ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ನವದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯ (ಇ.ಡಿ) ಕಚೇರಿಗೆ ಬುಧವಾರ ವಿಚಾರಣೆಗೆ ಹಾಜರಾದರು.
200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್ ಹೆಸರು ಕೇಳಿಬಂದಿದೆ. ಪ್ರಕರಣದ ಪ್ರಮುಖ ಆರೋಪಿ ಸುಖೇಶ್ ಚಂದ್ರಶೇಖರ್ ಜೊತೆ ನಟಿ ನಂಟು ಹೊಂದಿದ್ದರು ಎನ್ನಲಾಗಿದೆ. ಸುಖೇಶ್ ಹಾಗೂ ಜಾಕ್ವೆಲಿನ್ ಜತೆಗಿದ್ದರು ಎನ್ನಲಾದ ಫೋಟೊಗಳು ಸಾಕಷ್ಟು ವೈರಲ್ ಆಗಿದ್ದವು. ಪ್ರಕರಣದಲ್ಲಿ ಈಗಾಗಲೇ ಕೆಲವು ಬಾರಿ ಜಾಕ್ವೆಲಿನ್ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗಿದ್ದಾರೆ.
ಇದನ್ನೂ ಓದಿ: Rachita Ram: ರಚಿತಾ ರಾಮ್ಗೆ ಯೋಗ ಬಂತು ಯೋಗ; ಭಟ್ಟರ ತೆಕ್ಕೆಗೆ ಬಿದ್ದ ರಚ್ಚು
ಆರೋಪಿ ಚಂದ್ರಶೇಖರ್ 10 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಜಾಕ್ವೆಲಿನ್ಗೆ ಉಡುಗೊರೆಯಾಗಿ ನೀಡಿರುವುದು ಇತ್ತೀಚೆಗೆ ಬಯಲಾಗಿತ್ತು. ಈ ಉಡುಗೊರೆಯಲ್ಲಿ 52 ಲಕ್ಷ ರೂಪಾಯಿ ಮೌಲ್ಯದ ಕುದುರೆ ಮತ್ತು 9 ಲಕ್ಷ ರೂಪಾಯಿ ಮೌಲ್ಯದ ಪರ್ಷಿಯನ್ ಬೆಕ್ಕು ಸೇರಿವೆ ಎಂದು ಜಾರಿ ನಿರ್ದೇಶನಾಲಯವು ಚಾರ್ಜ್ಶೀಟ್ನಲ್ಲಿ ತಿಳಿಸಿದೆ ಎಂದು ಇತ್ತೀಚೆಗೆ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.
ಇದನ್ನೂ ಓದಿ: ‘ರಾಕಿ ಔರ್ ರಾನಿ ಕೀ ಪ್ರೇಮ್ ಕಹಾನಿ’ಯಲ್ಲಿ ಆಲಿಯಾ ಭಟ್, ರಣವೀರ್ ಸಿಂಗ್ ಲಿಪ್ಲಾಕ್
Discussion about this post