ಚಿಕ್ಕಮಗಳೂರು: ತೀವ್ರ ಪೈಪೋಟಿ ನಡೆದ ಚುನಾವಣೆಯಲ್ಲಿ ಕೇವಲ 6 ಮತಗಳ ಅಂತರದಲ್ಲಾದ ಸೋಲನ್ನು ಒಪ್ಪಿಕೊಳ್ಳದ ಕಾಂಗ್ರೆಸ್ ಕಾರ್ಯಕರ್ತರು ಮತ ಏಣಿಕೆ ಕೇಂದ್ರದ ಎದುರು ಘೋಷಣೆ ಕೂಗುತ್ತಾ ಮರು ಮತಏಣಿಕೆಗೆ ಧರಣಿ ನಡೆಸಿದರು
ನಗರದ ಮತ ಏಣಿಕೆ ಕೇಂದ್ರ ಎಸ್.ಟಿ.ಜೆ ಕಾಲೇಜು ಬಳಿ ಬುಧವಾರ ಕಾಂಗ್ರೆಸ್‌ನ ನೂರಾರು ಕಾರ್ಯಕರ್ತರು ಜಮಾವಣೆಗೊಂಡು ಪ್ರತಿಭಟನೆ ಮತಗಳ ಮರು ಏಣಿಕೆಯಾಗಬೇಕು ಎಂದು ಧರಣಿ ಕೂರುವ ಮೂಲಕ ದೊಡ್ಡ ಹೈಡ್ರಾಮ ನಡೆಸಿದರು. ಚುನಾವಣಾಧಿಕಾರಿಗಳು ಮರು ಮತ ಏಣಿಕೆಗೆ ಅನುಮತಿ ನೀಡದ ಹಿನ್ನಲೆ ಸಮಾಧಾನಗೊಳ್ಳದ ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾಧಿಕಾರಿಗಳ ಕಾರಿಗೆ ಮುತ್ತಿಗೆ ಹಾಕಿ ಬಿಜೆಪಿ ಸರ್ಕಾರದ ವಿರುದ್ದ ಘೋಷಣೆ ಕೂಗಿ ಪ್ರತಿಭಟಿಸಿದರು.
ಸ್ವಲ್ಪ ಸಮಯದ ಬಳಿಕ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಒಟ್ಟುಗೂಡಿದಾಗ ಮತ ಏಣಿಕೆ ಕೇಂದ್ರದ ಮುಂಭಾಗದಲ್ಲಿ ಸ್ವಲ್ಪ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಎರಡು ಪಕ್ಷಗಳ ಕಾರ್ಯಕರ್ತರು ಘೋಷಣೆ ಕೂಗುತ್ತಾ ವಾಗ್ವಾದಕ್ಕೆ ಮುಂದಾದರು. ಬಳಿಕ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕುವ ಮೂಲಕ ಕಾರ್ಯಕರ್ತರ ನಡುವಿನ ವಾಗ್ವಾದವನ್ನು ಹತ್ತಿಕ್ಕಿದರು.
ಬಿಜೆಪಿ ಅಭ್ಯರ್ಥಿ ಎಂ.ಕೆ. ಪ್ರಾಣೇಶ್ ಮತ ಎಣಿಕೆ ಕೇಂದ್ರಕ್ಕೆ ತೆರಳುವ ವೇಳೆ ಅವರನ್ನು ಅಡ್ಡಗಟ್ಟಿ ತೀವ್ರವಾಗಿ ಘೋಷಣೆ ಕೂಗಿ ಮತಗಳ ಮರು ಎಣಿಕೆ ಮಾಡುವಂತೆ ಆಗ್ರಹಿಸಿದರು. ಈ ಸಂಬಂಧ ಕಾಂಗ್ರೆಸ್ ಅಭ್ಯರ್ಥಿ ಎ.ವಿ.ಗಾಯತ್ರಿಶಾಂತೇಗೌಡ ಅವರು ಆಕ್ಷೇಪಣಾ ಪತ್ರವನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ್ದು ತಕ್ಷಣವೇ ಮೇಲ್ಮನವಿ ಸಲ್ಲಿಸುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಗಾಯತ್ರಿ ಅವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಜಿಲ್ಲೆಯಲ್ಲಿ ತೀವ್ರ ಕದನ ಕುತೂಹಲ ಮೂಡಿಸಿದ್ದ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತೀವ್ರ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿಶಾಂತೇಗೌಡ ೧೧೮೨ ಮತಗಳನ್ನು ಪಡೆದಿದ್ದು ಪ್ರಾಣೇಶ್ ೧೧೮೮ ಮತ ಪಡೆಯುವ ಮೂಲಕ ತೀವ್ರ ಪೈಪೋಟಿ ನಡುವೆ ೬ ಮತಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಮಾಜಿ ಶಾಸಕ ಜಿ.ಹೆಚ್.ಶ್ರೀನಿವಾಸ್, ಮುಂಖಂಡರಾದ ಎಂ.ಎಲ್.ಮೂರ್ತಿ, ರಸೂಲ್‌ಖಾನ್ ಸೇರಿದಂತೆ ಪಕ್ಷದ ಅನೇಕ ಕಾರ್ಯಕರ್ತರು ಜಮಾವಣೆಗೊಂಡು ಮರುಎಣಿಕೆಗೆ ಆಗ್ರಹಿಸಿದರು.
Congress workers protest against re-vote

























Discussion about this post