Health Tips: ಪ್ರತಿದಿನ ಬೆಳಿಗ್ಗೆ ಈ ಕಶಾಯ ಕುಡಿಯಿರಿ, ಸಿಂಪಲ್ ಆಗಿ ತೂಕ ಇಳಿಸಿರಿ
ನೀವು ತೂಕ ಇಳಿಸಲು ಪ್ರಯತ್ನಿಸುತ್ತೀದ್ದೀರಿ ಎಂದಲ್ಲಿ ನಾವಿವತ್ತು ನಿಮಗೆ ಸಿಂಪಲ್ ಆಗಿರುವ ಕಶಾಯದ ರೆಸಿಪಿ ಹೇಳಲಿದ್ದೇವೆ. ಆದರೆ ನೀವು ಯಾವುದಾದರೂ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೀರಿ. ಅಥವಾ ಗರ್ಭಿಣಿಯಾಗಿದ್ದೀರಿ ಅಥವಾ ನಿಮಗೆ ಈ ಕಶಾಯದಿಂದ ಅಲರ್ಜಿ ಎಂದರೆ, ವೈದ್ಯರ ಸಲಹೆ ಪಡೆದು ಬಳಿಕ ಈ ಕಶಾಯ ಸೇವನೆ ಮಾಡಬೇಕು.
ಯಾವ ಕಶಾಯ ಅಂದ್ರೆ ವೋಮದ ಕಶಾಯ ಅಥವಾ ಅಜ್ವೈನ್ ಕಶಾಯ. 1 ಸ್ಪೂನ್ ವೋಮವನ್ನು 1 ಗ್ಲಾಸ್ ನೀರಿಗೆ ಹಾಕಿ, ಚೆನ್ನಾಗಿ ಕುದಿಸಿ, ಆರಿಸಿ ಕುಡಿಯಿರಿ. ನೆನಪಿರಲಿ 1 ದಿನಕ್ಕೆ 1 ಸ್ಪೂನ್ ವೋಮ ಮಾತ್ರ ಬಳಸಬೇಕು.
ಬೆಳಿಗ್ಗೆ ತಿಂಡಿಗೂ ಮುನ್ನ ಈ ಕಶಾಯ ಸೇವನೆ ಮಾಡುವುದರಿಂದ ನಿಮ್ಮ ದೇಹದ ಬೊಜ್ಜು ಕಡಿಮೆಯಾಗುತ್ತದೆ. ನೀವು ತೂಕ ಇಳಿಸಲು ಡಯಟ್ ಮಾಡುತ್ತಿದ್ದಲ್ಲಿ ವ್ಯಾಯಾಮ ಮಾಡುವುದರ ಜತೆಗೆ ಈ ಕಶಾಯ ಸೇವನೆ ಮಾಡಿದರೆ ನಿಮ್ಮ ದೇಹದ ತೂಕ ಬೇಗ ಇಳಿಕೆಯಾಗುತ್ತದೆ.
ಇನ್ನು ಜೀರ್ಣಕ್ರಿಯೆ ಸಮಸ್ಯೆಗೂ ಪರಿಹಾರ ಸಿಗುತ್ತದೆ. ವೋಮದ ಕಶಾಯದಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಅಲ್ಲದೇ ಹೆಚ್ಚು ಹಸಿವಾಗುವುದಿಲ್ಲ.
ೃೃೃೃೃೃೃೃೃೃೃೃೃೃೃೃೃೃೃೃೃ
ಹೀಗೆ ಮಾಡಿ ನಿಮ್ಮ ತಿಂಗಳ ಸಮಸ್ಯೆಯಿಂದ ಮುಕ್ತಿ ಪಡೆಯಿರಿ.
ಪ್ರತೀ ತಿಂಗಳು ಪಿರಿಯಡ್ಸ್ ಆದಾಗ, ಎಲ್ಲ ಮಹಿಳೆಯರು ಹಲವು ರೀತಿಯ ಆರೋಗ್ಯ ಸಮಸ್ಯೆ, ಕಿರಿಕಿರಿ ಅನುಭವಿಸುತ್ತಾರೆ., ಅಂಥ ನೋವಲ್ಲಿ ಹೊಟ್ಟೆ ನೋವು ಕೂಡಾ 1. ಹಾಗಾದ್ರೆ ಈ ಸಮಸ್ಯೆಗೆ ಪರಿಹಾರವೇನು ಅಂತಾ ತಿಳಿಯೋಣ ಬನ್ನಿ..
ನೀವು ನಿಮ್ಮ ಹೊಟ್ಟೆಯ ಮೇಲೆ ಉಗುರು ಬೆಚ್ಚಗಿನ ನೀರಿನ ಬ್ಯಾಗ್ ಇರಿಸಿ. ಇದರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ. ಆದರೆ ನೀರು ಅಗತ್ಯಕ್ಕಿಂತ ಹೆಚ್ಚು ಬಿಸಿಯಾಗಿರಬಾರದು ಅಷ್ಟೇ.
ಮುಟ್ಟಾದಾಗಲೇ ನೀವು 1 ಸ್ಪೂನ್ ಸೋಂಪು, ಚಿಕ್ಕ ತುಂಡು ಚಕ್ಕೆ, ಶುಂಠಿ ಇವೆಲ್ಲವನ್ನೂ ಗುದ್ದಿ, 2 ಗ್ಲಾಸ್ ನೀರಿಗೆ ಹಾಕಿ, ಚೆನ್ನಾಗಿ ಕುದಿಸಿ, ಕಶಾಯ ಮಾಡಿಡಿ. ಉಗುರು ಬೆಚ್ಚಗಾದ ಬಳಿಕ, ಸ್ವಲ್ಪ ಸ್ವಲ್ಪ ಕುಡಿಯುತ್ತಿರಿ. ಇದರಿಂದ ಕೂಡ ಮುಟ್ಟಿನ ಹೊಟ್ಟೆನೋವಿಗೆ ಪರಿಹಾರ ಸಿಗುತ್ತದೆ.
ಅಲ್ಲದೇ ದೇಹಕ್ಕೆ ತಂಪು ನೀಡುವ ಹಣ್ಣು, ಎಳನೀರಿನ ಸೇವನೆ ಮಾಡಿ. ಡೈರಿ ವಸ್ತುಗಳನ್ನು ಹೆಚ್ಚು ಬಳಸಬೇಡಿ. ಬೇಕರಿ ತಿಂಡಿ, ಸಿಹಿ ತಿಂಡಿ, ಕರಿದ ಪದಾರ್ಥಗಳ ಸೇವನೆ ಈ ದಿನಗಳಲ್ಲಿ ಮಾಡಬೇಡಿ.
ೃೃೃೃೃೃೃೃೃೃೃೃೃೃೃೃೃೃ
ನಿಮ್ಮ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಈ ಆಹಾರಗಳನ್ನು ಮತ್ತೆ ಮತ್ತೆ ಬಿಸಿ ಮಾಡಿ ಸೇವಿಸಬೇಡಿ
ನಮ್ಮ ದೇಶದಲ್ಲಿ ಹಲವು ಹೆಂಗಸರು, 1 ಬಾರಿ ಮಾಡಿದ ಸಾಂಬಾರನ್ನು ಬಿಸಿ ಮಾಡಿ ಮಾಡಿ, 4 ದಿನ ಬಳಸಿ, ಸೇವಿಸುತ್ತಾರೆ. ಆದರೆ ಇದರಿಂದ ಅವರ ಅಥವಾ ಅವರ ಮನೆಯವರ ಆರೋಗ್ಯಕ್ಕೇನೂ ಹಾನಿಯಾಗಿಲ್ಲ. 100ರಲ್ಲಿ 1 ಅಥವಾ ಇಬ್ಬರಿಗೆ ಜೀರ್ಣಕ್ರಿಯೆ ಸಮಸ್ಯೆ ಆಗಿರಬಹುದೇನೋ, ಆದರೆ ಹಲವರು ಈಗಲೂ ಇದೇ ರೀತಿ ಇದ್ದಾರೆ.
ಅವರ ಆರೋಗ್ಯ ಏಕೆ ಚೆನ್ನಾಗಿದೆ ಎಂದರೆ, ಅವರಿಗೆ ಆ ಆಹಾರ ದೇಹಕ್ಕೆ ಓಗ್ಗಿಕ“ಂಡಿದೆ. ಆದರೆ ಇಂದಿನ ಕಾಲದಲ್ಲಿ ತಯಾರಿಸುವ ಕೆಲ ಆಹಾರಗಳನ್ನು ನಾವು ಎಂದಿಗೂ ಪದೇ ಪದೇ ಬಿಸಿ ಮಾಡಿ ಮಾಡಿ, ಸೇವಿಸಬಾರದು. ಹಾಗೆ ಮಾಡಿದ್ದಲ್ಲಿ, ಕ್ಯಾನ್ಸರ್‌ನಂಥ ರೋಗಗಳು ಬರುವ ಸಾಧ್ಯತೆ ಇರುತ್ತದೆ. ಹಾಗಾದ್ರೆ ಎಂಥ ಆಹಾರಗಳನ್ನು ನಾವು ಸೇವಿಸಬಾರದು ಅಂತಾ ತಿಳಿಯೋ ಬನ್ನಿ..
ಅನ್ನವನ್ನು ಪದೇ ಪದೇ ಬಿಸಿ ಮಾಡಬಾರದು. ನೀವು ಅನ್ನ ಮಾಡಿದ ಬಳಿಕ, ಅಂದೇ ಆ ಅನ್ನದ ಸೇವನೆ ಮಾಡಿಬಿಡಿ. ಅಥವಾ ಆ ಸಮಯದಲ್ಲೇ ಅನ್ನದ ಸೇವನೆ ಮಾಡಿಬಿಡಿ. ಅದನ್ನು ಪದೇ ಪದೇ ಬಿಸಿ ಮಾಡುವುದರಿಂದ ಫುಡ್ ಪಾಯ್ಸಿನ್ ಆಗುವ ಸಾಧ್ಯತೆ ಇರುತ್ತದೆ.
ಇನ್ನು ಬಜ್ಜಿ, ಬೋಂಡಾ, ಸಂಡಿಗೆ ಹೀಗೆ ಇಂಥ ತಿಂಡಿಗಳನ್ನು ಕರಿದ ಎಣ್ಣೆಯನ್ನು ಪದೇ ಪದೇ ಬಳಸಬೇಡಿ. ಹಾಳಾಗುತ್ತದೆ ಎಂದು ನೀವು ಎಣ್ಣೆಯನ್ನು ಪದೇ ಪದೇ ಬಳಸಿ, ಖಾಲಿ ಮಾಡಲು ಪ್ರಯತ್ನಿಸಿದರೆ, ನಿಮ್ಮ ಆರೋಗ್ಯವೂ ಅದೇ ರೀತಿ ಹಾಳಾಗುತ್ತದೆ.
ಮಶ್ರೂಮ್‌ನಲ್ಲಿ ಪ್ರೋಟೀನ್ ಪ್ರಮಾಣ ಕಡಿಮೆ ಇರುತ್ತದೆ. ಹಾಗಾಗಿ ಇದನ್ನು ಪದೇ ಪದೇ ಬಿಸಿ ಮಾಡುವುದರಿಂದ, ಪ್ರೋಟೀನ್ ಪ್ರಮಾಣ ತೀರಾ ಕಡಿಮೆಯಾಗಬಹುದು. ಆಗ ನೀವು ಆ ಆಹಾರ ತಿಂದೂ ಪ್ರಯೋಜನವಾಗುವುದಿಲ್ಲ.
ಚಿಕನ್ ಮತ್ತು ಎಗ್‌ನ್ನು ಕೂಡ ಪದೇ ಪದೇ ಬಿಸಿ ಮಾಡಬಾರದು. ಅದೇ ರೀತಿ ಚೈನೀಸ್ ತಿನಿಸುಗಳನ್ನು ಪದೇ ಪದೇ ಬಿಸಿ ಮಾಡುವುದರಿಂದ ಅದು ವಿಷಕಾರಿಯಾಗುತ್ತದೆ. ಹಾಗೆ ಪದೇ ಪದೇ ಬಿಸಿ ಮಾಡಿ ಸೇವಿಸಿ, ಹಲವರು ಪ್ರಾಣ ಕಳೆದುಕ“ಂಡಿದ್ದಾರೆ.
ೃೃೃೃೃೃೃೃೃೃೃೃೃೃೃೃೃೃೃ
ಮಲಬದ್ಧತೆ ಸಮಸ್ಯೆ ದೂರವಾಗಿಸಲು ಈ ಹಣ್ಣನ್ನು ತಿನ್ನಿ
ಮಲಬದ್ಧತೆ ಸಮಸ್ಯೆ ಅನ್ನೋದು ಕಾಮನ್. ನಾವು ಸೇವಿಸಿದರೆ ಆಹಾರದಲ್ಲಿ ಉಷ್ಣತೆ ಹೆಚ್ಚಾಗಿದ್ದರೆ, ಅಥವಾ ತಂಪಾದ ಆಹಾರ ಸೇವನೆಯೇ ನಿಲ್ಲಿಸಿದಾಗ, ನೀರು ಹೆಚ್ಚು ಕುಡಿಯದಿದ್ದಾಗ, ನಮಗೆ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಹೀಗಿದ್ದಾಗ, ನಾವು ಅದಕ್ಕೆ ತಕ್ಕ ಹಾಗೆ ಮನೆ ಮದ್ದು ಮಾಡಿ, ಸಮಸ್ಯೆಗೆ ಪರಿಹಾರ ಹುಡುಕಬೇಕು. ಆದರೆ ಎಷ್ಟೇ ಪ್ರಯತ್ನಿಸಿದರೂ ಸಮಸ್ಯೆಗೆ ಪರಿಹಾರ ಸಿಗದಿದ್ದಲ್ಲಿ ಮಾತ್ರ ವೈದ್ಯರ ಬಳಿ ಹೋಗಬೇಕು. ಹಾಗಾದ್ರೆ ಮಲಬದ್ಧತೆ ಸಮಸ್ಯೆ ಇದ್ದಲ್ಲಿ ನಾವೇನು ಮಾಡಬೇಕು ಅಂತಾ ತಿಳಿಯೋಣ ಬನ್ನಿ.
ಮಲಬದ್ಧತೆ ದೂರವಾಗಿಸಲು ಇರುವ ಹಣ್ಣು ಅಂದ್ರೆ ಪ್ರೂನ್ಸ್. ಅಂದ್ರೆ ಪ್ಲಮ್ ಹಣ್ಣು. ಪ್ಲಮ್ ಹಣ್ಣನ್ನು ಡ್ರೈ ಮಾಡಿದಾಗ, ಅದು ಪ್ರೂನ್ಸ್ ಆಗುತ್ತದೆ. ನಿಮಗೆ ಡ್ರೈಫ್ರೂಟ್ಸ್ ಶಾಪ್‌ನಲ್ಲಿ ಈಸಿಯಾಗಿ ಸಿಗುತ್ತದೆ. ಇದರಲ್ಲಿ ಸೋರ್ಬಿಟಾಲ್ ಅನ್ನೋ ಅಂಶವಿದ್ದು, ಈ ಅಂಶದಿಂದ ತಿಂದ ಆಹಾರ ಚೆನ್ನಾಗಿ ಜೀರ್ಣವಾಗಿ, ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. ಹಾಗಾಗಿ ಈ ಹಣ್ಣನ್ನು ಪ್ರತಿದಿನ 1 ಸೇವಿಸಿದರೂ ಸಾಕು. ನಿಮ್ಮ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.
ಇದರ ಜತೆಗೆ ನೀವು ದೇಹಕ್ಕೆ ತಂಪು ನೀಡುವ ಹಣ್ಣುಗಳಾದ ಆರೇಂಜ್, ಬಾಳೆಹಣ್ಣು ಸೇರಿ ಹಲವು ಹಣ್ಣುಗಳ ಸೇವನೆ ಮಾಡಿದರೂ ಉತ್ತಮ. ಜತೆಗೆ ಚೆನ್ನಾಗಿ ನೀರು ಕುಡಿಯಬೇಕು. ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ಮಲಬದ್ಧತೆ ಸಮಸ್ಯೆ ಶುರುವಾಗುತ್ತದೆ.
=ೃೃೃೃೃೃೃೃೃೃೃೃೃೃೃೃೃೃ
ನೀವು 21 ದಿನ ಸಕ್ಕರೆ ಸೇವಿಸುವುದನ್ನು ನಿಲ್ಲಿಸಿದರೆ, ನಿಮ್ಮ ದೇಹದಲ್ಲಿ ಈ ಬದಲಾವಣೆಯಾಗುತ್ತದೆ
ಸಕ್ಕರೆ ಅನ್ನೋದು ನಮ್ಮ ಪ್ರತಿದಿನದಲ್ಲಿ ಇರಲೇಬೇಕಾದ ಆಹಾರ. ಸಕ್ಕರೆ ಇಲ್ಲದೇ ಕೆಲವರು ಚಹಾ, ಕಾಫಿ ಸೇವನೆ ಮಾಡೋದೇ ಇಲ್ಲ. ಇನ್ನು ಕೆಲವರಿಗೆ ತಿಂಡಿಯಲ್ಲಿ ಸ್ವಲ್ಪವಾದರೂ ಸಕ್ಕರೆ ಇರಲೇಬೇಕು. ಆದರೆ ನೀವು ದಿನಕ್ಕೆ 5ರಿಂದ 6 ಬಾರಿ ಚಹಾ ಸೇವನೆ ಮಾಡಿದ್ದಲ್ಲಿ, ಅಗತ್ಯಕ್ಕಿಂತ ಹೆಚ್ಚು ಸಕ್ಕರೆ ಸೇವಿಸಿದ್ದೀರಿ ಎಂದರ್ಥ. ಆದರೆ ನೀವು ಹೇಗಾದರೂ ಮಾಡಿ 21 ದಿನ ಸಕ್ಕರೆ ಸೇವನೆ ನಿಲ್ಲಿಸಿದರೆ ಏನಾಗತ್ತೆ..? ಆ ಬಗ್ಗೆ ತಿಳಿಯೋಣ ಬನ್ನಿ..
ಸಕ್ಕರೆ ಅತ್ಯಂತ ವಿಷಕಾರಿ ಅಂಶವಾಗಿದ್ದು, ಇದರಲ್ಲಿ ಯಾವುದೇ ಪೋಷಕಾಂಶ ಆಗಲಿ ಪ್ರೋಟೀನ್, ವಿಟಾಮಿನ್ ಏನೂ ಇರುವುದಿಲ್ಲ. ಹಾಗಾಗಿ ಇದರ ಸೇವೆಯಿಂದ ನಮ್ಮ ದೇಹಕ್ಕೇನೂ ಪ್ರಯೋಜನವಿಲ್ಲ. ಬರೀ ರುಚಿಗಷ್ಟೇ ನಾವು ಇದನ್ನು ಬಳಸಬೇಕು.
ನೀವು 21 ದಿನಗಳ ಕಾಲ ಸಕ್ಕರೆ ಸೇವನೆ ನಿಲ್ಲಿಸಿದರೆ, ನಿಮ್ಮ ದೇಹದ ಕೆಟ್ಟ ಅಂಶ, ತೂಕ, ರೋಗ ಎಲ್ಲವೂ ಕಂಟ್ರೋಲಿಗೆ ಬರುತ್ತದೆ. ಆದರೆ 21 ದಿನ ತಾಳ್ಮೆಯಿಂದ ನೀವು ಸಕ್ಕರೆ ಸೇವನೆ ನಿಲ್ಲಿಸುವುದು ಮಾತ್ರ ಮುಖ್ಯ. ನೀವು ಹೀಗೆ ಮಾಡಿದ್ದಲ್ಲಿ, ವ್ಯಾಯಾಮ ಮಾಡದಿದ್ದರೂ ಕೂಡ 1ರಿಂದ 2 ಕೆಜಿ ತೂಕ ಇಳಿಯುತ್ತದೆ.
ೃೃೃೃೃೃೃೃೃೃೃೃೃೃೃ
ಹೆಚ್ಚು ಮೈದಾ ಬಳಸಿದರೆ, ನಮ್ಮ ದೇಹದಲ್ಲೇನು ಬದಲಾವಣೆಯಾಗುತ್ತದೆ..?
ನಮ್ಮ ದಿನಚರಿಯಲ್ಲಿ ನಾವು ಯಾವುದಾದರೂ ತಿಂಡಿ ಮೂಲಕವಾದ್ರೂ ಮೈದಾ ತಿಂದೇ ತಿಂತೀರಿ. ಕೆಲವರು ಅದನ್ನೆಲ್ಲ ಕಂಟ್ರೋಲ್ ಮಾಡಿದರೂ, ಸಾಮಾನ್ಯವಾಗಿ ಇರುವ ಜನರು ಪ್ರತಿದಿನ ಯಾವುದಾದರೂ ರೂಪದಲ್ಲಿ ಮೈದಾ ಸೇವನೆ ಮಾಡೇ ಮಾಡುತ್ತಾರೆ. ಬಿಸ್ಕತ್ತು, ಬ್ರೆಡ್, ಬನ್, ಸ್ನ್ಯಾಕ್ಸ್, ಬೀದಿಬದಿ ತಿಂಡಿ ಹೀಗೆ ಎಲ್ಲದರಲ್ಲೂ ಮೈದಾ ಬಳಕೆ ಇದ್ದೇ ಇರುತ್ತದೆ. ಹಾಗಾದ್ರೆ ನಾವು ಅಗತ್ಯಕ್ಕಿಂತ ಹೆಚ್ಚು ಮೈದಾ ತಿಂದ್ರೆ ನಮ್ಮ ಆರೋಗ್ಯಕ್ಕೇನಾಗುತ್ತದೆ ಅಂತಾ ತಿಳಿಯೋಣ ಬನ್ನಿ..
ಮೈದಾವನ್ನು ಗೋದಿಯಿಂದಲೇ ತಯಾರಿಸಲಾಗುತ್ತದೆ ಎನ್ನುತ್ತಾರೆ. ಆದರೆ ಗೋದಿಯನ್ನು ಅಗತ್ಯಕ್ಕಿಂತ ಹೆಚ್ಚು ಪುಡಿ ಮಾಡಿದಾಗ, ಅದರಲ್ಲಿರುವ ಆರೋಗ್ಯಕರ ಅಂಶವೆಲ್ಲ ನಾಶವಾಗುತ್ತದೆ. ಆಗ ಆ ಹುಡಿ ಮೈದಾ ಆಗಿ ಬದಲಾಗುತ್ತದೆ.
ಇದರಲ್ಲಿ ಬರೀ ಕ್ಯಾಲೋರಿಯೇ ತುಂಬಿರುತ್ತದೆ. ಅಲ್ಲದೇ, ಇದು ಅಂಟಂಟಾಗಿರುವುದರಿಂದ, ಮೈದಾ ನಮ್ಮ ದೇಹ ಸೇರಿದ ಬಳಿಕ, ಅಲ್ಲಿ ಅಂಟಿಕ“ಂಡು, ಮಲಬದ್ಧತೆ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿಯೇ ಮೈದಾ ಹೆಚ್ಚು ಸೇವನೆ ಮಾಡಬಾರದು ಎನ್ನುತ್ತಾರೆ.
ಅಲ್ಲದೇ ಮೈದಾ ಸೇವನೆಯಿಂದ ನಮ್ಮ ದೇಹದ ತೂಕ ಹೆಚ್ಚಾಗುತ್ತದೆ. ಏಕೆಂದರೆ, ಇದರಲ್ಲಿ ಬರೀ ಕ್ಯಾಲೋರಿ ಇರುವುದರಿಂದ, ಮೈದಾ ಸೇವನೆ ಮಾಡಿದ ಬಳಿಕ, ನಮ್ಮ ದೇಹಕ್ಕೆ ಬರೀ ಕ್ಯಾಲೋರಿ ಸೇರುತ್ತದೆ. ಹಾಗಾಗಿಯೇ ಮೈದಾ ಸೇವನೆಯಿಂದ ಜೀರ್ಣಕ್ರಿಯೆ ಸಮಸ್ಯೆ ಉಂಟಾಗಿ, ದೇಹದ ತೂಕ ಹೆಚ್ಚುತ್ತದೆ.
ೃೃೃೃೃೃೃೃೃ
ಕಣ್ಣು ಕೆಂಪಾಗಿ ನೋವಾಗುತ್ತಿದ್ದರೆ ಈ ವಿಷಯವನ್ನು ಗಮನದಲ್ಲಿರಿಸಿ
ಕಣ್ಣು ಕೆಂಪಾಗಿ ನೋವಾಗುತ್ತಿದ್ದರೆ, ಸಾಮಾನ್ಯವಾಗಿ ಜನ ಅದನ್ನು ಕಣ್ ಬಂದಿದೆ ಅಂತಾ ಆಡು ಭಾಷೆಯಲ್ಲಿ ಹೇಳುತ್ತಾರೆ. ಹಾಗಾದಾಗ ಅಂಥವರು ಮನೆಯಲ್ಲೇ ಇರಬೇಕು. ಚಿಕಿತ್ಸೆ ಪಡೆದು ಆರಾಮವಾದ ಬಳಿಕವಷ್ಟೇ ಆಚೆ ಬರಬೇಕು ಅಂತಾರೆ. ಏಕೆಂದರೆ, ಅವರ ಕಣ್ಣು ನೋಡಿದ್ರೆ, ಬೇರೆಯವರಿಗೂ ಆ ನೋವು ಬರುತ್ತದೆ. ಹೀಗಾದಾಗ ಕೆಲ ವಿಷಯಗಳನ್ನು ನಾವು ಗಮನದಲ್ಲಿರಿಸಬೇಕು. ಅದೇನು ಅಂತಾ ತಿಳಿಯೋಣ ಬನ್ನಿ..
ನಿಮಗೆ ಕಣ್ಣಿನ ನೋವು ಬಂದ್ರೆ, ಅದು ಕಡಿಮೆಯಾಗಲು 1 ವಾರವಾದ್ರೂ ಬೇಕು. ಹಾಗಾಗಿ ನೀವು ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದರೂ, ಮನೆಯಲ್ಲೇ ಮದ್ದು ಮಾಡುವುದಾದರೆ, ನೀವು ಪದೇ ಪದೇ ತಣ್ಣೀರಿನಿಂದ ನಿಮ್ಮ ಕಣ್ಣನ್ನು ಕ್ಲೀನ್ ಮಾಡಬೇಕು. ಆ ನೀರಿನಲ್ಲಿ 2 ಸ್ಪೂನ್ ಜೇನುತುಪ್ಪ ಮಿಕ್ಸ್ ಮಾಡಿ, ಮುಖ ವಾಶ್ ಮಾಡಿದರೆ, ನಿಮ್ಮ ಕಣ್ಣಿನಲ್ಲಾಗುವ ಕಿರಿಕಿರಿಯಿಂದ ಮುಕ್ತಿ ಸಿಗುತ್ತದೆ.
ಅಲ್ಲದೇ, ದಿನಕ್ಕೆ 4 ಬಾರಿ ನಿಮ್ಮ ಕಣ್ಣಿಗೆ ರೋಸ್ ವಾಟರ್ ಹಾಕುವುದರಿಂದ ಕಣ್ಣಿನ ಸಮಸ್ಯೆ ದೂರವಾಗುತ್ತದೆ. ಆದರೆ ನೀವು ಈ ಮನೆಮದ್ದು ಬಳಸುವ ಮುನ್ನ ಅಥವಾ ಈ ಮನೆಮದ್ದಿನಿಂದ ನಿಮಗೆ ಅಲರ್ಜಿಯಾಗುತ್ತದೆ ಎಂದಾದಲ್ಲಿ, ವೈದ್ಯರ ಬಳಿ ವಿಚಾರಿಸುವುದು ಉತ್ತಮ.
ೃೃೃೃೃೃೃೃೃೃೃೃೃೃ
ನೀವು ತೂಕ ಇಳಿಸಲು ಇಚ್ಛಿಸಿದರೆ ಈ ರೀತಿ ಅನ್ನ ಬೇಯಿಸಿ ತಿನ್ನಿ
ನೀವು ತುಂಬಾ ಜನ ಹೇಳಿರುವುದನ್ನು ಕೇಳಿರಬಹುದು. ಅನ್ನ ತಿಂದರೆ, ತೂಕ ಹೆಚ್ಚಾಗತ್ತೆ ಅಂತಾ. ಆದರೆ ಅದು ಸುಳ್ಳು. ಅನ್ನ ತಿಂದರೆ ತೂಕ ಹೆಚ್ಚಾಗುವುದಿಲ್ಲ. ಆದರೆ ಅನ್ನವನ್ನು ತಪ್ಪಾಗಿ ಬೇಯಿಸಿ ತಿಂದ್ರೆ, ಅಗತ್ಯಕ್ಕಿಂತ ಹೆಚ್ಚು ತಿಂದರೆ, ಮಸಾಲೆ ಪದಾರ್ಥದ ಜತೆ ತಿಂದರೆ ಖಂಡಿತ ಅದರಿಂದ ನಮ್ಮ ಆರೋಗ್ಯ ಹಾಳಾಗುತ್ತದೆ. ಹಾಗಾದ್ರೆ ನಾವು ಅನಾರೋಗ್ಯಕರವಾಗಿ ದಪ್ಪಗಾಗಬಾರದು ಅಂದ್ರೆ, ನಾವು ಅನ್ನವನ್ನು ಆರೋಗ್ಯಕರವಾಗಿ ಬೇಯಿಸಿ ತಿನ್ನಬೇಕು.
ನೀವು ತೂಕ ಇಳಿಸಬೇಕೆಂದಲ್ಲಿ ಬ್ರೌನ್ ರೈಸ್ ಸೇವಿಸಿ, ಬಿಳಿ ಅನ್ನದ ಸೇವನೆ ಬೇಡ. ಏಕೆಂದರೆ, ಬ್ರೌನ್ ರೈಸ್‌ನಲ್ಲಿ ಹೆಚ್ಚು ಫೈಬರ್ ಇದ್ದು, ಇದು ತೂಕ ಹೆಚ್ಚಿಸುವುದಿಲ್ಲ.
ಇನ್ನು ನೀವು ಬ್ರೌನ್ ರೈಸ್ ಬಳುವುದಿದ್ದರೂ, ಗಂಜಿ ಬಸಿದು ಸೇವಿಸಬೇಕು. ಅಂದ್ರೆ ಅನ್ನವನ್ನು ಕುಕ್ಕರ್‌ನಲ್ಲಿ ಬೇಯಿಸುವಂತಿಲ್ಲ. ಬದಲಾಗಿ, ಅನ್ನವನ್ನು ಪಾತ್ರೆಯಲ್ಲಿ ನೀರು ಹಾಕಿ ಬೇಯಿಸಿ, ಬಳಿಕ ಗಂಜಿ ತೆಗೆದು ತಿನ್ನಬೇಕು.
ಇನ್ನು ಅನ್ನ ಉಣ್ಣುವಾಗ ನೀವು ಬಿಸಿ ಬಿಸಿ ಅನ್ನ ಊಟ ಮಾಡುವುದಕ್ಕಿಂತ, ಅನ್ನ ತಣಿದ ಮೇಲೆ ಸೇವಿಸಬೇಕು. ಇದರಿಂದ ಬೇಗ ಹೊಟ್ಟೆ ತುಂಬುತ್ತದೆ. ಹಾಗಾಗಿ ಹೆಚ್ಚು ಊಟ ಮಾಡುವ ಅವಶ್ಯಕತೆ ಇರುವುದಿಲ್ಲ. ಇದರಿಂದ ತೂಕ ಇಳಿಯುತ್ತದೆ.
Discussion about this post