Special Story: ಭಾರತದಲ್ಲಿ ಜನ ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಲು ಹಲವು ರೀತಿಯಲ್ಲಿ ಪ್ರಯತ್ನಿಸುತ್ತಾರೆ. ಆದರೆ, ಕೆಲವೇ ಕೆಲವರಿಗೆ ಸರ್ಕಾರಿ ನೌಕರಿ ಸಿಗುತ್ತದೆ. ಕೆಲವರು ಲಂಚ ಕೊಟ್ಟು ಕೆಲಸ ಪಡೆದರೆ, ಇನ್ನು ಕೆಲವರು ಜಾತಿ ಆಧಾರದ ಮೇಲೆ ಕೆಲಸ ಪಡೆಯುತ್ತಾರೆ. ಮತ್ತೆ ಕೆಲವರು ಇವೆರಡರ ಸಹಾಯ ಇಲ್ಲದೇ, ಸತತ ಪ್ರಯತ್ನ ಮತ್ತು ಅದೃಷ್ಟದಿಂದ ಕೆಲಸ ಗಿಟ್ಟಿಸಿಕೊಳ್ಳುತ್ತಾರೆ.
ಒಂದು ದಿನಕ್ಕೆ 17 ಸಾವಿರ ರೂ. ಬಾಡಿಗೆ ಕೊಟ್ಟು ಹೊಟೇಲ್ ರೂಂನಲ್ಲಿ ತಂಗಿದ್ದ ಮಹಿಳೆಗೆ ಕಾದಿತ್ತು ಶಾಕ್
ಯಾವ ದೇಶದಲ್ಲಿ ಬೆಕ್ಕುಗಳಿಗೆ ಸಿಗತ್ತೆ ಸರ್ಕಾರಿ ನೌಕರಿ..? ಯಾಕೆ ಕೊಡ್ತಾರೆ ಗೊತ್ತಾ..?
ಆದರೆ ಇಲ್ಲೊಂದು ದೇಶದಲ್ಲಿ ಬೆಕ್ಕಿಗೂ ಕೂಡ ಸರ್ಕಾರಿ ಕೆಲಸ ಸಿಗುತ್ತದೆ. ಇದ್ಯಾವ ದೇಶ ಅನ್ನೋ ಪ್ರಶ್ನೆ ನಿಮ್ಮದಾಗಿದ್ದಲ್ಲಿ, ಅದಕ್ಕೆ ಉತ್ತರ ಇಸ್ರೇಲ್. ಹೌದು, ಇಸ್ರೇಲ್‌ನಲ್ಲಿ ಬೆಕ್ಕುಗಳ ಸಂಖ್ಯೆ 20 ಲಕ್ಷ ದಾಟಿತ್ತು. ಹೀಗೆ ಬಿಟ್ರೆ ರಸ್ತೆ ತುಂಬ ಬೆಕ್ಕುಗಳೇ ಇರುತ್ತೆ ಅಂತಾ. ಸರ್ಕಾರ ಈ ರೀತಿ ಐಡಿಯಾ ಮಾಡಿದೆ.
ಹೀಗಾಗಿ ಇಸ್ರೇಲ್‌ನ ಮೆಟ್ರೋ ಸ್ಟೇಶನ್‌ನಲ್ಲಿ ಬೆಕ್ಕುಗಳನ್ನ ಕೆಲಸಕ್ಕೆ ಇರಿಸಿಕೊಳ್ಳಲಾಗಿದೆ. ಇದು ಸರ್ಕಾರಿ ಕೆಲಸವಾಗಿದ್ದು, ದಾರಿಯಲ್ಲಿ ಓಡಾಡಿಕೊಂಡಿರುವ ಬೆಕ್ಕುಗಳನ್ನು ಹಿಡಿದು ತಂದು, ಅದಕ್ಕೆ ಸರಿಯಾಗಿ ತರಬೇತಿ ನೀಡಿ, ಈ ಕೆಲಸಕ್ಕೆ ಇಟ್ಟುಕೊಳ್ಳಲಾಗುತ್ತದೆ.
ಇದರಿಂದ ರಸ್ತೆಯಲ್ಲಿ ಓಡಾಡುವ ಬೆಕ್ಕುಗಳ ಸಂಖ್ಯೆ ಕಡಿಮೆಯಾಗಿದ್ದಲ್ಲದೇ, ಸರ್ಕಾರಕ್ಕೂ ಹೆಲ್ಪ್ ಆಗುತ್ತಿದೆ. ಇಲ್ಲಿ ಕೆಲಸ ಮಾಡುವ ಬೆಕ್ಕುಗಳಿಗೆ, ಹೊತ್ತೊತ್ತಿಗೆ ಭರ್ಜರಿ ಆಹಾರ ನೀಡಲಾಗುತ್ತದೆ. ಇವುಗಳಿಗೆ ಉಳಿದುಕೊಳ್ಳಲು ಉತ್ತಮ ವ್ಯವಸ್ಥೆ ಮಾಡಲಾಗಿದೆ.
ಊಟ, ತಿಂಡಿ, ವಸತಿ, ಎಲ್ಲ ಸೌಲಭ್ಯಗಳನ್ನು ನೀಡಿ, ಇವುಗಳಿಗೆ ಇಲ್ಲಿ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ಅಷ್ಟಕ್ಕೂ ಈ ಬೆಕ್ಕುಗಳು ಮಾಡುವ ಕೆಲಸವಾದರೂ ಏನು ಎಂದರೆ, ಇದು ಮೆಟ್ರೋದಲ್ಲಿ ಓಡಾಡುವ ಪ್ರಯಾಣಿಕರನ್ನು ಗಮನಿಸುತ್ತದೆ.
ಈ ಬೆಕ್ಕುಗಳು ಏನು ಕೆಲಸ ಮಾಡುತ್ತದೆ..?
ಪ್ರಯಾಣಿಕರು ಟಿಕೇಟ್ ಬಳಸುವ ವಿಷಯದಲ್ಲಿ ಮೋಸ ಮಾಡಿದ್ರೆ, ಪಟ್ ಅಂತಾ ಕಂಡು ಹಿಡಿದು, ಬಡಿದು ನಿಲ್ಲಿಸುತ್ತದೆ. ಟಿಕೇಟ್ ಬಳಸದೇ, ಎದದುರಿನವರ ಟಿಕೇಟ್‌ನಲ್ಲೇ ಮುಂದೆ ಸಾಗಿ, ಮೋಸ ಮಾಡುವವರಿಗೆ ಒಂದು ಪೆಟ್ಟು ಕೊಟ್ಟು ನಿಲ್ಲಿಸುತ್ತದೆ. ಹೀಗೆ ಚಾಕಚಕ್ಯತೆಯಿಂದ ಕೆಲಸ ಮಾಡುವ ಹಾಗೆ ಅವುಗಳಿಗೆ ತರಬೇತಿಯನ್ನು ಕೂಡ ನೀಡಲಾಗುತ್ತದೆ.
ಇಸ್ರೇಲ್ ಪುಟ್ಟ ದೇಶವಾದರೂ ಕೂಡ, ಇಲ್ಲಿನ ಜನರು ಬುದ್ಧಿವಂತರಾಗಿದ್ದಾರೆ. ಅಲ್ಲದೇ, ಇಲ್ಲಿನ ಅಧ್ಯಕ್ಷರ ಜೊತೆ ಕೆಲಸ ಮಾಡುವ ಅಧಿಕಾರಿಗಳೆಲ್ಲ ಬುದ್ಧಿವಂತಿಕೆ ಉಪಯೋಗಿಸಿ, ಕೆಲಸ ಮಾಡುತ್ತಾರೆ. ಹಾಗಾಗಿ ಇಸ್ರೇಲ್ ಪುಟ್ಟ ದೇಶವಾದರೂ, ಶಕ್ತಿವಂತ ದೇಶವೆನ್ನಿಸಿಕೊಂಡಿದೆ.
ಈ ದೇಶದಲ್ಲಿ ಪ್ರತೀ ಮನೆಯ ಒಂದು ಮಗುವನ್ನಾದರೂ ಸೈನ್ಯಕ್ಕೆ ಸೇರಿಸಲೇಬೇಕು. ಇದು ಈ ದೇಶದ ರೂಲ್ಸ್. ಇಲ್ಲಿ ಹುಟ್ಟುವ ಮಕ್ಕಳು ದೇಶ ಸೇವೆಯಿಂದ ಹಿಂಜರಿಯುವಂತಿಲ್ಲ. ಹೆಣ್ಣು ಮಕ್ಕಳಾಗಲಿ, ಗಂಡು ಮಕ್ಕಳಾಗಲಿ, ದೇಶ ಸೇವೆಗೆಂದು ಸೈನ್ಯಕ್ಕೆ ಸೇರಲೇಬೇಕು.
ಭಾರತದಲ್ಲೂ ಈ ರೀತಿ ಮಾಡಬಹುದಾ..?
ಭಾರತದಲ್ಲೂ ಬೀದಿನಾಯಿ, ಬೆಕ್ಕುಗಳ ಸಂಖ್ಯೆ ಹೆಚ್ಚಾಗಿದೆ. ಎಷ್ಟೋ ನಾಯಿಗಳು ಹೊಟ್ಟೆಗೆ ಸರಿಯಾಗಿ ಆಹಾರವಿಲ್ಲದೇ ಸಾವನ್ನಪ್ಪುತ್ತಿದೆ. ಅಲ್ಲದೇ, ಇನ್ನೊಂದಿಷ್ಟು ಬೀದಿ ನಾಯಿಗಳು, ಜನರನ್ನು ಕಚ್ಚಿ ಉಪದ್ರಿಸುತ್ತಿದೆ.
ಇಂಥ ನಾಯಿಗಳು ಕಾರ್ಪೋರೇಷನ್‌ನವರು ಎತ್ತಿಕೊಂಡು ಹೋಗಿ, ಕೊಂದು ಹಾಕುತ್ತಿದ್ದಾರೆ. ಆದರೆ ನಮ್ಮ ದೇಶದ ನಾಯಕರು ಕೂಡ ಮನಸ್ಸು ಮಾಡಿದರೆ, ನಾಯಿಗಳಿಗೆ, ಬೆಕ್ಕುಗಳಿಗೆ ಈ ರೀತಿ ಟ್ರೇನಿಂಗ್ ಕೊಟ್ಟು, ಅವರನ್ನೂ ಕೆಲಸಕ್ಕೆ ಬಳಸಿಕೊಳ್ಳುವ ಯೋಚನೆ ಮಾಡಿದರೆ ಉತ್ತಮ. ನಿಮ್ಮ ಅನಿಸಿಕೆ ಏನೆಂದು ಕಾಮೆಂಟ್ ಮೂಲಕ ತಿಳಿಸಿ.
Discussion about this post