ಬಡವ ರಾಸ್ಕಲ್ ಪಕ್ಕಾ ಮಾಸ್ ಚಿತ್ರವಾಗಿರಬಹುದು ಎಂಬ ಕುತೂಹಲದಲ್ಲೇ ಕಾಯುತ್ತಿರುವ ಸಿನಿಮಾ ಪ್ರೇಮಿಗಳಿಗೆ ಇಂದು 2 ನಿಮಿಷ 51 ಸೆಕೆಂಡುಗಳ ಟ್ರೇಲರ್ ನೋಡಿ ಭರ್ಜರಿ ರೋಚಕತೆ ಮೂಡಿಸಿದೆ. ಬಡವ ರಾಸ್ಕಲ್ (Badava Rascal 4K Trailer) ಕುರಿತು ಈಗಾಗಲೇ ಭರ್ಜರಿ ಹವಾ ಸೃಷ್ಟಿಯಾಗಿದೆ. ಡಾಲಿ ಧನಂಜಯ (Daali Dhananjay) ಈ ಚಿತ್ರದ ಮೂಲಕ ಮಾಸ್ ಜನರನ್ನು ಮತ್ತೊಮ್ಮೆ ಸಜ್ಜಾಗಿರುವುದು ಖಚಿತಗೊಂಡಿದೆ.
ಈವರ್ಷದ ಕೊನೆಯಲ್ಲಿ ಡಿಸೆಂಬರ್ 24, ಅಂದರೆ ಕ್ರಿಸ್‌ಮಸ್ ಹಿಂದಿನ ದಿನ ಚಿತ್ರ ಥಿಯೇಟರ್‌ಗಳಿಗೆ ಅಪ್ಪಳಿಸಲಿದೆ. ಬಡವ ರಾಸ್ಕಲ್ ಚಿತ್ರವನ್ನು ಸಿನಿಮಾ ಮಂದಿರಗಳಲ್ಲಿ ವೀಕ್ಷಕ ಹೇಗೆ ಎದುರಿಸುತ್ತಾನೆ ಎಂಬುದನ್ನೊಂದೇ ಇನ್ನು ಕಾದುನೋಡಬೇಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನಸಾಮಾನ್ಯರ ಮೂಲಕ ಡಾಲಿ ಧನಂಜಯ ಅವರೇ ವಿಶೇಷ ರೀತಿಯ ಕ್ಯಾಂಪೇನ್ ಮಾಡುತ್ತಿದ್ದಾರೆ.
ಅಂದಹಾಗೆ ಬಹು ನಿರೀಕ್ಷಿರ ಬಡವ ರಾಸ್ಕಲ್ ಸಿನಿಮಾವನ್ನು ಕೆಆರ್ಜಿ ಸ್ಟೂಡಿಯೋಸ್ ಸಂಸ್ಥೆ ಬಿಡುಗಡೆ ಮಾಡುತ್ತಿರುವ ಬಡವ ರಾಸ್ಕಲ್ ಚಿತ್ರವನ್ನು ‘ಡಾಲಿ ಪಿಕ್ಚರ್’ ಹೆಸರಿನ ಬ್ಯಾನರ್‌ನಲ್ಲಿ ಸಾವಿತ್ರಮ್ಮ ಅಡವಿ ಸ್ವಾಮಿ ನಿರ್ಮಿಸುತ್ತಿದ್ದಾರೆ ಪ್ರಸಿದ್ಧ ಸಂಗೀತ ನಿರ್ದೇಶಕ ವಾಸುಕಿ ವೈಭವ್ (Vasuki Vaibhav) ಚಿತ್ರಕ್ಕೆ ನಾಲ್ಕು ಹಾಡುಗಳನ್ನು ಪೋಣಿಸಿಕೊಟ್ಟಿದ್ದಾರೆ. ಪ್ರೀತ ಜಯರಾಮನ್ ಛಾಯಾಗ್ರಹಣ, ನಿರಂಜನ್ ದೇವರಮನೆ ಸಂಕಲನವಿದೆ. ಜೊತೆಗೆ ವಿನೋದ್ ಸಾಹಸ ನಿರ್ದೇಶನವಿದೆ.
ಇದನ್ನೂ ಓದಿ: ರಕ್ಷಿತ್ ಶೆಟ್ಟರು ಕೊಟ್ಟರು ಹೊಸ ಅಪ್‌ಡೇಟ್; 777 ಚಾರ್ಲಿ ಬಿಡುಗಡೆ ಯಾವಾಗ?
Discussion about this post