ಟೊರಾಂಟೋ (ಕೆನಡಾ): ಭಾರತ ಮೂಲದ ಅನಿತಾ ಆನಂದ್ ಅವರಿಗೆ ಕೆನಡಾ ಸಚಿವ ಸಂಪುಟದಲ್ಲಿ ಮಹತ್ವದ ಸ್ಥಾನಮಾನ ನೀಡಲಾಗಿದೆ. ಕೆನಡಾದ ರಕ್ಷಣಾ ಸಚಿವರಾಗಿ ಇನ್ನು ಮುಂದೆ ಅನಿತಾ ಆನಂದ್ ಕಾರ್ಯನಿರ್ವಹಿಸಲಿದ್ದಾರೆ. ಅನಿತಾ ಅವರಿಗೆ ಈ ಮಹತ್ವದ ಜವಾಬ್ದಾರಿ ನೀಡುವ ನಿರ್ಧಾರವನ್ನು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ತೆಗೆದುಕೊಂಡಿದ್ದಾರೆ.
ಈವರೆಗೆ ಭಾರತೀಯ ಮೂಲದ ಹರ್ಜೀತ್ ಸಜ್ಜನ್ ಕೆನಡಾ ರಕ್ಷಣಾ ಸಚಿವರಾಗಿದ್ದರು. ಆದರೆ, ಸೇನಾಪಡೆಯಲ್ಲಿ ನಡೆದ ಲೈಂಗಿಕ ಕಿರುಕುಳ ವಿಷಯದ ತನಿಖೆಗೆ ಸಂಬಂಧಿಸಿದಂತೆ ಅವರ ವಿರುದ್ದ ಟೀಕೆಗಳು ಎದುರಾಗಿದ್ದವು. ಟ್ರುಡೊ ಅವರನ್ನು ರಕ್ಷಣಾ ಇಲಾಖೆಯಿಂದ ಕೈ ಬಿಟ್ಟು ಅನಿತಾ ಆನಂದ್ ಅವರಿಗೆ ಜವಾಬ್ದಾರಿ ವಹಿಸಿದ್ದಾರೆ. ಸಜ್ಜನ್ ಅವರನ್ನು ಅಂತಾರಾಷ್ಟ್ರೀಯ ಅಭಿವೃದ್ಧಿ ಸಚಿವರನ್ನಾಗಿ ನೇಮಿಸಲಾಗಿ ಎಂದು ಹಲವು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ.
Anita Anand of India Origin Will Work as Defence Minister of Canada
ಇದನ್ನೂ ಓದಿ: ಮಂಗಳೂರಿನಲ್ಲಿ ಅಕ್ರಮವಾಗಿದ್ದ ಶ್ರೀಲಂಕಾ ಪ್ರಜೆಗಳು ಪತ್ತೆ
ಇದನ್ನೂ ಓದಿ: ಭಾರತ ಪ್ರಯಾಣಿಕರ ಮೇಲೆ ಕೋವಿಡ್ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಿದ ಅಮೆರಿಕ
Discussion about this post