ಬೆಂಗಳೂರು: ಒಮಿಕ್ರಾನ್ ಭೀತಿ ಶುರುವಾಗಿದ್ದು, ಈ ಹಿನ್ನೆಲೆ ಹಿನ್ನೆಲೆ ಆರೋಗ್ಯ ಇಲಾಖೆ ಹಲವು ಕಠಿಣ ನಿಯಮಗಳನ್ನ ಜಾರಿ ಮಾಡುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಲು ಶಿಕ್ಷಣ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಸಲಹೆ ನೀಡಿದೆ. ಪ್ರಮುಖವಾಗಿ ಮೈಸೂರು, ಧಾರವಾಡ, ಬೆಂಗಳೂರಲ್ಲಿ ಕ್ಲಸ್ಟರ್ ಪತ್ತೆಯಾದ ಹಿನ್ನೆಲೆ, ಶಿಕ್ಷಣ ಸಂಸ್ಥೆಗಳಲ್ಲಿ ಕೆಲ ನಿರ್ಬಂಧ ವಿಧಿಸುವಂತೆ ಸಲಹೆ ನೀಡಲಾಗಿದೆ.
ಮೆಡಿಕಲ್, ಪ್ಯಾರಾ ಮೆಡಿಕಲ್ ಶಿಕ್ಷಣ ಸಂಸ್ಥೆಗಳಿಗೆ ಎರಡು ತಿಂಗಳುಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಮುಂದೂಡಲು ಸಲಹೆ ಬಂದಿದೆ. ಯಾವುದೇ ಕಾರ್ಯಾಗಾರ, ಸೆಮಿನಾರ್ಗಳು ಇದ್ದರೆ ಸಾಧ್ಯವಾದರೆ ಮುಂದೂಡಿ ಅಥವಾ ಕಡಿಮೆ ವಿದ್ಯಾರ್ಥಿಗಳೊಂದಿಗೆ ನಡೆಸಿ, ಉಳಿದ ವಿದ್ಯಾರ್ಥಿಗಳಿಗೆ ವರ್ಚುವಲ್ ಮೂಲಕ ಅವಕಾಶ ಕಲ್ಪಿಸಿ ಅಂತ ತಿಳಿಸಲಾಗಿದೆ.
ಶಿಕ್ಷಣ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ನಿತ್ಯ ಸ್ಕ್ರೀನಿಂಗ್ ಮಾಡಬೇಕು. ಆರೋಗ್ಯ ವಲಯದಲ್ಲಿರುವವರು ಆದಷ್ಟು ವರ್ಚುವಲ್ ಸಭೆಗಳನ್ನು ನಡೆಸಬೇಕಾಗಿ ಸಲಹೆ ನೀಡಿದೆ. ಜೊತೆಗೆ 18 ವರ್ಷ ಮೇಲ್ಪಟ್ಟ ಎಲ್ಲ ವಿದ್ಯಾರ್ಥಿಗಳು ಕೋವಿಡ್ ಲಸಿಕೆ ಪಡೆದಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕೆಂದು ತಿಳಿಸಿದೆ.
ಧಾರವಾಡ, ಬೆಂಗಳೂರು ಹಾಗೂ ಮೈಸೂರು ಕ್ಲಸ್ಟರ್ ಮೇಲೆ ನಿಗಾವಹಿಸಲು ಇಲಾಖೆ ಮುಂದಾಗಿದೆ. ಈ ಭಾಗಗಳ ಶಿಕ್ಷಣ ಸಂಸ್ಥೆಗಳಿಗೆ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ. ಕೇರಳ, ಮಹಾರಾಷ್ಟ್ರದಿಂದ ಈ ಮೂರು ಶಿಕ್ಷಣ ಸಂಸ್ಥೆಗಳಿಗೆ ಬಂದ ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಮಾಡಬೇಕು. ಕಳೆದ 15 ದಿನಗಳ ಹಿಂದಿನ ಪ್ರಯಾಣದ ಹಿಸ್ಟರಿ ಇರುವ ವಿದ್ಯಾರ್ಥಿಗಳಿಗೆ RTPCR ಟೆಸ್ಟ್ ಮಾಡಬೇಕು.
ಕೇರಳ ಹಾಗೂ ಮಹಾರಾಷ್ಟ್ರದಿಂದ ಎಂಟ್ರಿಯಾಗುವ ವಿದ್ಯಾರ್ಥಿಗಳು 72 ಗಂಟೆಯೊಳಗಿನ ಕೋವಿಡ್ ವರದಿ ನೀಡುವುದು ಕಡ್ಡಾಯ. ಕೇರಳದಿಂದ ಬರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ 7 ದಿನಗಳ ನಂತರ ಮತ್ತೊಮ್ಮೆ RTPCR ಟೆಸ್ಟ್ ಮಾಡಬೇಕು. ಕೇರಳ ಗಡಿ ಭಾಗದ ಜಿಲ್ಲೆಗಳಲ್ಲಿ ಬರುವ ಪ್ರಯಾಣಿಕರಿಗೆ ಸ್ಕ್ರೀನಿಂಗ್ ಮಾಡಬೇಕೆಂದು ಆದೇಶ ಹೊರಡಿಸಲಾಗಿದೆ.
Break for cultural events
Discussion about this post