ಬಾಲ್ಟಿಮೋರ್ (ಅಮೆರಿಕ): ವಿಷಕಾರಿಯೆಂದು ಪರಿಗಣಿತವಾದ ರಾಸಾಯನಿಕದ ಅಂಶಗಳಿರುವ ಚೀನಾದ ಆಟಿಕೆಗಳನ್ನು ಅಮೆರಿಕ ಮುಟ್ಟಗೋಲು ಹಾಕಿಕೊಂಡಿದೆ. ಬಾಲ್ಟಿಮೋರ್ ಬಂದರಿಗೆ ಸರಕು ಸಾಗಣೆ ಸಹಜಿನಲ್ಲಿ ಇಂಥ ಆಟಿಕೆಗಳು ಬಂದಿದ್ದವು.
ಚೀನಾದಲ್ಲಿ ತಯಾರಾದ ಈ ಟಾಯ್ಸ್ಗೆ ಸೀಸ, ಕಾಡ್ಮಿಯಂ ಮತ್ತು ಬೇರಿಯಂ ವಿಷಕಾರಿ ರಾಸಾಯನಿಕಗಳನ್ನು ಲೇಪಿಸಲಾಗಿದ್ದು, ಇಂಥ ಅಸುರಕ್ಷಿತ ಟಾಯ್ಸ್ ಅನ್ನು ಮಕ್ಕಳು ಬಳಸಿದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಚೀನಾದ ಆಟಿಕೆಗಳನ್ನು ಖರೀದಿಸುವಾಗ ಪೋಷಕರು ಎಚ್ಚರ ವಹಿಸಬೇಕು ಎಂದು ಅಮೆರಿಕದ ಸೀಮಾಸುಂಕ ಮತ್ತು ಗಡಿ ರಕ್ಷಣೆ (ಸಿಬಿಪಿ) ಇಲಾಖೆ ತಿಳಿಸಿದೆ.
ಬಾಲ್ಟಿಮೋರ್ ಬಂದರಿನಲ್ಲಿ ಸಿಬಿಪಿ ಮತ್ತು ಗ್ರಾಹಕರ ಉತ್ಪನ್ನ ಸುರಕ್ಷತಾ ಆಯೋಗ (ಸಿಪಿಎಸ್ಸಿ)ತಂಡಗಳು ಆಗಸ್ಟ್ನಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಚೀನಾದಿಂದ ಬಂದಿದ್ದ ಆಟಿಕೆಗಳ ಸುರಕ್ಷತೆಯನ್ನು ಪರಿಶೀಲಿಸಿತು. ಅವುಗಳಲ್ಲಿ ಅಪಾಯಕಾರಿ ರಾಸಾಯನಿಕಗಳು ಇರುವುದು ಮೇಲ್ನೋಟಕ್ಕೆ ಕಂಡುಬಂತು. ಹೀಗಾಗಿ ಇದನ್ನು ಕಳೆದ ಆಗಸ್ಟ್ 24ರಂದು ಸಿಪಿಎಸ್ಸಿ ಪ್ರಯೋಗಾಲಯಕ್ಕೆ ರವಾನಿಸಲಾಯಿತು. ಆಟಿಕೆಗಳಲ್ಲಿ ಸೀಸ, ಕಾಡ್ಮಿಯಂ, ಬೇರಿಯಂ ರಾಸಾಯನಿಕಗಳು ಇರುವುದು ಖಚಿತ ಆಯಿತು. ನಂತರ ಆಟಿಕೆಗಳಿದ್ದ ಇಡೀ ಕಂಟೈನರ್ ವಶಕ್ಕೆ ಪಡೆಯಲಾಗಿದೆ.
ಮಕ್ಕಳ ಆರೋಗ್ಯ ಆದ್ಯತೆಯ ವಿಷಯ. ಜತೆಗೆ ಗ್ರಾಹಕರ ಸುರಕ್ಷತೆಯೂ ಮುಖ್ಯವಾದ ಕಾರಣ ಚೀನಾದ ಆಟಿಕೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಬಾಲ್ಟಿಮೋರ್ ಬಂದರಿನ ಸಿಬಿಪಿ ಪ್ರಾದೇಶಿಕ ನಿರ್ದೇಶಕ ಆ್ಯಡಂ ರೋಟ್ಮನ್ ತಿಳಿಸಿದ್ದಾರೆ.
ಚೀನಾದಿಂದ ಬಂದ ಏಳು ಕಂಟೈನರ್ಗಳ 295 ಪ್ಯಾಕೇಜ್ಗಳಲ್ಲಿ ಲಗೋರಿ ಆಟದ ಸರಕು ಇದ್ದವು. ಇದು ಅಪಾಯಕಾರಿ ರಾಸಾಯನಿಕಗಳಿಂದ ಕೂಡಿದೆ. ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. ಈ ಲಂಗೋರಿ ಆಟದ ಚೀನಾ ಟಾಯ್ಸ್ ಭಾರತದಲ್ಲಿಯೂ ಬಹು ಜನಪ್ರಿಯವಾಗಿದೆ.
China Toys Seized in America
ಇದನ್ನೂ ಓದಿ: ತೈವಾನ್ ಗಡಿಯಲ್ಲಿ ಭೋರ್ಗರೆದ ಯುದ್ಧ ವಿಮಾನಗಳು: ದ್ವೀಪ ರಾಷ್ಟ್ರದ ಮೇಲೆ ಹೆಚ್ಚುತ್ತಿದೆ ಚೀನಾ ದಬ್ಬಾಳಿಕೆ
ಇದನ್ನೂ ಓದಿ: Xiaomi: ವಿದ್ಯುತ್ ಕಾರುಗಳ ಉತ್ಪಾದನಾ ರಂಗಕ್ಕೆ ಧುಮುಕಲಿದೆ ಚೀನಾದ ಸ್ಮಾರ್ಟ್ಫೋನ್ ದಿಗ್ಗಜ ಶಿಯೋಮಿ
Discussion about this post