ನಿಮಗೆ ಪ್ರತೀ ದಿನ ತಲೆ ನೋವತ್ತಾ..? ಹಾಗಾದ್ರೆ ಅದಕ್ಕೆ ಕಾರಣವೇನು..?
ಕೆಲವರಿಗೆ ಪ್ರತೀ ದಿನ ತಲೆ ನೋವತ್ತೆ. ಕೆಲವರು ಅದನ್ನು ಲೆಕ್ಕಿಸದೇ, ತಮ್ಮ ಪಾಡಿಗೆ ತಾವಿರುತ್ತಾರೆ. ಇನ್ನು ಕೆಲವರು ಪ್ರತೀದಿನ ಜೆಂಡುಬಾಮ್, ಆ ಬಾಮ್ ಈ ಬಾಮ್ ಅಂತಾ, ಕೈಗೆ ಸಿಕ್ಕಿದ್ದನ್ನು ಹಣೆಗೆ ಹಚ್ಚಿಕ“ಳ್ಳುತ್ತಾರೆ. ಆದರೆ ಈ ತಲೆನೋವಿಗೆ ಕಾರಣವೇನು ಅಂತಾ ತಿಳಿದು, ಅದಕ್ಕೆ ಪರಿಹಾರ ಹುಡುಕುವವರು ತುಂಬಾ ಕಡಿಮೆ. ಹಾಗಾದ್ರೆ ಪ್ರತೀ ದಿನ ತಲೆನೋವಾಗಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಸಾಮಾನ್ಯವಾಗಿ ಮೇಗ್ರೇನ್ ಸಮಸ್ಯೆ ಇದ್ದವರಿಗೆ ತಲೆಯ 1 ಭಾಗ ನೋವಾಗುತ್ತದೆ. ಲೈಟ್ ನೋಡಿದಾಗ, ಸೌಂಡ್ ಕೇಳಿದಾಗ ತಲೆ ನೋವು ಹೆಚ್ಚಾಗುತ್ತದೆ. ಮತ್ತು ಈ ತಲೆನೋವು ಬೆಳಗ್ಗಿನ ಜಾವ ಹೆಚ್ಚಾಗುತ್ತದೆ. ಇದಕ್ಕೆ ಕಾರಣ, ಜೆನೆಟಿಕ್ ಅಥವಾ ಹಾರ್ಮೋನಲ್ ಸಮಸ್ಯೆ ಇದ್ದಾಗ ಈ ತಲೆನೋವು ಉದ್ಭವಿಸುತ್ತದೆ.
ಇನ್ನು ಮೂಗಿನ ಬಳಿ, ಅಥವಾ ಐಬ್ರೋಸ್ ಬಳಿ ತಲೆನೋವಾದ್ರೆ, ಅದು ಸೈನಸ್ ತಲೆನೋವು. ಈ ತಲೆನೋವು ಬರಲು ಕಾರಣವೇನು ಎಂದರೆ, ಇದು ನೆಗಡಿ, ಜ್ವರವಿದ್ದಾಗ, ಅಥವಾ ಅಲರ್ಜಿಯಿಂದ ತಲೆನೋವು ಬರಬಹುದು.
ಇನ್ನು ಕೆಫೆನ್ ತಲೆನೋವು. ಇದು ಕಾಫಿ, ಟೀ ಕುಡಿಯುವ ಅಭ್ಯಾಸ ಹೆಚ್ಚಾಗಿರುವವರಿಗೆ ಈ ತಲೆನೋವು ಬರುತ್ತದೆ. ಅವರು ಕಾಫಿ, ಚಾ ಸೇವನೆ ಮಾಡುವ ಸಮಯಕ್ಕೆ ಸ್ಕಿಪ್ ಮಾಡಿದಾಗ, ತಲೆನೋವು ಬರುತ್ತದೆ. ಮತ್ತು ಅಂಥವರು ಕಾಫಿ, ಚಾ ಸೇವನೆ ಮಾಡಿದ ಬಳಿಕ ಆ ತಲೆನೋವು ಹೋಗುತ್ತದೆ.
ಆದರೆ ಮುಖ್ಯವಾದ ವಿಷಯ ಅಂದ್ರೆ, ಸಾಮಾನ್ಯ ತಲೆನೋವು, ಅಥವಾ ಈ ಕೆಫೆನ್ ತಲೆನೋವು ಬಂದಾಗ, ನೀವು ಮಾತ್ರೆ, ಕಾಫಿ, ಚಾ ಸೇವನೆ ಮಾಡಲೇಬೇಕು ಎಂದೇನಿಲ್ಲ. ನೀವು ಹೆಚ್ಚು ಬಿಸಿ ನೀರು ಅಥವಾ ಉಗುರು ಬೆಚ್ಚಗಿನ ನೀರಿನ ಸೇವನೆ ಮಾಡಿಯೂ, ನಿಮ್ಮ ತಲೆನೋವನ್ನು ಶಮನ ಮಾಡಬಹುದು.
ಏಕೆಂದರೆ ನೀವು ತಿಂದ ಆಹಾರ ಸರಿಯಾಗಿ ಜೀರ್ಣವಾಗದಿದ್ದಲ್ಲಿ, ದೇಹದಲ್ಲಿ ಗ್ಯಾಸ್ಟಿಕ್ ಹೆಚ್ಚಾಗಿದ್ದಲ್ಲಿಯೂ, ತಲೆನೋವು ಬರುತ್ತದೆ. ಬಿಸಿ ನೀರು ಕುಡಿದಾಗ, ತೇಗಿನ ಮೂಲಕ ಗ್ಯಾಸ್ ಪಾಸ್ ಆಗಿ, ನಿಮ್ಮ ತಲೆನೋವು ಹೋಗುತ್ತದೆ. ಅಲ್ಲದೇ ಮಲಬದ್ಧತೆ ಸಮಸ್ಯೆ ಇದ್ದಾಗಲೂ ಈ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇರುತ್ತದೆ.
ಆದರೆ ನಿಮಗೆ ಮೈಗ್ರೇನ್ ಅಥವಾ ಸೈನಸ್ ಸಮಸ್ಯೆ ಇದ್ದಲ್ಲಿ, ನೋವು ವೈದ್ಯರ ಬಳಿ ಹೋಗಿಯೇ ಅದಕ್ಕೆ ಪರಿಹಾರ ಕಂಡುಕ“ಳ್ಳಬೇಕು.
ೃೃೃೃೃೃೃೃೃೃೃೃೃೃೃೃೃ
ಊಟವಾದ ತಕ್ಷಣ ನಿಮ್ಮ ಹೊಟ್ಟೆ ಉಬ್ಬುತ್ತಾ..? ಹಾಗಾದ್ರೆ ಈ ರೆಮಿಡಿ ಪ್ರಯತ್ನಿಸಿ..
ಕೆಲವರಿಗೆ ಕೆಲವು ಆರೋಗ್ಯ ಸಮಸ್ಯೆಗಳು ಇದ್ದೇ ಇರುತ್ತದೆ. ಅದರಲ್ಲೂ ಈಗಿನ ಜೀವನಶೈಲಿ, ನಾವು ಸೇವಿಸುವ ಆಹಾರ ಹೀಗೆ ಹಲವು ಕಾರಣಗಳಿಂದ ನಮ್ಮ ಆರೋಗ್ಯ ಹದಗೆಡುತ್ತಿದೆ. ಅದರಲ್ಲೂ ಉದರಕ್ಕೆ ಸಂಬಂಧಿಸಿದ ಸಮಸ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ನಾವಿಂದು ಊಟವಾದ ತಕ್ಷಣ ಉದರ ಸಮಸ್ಯೆ ಕಾಣಿಸಿಕ“ಂಡರೆ ಏನು ಮಾಡಬೇಕು ಅಂತಾ ತಿಳಿಯೋಣ.
ಈ ಸಮಸ್ಯೆ ಸರಿಯಾಗಿಸಲು ನೀವು 1 ಕಶಾಯ ಸೇವನೆ ಮಾಡಬೇಕು. ಆ ಕಶಾಯ ಮಾಡಲು ನಿಮಗೆ 1 ಸ್ಪೂನ್ ಜೀರಿಗೆ, ಸೋಂಪು, 1 ಏಲಕ್ಕಿ, ಶುಂಠಿ ಬೇಕು. ನೀವು 1 ಗ್ಲಾಸ್ ನೀರನ್ನು ಕುದಿಸಿ, ಆ ಕುದಿಯುವ ನೀರಿಗೆ ಜೀರಿಗೆ, ಸೋಂಪು, ಏಲಕ್ಕಿ, ಶುಂಠಿ ಜಜ್ಜಿ ಹಾಕಿ ಚೆನ್ನಾಗಿ ಕುದಿಸಬೇಕು.
ಬಳಿಕ ಸೋಸಿ, ಗ್ಲಾಸ್‌ಗೆ ಹಾಕಿ. ಆಹಾರ ಸೇವನೆಯ ಸ್ವಲ್ಪ ಸಮಯದ ಬಳಿಕ ಈ ಕಶಾಯವನ್ನು ಉಗುರು ಬೆಚ್ಚಾಗಿಸಿ, ಸೇವಿಸಿ. ಇದರಿಂದ ನಿಮ್ಮ ಉದರ ಸಮಸ್ಯೆ ದೂರವಾಗುತ್ತದೆ. ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಹೊಟ್ಟೆ ಉಬ್ಬುವ ಸಮಸ್ಯೆ ಸರಿಯಾಗುತ್ತದೆ. ನಿಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ.

ೃೃೃೃೃೃೃೃೃೃೃೃೃೃೃೃೃೃೃ
ನೀವು ಯಂಗ್ ಆಗಿ ಕಾಣಬೇಕು ಅಂದ್ರೆ ಆಹಾರದಲ್ಲಿ ಇದನ್ನು ಸೇರಿಸಿ..
ಯಾರಿಗೆ ತಾನೇ, ತಾವು ಯಂಗ್ ಆಗಿ, ಚಂದಾಗಾಣಿಸಬೇಕು ಅಂತಾ ಅನ್ನಿಸೋದಿಲ್ಲ ಹೇಳಿ..? ಆದರೆ ನೀವು ಚೆಂದಗಾಣಿಸಬೇಕು, ಯಂಗ್ ಆಗಿರಬೇಕು ಅಂತಾ ಕ್ರೀಮ್ ಹಚ್ಚಿದ್ರೆ ಸಾಕಾಗಲ್ಲ. ಬದಲಾಗಿ ಅದಕ್ಕೆ ತಕ್ಕಂತೆ ಆಹಾರ ಸೇವಿಸಬೇಕು. ಹಾಗಾಗಿ ಯಾವ ಆಹಾರ ಸೇವಿಸಬೇಕು ಅಂತಾ ತಿಳಿಯೋಣ ಬನ್ನಿ..
ಬೆಣ್ಣೆ ಹಣ್ಣು: ಬೆಣ್ಣೆ ಹಣ್ಣಿನ ಸೇವನೆಯಿಂದ ನಿಮ್ಮ ಸ್ಕಿನ್ ಸುಂದರವಾಗುತ್ತದೆ. ನಿಮ್ಮ ತ್ವಚೆ ಆರೋಗ್ಯಕರವಾಗುತ್ತದೆ. ಸ್ಕಿನ್ ಗ್ಲೋ ಆಗುತ್ತದೆ. ಹಾಗಾಗಿಯೇ ಗರ್ಭಿಣಿಯರಿಗೆ ಬೆಣ್ಣೆ ಹಣ್ಣಿನ ಸೇವನೆ ಮಾಡಬೇಕು ಅಂತಾ ಹೇಳುತ್ತಾರೆ. ಯಾಕಂದ್ರೆ ಅವರ ಸ್ಕಿನ್ ಚೆನ್ನಾಗಿರುವುದಲ್ಲದೇ, ಅವರಿಗೆ ಜನಿಸುವ ಮಗುವಿನ ಸ್ಕಿನ್ ಕೂಡ ಆರೋಗ್ಯವಾಗಿ, ಸಾಫ್ಟ್ ಆಗಿ, ಗ್ಲೋ ಆಗಿರುತ್ತದೆ.
ವಾಲ್ನಟ್: ವಾಲ್ನಟ್ ಸೇವನೆಯಿಂದ ಬರೀ ಬುದ್ಧಿ ಬೆಳವಣಿ ಆಗುವುದು ಮಾತ್ರವಲ್ಲ. ಇದರಿಂದ ನಮ್ಮ ಆರೋಗ್ಯದಲ್ಲಿ ಉತ್ತಮ ಅಭಿವೃದ್ಧಿಯಾಗುತ್ತದೆ. ಪಿಸಿಓಡಿ ಸಮಸ್ಯೆ ಇದ್ದವರು ಇದನ್ನು ನೆನೆಸಿ, ತಿಂದರೆ, ಅವರ ಆರೋಗ್ಯ ಕೂಡ ಸರಿಯಾಗುತ್ತದೆ. ಅದರ ಜತೆಗೆ ಸ್ಕಿನ್ ಕೂಡಾ ಗ್ಲೋ ಆಗುತ್ತದೆ.
ಫ್ಲ್ಯಾಕ್ಸ್ ಸೀಡ್ಸ್: ಇನ್ನು ಫ್ಲಾಕ್ಸ್ ಸೀಡ್ಸ್ ಅಂದ್ರೆ ಅಗಸಿಬೀಜ. ನೀವು ಇದನ್ನು ನಿಮ್ಮ ಆಹಾರದಲ್ಲಿ ಹೇಗೆ ಬಳಸಬೇಕು ಅಂದ್ರೆ, ಇದರ ಪುಡಿ ಮಾಡಿ, ಅನ್ನದ ಜತೆ, ಚಪಾತಿ ಜತೆ ಸೇರಿಸಿ ಸೇವಿಸಬಹುದು. ಇದರ ಸೇವನೆಯಿಂದ ಕೂದಲಿನ ಆರೋಗ್ಯ ಅದ್ಭುತವಾಗುವುದಲ್ಲದೇ, ಸ್ಕಿನ್ ಕೂಡಾ ಚೆನ್ನಾಗಿರುತ್ತದೆ.
ಹಾಗಾಗಿಯೇ ಉತ್ತರಕರ್ನಾಟಕದ ಅದೆಷ್ಟೋ ಹೆಣ್ಣು ಮಕ್ಕಳ ಸ್ಕಿನ್ ಮತ್ತು ಕೂದಲು ಚೆಂದಗಾಣಿಸುತ್ತದೆ. ಏಕೆಂದರೆ, ಅಲ್ಲಿನ ಜನ ಊಟದಲ್ಲಿ ಅಗಸಿ ಚಟ್ನಿಪುಡಿ ಬಳಸುತ್ತಾರೆ.
ೃೃೃೃೃೃೃೃೃೃೃೃೃೃೃೃೃೃೃೃ
ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕು ಅಂದ್ರೆ ಏನು ಸೇವಿಸಬೇಕು..?
ಮಳೆಗಾಲ ಶುರುವಾಗಿದೆ. ಜ್ವರ, ಕೆಮ್ಮು, ನೆಗಡಿ ದಾಳಿ ಮಾಡೋಕ್ಕೆ ರೆಡಿಯಾಗಿದೆ. ಇಂಥ ಸಮಯದಲ್ಲಿ ನಾವು ಕೂಡ ಆ ದಾಳಿ ಎದುರಿಸಲು ಸಿದ್ಧರಾಗಿರಬೇಕು. ಅಂದ್ರೆ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಬೇಕು. ಹಾಗಾದ್ರೆ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಬೇಕು ಅಂದ್ರೆ ನಾವು ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಹಳೆಯ ಕಾಲದಲ್ಲಿ, ಅಥವಾ ನಮ್ಮ ಅಜ್ಜ- ಅಜ್ಜಿ ಕಾಲದಲ್ಲಿ ಆರೋಗ್ಯ ಸರಿಯಾಗಿಲ್ಲ, ಜ್ವರ, ಕೆಮ್ಮು, ನೆಗಡಿ ಬಂತು ಅಂದ್ರೆ, ಕಶಾಯ ಕುಡಿಯಲು ಹೇಳುತ್ತಿದ್ದರು. ಕೆಲವರಂತೂ ಕಶಾಯ ಕುಡಿದೇ, ಸರಿಯಾಗುತ್ತಿದ್ದರು. ಅವರಿಗೆ ವೈದ್ಯರ ಬಳಿ ಹೋಗುವ ಅವಶ್ಯಕತೆಯೇ ಇರಲಿಲ್ಲ.
ಅದೇ ರೀತಿ ನೀವು ಕೂಡ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕು ಅಂದ್ರೆ, ಕಶಾಯ ಮಾಡಿ ಕುಡಿಯಿರಿ. ಹಾಗೆ ಕಶಾಯ ಮಾಡಲು ನಿಮಗೆ ಶುಂಠಿ, ನಿಂಬೆರಸ, ಜೇನು ಬೇಕು. 1 ಪಾತ್ರೆಗ 1 ಗ್ಲಾಸ್ ನೀರು ಹಾಕಿ ಚೆನ್ನಾಗಿ ಕುದಿಸಿ, ಬಳಿಕ ಅದಕ್ಕೆ ಶುಂಠಿ ಜಜ್ಜಿ ಹಾಕಿ ಮತ್ತೆ ಕುದಿಸಿ.
ನಂತರ ಈ ನೀರನ್ನು ಸೋಸಿ, ತಣ್ಣಗಾಗಲು ಬಿಡಿ. ಉಗುರು ಬೆಚ್ಚಗಿರಲು, 1 ಸ್ಪೂನ್ ಜೇನುತುಪ್ಪ ಮತ್ತು 1 ಸ್ಪೂನ್ ನಿಂಬೆರಸ ಸೇರಿಸಿ ಮಿಕ್ಸ್ ಮಾಡಿ. ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಯಾವಾಗ ಬೇಕಾದರೂ ನೀವು ಈ ಕಶಾಯ ಸೇವಿಸಬಹುದು. ಆದರೆ ನೆನಪಿರಲಿ ನಿಮಗೆ ಈ ಕಶಾಯ ಅಲರ್ಜಿ ಆಯಿತು ಎಂದಾದಲ್ಲಿ ನೀವು ವೈದ್ಯರ ಬಳಿ ಸಲಹೆ ಕೇಳುವುದು ಉತ್ತಮ.
ೃೃೃೃೃೃೃೃೃೃೃೃೃೃೃೃೃೃೃ
ರಾತ್ರಿ ಇವುಗಳನ್ನು ನೆನೆಸಿ, ಬೆಳಿಗ್ಗೆ ತಿಂದಲ್ಲಿ, ನಿಮ್ಮ ಆರೋಗ್ಯ ಸೂಪರ್ ಆಗಿರುತ್ತದೆ..
ನಾವು ಸೇವಿಸುವ ಆರೋಗ್ಯಕರ ಆಹಾರವೇ ನಮ್ಮನ್ನು ಬಲಶಾಲಿಯಾಗಿಸುತ್ತದೆ. ಆದರೆ ಇಂದಿನ ಕಾಲದ ಹಲವರಿಗೆ, ಆರೋಗ್ಯಕರ ಆಹಾರ ಸೇವಿಸಲು ಕೂಡ ಸಮಯವೇ ಇಲ್ಲ. ಆದರೆ ನೀವು ಕೆಲ ವಸ್ತುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿ, ಬೆಳಿಗ್ಗೆ ಸೇವಿಸಿದರೆ, ನಿಮ್ಮ ಆರೋಗ್ಯ ಉತ್ತಮವಾಗುತ್ತದೆ. ಹಾಗಾದ್ರೆ ಯಾವುದು ಆ ಆಹಾರ ಅಂತಾ ತಿಳಿಯೋಣ ಬನ್ನಿ..
ಬಾದಾಮ್: ಬಾದಾಮಿಯನ್ನು ರಾತ್ರಿ ನೆನೆಸಿ, ಬೆಳಿಗ್ಗೆ ಸಿಪ್ಪೆ ತೆಗೆದು ಸೇವಿಸಿದರೆ, ನಿಮ್ಮ ಹೃದಯ, ಮೆದುಳು ಮತ್ತು ನಿಮ್ಮ ಮೂಳೆಯ ಆರೋಗ್ಯ ವೃದ್ಧಿಸುತ್ತದೆ. ಏಕೆಂದರೆ ಇದರಲ್ಲಿ ಹೆಲ್ದಿ ಫ್ಯಾಟ್ ಮತ್ತು ವಿಟಾಮಿನ್ ಈ ಇರುತ್ತದೆ. ಹಾಗಾಗಿ ಇದು ಮೂಳೆ, ಹೃದಯವನ್ನು ಶಕ್ತಿಶಾಲಿಯನ್ನಾಗಿ ಮಾಡತ್ತೆ.
ಮೆಂತ್ಯೆ ಕಾಳು: ರಾತ್ರಿಯೀಡಿ ಮೆಂತ್ಯೆ ಕಾಳನ್ನು ನೀರಿನಲ್ಲಿ ನೆನೆಸಿ, ಬೆಳಿಗ್ಗೆ ಖಾಲಿ ಹ“ಟ್ಟೆಯಲ್ಲಿ ಇದನ್ನು ತಿಂದು ನೀರು ಕುಡಿದರೆ, ನಿಮ್ಮ ಉದರ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ಅಲ್ಲದೇ, ಶುಗರ್ ಲೆವಲ್ ಕಂಟ್ರೋಲಿನಲ್ಲಿರುತ್ತದೆ.
ಚೀಯಾ ಸೀಡ್ಸ್: ಚೀಯಾ ಸೀಡ್ಸ್ ನೆನೆಸಿ, ಓಟ್ಸ್‌ಗೆ ಹಾಕಿ, ತಿನ್ನುವುದು ಈಗ ಟ್ರೆಂಡ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಇದರ ಬೆಲೆ ಜನರಿಗೆ ತಿಳಿದಿದೆ. ಆದರೆ ಭಾರತದಲ್ಲಿ ಇದು ಹಲವು ವರ್ಷಗಳ ಮುಂಚೆಯಿಂದಲೇ ಚಾಲ್ತಿಯಲ್ಲಿತ್ತು. ಇದನ್ನೇ ಜನ ಕಾಮಕಸ್ತೂರಿ ಬೀಜ ಎನ್ನುತ್ತಿದ್ದರು. ದೇಹ ತಂಪಾಗಿಸಲು ಜನ ಇದನ್ನು ನೆನೆಸಿ, ನೀರಿಗೆ ಹಾಕಿ, ಜ್ಯೂಸ್ ರೀತಿ ಸೇವಿಸುತ್ತದ್ದರು. ಇದರ ಸೇವನೆಯಿಂದ ಶುಗರ್, ಬಿಪಿ ಕಂಟ್ರೋಲಿನಲ್ಲಿರುತ್ತದೆ. ತ್ವಚೆ, ಕೂದಲು ಸುಂದರವಾಗುತ್ತದೆ. ಉಷ್ಣ ಸಮಸ್ಯೆ ಏನೇ ಇದ್ದರೂ ಸರಿಯಾಗುತ್ತದೆ.
ಒಣದ್ರಾಕ್ಷಿ: ಒಣದ್ರಾಕ್ಷಿಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ, ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಹೆಚ್ಚಾಗುತ್ತದೆ. ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ. ಅನೇಮಿಯಾ ಮತ್ತು ನಿಶ್ಶಕ್ತಿಯನ್ನು ಇದು ದೂರ ಮಾಡುತ್ತದೆ.

ೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃ
ಹೊಟ್ಟೆಯ ಬೇಡದ ತೂಕ ಕರಗಿಸಬೇಕಾ..? ಇದನ್ನು ಸೇವಿಸಿ..
ಇಂದಿನ ಕಾಲದಲ್ಲಿ ಹಲವು ಯುವಕ, ಯುವತಿಯರಿಗೆ ಇರುವ ಸಮಸ್ಯೆ ಅಂದ್ರೆ ಅದು ಹೊಟ್ಟೆಯ ಬೇಡದ ತೂಕ ಇಳಿಸೋದು. ಆರೋಗ್ಯಕರವಾದ ದೇಹ ಇರಬೇಕು ಅಂತಾ ಆಸೆ ಇದ್ರೂ, ಆಸೆಗೆ ಅಡ್ಡ ಬರೋದು, ಹೊಟ್ಟೆಯ ಬೇಡದ ತೂಕ. ಇದರಿಂದಲೇ ಹಲವರು ಮುಜುಗರಕ್ಕೆ ಈಡಾಗುತ್ತಾರೆ. ಆದರೆ ನಾವಿಂದು ನಿಮಗೆ ಈ ಸಮಸ್ಯೆಗೆ ಪರಿಹಾರ ಹೇಳಲಿದ್ದೇವೆ.
ಹೊಟ್ಟೆಯ ಬೇಡದ ತೂಕ ಕರಗಿಸಬೇಕು ಅಂದ್ರೆ ನೀವು ವಾಕಿಂಗ್, ಯೋಗ, ವ್ಯಾಯಾಮ ಇವುಗಳನ್ನಂತೂ ಮಾಡಲೇಬೇಕು. ಜತೆಗೆ ಊಟದಲ್ಲಿ ಆರೋಗ್ಯಕರ ಆಹಾರಗಳನ್ನೇ ಸೇವಿಸಬೇಕು. ಎಣ್ಣೆ ತಿಂಡಿ, ಜಂಕ್ ಫುಡ್, ಬೇಕರಿ ತಿಂಡಿ ಸೇರಿ ಅನಾರೋಗ್ಯಕರ ತಿಂಡಿಯ ಪ್ರಮಾಣ ಮಿತಿಯಾಗಿಸಬೇಕು.
ಇದೆಲ್ಲ ಮಾಡಿದ್ದಲ್ಲಿ ನಿಮ್ಮ ತೂಕ ಅರ್ಧ ಇಳಿದ ಹಾಗೆ. ಆದರೆ ಈ ತೂಕವನ್ನು ನೀವು ಫಾಸ್ಟ್ ಆಗಿ ಇಳಿಸಬೇಕು ಅಂದ್ರೆ, ಇದರ ಜತೆ ನೀವು ಕೆಲವು ಪೇಯ ಸೇವಿಸಬೇಕು. 1 ಸ್ಪೂನ್ ಸೋಂಪು, ಜೀರಿಗೆ ಮತ್ತು ಧನಿಯಾ ಬೀಜವನ್ನು ತರಿ ತರಿಯಾಗಿ ಕುಟ್ಟಿ ಪುಡಿ ಮಾಡಿ.
1 ಪಾತ್ರೆಯಲ್ಲಿ ನೀರು ಕುದಿಸಿ, ಆ ಕುದಿಯುವ ನೀರಿಗೆ ಇದನ್ನು ಸೇರಿಸಿ, ಮತ್ತೆ ಕುದಿಸಿದರೆ ಕಶಾಯ ರೆಡಿ. ಇದನ್ನು ಸೋಸಿ, ಬಿಸಿ ಬಿಸಿಯಾಗಿಯೇ ಸೇವಿಸಿ. ಅತ್ಯುತ್ತಮ ರಿಸಲ್ಟ್‌ಗಾಗಿ ನೀವು ಇದನ್ನು ಬೆಳಿಗ್ಗೆ ತಿಂಡಿ ತಿನ್ನುವುದಕ್ಕೂ ಮುಂಚೆ ಸೇವಿಸಬೇಕು.
ಇದರ ಸೇವನೆಯಿಂದ ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ನಿಮ್ಮ ದೇಹದಲ್ಲಿರುವ ಕೆಟ್ಟ ಕ“ಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಮಲಬದ್ಧತೆ ಸಮಸ್ಯೆ ಸರಿಯಾಗುತ್ತದೆ. ಇದೆಲ್ಲ ಆದಾಗ, ತೂಕ ಕೂಡ ಇಳಿಯುತ್ತದೆ.
ೃೃೃೃೃೃೃೃೃೃೃೃೃೃೃೃೃೃ
ಖಾಲಿ ಹೊಟ್ಟೆಯಲ್ಲಿ ಇಂಥ ಆಹಾರಗಳನ್ನು ಮಾತ್ರ ಸೇವಿಸಬೇಡಿ.. ಇಲ್ಲವಾದಲ್ಲಿ ಸಮಸ್ಯೆ ತಪ್ಪಿದ್ದಲ್ಲ..
ಬೆಳಿಗ್ಗೆ ಎದ್ದ ತಕ್ಷಣ ನಿಮಗೆ ನಿಶ್ಶಕ್ತಿಯಾಗಿ, ಸುಸ್ತಾದಂತೆ ಫೀಲ್ ಆಗುತ್ತಿರಬಹುದು. ಇದಕ್ಕೆ ಕಾರಣ, ನಾವು ಕೆಲ ವರ್ಷಗಳ ಹಿಂದೆ ಮಾಡಿದ ತಪ್ಪು. ಆ ತಪ್ಪು ಏನಂದ್ರೆ, ಖಾಲಿ ಹೊಟ್ಟೆಯಲ್ಲಿ ಕೆಲವು ಆಹಾರ ಸೇವನೆ ಮಾಡೋದು. ಹಾಗಾದ್ರೆ ಯಾವ ಆಹಾರ ನಾವು ಸೇವಿಸಬಾರದು..? ಅದರಿಂದ ಏನಾಗುತ್ತದೆ ಅಂತಾ ತಿಳಿಯೋಣ ಬನ್ನಿ.
ನಾವು ಬೆಳಿಗ್ಗೆ ಎದ್ದಾಗ ನಮ್ಮ ಉದರದಲ್ಲಿ ಅದಾಗಲೇ ಆ್ಯಸಿಡ್ ಇರುತ್ತದೆ. ಹೀಗಿರುವಾಗ ನೀವು ಬೆಳಿಗ್ಗೆ ಚಹ, ಕಾಫಿ ಸೇವಿಸಿದರೆ, ಅದರ ಪ್ರಮಾಣ ಹೆಚ್ಚಾಗುತ್ತದೆ. ಮತ್ತು ಇದೇ ಅಭ್ಯಾಸ ಮುಂದುವರಿದಂತೆ ನಿಮ್ಮ ದೇಹದಲ್ಲಿ ನಿಶ್ಶಕ್ತಿ ಪ್ರಮಾಣ ಹೆಚ್ಚಾಗುತ್ತದೆ.
ಹಾಗಾಗಿ ನೀವು ಬೆಳಿಗ್ಗೆ ಎದ್ದ ತಕ್ಷಣ ಚಹಾ, ಕಾಫಿ ಸೇವಿಸುವ ಬದಲು, ಡ್ರೈಫ್ರೂಟ್ಸ್ ಅಥವಾ ಫ್ರೆಶ್ ಫ್ರೂಟ್ಸ್ ಸೇವಿಸಿ. ಬಳಿಕ ತಿಂಡಿ ತಿಂದು ಚಹಾಾ, ಕಾಫಿ ಸೇವಿಸಿ.
ಇನ್ನು ಎರಡನೇಯ ತಪ್ಪು ತಿಂಡಿ ತಪ್ಪಿಸುವುದು. ಬೆಳಿಗ್ಗೆ ಅದೆಷ್ಟೋ ಜನ ತಿಂಡಿ ತಿನ್ನುವುದನ್ನೇ ಸ್ಕಿಪ್ ಮಾಡುತ್ತಾರೆ. ಇದರಿಂದ ಅವರ ಆರೋಗ್ಯ ಹಾಳಾಗುತ್ತದೆ. ಕೆಲವರು ತಿಂಡಿ ಸ್ಕಿಪ್ ಮಾಡುವುದರಿಂದ ಕ್ಯಾಲೋರಿ ಕಡಿಮೆಯಾಗುತ್ತದೆ ಎಂದು ತಿಳಿಯುತ್ತಾರೆ. ಆದರೆ ಇದು ತಪ್ಪು ಕಲ್ಪನೆ. ನೀವು ಬೆಳಿಗ್ಗೆ ತಿಂಡಿಗೆ ಕಡಿಮೆ ಕ್ಯಾಲೋರಿ ಇರುವ ಆಹಾರವನ್ನೇ ಸೇವಿಸಿ. ಆದರೆ ಎಂದಿಗೂ ತಿಂಡಿ ಮಾತ್ರ ಸ್ಕಿಪ್ ಮಾಡಬೇಡಿ.
ಮೂರನೇಯ ತಪ್ಪು ಎದ್ದ ಹಾಗೆ ಪೇನ್ ಕಿಲ್ಲರ್ ಮಾತ್ರೆ ಸೇವಿಸುವುದು. ಇದರಿಂದ ಆರೋಗ್ಯಕ್ಕೆ ತುಂಬಾ ಹಾನಿಯುಂಟಾಗುತ್ತದೆ. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಎಂದಿಗೂ ವೈದ್ಯರ ಸೂಚನೆ ಇಲ್ಲದೇ, ಯಾವುದೇ ಮಾತ್ರೆ ಸೇವಿಸಬೇಡಿ.
ಇದರ ಸೇವನೆಯಿಂದ ನಮ್ಮ ಹೃದಯ ವೀಕ್ ಆಗುತ್ತದೆ. ರಕ್ತನಾಳದಲ್ಲಿ ರಕ್ತ ಪರಿಚಲನೆ ನಿಧಾನವಾಗುತ್ತದೆ. ಹಾಗಾಗಿ ಹೃದಯ ನಿಶ್ಶಕ್ತಿಯಾದಾಗ, ನಮಗೂ ಸುಸ್ತಾಗುತ್ತದೆ. ಹೀಗಾದಾಗ ನಮಗೆ ಲೋ ಬಿಪಿ, ಹೈ ಬಿಪಿ, ಶುಗರ್, ಹೃದಯ ಸಮಸ್ಯೆ ಬರುವ ಸಾಧ್ಯತೆಗಳಿರುತ್ತದೆ.
ಹಾಗಾಗಿ ನಾವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇಂಥ ಆಹಾರಗಳ ಸೇವನೆ ಎಂದಿಗೂ ಮಾಡಬಾರದು. ಅಲ್ಲದೇ, ಇದರಿಂದ ದೇಹದ ತೂಕ ಅನಾರೋಗ್ಯಕರ ರೀತಿಯಿಂದ ಹೆಚ್ಚಾಗುತ್ತದೆ.
Discussion about this post