ಖಾರದ ಪುಡಿ, ವಿನೇಗರ್, ಸಾಸಿವೆ ಎಣ್ಣೆ, ಹಿಂಗು, ಕಲೋಂಜಿ, ಉಪ್ಪು.
ಮಾಡುವ ವಿಧಾನ: ಪ್ಯಾನ್ ಬಿಸಿ ಮಾಡಿ, ಜೀರಿಗೆ, ಸಾಸಿವೆ, ಮೆಂತ್ಯೆ ಹಾಕಿ ಡ್ರೈ ರೋಸ್ಟ್ ಮಾಡಿ. ತರಿ ತರಿಯಾಗಿ ಕುಟ್ಟಿ ಪುಡಿ ಮಾಡಿ.
ಈಗ 1 ಬೌಲ್‌ನಲ್ಲಿ ಉದ್ದಕ್ಕೆ ಕತ್ತರಿಸಿದ ಈರುಳ್ಳಿ, ವಿನೇಗರ್, ಉಪ್ಪು,. ಹಸಿಮೆಣಸು, ಕೊತ್ತೊಂಬರಿ ಸೊಪ್ಪು, ಶುಂಠಿ, ಖಾರದ ಪುಡಿ ಹಾಕಿ ಮಿಕ್ಸ್ ಮಾಡಿ.
ಬಳಿಕ ಈಗಾಗಲೇ ರೆಡಿ ಮಾಡಿದ ಪುಡಿ ಹಾಾಕಿ. 1 ಒಗ್ಗರಣೆ ಸೌಟ್ ಬಿಸಿ ಮಾಡಿ, ಅದಕ್ಕೆ ಸಾಸಿವೆ ಎಣ್ಣೆ, ಹಿಂಗು, ಕಲೋಂಜಿ ಹಾಕಿ ಬಿಸಿ ಮಾಡಿ. ಇದನ್ನು ಈರುಳ್ಳಿಗೆ ಸೇರಿಸಿದರೆ, ಈರುಳ್ಳಿ ಉಪ್ಪಿನಕಾಯಿ ರೆಡಿ.
Recipe: ನಿಮ್ಮ ಸ್ಕಿನ್ ಗ್ಲೋ ಆಗಲು ಈ ಜ್ಯೂಸ್ ಸೇವಿಸಿ (Skin glowing juice recipe)
ಬೇಕಾಗುವ ಸಾಮಗ್ರಿ: ಬೀಟ್ರೂಟ್, ಆ್ಯಪಲ್, ಕ್ಯಾರೇಟ್, ದಾಳಿಂಬೆ, ಎಲ್ಲ ಹಣ್ಣು-ತರಕಾರಿ ಅರ್ಧರ್ಧ ಇರಲಿ. ಸಣ್ಣ ತುಂಡು ಶುಂಠಿ.
ಮಾಡುವ ವಿಧಾನ: ನೀವು ಜ್ಯೂಸರ್‌ಗೆ ಇವೆಲ್ಲವನ್ನೂ ಹಾಕಿ ಜ್ಯೂಸ್ ತಯಾರಿಸಿ. ಬೇಕಾದಲ್ಲಿ ಮಾತ್ರ ನೀರು ಬಳಸಿ. ಐಸ್ಕ್ಯೂಬ್ ಬಳಸದಿದ್ದರೂ ಉತ್ತಮ. ನೀವು ವಾರದಲ್ಲಿ 2-3 ದಿನ ಈ ಜ್ಯೂಸನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ, ನಿಮ್ಮ ಸ್ಕಿನ್ ಬಹುಬೇಗ ಗ್ಲೋ ಆಗಲು ಶುರುವಾಗುತ್ತದೆ. ಆದರೆ ನೀವು ಈ ಜ್ಯೂಸ್‌ನ್ನು ಗಾಳಿಸಿ ಕುಡಿಯಬಾರದು. ಫ್ರೆಶ್ ಆಗಿ ಮಾಡಿದ ತಕ್ಷಣ, ಹಾಗೇ ಗ್ಲಾಸಿಗೆ ಹಾಕಿ ಕುಡಿಯಿರಿ.
Recipe: ಮನೆಯಲ್ಲೇ ತಯಾರಿಸಬಹುದಾದ ಭೇಲ್‌ಪುರಿ ರೆಸಿಪಿ (Bhelpuri Recipe)
ಬೇಕಾಗುವ ಸಾಮಗ್ರಿ: 1 ಕಪ್ ಹುರಿಗಡಲೆ, 3 ಸ್ಪೂನ್ ಧನಿಯಾ, 1 ಸ್ಪೂನ್ ಜೀರಿಗೆ, ಸ್ವಲ್ಪ ಹಿಂಗು, 1 ಸ್ಪೂನ್ ಆಮ್ಚೂರ್ ಪುಡಿ, ಕಪ್ಪುಪ್ಪು, ಕರಿಬೇವು, 2ರಿಂದ 3 ಹಸಿಮೆಣಸು, ಸ್ವಲ್ಪ ಶುಂಠಿ, ಕೊತ್ತೊಂಬರಿ ಸೊಪ್ಪು, ಇದು ಮಸಾಲೆ ಮಾಡಲು ಬೇಕಾಗುವ ಸಾಮಗ್ರಿ.
ಉಳಿದಂತೆ, 1 ಬೌಲ್ ಹುರಿಯಕ್ಕಿ ಅಥವಾ ಚರುಮುರಿ, 1 ಕಪ್ ಸೇವು, 1 ಕಪ್ ಖಾರಾ ಬೂಂದಿ, ಸ್ವಲ್ಪ ಕ್ರಿಸ್ಪಿ ಪುರಿ, 1 ಸಣ್ಣಗೆ ಹೆಚ್ಚಿದ ಈರುಳ್ಳಿ, Tomato, ಕ್ಯಾರೇಟ್, ಹುರಿದ ಶೇಂಗಾ, ಹುರಿದ ಬಟಾಣಿ, ಸ್ವಲ್ಪ ಅರಿಶಿನ, ಖಾರದ ಪುಡಿ, ಎಣ್ಣೆ, ಉಪ್ಪು.
ಮಾಡುವ ವಿಧಾನ: ಬ್ಲೆಂಡರ್‌ಗೆ ಹುರಿಗಡಲೆ, ಹುರಿದ ಜೀರಿಗೆ, ಧನಿಯಾ, ಸ್ವಲ್ಪ ಹಿಂಗು, ಅಮ್ಚೂರ್ ಪುಡಿ, ಕಪ್ಪುಪ್ಪು, ಕರಿಬೇವು, ಹಸಿಮೆಣಸು, ಸ್ವಲ್ಪ ಶುಂಠಿ, ಕೊತ್ತೊಂಬರಿ ಸೊಪ್ಪು, ಇದೆಲ್ಲವನ್ನೂ ಹಾಕಿ, ನೀರು ಹಾಕದೇ, ತರಿ ತರಿಯಾಗಿ ಮಸಾಲೆ ರುಬ್ಬಿ.
ಬಳಿಕ ಚುರುಮುರಿಯನ್ನು ಬಾಣಲೆಗೆ ಹಾಕಿ ಹುರಿಯಿರಿ. ಪಕ್ಕಕ್ಕಿರಿಸಿ. ನಂತರ ಅದೇ ಬಾಣಲೆಗೆ ಎಣ್ಣೆ, ಅರಿಶಿನ, ಖಾರದ ಪುಡಿ, ಹುರಿದ ಶೇಂಗಾ, ಮತ್ತು ಬಟಾಣಿ, ಹಾಕಿ ಮಿಕ್ಸ್ ಮಾಡಿ.
ಬಳಿಕ 1 ಮಿಕ್ಸಿಂಗ್ ಬೌಲ್‌ನಲ್ಲಿ ಹುರಿದ ಮಂಡಕ್ಕಿ, ಸೇವು, ಖಾರಾ ಬೂಂದಿ, ಪಾಪ್ಡಿ ಅಥವಾ ಕ್ರಿಸ್ಪಿ ಪೂರಿ, ಹುರಿದ ಮಸಾಲೆ ಶೇಂಗಾ, ಬಟಾಣಿ, ಈರುಳ್ಳಿ, ತುರಿದ ಕ್ಯಾರೇಟ್, ಟೋಮೆಟೋ, ಮಂಡಕ್ಕಿ ಮಸಾಲೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದ್ರೆ ಭೇಲ್ ರೆಡಿ. ಬೇಕಾದರೆ ನೀವು ಇದರ ಜತೆ ಬೇಯಿಸಿದ ಆಲೂಗಡ್ಡೆ, ಸೌತೇಕಾಯಿ, ದಾಳಿಂಬೆ ಕೂಡ ಬಳಸಬಹುದು.
Recipe: ಕಾರ್ನ್ ಚೀಸ್ ಪಾಲಕ್ ಪರಾಟಾ (Corn cheese palak parotha)
ಬೇಕಾಗುವ ಸಾಮಗ್ರಿ: 1 ಕಪ್ ಪಾಲಕ್, 1 ಕಪ್ ಬೇಯಿಸಿದ ಸ್ವೀಟ್ ಕಾರ್ನ್, ಸ್ವಲ್ಪ ಚೀಸ್, ಬೆಣ್ಣೆ, 1 ಕಪ್ ಗೋದಿಹುಡಿ, 1 ಸ್ಪೂನ್ ಜೀರಿಗೆ, ವೋಮ, ಅರಿಶಿನ, ಖಾರದ ಪುಡಿ, 2 ಸ್ಪೂನ್ ಎಣ್ಣೆ, ಸ್ವಲ್ಪ ಬೆಳ್ಳುಳ್ಳಿ, 3 ಹಸಿಮೆಣಸು, ಕೊತ್ತೊಂಬರಿ ಸೊಪ್ಪು, ಉಪ್ಪು.
ಮಾಡುವ ವಿಧಾನ: ಮಿಕ್ಸಿಂಗ್ ಬೌಲ್‌ನಲ್ಲಿ ಗೋದಿಹುಡಿ, ಜೀರಿಗೆ, ವೋಮ, ಉಪ್ಪು, ನೀರು, ಸಣ್ಣಗೆ ಹೆಚ್ಚಿದ ಪಾಲಕ್, ಎಣ್ಣೆ ಹಾಕಿ ಚಪಾತಿ ಹಿಟ್ಟು ತಯಾರಿಸಿ.
ಬಳಿಕ ಬ್ಲೆಂಡರ್ ಅಥವಾ ಚಾಪರ್‌ನಲ್ಲಿ ಬೇಯಿಸಿದ ಸ್ವೀಟ್ ಕಾರ್ನ್ ಹಾಕಿ, ತರಿ ತರಿಯಾಗಿ ರುಬ್ಬಿ. ಇದನ್ನು 1 ಬೌಲ್‌ಗೆ ಹಾಕಿ, ಇದಕ್ಕೆ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಉಪ್ಪು, ಹಸಿಮೆಣಸು, ಕೊತ್ತೊಂಬರಿ ಸೊಪ್ಪು, ಅರಿಶಿನ, ಖಾರದ ಪುಡಿ, ತುರಿದ ಚೀಸ್ ಹಾಕಿ ಮಿಕ್ಸ್ ಮಾಡಿ. ಚೀಸ್‌ನಲ್ಲಿ ಉಪ್ಪು ಇದ್ದರೆ, ಉಪ್ಪು ಕಡಿಮೆ ಹಾಕಿ.
ಈಗ ಹೂರಣ ರೆಡಿ. ಚಪಾತಿ ಹಿಟ್ಟಿಗೆ, ಹೂರಣ ತುಂಬಿಸಿ. ಲಟ್ಟಿಸಿ, ಬೆಣ್ಣೆ ಹಾಕಿ ಹುರಿದರೆ, ಕಾರ್ನ್ ಚೀಸ್ ಪಾಲಕ್ ಪರಾಟಾ ರೆಡಿ.
Recipe: ಆರೋಗ್ಯಕರ ಕಾಳಿನ ಸ್ಯಾಂಡ್‌ವಿಚ್ ರೆಸಿಪಿ (Sprouts sandwich recipe)
ಬೇಕಾಗುವ ಸಾಮಗ್ರಿ: 1 ಕಪ್ ಮೊಳಕೆ ಬರಿಸಿದ ಹೆಸರು ಕಾಳು, ಕಾಲು ಕಪ್ ಕಡಲೆಹುಡಿ, ಕೊತ್ತೊಂಬರಿ ಸೊಪ್ಪು, ಶುಂಠಿ, 2 ಹಸಿಮೆಣಸು, 1 ಸ್ಪೂನ್ ಎಳ್ಳು, ಪುದೀನಾ ಚಟ್ನಿ, ಲೋ ಫ್ಯಾಟ್ ಸ್ಪ್ರೆಡ್, ಈರುಳ್ಳಿ, ಕ್ಯಾರೇಟ್, ಟೋಮೆಟೋ, ಉಪ್ಪು.
ಮಾಡುವ ವಿಧಾನ: ಬ್ಲೆಂಡರ್‌ನಲ್ಲಿ ಮೊಳಕೆ ಬರಿಸಿದ ಹೆಸರು ಕಾಳು, 3 ಹಸಿಮೆಣಸು, ಕೊತ್ತೊಂಬರಿ ಸೊಪ್ಪು, ಶುಂಠಿ, ಸ್ವಲ್ಪ ನೀರು ಹಾಕಿ ತರಿ ತರಿಯಾಗಿ ರುಬ್ಬಿ. ಇದನ್ನು ಮಿಕ್ಸಿಂಗ್ ಬೌಲ್‌ಗೆ ಹಾಕಿ, ಇದಕ್ಕೆ ಕಡಲೆಹುಡಿ, ಸೋಡಾ, ಉಪ್ಪು ಹಾಕಿ ಮಿಕ್ಸ್ ಮಾಡಿ. ಸೋಡಾ ಬೇಕಾದ್ದಲ್ಲಿ ಮಾತ್ರ ಮಿಕ್ಸ್ ಮಾಡಿ.
ಪ್ಯಾಾನ್ ಬಿಸಿ ಮಾಡಿ, ಎಣ್ಣೆ ಸವರಿ, ಅದರ ಮೇಲೆ ಎಳ್ಳು ಹರಡಿ, ದಪ್ಪಗೆ ಈ ಹಿಟ್ಟಿನಿಂದ ಚೌಕಾಕಾರದ ದೋಸೆ ಮಾಡಿ. ಈಗ ಇದು ಬ್ರೆಡ್ ಶೇಪ್ ದೋಸೆ ಆಯಿತು. ಹೀಗೆ 2 ದೋಸೆ ಮಾಡಿ, 1ದೋಸೆಗೆ ಪುದೀನಾ ಚಟ್ನಿ ಸವರಿ, ಲೋ ಫ್ಯಾಟ್ ಸ್ಪ್ರೆಡ್ ಹಚ್ಚಿ.
ಬಳಿಕ ಇದರ ಮೇಲೆ ನಿಮಗೆ ಬೇಕಾದ ತರಕಾರಿ ಇಡಿ. ಈರುಳ್ಳಿ, ಕ್ಯಾರೇಟ್, ಟೋಮೆಟೋ ಹೀಗೆ ನಿಮಗೆ ಬೇಕಾದ ತರಕಾರಿ ಹಾಕಿ, ಮುಚ್ಚಿದ್ರೆ ಆರೋಗ್ಯಕರ ಕಾಳಿನ ಸ್ಯಾಂಡ್‌ವಿಚ್ ರೆಡಿ. ಇದನ್ನು ನೀವು ನಿಮ್ಮ ಮಕ್ಕಳ ಬಾಕ್ಸ್‌ಗೂ ಹಾಕಿ ಕಳಿಸಬಹುದು.
Recipe: ಧಿಡೀರ್ ಆಗಿ ತಯಾರಿಸಬಹುದಾದ ದೋಸೆ (instant dosa)
ಬೇಕಾಗುವ ಸಾಮಗ್ರಿ: ಕಾಲು ಕಪ್ ರಾಗಿ ಹುಡಿ, ಕಾಲು ಕಪ್ ಕಡಲೆಹುಡಿ, ಕಾಲು ಕಪ್ ಮೊಸರು, ಕೊತ್ತೊಂಬರಿ ಸೊಪ್ಪು, ಶುಂಠಿ, ಕರಿಬೇವು, 1 ಈರುಳ್ಳಿ, ಅರ್ಧ ಸ್ಪೂನ್ ಜೀರಿಗೆ, 1 ಕ್ಯಾರೇಟ್ ತುರಿ, ಸ್ವಲ್ಪ ಎಳ್ಳು, ಹಿಂಗು, ಉಪ್ಪು, ಎಣ್ಣೆ.
ಮಾಡುವ ವಿಧಾನ: 1 ಮಿಕ್ಸಿಂಗ್ ಬೌಲ್‌ಗೆ ರಾಗಿ ಹುಡಿ, ಕಡಲೆಹುಡಿ, ಮೊಸರು, ಕೊತ್ತೊಂಬರಿ ಸೊಪ್ಪು, ಶುಂಠಿ, ಕರಿಬೇವು, ಈರುಳ್ಳಿ,ಜೀರಿಗೆ, ಕ್ಯಾರೇಟ್ ತುರಿ, ಎಳ್ಳು, ಹಿಂಗು, ಉಪ್ಪು, ನೀರು ಎಲ್ಲವನ್ನೂ ಹಾಕಿ ಮಿಕ್ಸ್ ಮಾಡಿ, ದೋಸೆ ಹಿಟ್ಟು ರೆಡಿ ಮಾಡಿ.
ಬಳಿಕ ಪ್ಯಾನ್ ಬಿಸಿ ಮಾಡಿ, ಎಣ್ಣೆ ಸವರಿ, ದೋಸೆ ಹಿಟ್ಟು ಹಾಕಿ, ಮುಚ್ಚಳ ಮುಚ್ಚಿ ಬೇಯಿಸಿದರೆ, ದೋಸೆ ರೆಡಿ. ನೀವು ಇದರ ಜತೆ ಕಾಯಿ ಚಟ್ನಿ, ಚಟ್ನಿಪುಡಿ ಬೆಸ್ಟ್ ಕಾಂಬಿನೇಷನ್.
Recipe: ಆಲೂ-ಬದನೆ ಪಲ್ಯ ರೆಸಿಪಿ (Aloo-Baingan Bhaji Recipe)
ಬೇಕಾಗುವ ಸಾಮಗ್ರಿ: 1 ಬದನೆ, 1 ಆಲೂಗಡ್ಡೆ, 2 ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸು, ಶುಂಠಿ, ಜೀರಿಗೆ, ಅರಿಶಿನ, ಖಾರದ ಪುಡಿ, ಧನಿಯಾಪುಡಿ, ಜೀರಿಗೆ ಪುಡಿ, 3 ಟೋಮೆಟೋ, ಕಸೂರಿ ಮೇಥಿ, ಉಪ್ಪು.
ಮಾಡುವ ವಿಧಾನ: ಪ್ಯಾನ್‌ಗೆ ಎಣ್ಣೆ ಹಾಕಿ, ಆಲೂಗಡ್ಡೆ ಮತ್ತು ಬದನೆಯನ್ನು ಸಪರೇಟ್ ಆಗಿ ಹುರಿಯಿರಿ. ಮತ್ತೆ ಪ್ಯಾನ್‌ಗೆ ಎಣ್ಣೆ ಹಾಕಿ, ಜೀರಿಗೆ, ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ ತರಿ ತರಿಯಾಗಿ ಜಜ್ಜಿ ಸೇರಿಸಿ, ಹುರಿಯಿರಿ.
ಬಳಿಕ ಈರುಳ್ಳಿ ಹಾಕಿ ಹುರಿಯಿರಿ. ನಂತರ ಅರಿಶಿನ, ಖಾರದ ಪುಡಿ, ಜೀರಿಗೆ ಪುಡಿ, ಧನಿಯಾಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ. ಟೋಮೆಟೋ ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ಆಗಲೇ ಹುರಿದ ಆಲೂಗಡ್ಡೆ ಮತ್ತು ಬದನೆ ಹಾಕಿ ಮಿಕ್ಸ್ ಮಾಡಿ.
ನಂತರ ನಿರು ಹಾಕಿ, ಮುಚ್ಚಳ ಮುಚ್ಚಿ 5 ನಿಮಿಷ ಮಂದ ಉರಿಯಲ್ಲಿ ಬೇಯಿಸಿ. ಬಳಿಕ ಕಸೂರಿನ ಮೇಥಿ ಹಾಕಿ ಮಿಕ್ಸ್ ಮಾಡಿದ್ರೆ ಆಲೂ-ಬದನೆ ಪಲ್ಯ ರೆಡಿ.
Recipe: ಜೋಳದ ದೋಸೆ ರೆಸಿಪಿ (Jawar Dosa Recipe)
ಬೇಕಾಗುವ ಸಾಮಗ್ರಿ: 1 ಕಪ್ ಜೋಳದ ಹುಡಿ, 3 ಸ್ಪೂನ್ ರವಾ, ಕಾಲು ಕಪ್ ಮೊಸರು, ಕೊತ್ತೊಂಬರಿ ಸೊಪ್ಪು, ಶುಂಠಿ, ಕ್ಯಾಪ್ಸಿಕಂ, ಈರುಳ್ಳಿ, ಕ್ಯಾರೆಟ್ ತುರಿ, ಉಪ್ಪು, ಎಣ್ಣೆ.
ಮಾಡುವ ವಿಧಾನ: ಮಿಕ್ಸಿಂಗ್ ಬೌಲ್‌ನಲ್ಲಿ ಜೋಳದ ಹುಡಿ, ರವಾ, ಮೊಸರು, ಸಣ್ಣಗೆ ಕತ್ತರಿಸಿದ ಕ್ಯಾಪ್ಸಿಕಂ, ಈರುಳ್ಳಿ, ಕ್ಯಾರೆಟ್ ತುರಿ, ಹಸಿಮೆಣಸು, ಕೊತ್ತೊಂಬರಿ ಸೊಪ್ಪು, ಶುಂಠಿ, ಉಪ್ಪು ಹಾಕಿ ಮಿಕ್ಸ್ ಮಾಡಿ. ಅವಶ್ಯಕತೆ ಇದ್ದರೆ, ನೀವು ಅರ್ಧ ಸ್ಪೂನ್ ಈನೋ ಫ್ರೂಟ್ ಸಾಲ್ಟ್ ಹಾಕಿ ಮಿಕ್ಸ್ ಮಾಡಿ.
ಬಳಿಕ ಪ್ಯಾನ್ ಬಿಸಿ ಮಾಡಿ, ಎಣ್ಣೆ ಸವರಿ, ದೋಸೆ ಮಾಡಿದರೆ, ಆರೋಗ್ಯಕರವಾದ ಜೋಳದ ದೋಸೆ ರೆಡಿ.
Discussion about this post