ಬೆಂಗಳೂರು: `ಗೋಲ್ಡನ್ ಅವರ್’ನಲ್ಲಿ ತುರ್ತು ಆರೈಕೆ ಪಡೆಯಲು ಉಚಿತ ಆಂಬ್ಯುಲೆನ್ಸ್ ಸೇವೆ ನೆರವಾಗಲಿದ್ದು ದಿನದ ೨೪ ಕಾಲ ೧೦೬೬ಗೆ ಕರೆ ಮಾಡಿ ಈ ಸೇವೆಯನ್ನು ಪಡೆಯಬಹುದು ಉಚಿತ ಆಂಬ್ಯುಲೆನ್ಸ್ ಸೇವೆಯು `ಮೈಸೂರು’ ನಗರದ ವ್ಯಾಪ್ತಿಯಲ್ಲಿ ದೊರೆಯಲಿದೆ.
ಇದನ್ನೂ ಓದಿ: Constitution: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಶ್ರಮದ ಫಲವೇ ಸಂವಿಧಾನ
ಮೈಸೂರು, ನವೆಂಬರ್ ೨೬, ೨೦೨೧: ಅಪೊಲೊ ಬಿಜಿಎಸ್ ಆಸ್ಪತ್ರೆಯು ಮೈಸೂರು ನಗರದ ವ್ಯಾಪ್ತಿಯಲ್ಲಿ ತುರ್ತು ಸಂದರ್ಭಕ್ಕಾಗಿ ಉಚಿತ ಆಂಬ್ಯುಲೆನ್ಸ್ ಸೇವೆ ಆರಂಭಿಸಿರುವುದನ್ನು ಇಂದು ಘೋಷಿಸಿದೆ. ಉಚಿತ ಆಂಬ್ಯುಲೆನ್ಸ್ ಸೇವೆಯು ತುರ್ತು ಸಂದರ್ಭದಲ್ಲಿ ರೋಗಿಯ ಕುಟುಂಬ ಸದಸ್ಯರು ಅಥವಾ ಸ್ನೇಹಿತರು ಆಂಬ್ಯುಲೆನ್ಸ್‌ಗಾಗಿ ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸುತ್ತದೆ ಮತ್ತು ಅಪೊಲೊ ಆಸ್ಪತ್ರೆಗಳ ತುರ್ತು ಸ್ಪಂದನೆ ವ್ಯವಸ್ಥೆ (ಇಆರ್‌ಎಸ್)ಗೆಂದೇ ಮೀಸಲಾಗಿರುವ ೧೦೬೬ ಗೆ ಕರೆ ಮಾಡಿ ಈ ಸೇವೆಯನ್ನು ಬಳಸಿಕೊಳ್ಳಬಹುದು.
ಇದನ್ನೂ ಓದಿ: ಹೊಸ ಕೊರೋನಾ ವೈರಸ್ ತಳಿ ಪತ್ತೆ ಎಫೆಕ್ಟ್: ಸೆನ್ಸೆಕ್ಸ್ 1400 ಅಂಕ ಕುಸಿತ
ಕರೆ ಬಂದ ತಕ್ಷಣ ತರೆಬೇತಿ ಪಡೆದ ಅರೆವೈದ್ಯಕೀಯ ಸಿಬ್ಬಂದಿ ಮತ್ತು ಅಗತ್ಯವಿರುವ ತುರ್ತು ಆರೈಕೆ ಉಪಕರಣಗಳೊಂದಿಗೆ ಅತ್ಯಾಧುನಿಕವಾದ ಜಿಪಿಆರ್‌ಎಸ್ ಸೌಲಭ್ಯ ಹೊಂದಿರುವ ಆಂಬ್ಯುಲೆನ್ಸ್ ಅನ್ನು ರವಾನಿಸಲಾಗುವುದು. ತುರ್ತು ಸಂದರ್ಭಗಳಲ್ಲಿ ಸಮಯವು ಅತ್ಯಮೂಲ್ಯವಾಗಿದೆ ಮತ್ತು ೨೪ಘಿ೭ ಇಆರ್‌ಎಸ್ ವ್ಯವಸ್ಥೆಯು `ಗೋಲ್ಡನ್ ಅವರ್’ನ ಅತ್ಯಮೂಲ್ಯ ಕ್ಷಣಗಳಲ್ಲಿ ಅಗತ್ಯ ವೈದ್ಯಕೀಯ ನೆರವು ಮತ್ತು ಬೆಂಬಲವನ್ನು ನೀಡುವ ಮೂಲಕ ಸಾವು ಮತ್ತು ಅಂಗವೈಕಲ್ಯವನ್ನು ತಪ್ಪಿಸುತ್ತದೆ.
ಇದನ್ನೂ ಓದಿ: Constitution: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಶ್ರಮದ ಫಲವೇ ಸಂವಿಧಾನ
Discussion about this post