ಬ್ರಿಟನ್ನ ಬೇಹುಗಾರಿಕಾ ಸಂಸ್ಥೆ (ಜಿಸಿಎಚ್ಕ್ಯು)ಯೊಂದಿಗಿನ ಒಪ್ಪಂದವೊಂದಕ್ಕೆ ಬಹುರಾಷ್ಟ್ರೀಯ ಸಂಸ್ಥೆ ಅಮೆಝಾನ್ ಸಹಿ ಹಾಕಿದ್ದು ಇದರಂತೆ ಬೇಹುಗಾರಿಕಾ ಸಂಸ್ಥೆಗೆ ಅಮೆಝಾನ್ ವೆಬ್ ಸರ್ವಿಸಸ್ ಬೇಹುಗಾರಿಕೆಯಲ್ಲಿ ಮಾಹಿತಿ ವಿಶ್ಲೇಷಣೆ ಹಾಗು ಕೃತಕ ಬುದ್ಧಿಮತ್ತೆಗಳನ್ನು ಹೆಚ್ಚಾಗಿ ಬಳಕೆಮಾಡಿಕೊಳ್ಳಲು ಸೂಕ್ತವಾದ ಉಪಕರಣಗಳನ್ನು ಪೂರೈಸಲಿದೆ ಎಂದು ವರದಿಯಾಗಿದೆ.
ಬ್ರಿಟನ್ನ ಜಿಸಿಎಚ್ಕ್ಯು ಬೇಹುಗಾರಿಕಾ ಸಂಸ್ಥೆಯು ತನ್ನ ಸೋದರ ಸಂಸ್ಥೆಗಳಾದ M15 ಮತ್ತು M16 ಹಾಗೂ ಸರಕಾರದ ರಕ್ಷಣಾ ಇಲಾಖೆ ಹಾಗೂ ಇನ್ನಿತರ ಇಲಾಖೆಗಳ ಜಂಟಿ ಕಾರ್ಯಾಚರಣೆಗಳ ಸಂದರ್ಭಗಳಲ್ಲಿ ಬಳಸುವ ಸಲುವಾಗಿ ಹೆಚ್ಚಿನ ಭದ್ರತೆಯ ಕ್ಲೌಡ್ ಉಪರಣಗಳನ್ನು ಕೊಳ್ಳಲು ಮುಂದಾಗಿದೆಯೆಂದು ವರದಿ ತಿಳಿಸಿದೆ.
ಈ ಒಪ್ಪಂದಕ್ಕೆ ಅಮೆಝಾನ್ ವೆಬ್ ಸರ್ವಿಸಸ್ (ಅಮೆಝಾನ್.ಕಾಮ್ ಇಂಕ್ನ ಕ್ಲೌಡ್ ಸೇವಾ ವಿಭಾಗ) ಸಹಿ ಹಾಕಿದ್ದು ಎಲ್ಲಾ ಸಂಬಂಧಿಸಿದ ಸಂಸ್ಥೆಗಳ ಮಾಹಿತಿಗಳನ್ನು ಬ್ರಿಟನ್ನಲ್ಲಿ ಸಂಗ್ರಹಿಸಿಡಲಾಗುವುದೆಂದು ಬಲ್ಲ ಮೂಲಗಳಿಂದ ತಿಳಿದುಬಂದಿರುವುದಾಗಿ ವರದಿಯಾಗಿದೆ.
ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವನ್ನು ನಾವು ಹೆಚ್ಚಿನ ಮಟ್ಟದಲ್ಲಿ ಬಳಸಿಕೊಳ್ಳುತ್ತಿದ್ದು ಅದರಲ್ಲೂ ಹೆಚ್ಚಾಗಿ ಭಾಷಾನುವಾದಕ್ಕಾಗಿ ಬಳಸುತ್ತಿದ್ದು ಇದರಿಂದಾಗಿ ಅಗಾಧ ಪ್ರಮಾಣದ ವಿಶ್ವದ ಮಾಹಿತಿಯನ್ನು ವಿಂಗಡಿಸಿ ಅದರ ಸಹಾಯದಿಂದ ಮಕ್ಕಳನ್ನು ಶೋಷಣೆ ಮಾಡುವವರು ಹಾಗೂ ಇನ್ನಿತರ ಅಪರಾಧಿಗಳ ವಿಷಯ ಸಂಗ್ರಹಣೆ ಮಾಡಲು ಸಾಧ್ಯವಾಗಿದೆ ಎಂದರು.
Amazon signs a deal with GCHQ to supply artificial intelligence equipments to help aid in espionage
ಇದನ್ನೂ ಓದಿ: ಮೂರೇ ದಿನಗಳಲ್ಲಿ ಲಕ್ಷಕ್ಕೂ ಹೆಚ್ಚು ಸ್ಮಾರ್ಟ್ ಟಿವಿ ಮಾರಾಟ: ಶಿಯೋಮಿ
ಇದನ್ನೂ ಓದಿ: ಪಟಾಕಿ ರಾಜಕೀಯ: ನಿರ್ಬಂಧ ಮರುಪರಿಶೀಲನೆ ಭರವಸೆ ನೀಡಿದ ಅಸ್ಸಾಂ ಸರ್ಕಾರ
Discussion about this post