Health Tips: ಕಿವಿ ಫ್ರೂಟ್.. ವಿಟಾಮಿನ್ ಸಿ, ವಿಟಾಮಿನ್ ಕೆ, ವಿಟಾಮಿನ್ ಎ, ಪೊಟ್ಯಾಷಿಯಂನಿಂದ ಭರಪೂರವಾಗಿದೆ. ಸೌಂದರ್ಯ ಮತ್ತು ಆರೋಗ್ಯ ಕಾಪಾಡುವಲ್ಲಿ ಕಿವಿ ಫ್ರೂಟ್ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾದ್ರೆ ಕಿವಿ ಫ್ರೂಟ್ ಬಳಕೆಯ ಉಪಯೋಗವೇನು ಅನ್ನೋದನ್ನ ನೋಡೋಣ ಬನ್ನಿ..
ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾದಾಗ ಮನುಷ್ಯನ ಆರೋಗ್ಯ ಹದಗೆಡುತ್ತದೆ. ಇಂಥ ಸಮಯದಲ್ಲಿ ದಿನಕ್ಕೆ ಒಂದು ಕಿವಿ ಫ್ರೂಟ್ ತಿಂದರೂ ಸಾಕು. ಇದು ನಿಮ್ಮ ದೇಹಕ್ಕೆ ಅಗತ್ಯವಿರುವ ಹಿಮೋಗ್ಲೋಬಿನ್ ಅಂಶ ನೀಡಿ, ನಿಮ್ಮ ಆರೋಗ್ಯ ಕಾಪಾಡುತ್ತದೆ.
ತರಕಾರಿ ಸುಕ್ಕೆ ರೆಸಿಪಿ: Mixed Vegetable Sukke recipe
ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಪದೇ ಪದೇ ಆಗುವ ನೆಗಡಿ, ಕೆಮ್ಮನ್ನ ಕಡಿಮೆ ಮಾಡುವುದರಲ್ಲಿ ಕಿವಿ ಹಣ್ಣು ಸಹಕಾರಿಯಾಗಿದೆ. ಈ ರೀತಿ, ನೆಗಡಿ, ಜ್ವರ, ಕೆಮ್ಮು ಬಂದಾಗ, ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಅದನ್ನು ಹೆಚ್ಚಿಸಿ, ನಾವು ಆರೋಗ್ಯವಾಗಲು ಕಿವಿ ಫ್ರೂಟ್ ಸಹಕಾರಿಯಾಗಿದೆ.
ನಿಯಮಿತವಾಗಿ ಕಿವಿ ಹಣ್ಣಿನ ಸೇವನೆ ಮಾಡುವುದರಿಂದ ತೂಕ ಇಳಿಸಿಕೊಳ್ಳಬಹುದು. ಅಲ್ಲದೇ ಹೊಟ್ಟೆಗೆ ಸಂಬಂಧಿಸಿದ ಸಣ್ಣಪುಟ್ಟ ಸಮಸ್ಯೆಯನ್ನೂ ಕಿವಿ ಹಣ್ಣು ದೂರ ಮಾಡುತ್ತದೆ. ಕಿವಿ ಹಣ್ಣಿನಲ್ಲಿ ನೀರಿನ ಅಂಶ ಇರುವುದರಿಂದ, ಸಂಧಿವಾತದ ನೋವು ನಿವಾರಿಸುವಲ್ಲಿ ಕಿವಿ ಹಣ್ಣು ಉಪಯುಕ್ತವಾಗಿದೆ. ಕಿವಿ ಹಣ್ಣಿನ ಸೇವನೆ ಮಾಡುವುದರಿಂದ, ಕೈ ಕಾಲು, ಮೂಳೆ ನೋವು ಕಡಿಮೆಯಾಗುತ್ತದೆ.
ಕಿವಿ ಹಣ್ಣಿನ ಸೇವನೆಯಿಂದ ನಮ್ಮ ದೇಹದ ಕೆಟ್ಟ ಕೊಲೆಸ್ಟ್ರಾಲ್ ಹೋಗಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಹೃದಯ ಸಮಸ್ಯೆ ಇದ್ದಲ್ಲಿ ಕಿವಿ ಹಣ್ಣು ಸೇವಿಸಿ.
ಹೆಸರು ಬೇಳೆ ಸಲಾಡ್ ರೆಸಿಪಿ ಮತ್ತು ಅದರ ಸೇವನೆಯ ಉಪಯೋಗಗಳು: Video
ಒಳ್ಳೆಯ ನಿದ್ದೆ ಬರಬೇಕೆಂದರೆ, ನಿಯಮಿತವಾಗಿ ಕಿವಿ ಫ್ರೂಟ್ ತಿನ್ನಬೇಕು. ಮಲಗುವ ಮುಂಚೆ ಕಿವಿ ಹಣ್ಣಿನ ಸೇವನೆ ಮಾಡಿದ್ರೆ, ಆರೋಗ್ಯಕರವಾದ ನಿದ್ರೆ ನಿಮ್ಮದಾಗುತ್ತದೆ. ಇದು ವೈಜ್ಞಾನಿಕವಾಗಿ ಸಾಬೀತಾಗಿದೆ.
ಮಳೆಗಾಲದಲ್ಲಿ ನೀವು ಜ್ವರ ಬಂದಾಗ ವೈದ್ಯರ ಬಳಿ ಹೋದರೆ ಅವರು ನಿಮಗೆ ಕೆಲ ಬಾರಿ ಕಿವಿ ಫ್ರೂಟ್ ತಿನ್ನಿ ಎಂಬ ಸಲಹೆ ಕೊಟ್ಟಿರುತ್ತಾರೆ. ಏಕೆಂದರೆ ಡೆಂಗ್ಯೂದಂತಹ ಜ್ವರವನ್ನ ಹೊಡೆದೋಡಿಸಲುವಲ್ಲಿ ಕಿವಿ ಫ್ರೂಟ್ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಬೇಸಿಗೆಗಿಂತ ಮಳೆಗಾಲ ಶುರುವಾದಾಗ ಕಿವಿ ಹಣ್ಣಿನ ಬೆಲೆ ದುಪ್ಪಟ್ಟಾಗುತ್ತದೆ. ಏಕೆಂದರೆ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಬೇಕಾಗುವುದು ಕಿವಿ ಫ್ರೂಟ್.
ವಾರಕ್ಕೆ 3 ಬಾರಿ ಪಪ್ಪಾಯಿ ಸೇವಿಸಿದರೂ ಸಾಕು: ಆರೋಗ್ಯದಲ್ಲಾಗತ್ತೆ ಅತ್ಯುತ್ತಮ ಬದಲಾವಣೆ
ನಮ್ಮ ಸೌಂದರ್ಯವನ್ನ ಇಮ್ಮಡಿಗೊಳಿಸುವುದರಲ್ಲಿಯೂ ಕಿವಿ ಹಣ್ಣು ಸಹಕಾರಿಯಾಗಿದೆ. ನೀವು ವಾರಕ್ಕೆ ಎರಡು ಬಾರಿ, ಅಥವಾ ಮೂರು ಸಾಧ್ಯವಾದರೆ 5 ದಿನ ಕಿವಿ ಹಣ್ಣು ತಿಂದ್ರೆ, ನಿಮ್ಮ ಮುಖದಲ್ಲಿ ಮೊಡವೆಯಾಗುವುದಿಲ್ಲ. ಅಲ್ಲದೇ, ಸ್ಕಿನ್ ಮೇಲೆ ಗ್ಲೋ ಬರುತ್ತದೆ.
ಅಮೃತ ಹೆಚ್ಚಾದ್ರೆ ವಿಷ ಅನ್ನೋ ಹಾಗೆ, ಅಗತ್ಯಕ್ಕಿಂತ ಹೆಚ್ಚು ಏನನ್ನೂ ಸೇವಿಸಬಾರದು. ಅದೇ ರೀತಿ ಕಿವಿ ಫ್ರೂಟ್ ಸೇವನೆ ಮಿತವಾಗಿರಲಿ.
ದಾಳಿಂಬೆ ಹಣ್ಣಿನ ಸೇವನೆ ಮಾಡಿದ್ರೆ, ನಿಮ್ಮ ಆರೋಗ್ಯದ್ದಲ್ಲಿ ಆಗತ್ತೆ ಅತ್ಯದ್ಭುತ ಬದಲಾವಣೆ
Discussion about this post