ಮಾಜಿ ವಿಶ್ವ ಸುಂದರಿ, ಬಾಲುವುಡ್ ನಟಿ ಮಂಗಳೂರ ಮೂಲದ ಐಶ್ವರ್ಯ ರೈ ಅವರು 48 ತುಂಬಿ 49 ಕ್ಕೆ ಕಾಲಿಟ್ಟಿದ್ದಾರೆ. ಅವರ 48ನೇ ಹುಟ್ಟುಹಬ್ಬವನ್ನು ಮನೆಯಲ್ಲಿ ಬಹಳ ವಿಜೃಂಬಣೆಯಿಂದ ಆಚರಿಸಿಕೊಂಡರು.
ಸಮಾರಂಭದ ಭಾವಚಿತ್ರ ಗಳನ್ನು ಐಶ್ವರ್ಯ ರೈ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಸಂತೋಷವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಐಶ್ವರ್ಯ ರೈ, ಪತಿ ಅಭಿಷೇಕ್ ಬಚ್ಚನ್, ಆರಾಧ್ಯ ಇದ್ದಾರೆ. ಚಿತ್ರದ ಜೊತೆಗೆ ಐಶ್ವರ್ಯ, ನಾನು ನಿಮ್ಮನ್ನು ಯಾವಾಗಲೂ, ಅದರಾಚೆಗೂ ನಿಮ್ಮ ಪ್ರೀತಿಸುತ್ತೇನೆ ಎಂದು ಬರೆದುಕೊಳ್ಳುವ ಮೂಲಕ ಹರ್ಷ ವ್ಯಕ್ತಡಿಸಿದ್ದಾರೆ.
ಐಶ್ವರ್ಯ ರೈ ತಾಯಿ ಬೃಂದಾ ರೈ ಹಾಗೂ ಮಗಳು ಆರಾಧ್ಯ ಇರುವ ಇನ್ನೊಂದು ಚಿತ್ರವನ್ನು ಶೇರ್ ಮಾಡಿರುವ ಐಶ್ವರ್ಯ, ನಿಮ್ಮ ಅನಿರ್ಬಂಧಿತ ಹಾರೈಕೆ ಹಾಗೂ ಪ್ರೀತಿ ನೀಡಿರುವುದಕ್ಕೆ ವಂದನೆಗಳು ಎಂದು ಬರೆದುಕೊಂಡು ಕೃತಜ್ಞತೆ ಅರ್ಪಿಸಿದ್ದಾರೆ.
ಐಶ್ವರ್ಯರ ಎಲ್ಲ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಅಭಿಷೇಕ್ ಬಚ್ಚನ್ ಷೇರ್ ಮಾಡುವ ಮೂಲಕ ಹೆಂಡತಿಯ ಹುಟ್ಟುಹಬ್ಬವನ್ನು ತಮ್ಮ ಸಂತೋಷ ವ್ಯಕ್ತಪಡಿಸಿದ್ದಾರೆ.
Actress Aishwarya Rai Turned into 48
























Discussion about this post