ಪೋರ್ಟ್-ಔ-ಪ್ರಿನ್ಸ್: ಹೈಟಿ ರಾಜಧಾನಿ ಪೋರ್ಟ್-ಔ-ಪ್ರಿನ್ಸ್ನಲ್ಲಿ ಅಮೆರಿಕ ಮೂಲದ 17 ಮಂದಿ ಕ್ರಿಶ್ಚಿಯನ್ ಮಿಷನರಿಗಳು ಹಾಗೂ ಅವರ ಕುಟುಂಬ ಸದಸ್ಯರನ್ನು ಅಪಹರಿಸಲಾಗಿದೆ. ಹಿಂಸೆಯಿಂದ ತತ್ತರಿಸಿರುವ ಕೆರಿಬಿಯನ್ ದೇಶ ಹೈಟಿಯಲ್ಲಿ ಈ ಮಿಷನರಿಗಳು ಅನಾಥಾಶ್ರಮದಿಂದ ಹೊರಗೆ ಬರುತ್ತಿದ್ದಾಗ ಬಂದುಕೂಧಾರಿಗಳು ಈ ಅಪಹರಣ ನಡೆಸಿದ್ದಾರೆ ಎಂದು ಭದ್ರತಾ ಅಧಿಕಾರಿಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಕ್ರಿಶ್ಚಿಯನ್ ಮಿಷನರಿಗಳು ವಿಮಾನ ನಿಲ್ದಾಣದತ್ತ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ದಿಢೀರ್ ಪ್ರತ್ಯಕ್ಷರಾದ ಮುಸುಕುಧಾರಿಗಳು ಅಪಹರಿಸಿದರು. ಈ 17 ಮಂದಿಯ ಪೈಕಿ ಕೆಲ ಮಕ್ಕಳೂ ಇರಬಹುದು ಎಂದು ಶಂಕಿಸಲಾಗಿದೆ.
ಈ ಕುರಿತು ರಾಯಿಟರ್ಸ್ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿರುವ ಅಮೆರಿಕ ವಿದೇಶಾಂಗ ವ್ಯವಹಾರಗಳ ಇಲಾಖೆಯ ವಕ್ತಾರೆ ಜೆನ್ನಿಫರ್ ವಿಯಾವು, ಘಟನೆಯ ಬಗ್ಗೆ ಪರಿಶೀಲಿಸುತ್ತಿದೆ. ಅಧಿಕಾರಿಗಳು ವಿವರಗಳನ್ನು ಕಲೆ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ. ಕಳೆದ ಜುಲೈನಲ್ಲಿ ಅಧ್ಯಕ್ಷ ಜೊವೆನೆಲ್ ಮೊಯಿಸ್ ಹತ್ಯೆ ಹಾಗೂ ಆಗಸ್ಟ್ನಲ್ಲಿ ಭೂಕಂಪದಿಂದಾಗಿ ಹೈಟಿ ಕಂಗೆಟ್ಟಿದೆ. ದೇಶದಲ್ಲಿ ಹಿಂಸಾಚಾರದ ಪ್ರಮಾಣ ಹೆಚ್ಚಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ.
American Origin Christian Missionaries Abducted in Haiti
ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಉಕ್ರೇನ್ ವಿಮಾನ ಅಪಹರಣ: ವಿದೇಶಿಯರ ಏರ್ ಲಿಫ್ಟ್ ಬಂದ್
ಇದನ್ನೂ ಓದಿ: ನೇತಾಜಿ ಸುಭಾಷ್ ಚಂದ್ರ ಬೋಸ್: ಮರೆಯಬಾರದ ಮಹಾನ್ ತೇಜಸ್ಸು!!!
Discussion about this post