ನವದೆಹಲಿ: ವೇಗವಾಗಿ ಮಾರಾಟವಾಗುವ ಗ್ರಾಹಕ ಸರಕು (ಎಫ್ಎಂಸಿಜಿ) ತಯಾರಿಸುವ ಕಂಪನಿಗಳು ಮುಂದಿನ ಮೂರು ಮಾಸದಲ್ಲಿ ಶೇ. 4ರಿಂದ 10ರಷ್ಟು ಬೆಲೆಯನ್ನು ಏರಿಕೆ ಮಾಡುವ ಸಾಧ್ಯತೆ ಇದೆ. 2020ರ ಡಿಸೆಂಬರ್ನಿಂದ ಈವರೆಗೆ ನಾಲ್ಕು ಬಾರಿ ಎಫ್ಎಂಸಿಜಿ ದರ ಹೆಚ್ಚಳ ಕಂಡಿದೆ. ಈ ಡಿಸೆಂಬರ್ನಲ್ಲೇ ರೆಫ್ರಿಜರೇಟರ್, ವಾಷಿಂಗ್ ಮಷಿನ್ಗಳ ದರ ಶೇ. 3ರಿಂದ 5ರಷ್ಟು ಹೆಚ್ಚಾಗಿದೆ. ಮುಂದಿನ ತ್ರೈಮಾಸಿಕದಲ್ಲಿ ಇವುಗಳ ಬೆಲೆ ಶೇ. 6ರಿಂದ 10ರಷ್ಟು ಅಧಿಕವಾಗುವ ಸಾಧ್ಯತೆ ಇದೆ ಎಂದು ಎಫ್‌ಎಂಸಿಜಿ ವಲಯದ ತಜ್ಞರು ಅಂದಾಜು ಮಾಡಿದ್ದಾರೆ.
ಡಾಬರ್ ಕಂಪನಿ ಮತ್ತೆ ಬೆಲೆ ಪರಿಷ್ಕರಣೆಗೆ ಸಿದ್ಧವಾಗಿದೆ. ಹಣದುಬ್ಬರ ಸುಧಾರಣೆ ಆಗದಿದ್ದರೆ ಮತ್ತೆ ಬೆಲೆ ಏರಿಸಬೇಕಾಗುತ್ತದೆ ಎಂದು ಈ ಕಂಪನಿಯ ಸಿಇಒ ಮೋಹಿತ್ ಮಲ್ಹೋತ್ರಾ ಹೇಳಿದ್ದಾರೆ.
ಅಡುಗೆ ಎಣ್ಣೆ ಬೆಲೆ ಎರಡು ಪಟ್ಟು ಮತ್ತು ಪ್ಯಾಕಿಂಗ್ ವೆಚ್ಚ ಹೆಚ್ಚಳದ ಕಾರಣ ಹಿಂದೂಸ್ತಾನ್ ಯುನಿಲಿವರ್, ಡಾಬರ್, ಬ್ರಿಟಾನಿಯಾ, ಮೊರಾಕೊ ಇನ್ನಿತರ ಕಂಪನಿಗಳು ಕಳೆದ ಎರಡು ತ್ರೈಮಾಸಿಕದಲ್ಲಿ ಶೇ. 5ರಿಂದ 12ರವರೆಗೆ ಬೆಲೆ ಹೆಚ್ಚಳ ಮಾಡಿದ್ದವು.
ದರ ಏರಿಕೆ ಮಾಡದಿದ್ದರೆ ಕಂಪನಿಯು ನಷ್ಟದ ಸುಳಿಗೆ ಸಿಲುಕುತ್ತವೆ. ಆದ್ದರಿಂದ ದರ ಪರಿಷ್ಕರಣೆ ಅನಿವಾರ್ಯ. ಶೇ. 4ರಿಂದ 5ರಷ್ಟು ದರ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಪಾರ್ಲೆ ಕಂಪನಿಯ ಹಿರಿಯ ಅಧಿಕಾರಿ ಕೃಷ್ಣರಾವ್ ತಿಳಿಸಿದ್ದಾರೆ.
ಸರಕು ಸಾಗಣೆಯ ಖಚಿರ್ನಲ್ಲಿ ಭಾರಿ ಏರಿಕೆ ಆಗಿದೆ. ಇದರ ಹೊರೆಯನ್ನು ತಾಳಿಕೊಳ್ಳುವ ಶಕ್ತಿ ಕಂಪನಿಗೆ ಇಲ್ಲ ಎಂದು ಎಲ್ಜಿ ಎಲೆಕ್ಟ್ರಾನಿಕ್ಸ್ನ ಉಪಾಧ್ಯಕ್ಷ ದೀಪಕ್ ಬನ್ಸಾಲ್ ತಿಳಿಸಿದ್ದಾರೆ.
ಭಾರತದಲ್ಲಿ ಕರೊನಾ ಎರಡನೇ ಅಲೆಯಿಂದ ಹೊರಬಂದ ಮೇಲೆ ವ್ಯಾಪಾರ ಚೇತರಿಕೆ ಕಂಡುಬಂದಿದೆ. ಎಫ್ಎಂಸಿಜಿ ಮಾರುಕಟ್ಟೆಯು ಶೇ. 12ರಷ್ಟು ವಿಸ್ತರಣೆ ಆಗಿದೆ. ಇದೇ ಸಂದರ್ಭದಲ್ಲಿ ತಯಾರಿಕಾ ವೆಚ್ಚದಲ್ಲಿ ಶೇ. 22ರಿಂದ 23ರಷ್ಟು ಏರಿಕೆ ಆಗಿದೆ. ಉಕ್ಕು, ತಾಮ್ರ, ಅಲ್ಯುಮಿನಿಯಂ, ಪ್ಲಾಸ್ಟಿಕ್ ಮತ್ತು ಬಿಡಿಭಾಗಗಳು ಬೆಲೆ ಗರಿಷ್ಠ ಮಟ್ಟಕ್ಕೆ ಹೆಚ್ಚಳ ಕಂಡಿದೆ ಎಂದು ಅಧ್ಯಯನವನ್ನು ಆಧಾರಿಸಿ ಎಕಾನಮಿಕ್ಸ್ ಟೈಮ್ಸ್ ವರದಿ ಮಾಡಿದೆ.
ಜನವರಿಯಿಂದ ಕಾರು, ಬೈಕ್ಗಳ ದರ ಏರಿಕೆ:
ಜನವರಿಯಿಂದ ಬೆಲೆಯನ್ನು ಪರಿಷ್ಕರಿಸುವುದಾಗಿ ಆಟೋಮೊಬೈಲ್ ಕಂಪನಿಗಳು ಈಗಾಗಲೇ ಹೇಳಿವೆ. ಪ್ರಸಕ್ತ ವರ್ಷದಲ್ಲಿ ಎರಡ್ಮೂರು ಸಾರಿ ದರ ಪರಿಷ್ಕರಣೆ ಆಗಿದೆ.
ಮಾರುತಿ ಸುಜುಕಿ ಇಂಡಿಯಾ ಡಿಸೆಂಬರ್ನಲ್ಲಿ ದರ ಪರಿಷ್ಕರಣೆ ಮಾಡಿದ್ದೂ ಸೇರಿ ಕಳೆದ 18 ತಿಂಗಳಲ್ಲಿ ಆರು ಸಲ ಬೆಲೆ ಹೆಚ್ಚಿಸಿದೆ. ಈ ವರ್ಷದಲ್ಲಿ ಶೇ. 4.9ರಷ್ಟು ದರ ಏರಿಕೆ ಆಗಿದೆ.
ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಹೋಂಡಾ ಕಾರ್ಸ್, ಹ್ಯುಂಡಾಯ್ ಮೋಟಾರ್ ಇಂಡಿಯಾ, ಟಾಟಾ ಮೋಟಾರ್ಸ್, ಟಯೋಟಾ ಕಿಲೋರ್ಸ್ಕರ್ ಮೋಟಾರ್, ಕಂಪನಿಗಳು ಕೂಡ ಮುಂದಿನ ಮೂರು ತಿಂಗಳಲ್ಲಿ ಮತ್ತೆ ದರ ಹೆಚ್ಚಿಸಲಿವೆ. ಎಲ್ಲ ಮಾಡಲ್ಗಳ ದ್ವಿಚಕ್ರ ಮೋಟಾರು ವಾಹನದ ಬೆಲೆ ಕನಿಷ್ಠ 2 ಸಾವಿರ ರೂಪಾಯಿ ಏರಿಕೆ ಆಗಲಿದೆ ಎಂದು ಹೀರೋ ಮೋಟೋಕಾರ್ಪ್ ತಿಳಿಸಿದೆ. ಪ್ರಯಾಣಿಕರ ಕಾರಿನ ದರ ಶೇ. 2ರಿಂದ 5ರಷ್ಟು ಹೆಚ್ಚಳ ಆಗಲಿದೆ ಎಂದು ವೋಕ್ಸ್ವ್ಯಾಗನ್ ಹೇಳಿದೆ.
Another Round Of Price Hikes This New Year
ಇದನ್ನು ಓದಿ: Price rise: ಕಟ್ಟಡ ನಿರ್ಮಾಣ ವಸ್ತುಗಳ ಬೆಲೆ ಏರಿಕೆ
ಇದನ್ನೂ ಓದಿ: Price of cars as it rises: ಜನವರಿಯಲ್ಲಿ ಏರಿಕೆಯಾಗಲಿದ್ಯಂತೆ ಕಾರುಗಳ ಬೆಲೆ
Discussion about this post