Sandalwood News: ನಟ ದರ್ಶನ್ ಅವರಿಗೆ ಇಂದು ಪೊಲೀಸರು ಬೆಳ್ಳಂಬೆಳಿಗ್ಗೆ ಶಾಕ್ ಕೊಟ್ಟಿದ್ದು, ದರ್ಶನ್ ಅವರನ್ನು ಅರೆಸ್ಟ್ ಮಾಡಿ ಕರೆದೊಯ್ಯಲಾಗಿದೆ. ಕೊಲೆ ಆರೋಪದಡಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಕಾಮಾಕ್ಷಿ ಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬುವರರನ್ನು ದರ್ಶನ್ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಕೊಲೆ ಮಾಡಿ, ಬಳಿಕ ಕಾಮಾಕ್ಷಿ ಪಾಳ್ಯದಲ್ಲಿ ಎಸೆದಿದ್ದಾರೆಂಬ ಆರೋಪವಿದೆ. ಹೀಗಾಗಿ ಇಂದು ದರ್ಶನ್‌ರನ್ನು ಮೈಸೂರಿನಲ್ಲಿರುವ ಫಾರ್ಮ್ ಹೌಸ್‌ನಲ್ಲಿ ಬಂಧಿಸಲಾಗಿದೆ.
ರೇಣುಕಾಸ್ವಾಮಿ ಎಂಬುವವನು ಪವಿತ್ರಗೌಡ ಬಗ್ಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದಕ್ಕಾಗಿ, ದರ್ಶನ್ ಅವನನ್ನು ಕೊಲ್ಲಿಸಿದ್ದರು ಎಂದು ಆರೋಪವಿದ್ದು, ಕೊಲೆ ಮಾಡಿದವರು ದರ್ಶನ್ ಸಂಪರ್ಕದಲ್ಲಿದ್ದರು. ಹಾಗಾಗಿ ಈ ಕೊಲೆ ಮಾಡಿಸಿದ್ದು, ದರ್ಶನ್ ಎಂಬ ಆರೋಪವಿದೆ.
ರೇಣುಕಾಸ್ವಾಮಿಯ ಮೇಲೆ ಹಲ್ಲೆ ಮಾಡುವಾಗ, ದರ್ಶನ್ ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ಒಪ್ಪಿದ್ದು, ಆತ ಸಾವನ್ನಪ್ಪಿದ್ದ. ಈ ಬಗ್ಗೆ ದರ್ಶನ್ ಆಪ್ತರು, ಪೊಲೀಸರ ಮುಂದೆ ತಪ್ಪೊಪ್ಪಿಕಂಡಿದ್ದಾರೆ.
ಸದ್ಯ ದರ್ಶನ್ ಮತ್ತು ಅವರ ಆಪ್ತರನ್ನು ಅರೆಸ್ಟ್ ಮಾಡಿರುವ ಪೊಲೀಸರು ವಿಚಾರಣೆಗೆ ಮೈಸೂರಿನಿಂದ ಬೆಂಗಳೂರಿಗೆ ಕರೆ ತಂದಿದ್ದಾರೆ. ಇನ್ನು ಕೆಲ ಕ್ಷಣಗಳಲ್ಲೇ ದರ್ಶನ್‌ರನ್ನು ವೈದ್ಯಕೀಯ ವಿಚಾರಣೆಗೆ ಒಳಪಡಿಸಲಾಗುತ್ತದೆ.
Discussion about this post