Special Story: ಇಂದಿನ ಕಾಲದ ಯುವಕ ಯುವತಿಯರಿಗೆ ಪ್ರೀತಿ ಮಾಡೋದು ಚಟವಾಗಿದೆ. ಕೆಲವರು ಪ್ರೀತಿಸಿದವರ ಜೊತೆ ಕೊನೆತನಕ ಇರುವ ಪ್ರಯತ್ನ ಮಾಡುತ್ತಾರೆ. ಇನ್ನು ಕೆಲವರು ಬಟ್ಟೆ ಬದಲಿಸಿದ ಹಾಗೆ, ಗರ್ಲ್‌ಫ್ರೆಂಡ್, ಬಾಯ್ ಫ್ರೆಂಡ್ ಬದಲಿಸುತ್ತಾರೆ. (Fake Love Story)
ಇನ್ನು ಇಂದಿನ ಕಾಲದ ಹಲವರು, ಪ್ರತ್ಯಕ್ಷವಾಗಿ ನೋಡಿ ಪ್ರೀತಿಸುವುದಕ್ಕಿಂತ, ಮೊಬೈಲ್‌ನ ಕೆಲವು ಆ್ಯಪ್ ಬಳಸಿ, ಅದರಲ್ಲಿ ಸಿಗುವವರನ್ನ ಪ್ರೀತಿಸುತ್ತಾರೆ. ಕೆಲವರು ಪ್ರೀತಿಸಿ, ಒಂದಾಗುತ್ತಾರೆ. ಇನ್ನು ಕೆಲವರು ಎಲ್ಲಿ ಪ್ರೀತಿ ಶುರು ಮಾಡಿದರೋ, ಅಲ್ಲೇ ಮುಗಿಸುತ್ತಾರೆ. ಮತ್ತೆ ಕೆಲವರು ಸ್ಕ್ಯಾಮ್‌ಗೆ ಒಳಗಾಗಿ ಮೋಸ ಹೋಗುತ್ತಾರೆ. (Cheating case)
Recipe: ಚಪಾತಿಗೆ ಸಖತ್ ಕಾಂಬಿನೇಷನ್ ಈ ಕೊಂಕಣಿ ಶೈಲಿಯ ಬದ್ನೇಕಾಯಿ ಸುಕ್ಕೆ
ಫೇಸ್‌ಬುಕ್, ಇನ್‌ಸ್ಟಾದಲ್ಲಿ ಶುರುವಾಗುವ ಪ್ರೀತಿ, ನ್ಯೂಡ್ ಪಿಕ್ ಕಳಿಸುವ ಅಥವಾ ವೀಡಿಯೋ ಕಾಲ್ ಮಾಡಿ, ತೋರಿಸಬಾರದ್ದನ್ನು, ತೋರಿಸುವ ತನಕ ಹೋಗುತ್ತದೆ. ಬಳಿಕ ನಡೆಯುವುದು, ಬ್ಲಾಕ್‌ಮೇಲ್ ಅಷ್ಟೇ. (Social Media love)
ಆದರೆ ಇಲ್ಲೋರ್ವ ಯುವಕ ಲವ್ ಆ್ಯಪ್ ಬಳಸಿ, ಅಲ್ಲಿ ಓರ್ವ ಯುವತಿಗೆ ಪ್ರಪೋಸ್ ಮಾಡಿದ್ದಾನೆ. ಆಕೆ ಆತನ ಪ್ರೀತಿಯನ್ನು ಒಪ್ಪಿಕೊಂಡಿದ್ದಾಳೆ. ಕೊನೆಗೆ ಕೆಫೆಯೊಂದರಲ್ಲಿ ಇಬ್ಬರೂ ಭೇಟಿಯಾಗಲು ನಿರ್ಧರಿಸಿದ್ದಾರೆ. ಯುವಕ ದೇವಸ್ಥಾನ, ಪಾರ್ಕ್, ಬೇರೆ ಬೇರೆ ಹೊಟೇಲ್‌ನಲ್ಲಿ ಮೀಟ್ ಮಾಡೋಣ ಎಂದಿದ್ದಾನೆ. ಆದರೆ ಯುವತಿ ಮಾತ್ರ, ತಾನು ಹೇಳಿದ ಕೆಫೆಗೇ ಬರಬೇಕು ಅಂತಾ ಒತ್ತಾಯಿಸಿದ್ದಾಳೆ. (Big Scam)
ಕಿವಿ ಫ್ರೂಟ್ ಎಂಥ ಆರೋಗ್ಯಕರ ಹಣ್ಣು ಗೊತ್ತಾ..? ಆ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ
ಯಾವ ಕೆಫೆಯಾದರೇನು, ಭೇಟಿಯಾಗುವುದು ಮುಖ್ಯ ಎಂದು ಯುವಕ, ಸ್ಮಾರ್ಟ್ ಆಗಿ ಡ್ರೆಸ್ ಮಾಡಿಕೊಂಡು ಹೋಗಿದ್ದಾನೆ. ಅತ್ತ ಅಂದವಾದ ಹುಡುಗಿ ಆತನನ್ನು ಕೆಫೆಯಲ್ಲಿ ಭೇಟಿಯಾಗಿದ್ದಾಳೆ. ತಾನು ಎಂಥ ಸುಂದರ ಹುಡುಗಿಗೆ ಪ್ರಪೋಸ್ ಮಾಡಿದ್ದೇನೆ. ಮತ್ತವಳು ನನ್ನ ಪ್ರೀತಿಯನ್ನು ಒಪ್ಪಿಕೊಂಡುಬಿಟ್ಟಳು ಅಂತಾ ಯುವಕ ಫುಲ್ ಖುಷಿಯಲ್ಲಿ ಮಾತನಾಡಿದ್ದಾನೆ. ನಿಧಾನವಾಗಿ ಹುಡುಗಿ, ತನ್ನ ಪರಿಚಯ ಮಾಡಿ, ಯುವಕನ ಮಾಹಿತಿಯನ್ನ ಕೇಳಿದ್ದಾಳೆ. (cafe)
ಬಳಿಕ ತನಗೆ ಸಿಕ್ಕಾಪಟ್ಟೆ ಹಸಿವಾಗುತ್ತಿದೆ ಎಂದು ಹೇಳಿ, ಫುಡ್ ಆರ್ಡರ್ ಮಾಡಲು ಶುರು ಮಾಡಿದ್ದಾಳೆ. ಹುಕ್ಕಾ, ಓಡ್ಕಾ ಮತ್ತಿತರ ಮದ್ಯಪಾನ, ಚಿಕನ್, ಡೆಸರ್ಟ್, ಬೇರೆ ಬೇರೆ ವಿಧದ ನಾನ್‌ವೆಜ್ ತಿಂಡಿಗಳನ್ನು ಆರ್ಡರ್ ಮಾಡಿದ್ದಾಳೆ. (foodie girl friend)
ತರಕಾರಿ ಸುಕ್ಕೆ ರೆಸಿಪಿ: Mixed Vegetable Sukke recipe
ಇಬ್ಬರೂ ಸೇರಿ, ಚೆನ್ನಾಗಿ ತಿಂದು , ಕುಡಿದು ಮಜಾ ಮಾಡಿದ್ದಾರೆ. ಬಳಿಕ ವೇಟರ್ ನಕಲಿ ಬಿಲ್ ತಂದುಕೊಟ್ಟಿದ್ದಾನೆ. ಇಷ್ಟೆಲ್ ಆರ್ಡರ್ ಮಾಡಿದ್ದಕ್ಕಾಗಿ, ಬರೋಬ್ಬರಿ 20 ಸಾವಿರ ಬಿಲ್ ಬಂದಿತ್ತು. ಪ್ರೀತಿಸಿದವಳು ಸಿಕ್ಕ ಖುಷಿಗೆ, ಯುವಕ ಬಾಯಿ ಮುಚ್ಚಿಕೊಂಡು 20 ಸಾವಿರ ರೂಪಾಯಿ ಬಿಲ್ ಕಟ್ಟಿ ಮನೆಗೆ ಹೋಗಿದ್ದಾನೆ. (paying bill to cafe)
ಆತ ಮನೆಗೆ ಹೋಗಿ, ಮೊಬೈಲ್ ನೋಡುತ್ತಿದ್ದಂತೆ ಅವನಿಗೆ ಶಾಕ್ ಕಾದಿತ್ತು. ಕೆಲ ಹೊತ್ತಿನ ಮುಂಚೆ, ಅವನೊಂದಿಗೆ ಫ್ಲರ್ಟ್ ಮಾಡಿ, ಕುಡಿದು, ತಿಂದು ತೇಗಿದ್ದ ಆತನ ಪ್ರಿಯತಮೆ, ಆತನ ನಂಬರ್ ಬ್ಲಾಕ್ ಮಾಡಿದ್ದಾಳೆ. (Shocking secret revealed)
ಹೆಸರು ಬೇಳೆ ಸಲಾಡ್ ರೆಸಿಪಿ ಮತ್ತು ಅದರ ಸೇವನೆಯ ಉಪಯೋಗಗಳು: Video
ಹಾಗಾದ್ರೆ ಪ್ರೀತಿಸುತ್ತೇನೆ ಎಂದು ಹೇಳಿ, ಭೇಟಿಯಾಗಿ, ಮಾತನಾಡಿ, ಊಟ ಮಾಡಿ, 20 ಸಾವಿರ ಬಿಲ್ ಕಟ್ಟಿಸಿಕೊಂಡು, ಕೊನೆಗೆ ಒಂದೇ ದಿನಕ್ಕೆ ಆಕೆ ಆತನನ್ನು ಬ್ಲಾಕ್ ಮಾಡಿದ್ದಾದರೂ ಏಕೆ ಅಂತಾ ಹಲವರ ಪ್ರಶ್ನೆ ಇರಬಹುದು. ಕೆಲವರು ಆಕೆ ತಿಂಡಿಪೋತಿ ಇರಬಹುದು. ಹಾಗಾಗಿ ತಿನ್ನಲಷ್ಟೇ ಅವನನ್ನು ಒಂದು ದಿನದ ಮಟ್ಟಿಗೆ ಪ್ರೀತಿಸುವ ನಾಟಕವಾಡಿರಬಹುದು ಅಂತಾ ಅಂದಾಜಿಸಿರಬಹುದು. (Blocking on WhatsApp)
ಆದರೆ ಸತ್ಯವೇ ಬೇರೆ. ಈ ಘಟನೆಯ ಹಿಂದಿನ ಸತ್ಯ ಏನೆಂದರೆ, ಕೆಲ ಹೊಟೇಲ್‌ಗಳು ಇಂಥ ಲಲನಾ ಮಣಿಗಳನ್ನು ಕೆಲಸಕ್ಕೆ ಬಳಸಿಕೊಳ್ಳುತ್ತದೆ. ಇವರ ಕೆಲಸವೇನೆಂದರೆ, ಲವ್ ಆ್ಯಪ್‌ನಲ್ಲಿ, ಅಥವಾ ಸೋಶಿಯಲ್ ಮೀಡಿಯಾದಲ್ಲಿ ಸಿಗುವ ಬಕರಾಗಳನ್ನು ಲವ್ ಮಾಡುತ್ತೇನೆ. ಭೇಟಿಯಾಗೋಣ ಬಾ ಎಂದು ಕರೆದು, ಇದೇ ಕೆಫೆಗೆ ಬಾ ಅಂತಾ ಹೇಳೋದು. ಬಳಿಕ, ಅವರನ್ನ ಭೇಟಿಯಾಗುವ ನೆಪದಲ್ಲಿ ರಾಶಿ ರಾಶಿ ತಿಂಡಿ, ಮದ್ಯಪಾನ, ಹುಕ್ಕಾಗಳನ್ನು ಆರ್ಡರ್ ಮಾಡಿ, ನಕಲಿ ಬಿಲ್ ಮೂಲಕ, ದುಡ್ಡನ್ನು ಪೀಕುವುದು. ಇದೇ ಇವರ ಕೆಲಸವಾಗಿರುತ್ತದೆ. (Girls hired by cafe)
Special Story: ಈ ದೇಶದಲ್ಲಿ ಬೆಕ್ಕುಗಳಿಗೂ ಕೊಡುತ್ತಾರೆ ಸರ್ಕಾರಿ ನೌಕರಿ
ಹಾಗಾಗಿ ಹೊಟೇಲ್‌ನವರು ಕೂಡ, ಇಂಥ ಹೆಣ್ಣು ಮಕ್ಕಳ ಕಡೆಯಿಂದ ಬರುವ ಬಕರಾಗಳಿಗೆ ನಕಲಿ ಬಿಲ್ ಕೊಡುತ್ತದೆ. ಬಳಿಕ, ಆ ಹುಡುಗಿಯರಿಗೆ ಇಂತಿಷ್ಟು ಭಾಗ ದುಡ್ಡನ್ನು ಕೊಡಲಾಗುತ್ತದೆ. ಬಳಿಕ ಮತ್ತೊಂದು ಕುರಿಯನ್ನು ಹುಡುಕುವುದು ಆಕೆಯ ಕೆಲಸ. (Money Minded Girls)

ಈ ರೀತಿ ಸುಮಾರು ಪುರುಷರನ್ನು ಇಂಥ ಹೆಣ್ಣು ಮಕ್ಕಳು ಮಂಗ ಮಾಡಿ, ಹೊಟೇಲ್ ಆದಾಯ ಹೆಚ್ಚಿಸುತ್ತಿದ್ದಾರೆ. ಪದೇ ಪದೇ ಒಂದೇ ಕೆಫೆಗೆ ಬಂದ್ರೆ, ಅನುಮಾನ ಬರಬಹುದು ಎಂದು, ಬೇರೆ ಬೇರೆ ಕೆಫೆಗೆ ಬೇರೆ ಬೇರೆ ಯುವತಿಯನ್ನು, ಬೇರೆ ಬೇರೆ ರೀತಿ ವೇಷ ಹಾಕಿ ಬರಲು ಹೇಳಲಾಗುತ್ತದೆ. ನೀವು ಕೂಡ ಇಂಥ ಆ್ಯಪ್ ಬಳಸುತ್ತಿದ್ದಲ್ಲಿ, ಅಥವಾ ಪರಿಚಯವಿಲ್ಲದ ಯುವಕ, ಯುವತಿಯರನ್ನು ನಂಬುವ ಮುನ್ನ ಎಚ್ಚರಿಕೆಯಿಂದಿರಿ. (Be careful)
Discussion about this post