ಬೆಂಗಳೂರು: ಅಮೀರ್ ಖಾನ್ ನಟಿಸಿರುವ “ಲಾಲ್ಸಿಂಗ್ ಚಡ್ಡಾ” ಚಿತ್ರವು ಏಪ್ರಿಲ್ 14, 2022ರಂದು ಬಿಡುಯಾಗಲಿದೆ. ಈ ಚಿತ್ರವು ಟಾಮ್ ಹ್ಯಾಂಕ್ಸ್ರ ಆಸ್ಕರ್ ಪ್ರಶಸ್ತಿವಿಜೇತ ಚಿತ್ರ “ಫಾರೆಸ್ಟ್ ಗಂಪ್” ಚಿತ್ರದ ಅಧಿಕೃತ ರಿಮೇಕ್ ಆಗಿದ್ದು ಕೋವಿಡ್ ಸಮಸ್ಯೆಯಿಂದಾಗಿ ಇದರ ಬಿಡುಗಡೆಯನ್ನು ಪದೇ-ಪದೇ ಮುಂದೂಡಲಾಗಿತ್ತು. ಈಗ ಈ ಚಿತ್ರದ ಬಿಡುಗಡೆಯ ದಿನಾಂಕವನ್ನು ಏಪ್ರಿಲ್ 14, 2022ಕ್ಕೆ ನಿಗದಿಪಡಿಸಲಾಗಿದ್ದು ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಕನ್ನಡ ಚಿತ್ರ ಕೆಜಿಫ್ 2ರ ಬಿಡುಗಡೆಯ ದಿನಾಂಕವೂ ಸಹ ಅಂದೇ ನಿಗದಿಯಾಗಿದೆ.
ಕೆಜಿಎಫ್ 1 ಚಿತ್ರ ಭರ್ಜರಿ ಯಶಸ್ಸನ್ನು ಗಳಿಸಿದ ನಂತರ ಯಶ್ರ ಕೋಟ್ಯಂತರ ಅಭಿಮಾನಿಗಳು ಈ ಚಿತ್ರದ ಬಿಡುಗಡೆಗೆ ಕಾತರದಿಂದ ಕಾಯುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಎರಡೂ ಚಿತ್ರಗಳೂ ಒಂದೇ ದಿನ ಬಿಡುಗಡೆಯಾದರೆ ಚಿತ್ರಗಳ ನಡುವೆ ಸ್ಪರ್ಧೆ ಏರ್ಪಡುವ ಸಂಭವವಿದ್ದು ಕೆಜಿಎಫ್ 2 ಚಿತ್ರ ತಂಡವು ಈಗ ಅದೇ ದಿನ ಚಿತ್ರವನ್ನು ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದೆಯೆನ್ನುವ ವದಂತಿ ಹಬ್ಬಿರುವುದಲ್ಲದೇ ಚಿತ್ರದ ದಿನಾಂಕವನ್ನು ಏಪ್ರಿಲ್ 2022ರ ಅಂತ್ಯಭಾಗಕ್ಕೋ ಅಥವಾ ಮೇ 2022ಕ್ಕೋ ಮುಂದೂಡಲು ಯೋಚಿಸುತ್ತಿದೆ ಎನ್ನು ಸುದ್ದಿಯೂ ಇದೆ.
ಇತ್ತೀಚೆಗೆ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡುತ್ತಾ ಲಾಲ್ಸಿಂಗ್ ಚಡ್ಢಾ ಚಿತ್ರದ ನಾಯಕ ಅಮೀರ್ ಖಾನ್ ಚಿತ್ರದ ತಯಾರಿಕೆಗೆ ದೀರ್ಘ ಸಮಯ ಹಿಡಿದಿದ್ದು ಉತ್ತಮ ಗುಣಮಟ್ಟದ ಚಿತ್ರ ನಿರ್ಮಾಣ ಮಾಡುವ ದೃಷ್ಟಿಯಿಂದ ಹೀಗೆ ಮಾಡಬೇಕಾಯಿತು ಎಂದರು.
ಕೆಜಿಎಫ್ 2 ಚಿತ್ರದ ಬಿಡುಗಡೆಯ ದಿನಾಂಕವೂ ಅಂದೇ ಇರುವ ಬಗ್ಗೆ ಮಾತನಾಡಿದ ಅವರು ಕೆಜಿಎಫ್ 2 ಚಿತ್ರತಂಡವು ಹೇಗೆ ತಮ್ಮ ಚಿತ್ರಕ್ಕೆ ಬೆಂಬಲ ನೀಡಿತು ಎಂಬುದನ್ನು ವಿವರಿಸಿದರು.
ನಾನು ಇನ್ನೊಬ್ಬರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದೇನೆಂಬ ಭಾವನೆ ಜನರಲ್ಲಿ ಬರುವುದು ನನಗೆ ಇಷ್ಟವಿಲ್ಲ. ನಾನು ಪ್ರಥಮ ಬಾರಿಗೆ ಈ ಚಿತ್ರದಲ್ಲಿ ಸಿಖ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಏಪ್ರಿಲ್ 14ರಂದು ಸಿಖ್ಖರ ಪವಿತ್ರ ಹಬ್ಬ “ಬೈಸಾಖಿ” ಇರುವುದರಿಂದ ಚಿತ್ರ ಅಂದೇ ಬಿಡುಗಡೆಯಾಗುವುದು ಸೂಕ್ತವೆಂಬುದು ನನ್ನ ಭಾವನೆ. ಚಿತ್ರದ ಬಿಡುಗಡೆಯ ದಿನಾಂಕವನ್ನು ನಿರ್ಧರಿಸುವ ಮೊದಲು ನಾನು ಕೆಜಿಎಫ್ 2 ಚಿತ್ರ ತಂಡದ ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಪ್ರಶಾಂತ್ ನೀಲ್, ಹಾಗೂ ನಾಯಕ ಯಶ್ರೊಂದಿಗೆ ಕ್ಷಮೆಯಾಚಿಸಿ ನನ್ನ ಭಾವನೆಯನ್ನು ತಿಳಿಸಿದೆ. ನನ್ನ ಭಾವನೆಯನ್ನು ಅರ್ಥ ಮಾಡಿಕೊಂಡ ಅವರು ನಾವು ನಮ್ಮ ಯೋಜನೆಯಂತೆ ಅಂದೇ ಚಿತ್ರ ಬಿಡುಗಡೆ ಮಾಡಲು ಒಪ್ಪಿದರು. ಅವರ ಈ ನಡೆ ನಿಜಕ್ಕೂ ನನ್ನ ಮನಸ್ಸಿಗೆ ತಟ್ಟಿತು ಎಂದು ಅವರು ಹೇಳಿದರು. ಯಶ್ರೊಂದಿಗೆ ನಡೆದ ಸುದೀರ್ಘ ದೂರವಾಣಿ ಸಂಭಾಷಣೆಯಲ್ಲೂ ನಾನು ಇದನ್ನು ಹೇಳಿದಾಗ ಅವರೂ ನನ್ನ ಯೋಜನೆಯನ್ನು ಒಪ್ಪಿ ಬೆಂಬಲಿಸಿದರು ಎಂದೂ ಅಮೀರ್ ಖಾನ್ ತಿಳಿಸಿದರು.
ಕೆಜಿಎಫ್ 2 ತಂಡವು ಈಗ ತಮ್ಮ ಚಿತ್ರದ ಬಿಡುಗಡೆಗೆ ಯಾವ ದಿನಾಂಕವನ್ನು ನಿಗದಿಪಡಿಸಬಹುದು ಎನ್ನುವುದೇ ಕುತೂಹಲಕರ ವಿಷಯವಾಗಿದೆ.
Amir Khan Apologises to KGF Team for announcing his film release date to clash with that of KGF release date
ಇದನ್ನೂ ಓದಿ: ಯಶ್ vs ಅಮೀರ್ ಖಾನ್: ಚಿತ್ರಪ್ರೇಮಿಗಳ ಆಯ್ಕೆ ಯಾವುದು?
ಇದನ್ನೂ ಓದಿ: ಕೆಜಿಎಫ್-2 ಪ್ರಮೋಷನ್ ನಾನೇ ಮಾಡ್ತೀನಿ- ಅಮೀರ್ ಖಾನ್
Discussion about this post