ಕೆನಡಾ: ಭಾರತೀಯ ಮೂಲದ ಅನಿತಾ ಆನಂದ್ ಅವರು ಕೆನಡಾದ ನೂತನ ರಕ್ಷಣಾ ಸಚಿವರಾಗಿ ನೇಮಕಗೊಂಡಿದ್ದಾರೆ.
ನೂತನ ಪ್ರಧಾನಿ ಜಸ್ಟಿನ್ ಟ್ರುಡೋ ಸಂಪುಟದಲ್ಲಿ ಅನಿತಾ ಅವರನ್ನು ರಕ್ಷಣಾ ಸಚಿವ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಈ ಮೂಲಕ ದೇಶದ ಮೊದಲ ರಕ್ಷಣಾ ಸಚಿವೆ ಎಂಬ ಹೆಗ್ಗಳಿಕೆಗೆ ಅನಿತಾ ಪಾತ್ರರಾಗಿದ್ದಾರೆ.
ಕೋವಿಡ್ ದಿನಗಳಲ್ಲಿ ಅನಿತಾ ಪ್ರೊಕ್ಯೂರ್ ಮೆಂಟ್ ಸಚಿವೆಯಾಗಿ ಕಾರ್ಯ ನಿರ್ವಹಿಸಿದ್ದು, ಲಸಿಕೆ ಸಂಗ್ರಹಿಸಿ ಜನತೆಗೆ ವಿತರಿಸುವ ಮೂಲಕ ಅನಿತಾ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ದೀರ್ಘಾವಧಿ ರಕ್ಷಣಾ ಸಚಿವರಾಗಿದ್ದ ಭಾರತೀಯ ಮೂಲದ ಹರ್ಜಿತ್ ಸಜ್ಜನ್ ಅವರ ಸ್ಥಾನವನ್ನು ಅನಿತಾ ಅಲಂಕರಿಸಲಿದ್ದಾರೆ. ಕೆನಡಾದ ಹೊಸ ಕ್ಯಾಬಿನೆಟ್ 38 ಸದಸ್ಯರನ್ನು ಹೊಂದಿದೆ.

























Discussion about this post