• Home
  • About Us
  • Contact Us
  • Terms of Use
  • Privacy Policy
Tuesday, June 30, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ರಾಜಕೀಯ

ಒಳಚರಂಡಿಗಳ ಕಾಂಕ್ರಿಟೀಕರಣದ ಜೊತೆ ಕೆರೆಗಳ ಒತ್ತುವರಿ ಬೆಂಗಳೂರಿನ ಮಳೆನೀರಿನ ಪ್ರವಾಹ ಸ್ಥಿತಿಗೆ ಕಾರಣ: ಸಿಎಜಿ ವರದಿ

ಕಳೆದ ಭಾನುವಾರ ಬೆಂಗಳೂರು ನಗರದ ಹಲವು ಪ್ರದೇಶಗಳಲ್ಲಿ ಭಾರಿ ಪ್ರಮಾಣದ ಮಳೆ ಬಿದ್ದ ಕಾರಣ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು.

Shri News Desk by Shri News Desk
Oct 5, 2021, 06:44 pm IST
in ರಾಜಕೀಯ, ರಾಜ್ಯ
Bangalore-flood

ಬೆಂಗಳೂರಿನಲ್ಲಿ ಮಳೆ ಸೃಷ್ಟಿಸಿದ ಅವಾಂತರ (ಪ್ರಾತಿನಿಧಿಕ ಚಿತ್ರ)

Share on FacebookShare on TwitterTelegram

ಬೆಂಗಳೂರು: ನಗರ ಪ್ರದೇಶದಲ್ಲಿ ಮಳೆನೀರು ನಿರ್ವಹಣೆಯ ಪರಿಶೋಧನಾ ವರದಿಯ ಪ್ರಕಾರ ಜಲಮೂಲಗಳ ಸಂಕುಚಿಸುವಿಕೆ ಹಾಗೂ ಒಳಚರಂಡಿ ಮತ್ತು ನೀರಿನ ಹರಿಯುವ ಮಾರ್ಗಗಳ ಅವ್ಯವಸ್ಥೆಗಳಿಂದ ಜಲಮೂಲಗಳ ಹಾಗೂ ಒಳಚರಂಡಿಗಳ ನಡುವಿನ ಸಂಪರ್ಕ ಕೊರತೆಯುಂಟಾಗಿದ್ದು ಮಳೆನೀರಿನ ಸರಾಗ ಹರಿವಿಗೆ ಅಡ್ಡಿಯಾಗಿದೆ.

ಕಳೆದ ಭಾನುವಾರ ಬೆಂಗಳೂರು ನಗರದ ಹಲವು ಪ್ರದೇಶಗಳಲ್ಲಿ ಭಾರಿ ಪ್ರಮಾಣದ ಮಳೆ ಬಿದ್ದ ಕಾರಣ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಬೆಂಗಳೂರಿಗರಿಗೆ ಇದೇನೂ ಹೊಸ ವಿಷಯವಲ್ಲದಿದ್ದರೂ ಹಾಗೂ ಇತ್ತೀಚಿನ ಕೆಲ ವರ್ಷಗಳಲ್ಲಿ ಆಗಾಗ ಕಾಣುತ್ತಿರುವ ದೃಶ್ಯವೇ ಆಗಿದೆ.

ಹೆಚ್ಚಿನ ಪ್ರಮಾಣದ ಮಳೆಯಾದಾಗ ಇತ್ತೀಚಿನ ವರ್ಷಗಳಲ್ಲಿ ಉಂಟಾಗುತ್ತಿರುವ ಪ್ರವಾಹ ಪರಿಸ್ಥಿತಿಗೆ, ಸಿಎಜಿ ವರದಿಯ ಪ್ರಕಾರ, ನಗರ ಬೆಳೆದಂತೆ ಜನರ ವಾಸದ ಉದ್ದೇಶದಿಂದ ಆಗುತ್ತಿರುವ ಸತತ ಜಲಮೂಲಗಳ ಒತ್ತುವರಿ ಹಾಗೂ ಹೆಚ್ಚಿನ ಮಳೆನೀರು ಸರಾಗವಾಗಿ ಹರಿದು ಹೋಗಲು ರಾಜಕಾಲುವೆಗಳೊಂದಿಗೆ ಒಳಚರಂಡಿಗಳ ಸಂಪರ್ಕ ಸುಸ್ಥಿತಿಯಲ್ಲಿ ಇಲ್ಲದಿರುವುದೇ ಆಗಿದೆ. ಇದು ಬೆಂಗಳೂರು ಮಹಾನಗರಪಾಲಿಕೆಯ (ಬಿಬಿಎಂಪಿ) ಅತಿಮುಖ್ಯ ವೈಫಲ್ಯಗಳಲ್ಲೊಂದಾಗಿದೆಯೆಂಬುದು ನಿರ್ವಿವಾದ.

ಇದೇ ವರದಿಯ ಪ್ರಕಾರ, ಬೆಂಗಳುರಿನ ವಿವಿಧ ವಲಯಗಳಲ್ಲಿ ಇಲ್ಲಿಯವರೆಗೆ ಗುರುತಿಸಲಾದ ಒಟ್ಟು 2,626 ಒತ್ತುವರಿ ಪ್ರಕರಣಗಳಲ್ಲಿ ಇನ್ನೂ 714 ಒತ್ತುವರಿ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ವರದಿಯು ಇಂತಹ 23 ಬಹುಮುಖ್ಯ ಒತ್ತುವರಿ ಪ್ರಕರಣಗಳನ್ನು ಗುರುತಿಸಿದ್ದು ಇವುಗಳಲ್ಲಿ 16 ಪ್ರಕರಣಗಳು ಬಿಬಿಎಂಪಿ ನೀಡಿದ ಪಟ್ಟಿಯಲ್ಲೇ ಇಲ್ಲವೆಂದು ತಿಳಿಸಿದ್ದು ಇದು ನಿಜಕ್ಕೂ ಆತಂಕಕಾರಿ ವಿಷಯವೇ ಅಗಿದೆ.

ಇದಲ್ಲದೇ, ಸಿಎಜಿ ವರದಿಯು ಗಮನಿಸಿರುವಂತೆ, ಬಿಬಿಎಂಪಿಯ ಜಲಮೂಲಗಳ ಮುಖ್ಯ ಅಭಿಯಂತರರು ನೀಡಿದ ವರದಿಯಲ್ಲೇ ಲೋಪವಿದ್ದು ಎರಡೂ ಸಂಸ್ಥೆಗಳ ಸಹಪರಿಶೀಲನೆಯಲ್ಲಿ ಕಂಡುಬಂದಂತೆ ಒಂದು ಅತಿಕ್ರಮಣ ಪ್ರಕರಣದಲ್ಲಿ ಅತಿಕ್ರಮಣವನ್ನು ತೆಗೆದುಹಾಕಲಾಗಿದೆ ಎಂದು ವರದಿ ಮಾಡಿದ್ದರೂ ವಾಸ್ತವವಾಗಿ ಅಲ್ಲಿ ಯಾವ ಕ್ರಮವನ್ನೂ ಕೈಗೊಳ್ಳಲಾಗಿಲ್ಲ, ಒತ್ತುವರಿ ಹಾಗೆಯೇ ಮುಂದುವರೆದಿದ್ದು ಕೆಲವೆಡೆ ಒತ್ತುವರಿ ನಿವಾರಣಾಕಾರ್ಯ ಅಪೂರ್ಣವಾಗಿದೆ.

ಎರಡೂ ಸಂಸ್ಥೆಗಳ ಜಂಟಿ ಪರಿಶೋಧನಾ ಕಾರ್ಯವು ಒಳಚರಂಡಿ ಹಾಗೂ ರಾಜಕಾಲುವೆಗಳು ಜಲಮೂಲಗಳೊಂದಿಗೆ ನೇರವಾಗಿ ಸಂಪರ್ಕ ಹೊಂದಿಲ್ಲದಿರುವುದನ್ನು ಎತ್ತಿ ತೋರಿಸಿದೆ. ಕೆಲವು ಪ್ರಕರಣಗಳಲ್ಲಿ, ಕೆರೆಗಳಿಂದ ಹೊರಬಂದ ನೀರು ಬದಲಿ ಕಾಲುವೆಗಳಲ್ಲಿ ಹರಿಯುತ್ತಿದ್ದು ಪ್ರವಾಹದ ಸಾಧ್ಯತೆಗಳನನ್ನು ಹೆಚ್ಚಿಸಿದೆ.

ನೀರು ಹರಿಯುವ ಮಾರ್ಗಗಳು ಹಾಗೂ ಒಳಚರಂಡಿಗಳು ಕಾಂಕ್ರಿಟೀಕರಣಗೊಂಡಿರುವುದು ಅಂತರ್ಜಲದ ಮರುಪೂರಣಕ್ಕೆ ಅಡ್ಡಿಯಾಗಿದೆ. ಅಲ್ಲದೇ, ಇದು ಪದೇ-ಪದೇ ಹೆಚ್ಚಿನ ಪ್ರಮಾಣದ ಮಳೆಯು ಬಂದಾಗ ಪ್ರವಾಹ ಪರಿಸ್ಥಿತಿ ಉಂಟಾಗುವುದಕ್ಕೂ ಕಾರಣವಾಗಿದೆ.

ಜಲಮೂಲಗಳನ್ನು ಜನವಸತಿ ಪ್ರದೇಶಗಳಾಗಿ ಪರಿವರ್ತಿಸಿ ಕಾಂಕ್ರಿಟೀಕರಣಗೊಳಿಸಿರುವ ಅನೇಕ ಉದಾಹರಣೆಗಳನ್ನು ವರದಿಯು ಎತ್ತಿ ತೋರಿಸಿದ್ದು , ಕಾಮಾಕ್ಷಿಪಾಳ್ಯದ ಕೆರೆಯನ್ನು ಆಟದ ಮೈದಾನವನ್ನಾಗಿ ಪರಿವರ್ತಿಸಿರುವುದು ಹಾಗೂ ದಾಸರಹಳ್ಳಿ ಕೆರೆಯನ್ನು ಡಾ. ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣವನ್ನಾಗಿ ಪರವರ್ತಿಸಿರುವುದು ಇದಕ್ಕೆ ಕೆಲ ನಿದರ್ಶನಗಳಾಗಿವೆ.

ಬಿಬಿಎಂಪಿಯ ಜಲಮೂಲಗಳ ವಿಭಾಗದ ಮುಖ್ಯ ಅಭಿಯಂತರರು ಸಿಎಜಿಗೆ ಸಲ್ಲಿಸಿರುವ ಅಂಕಿ-ಅಂಶಗಳ ಪ್ರಕಾರ ಬೆಂಗಳೂರಿನ 210 ಜಲಮೂಲ/ಕೆರೆಗಳಲ್ಲಿ 66ರನ್ನು ಇನ್ನೂ ಅಭಿವೃದ್ಧಿ ಮಾಡಬೇಕಾಗಿದ್ದು, 37 ಪುನರುಜ್ಜೀವನಗೊಳ್ಳುತ್ತಿವೆ, ಹಾಗೂ 18 ನಿರುಪಯುಕ್ತವಾಗಿವೆ. ಈ 18 ನಿರುಪಯುಕ್ತ ಜಲಪ್ರದೇಶಗಳು ಸರಿಸುಮಾರು 254 ಎಕರೆ ಪ್ರದೇಶದಲ್ಲಿ ವಿಸ್ತಾರಗೊಂಡಿದ್ದು ಮುಂಬರುವುದಿನಗಳಲ್ಲಿ ಒತ್ತುವರಿಯಾಗುವ ಹಾಗೂ ಪರಿವರ್ತಿತಗೊಳ್ಳುವ ಹಾಗೂ ಇತರ ಉಪಯೋಗಗಳಿಗಾಗಿ ಬಳಕೆಗೊಳ್ಳುವ ಅಪಾಯ ಹೆಚ್ಚಿದೆ.

ಜಲಮೂಲಗಳೊಂದಿಗೆ ಒಳಚರಂಡಿಗಳನ್ನು ಸಂಪರ್ಕಿಸುವುದರಲ್ಲಿ ಬಿಬಿಎಂಪಿಯು ವಿಫಲವಾಗಿರುವುದರಿಂದ ಬೆಂಗಳೂರು ನಗರದ ಅನೇಕ ಜಲಮೂಲಗಳು ಬತ್ತಿಹೋಗಿದ್ದು ಈ ಪ್ರದೇಶಗಳನ್ನು ಬೇರೆ ಉದ್ದೇಶಗಳಿಗಾಗಿ ಪರಿವರ್ತಿಸಲು ಕಾರಣವಾಗಿದೆ.

ಕೊಳಚೆನೀರನ್ನು ಬೇರ್ಪಡಿಸಲು ಹಾಗೂ ಜಲಮೂಲಗಳ ಸಮೀಪದ ಪ್ರದೇಶಗಳಲ್ಲಿ ಉತ್ತಮ ಪರಿಸರ ನಿರ್ಮಾಣಮಾಡಲು ಸುಮಾರು 60 ಕೋಟಿ ರೂಪಾಯಿಗಳ ವೆಚ್ಚ ತಗುಲಬಹುದೆಂದು, ಸಿಎಜಿ ವರದಿಯ ಪ್ರಕಾರ, ಅಂದಾಜಿಸಲಾಗಿದೆ. ಬಿಬಿಎಂಪಿ ಮತ್ತು ಸಿಎಜಿಯ ಜಂಟಿ ಪರಿಶೋಧನೆಯು ಕೊಳಚೆ ನೀರು ಒಳಚರಂಡಿಗಳ ಸಂಪೂರ್ಣ ವ್ಯಾಪ್ತಿಯಲ್ಲಿ ಹರಿಯುತ್ತಿದ್ದು ನೇರವಾಗಿ ಜಲಮೂಲಗಳಿಗೇ ಹೋಗಿ ಸೇರುತ್ತಿದ್ದು ಸಂಪೂರ್ಣ ವೆಚ್ಚವು ಅನುತ್ಪಾದಕ ವೆಚ್ಚವಾಗಿದೆಯೆಂದೇ ಹೇಳಬೇಕಾಗಿದೆ.

ವರದಿಯ ಮುಖ್ಯಾಂಶಗಳು
1. ಜಲಮೂಲಗಳ ಹಾಗೂ ರಾಜಕಾಲುವೆ/ಒಳಚರಂಡಿಗಳ ಒತ್ತುವರಿಯ ಅಂತರ್ಜಲ ಮಟ್ಟದ ಕುಸಿತಕ್ಕೆ ಹಾಗೂ ಪ್ರವಾಹ ಸ್ಥಿತಿಯ ಆತಂಕಕ್ಕೆ ಕಾರಣವಾಗಿದೆ.
2. ಘನತ್ಯಾಜ್ಯ ವಸ್ತುಗಳು ಹಾಗೂ ನಿರ್ಮಾಣಕಾರ್ಯದ ನಿರುಪಯುಕ್ತ ವಸ್ತುಗಳನ್ನು ರಾಜಕಾಲುವೆ/ಒಳಚರಂಡಿಗಳಲ್ಲಿ ಹಾಕುತ್ತಿರುವುದು ಅಪಾಯಕ್ಕೆ ಕಾರಣವಾಗಿದೆ.
3. ಪರಿ‍ಷ್ಕರಣೆಗೊಳ್ಳದ ಕಲುಷಿತ ನೀರು ಹಾಗೂ ತ್ಯಾಜ್ಯಗಳ ಸತತ ಒಳಹರಿವು ಜಲಮೂಲಗಳನ್ನು ಕಲುಷಿತಗೊಳಿಸುತ್ತಿವೆ.
4. ಹೂಳು ಮತ್ತು ನಿರುಪಯುಕ್ತ ವಸ್ತುಗಳ ಜಮಾವಣೆಯು ಜಲಮೂಲಗಳ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಕುಗ್ಗಿಸುವುದು.
5. ಜಲಮೂಲಗಳ ಅಂತರ್‌ಸಂಪರ್ಕದಲ್ಲಿನ ಕೊರತೆ.

Bangalore floods Concretisation of drainages and encroachment of water bodies main cause

ಇದನ್ನೂ ಓದಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 24 ವರ್ಷಗಳ ನಂತರ ಗರಿಷ್ಠ ಮಳೆ
ಇದನ್ನೂ ಓದಿ: ಧಾರಾಕಾರ ಮಳೆಗೆ ರಸ್ತೆ ಮೇಲೆ ಉಕ್ಕಿ ಹರಿದ ಚರಂಡಿ ನೀರು

Tags: Bangalore FloodsDrainage MaintenanceEncroachment of Lakes
ShareSendTweetShare
Join us on:

Related Posts

News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

ಚರಿತ್ರೆ ನಿರ್ಮಿಸಿದ ಆರ್‌ಸಿಬಿ: ಈ ಸಲಾ ಕಪ್ ನಮ್ದೇ ಎಂದ ಸಿಎಂ ಸಿದ್ದರಾಯ್ಯ, ವಿಶ್ ಮಾಡಿದ ಕುಮಾರಣ್ಣ

ಚರಿತ್ರೆ ನಿರ್ಮಿಸಿದ ಆರ್‌ಸಿಬಿ: ಈ ಸಲಾ ಕಪ್ ನಮ್ದೇ ಎಂದ ಸಿಎಂ ಸಿದ್ದರಾಯ್ಯ, ವಿಶ್ ಮಾಡಿದ ಕುಮಾರಣ್ಣ

Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

ದೇವೇಗೌಡರ ಬಗ್ಗೆ ಮಾತನಾಡುವ ಮುನ್ನ ನಾಲಿಗೆಯ ಸ್ವಾಸ್ಥ್ಯ ಪರೀಕ್ಷಿಸಿಕೊಳ್ಳಿ: ನಿಖಿಲ್ ಕುಮಾರ್

ದೇವೇಗೌಡರ ಬಗ್ಗೆ ಮಾತನಾಡುವ ಮುನ್ನ ನಾಲಿಗೆಯ ಸ್ವಾಸ್ಥ್ಯ ಪರೀಕ್ಷಿಸಿಕೊಳ್ಳಿ: ನಿಖಿಲ್ ಕುಮಾರ್

Kolar News: ನನ್ನ ಜೀವಕ್ಕೇನಾದರೂ ಅಪಾಯವಾದರೆ, ಅದಕ್ಕೆ ರಮೇಶ್ ಕುಮಾರ್ ಕಾರಣ: ಶಾಕಿಂಗ್ ಹೇಳಿಕೆ

Kolar News: ನನ್ನ ಜೀವಕ್ಕೇನಾದರೂ ಅಪಾಯವಾದರೆ, ಅದಕ್ಕೆ ರಮೇಶ್ ಕುಮಾರ್ ಕಾರಣ: ಶಾಕಿಂಗ್ ಹೇಳಿಕೆ

Suhas Shetty Case: ಕೃತ್ಯದಲ್ಲಿ ಪೋಲೀಸ್ ಪೇದೆ ಕೈವಾಡ ಶಂಕೆ: ಪ್ರಕರಣದ ಬಗ್ಗೆ ಯತ್ನಾಳ್ ಸಾಲು ಸಾಲು ಪ್ರಶ್ನೆ

Political News: ವಿಜಯೇಂದ್ರ ಮಾಡಿಸಿದ ಸರ್ವೆ ಬಗ್ಗೆ ವ್ಯಂಗ್ಯವಾಡಿದ ಬಸನಗೌಡ ಪಾಟೀಲ್ ಯತ್ನಾಳ್

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In