Bollywood News: ಹಿಂದಿ ಬಿಗ್ಬಾಸ್ ಸ್ಪರ್ಧಿ ಹೀನಾ ಖಾನ್ ಮೂರನೇ ಹಂತದ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಸ್ವತಃ ಹೀನಾ ಖಾನ್ ಇನ್ಸ್ಟಾಗ್ರಾಮ್ ಪೋಸ್ಟ್ ಹಾಕಿ, ಸ್ಪಷ್ಟನೆ ನೀಡಿದ್ದಾರೆ.
ನಟಿ ಹೀನಾ ಖಾನ್ ಬಿಗ್ಬಾಸ್ನಲ್ಲೂ ಸ್ಪರ್ಧಿಸಿದ್ದರು. ಇವರ ಆರೋಗ್ಯದ ಬಗ್ಗೆ ಕೆಲ ದಿನಗಳಿಂದ ಗಾಸಿಪ್ ಹರಡುತ್ತಿದ್ದು, ಇದರ ಬಗ್ಗೆ ಅವರೇ ಸ್ಪಷ್ಟನೆ ನೀಡಿದ್ದಾರೆ. ಹೀನಾ ಖಾನ್ ಮೂರನೇ ಹಂತದ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿದ್ದು, ತಾನು ಈ ಖಾಯಿಲೆಯ ವಿರುದ್ಧ ಹೋರಾಡಿ ಬರಲು ಸಿದ್ಧಳಾಗಿದ್ದೇನೆ ಎಂದಿದ್ದಾರೆ.
ಇನ್ನು ತಮಗೆ ಸ್ತನ ಕ್ಯಾನ್ಸರ್ ಇದೆ ಎಂದು ಹೀನಾ ಖಾನ್ ಈ ಮೊದಲೇ ತಿಳಿದುಕೊಂಡಿದ್ದು, ಈ ಬಗ್ಗೆ ಈಗಾಗಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ, ನಾನು ಚಿಕಿತ್ಸೆ ಪಡೆದು ಪೂರ್ತಿ ಗುಣಮುಖಳಾಗಿ ನಿಮ್ಮೆದುರು ಬರುತ್ತೇನೆ. ಮೊದಲಿಗಿಂತಲೂ ಸ್ಟ್ರಾಂಗ್ ಆಗಿ ಬರುತ್ತೇನೆ ಎಂದು ಹೀನಾ ಖಾನ್ ಹೇಳಿದ್ದಾರೆ.
ಅಲ್ಲದೇ, ನಿಮ್ಮೆಲ್ಲರ ಪ್ರೀತಿ, ಹಾರೈಕೆ ನನಗೆ ಬೇಕು. ನಿಮ್ಮ ಚಿಕ್ಕಪುಟ್ಟ ಸಲಹೆ, ಮಾಹಿತಿ ನನಗೆ ಮುಖ್ಯವಾಗಿದೆ. ನಾನು ಮತ್ತು ನನ್ನ ಕುಟುಂಬಸ್ಥರು ಚಿಕಿತ್ಸೆಯ ಕಡೆ ಗಮನ ಹರಿಸುತ್ತಿದ್ದೇವೆ. ದೇವರ ದಯೆಯಿಂದ ನಾನು ಗುಣಮುಖಳಾಗುತ್ತೇನೆ ಎಂಬ ನಂಬಿಕೆ ಇದೆ ಎಂದು ಹೀನಾ ಖಾನ್ ಹೇಳಿದ್ದಾರೆ.
ಇನ್ನು ಬಿಗ್ಬಾಸ್ ಹಿಂದಿಯಲ್ಲಿ ಹೀನಾ ಖಾನ್ ಸ್ಪರ್ಧಿಸಿದ್ದ ವೇಳೆ, ಈಗಗಾಲೇ ಸಾವನ್ನಪ್ಪಿರುವ ದಿ.ಸಿದ್ಧಾರ್ಥ ಶುಕ್ಲಾ ಮತ್ತು ಹೀನಾ ನಡುವೆ ಪ್ರೀತಿ ಮೂಡಿತ್ತು. ಬಿಗ್ಬಾಸ್ನಿಂದ ಹೊರಬಂದ ಬಳಿಕವೂ ಇವರಿಬ್ಬರ ಪ್ರೀತಿ ಮುಂದುವರಿದಿತ್ತು. ಇವರಿಬ್ಬರು ವಿವಾಹವಾಗುತ್ತಾರೆ ಅಂತಲೂ ಹೇಳಲಾಗಿತ್ತು. ಆದರೆ ಸಿದ್ಧಾರ್ಥ್ ಹೃದಯಾಘಾತದಿಂದ ಸಾವನ್ನಪ್ಪಿದರು.
Discussion about this post