Health Tips: ಪೋಷಕಾಂಶಗಳ ಆಗರ ಅಂತಾ ಕರಿಯೋ ಪಪ್ಪಾಯಿ ಹಣ್ಣು ಆರೋಗ್ಯಕರವಷ್ಟೇ ಅಲ್ಲದೇ, ಸೌಂದರ್ಯಕರವೂ ಆಗಿದೆ. ಸೆಲೆಬ್ರಿಟಿಗಳ ಹೊಳೆಯುವ ತ್ವಚೆಯ ರಹಸ್ಯವೂ ಕೂಡ ಪಪ್ಪಾಯಿ ಹಣ್ಣಿನಲ್ಲಡಗಿದೆ. ಪ್ರತಿದಿನ ತಿನ್ನಲಾಗದಿದ್ದರೂ, ವಾರಕ್ಕೆ ಮೂರು ಬಾರಿ ಪಪ್ಪಾಯಿ ಹಣ್ಣಿನ ಸೇವನೆ ಮಾಡಿದರೆ, ಆರೋಗ್ಯದಲ್ಲಿ ಅತ್ಯುತ್ತಮ ಅಭಿವೃದ್ಧಿಯಾಗುತ್ತದೆ. ಹಾಗಾದ್ರೆ ಪಪ್ಪಾಯಿ ಹಣ್ಣಿನ ಸೇವನೆಯ ಲಾಭಗಳೇನು ಅನ್ನೋದನ್ನ ನೋಡೋಣ ಬನ್ನಿ.
Masala Murmura Recipe: ಮಸಾಲೆ ಮಂಡಕ್ಕಿ ರೆಸಿಪಿ
1.. ಎಲ್ಲಾ ಸೀಸನ್‌ನಲ್ಲೂ ಕೈಗೆಟಕುವ ಬೆಲೆಗೆ ಸಿಗುವ ಹಣ್ಣು ಅಂದ್ರೆ ಪಪ್ಪಾಯಿ (Papaya). ಕಣ್ಣಿನ ಆರೋಗ್ಯಕ್ಕೆ ಪ್ಪಾಯಿ ಒಳ್ಳೆಯದು. ನೀವು ನಿಯಮಿತವಾಗಿ ಪಪ್ಪಾಯಿ ಸೇವಿಸಿದ್ದಲ್ಲಿ, ನಿಮಗೆ ಇರುಳುಗಣ್ಣಿನ ಸಮಸ್ಯೆ ಎದುರಾಗುವುದಿಲ್ಲ.
2.. ನಿಮಗೆ ಹಸಿವಾದಾಗ ಜಂಕ್ ಫುಡ್ (Junk Food) ತಿನ್ನುವ ಬದಲು, ಪಪ್ಪಾಯಿ ಹಣ್ಣನ್ನ ಸೇವಿಸಿ. ಇದು ಆರೋಗ್ಯಕ್ಕೂ ಒಳ್ಳೆಯದಲ್ಲದೇ, ನಿಮ್ಮ ಹೊಟ್ಟೆಯೂ ತುಂಬಿಸುತ್ತದೆ. ಇನ್ನು ಪಪ್ಪಾಯಿ ಮಿಲ್ಕ್ ಶೇಕ್, ಜ್ಯೂಸ್ ಮಾಡಿ ಕುಡಿಯುವ ಬದಲು, ಪಪ್ಪಾಯಿ ಹಣ್ಣನ್ನು ತಿಂದರೇ ಉತ್ತಮ. ಇದರಿಂದ ಎಲ್ಲ ಪೋಷಕಾಂಶಗಳೂ ನಮ್ಮ ದೇಹ ಸೇರುತ್ತದೆ. ಜ್ಯೂಸ್, ಮಿಲ್ಕ್ ಶೇಕ್ ಮಾಡಿದಾಗ, ಅದರ ಪೋಷಕಾಂಶಗಳು ಹೊರಟು ಹೋಗುತ್ತದೆ. ಹಾಗಾಗಿ ಪಪ್ಪಾಯಿ ಹಣ್ಣನ್ನೇ ತಿನ್ನುವುದು ಉತ್ತಮ.
ಸಧೃಡ, ಉದ್ದ ಕೂದಲಿಗಾಗಿ ಇದನ್ನು ಬಳಸಿ: ಕೆಲವೇ ದಿನಗಳಲ್ಲಿ ಫಲಿತಾಂಶ ಪಡೆಯಿರಿ
3.. ಜೀರ್ಣಕಾರಕವಾಗಿರುವ ಪಪ್ಪಾಯಿ ಹಣ್ಣನ್ನ ನಿಯಮಿತವಾಗಿ ಸೇವಿಸಿದ್ದಲ್ಲಿ ಮಲಬದ್ಧತೆಯ ಸಮಸ್ಯೆಯಿಂದ ಮುಕ್ತಿಪಡೆಯಬಹುದು. ನೀವು ತಿಂದಿರುವ ಆಹಾರ ಸರಿಯಾಗಿ ಜೀರ್ಣವಾಗುತ್ತಿಲ್ಲ. ಪ್ರತಿದಿನ ನಿಮಗೆ ಹೊಟ್ಟೆ ಕ್ಲೀನ್ ಆಗುತ್ತಿಲ್ಲವೆಂದಲ್ಲಿ, ಪಪ್ಪಾಯಿ ಹಣ್ಣಿನ ಸೇವನೆ ಮಾಡಿ.
Health Tips|: ಸ್ವೀಟ್ ಕಾರ್ನ್ ಸೇವನೆಯ ಸಿಕ್ರೇಟ್ ಲಾಭ ಏನು ಗೊತ್ತಾ..? ಇಲ್ಲಿದೆ ಮಾಹಿತಿ
4.. ಪಪ್ಪಾಯಿ ಪೇಸ್ಟ್, ಅಥವಾ ಪಪ್ಪಾಯಿ ಸಿಪ್ಪೆಯಿಂದ ಫೇಸ್ ಪ್ಯಾಕ್, ಫೇಸ್ ಮಸಾಜ್ (Face Massage) ಮಾಡಿಕೊಂಡ್ರೆ ಮುಖದ ಕಾಂತಿ ಹೆಚ್ಚುತ್ತದೆ. ಅಲ್ಲದೇ, ಪಪ್ಪಾಯಿ ಸೇವನೆಯಿಂದಲೂ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. ಪಪ್ಪಾಯಿ ಹಣ್ಣನ್ನು ತಿಂದರೆ, ಕೆಲವರಿಗೆ ದೇಹದಲ್ಲಿನ ಉಷ್ಣತೆ ಹೆಚ್ಚುತ್ತದೆ. ಹಾಗಾಗಿ ಪಪ್ಪಾಯಿ ಹಣ್ಣನ್ನು ಲಿಮಿಟಿನಲ್ಲಿ ಸೇವಿಸಿ. ರಾತ್ರಿ ಮಲಗುವಾಗ, ಹಾಲು ಕುಡಿಯುವುದು ಉತ್ತಮ. ಇದರಿಂದ ದೇಹದಲ್ಲಿ ಉಷ್ಣ ಮತ್ತು ತಂಪಿನ ಪ್ರಮಾಣ ಸಮವಾಗಿರುತ್ತದೆ.
5.. ಕೆಲವು ಗರ್ಭಿಣಿಯರಿಗೆ ಪಪ್ಪಾಯಿ ಹಣ್ಣು ತಿಂದರೆ ಅಬಾರ್ಷನ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಗರ್ಭಿಣಿಯರಿಗೆ ಪಪ್ಪಾಯಿ ಹಣ್ಣು ತಿನ್ನಲು ಕೊಡಬಾರದು. ಆದರೆ ಕೆಲವರು ತುಂಬಾ ಹಣ್ಣಾದ ಪಪ್ಪಾಯಿಯನ್ನು ತಿನ್ನುತ್ತಾರೆ. ಅದು ಕೆಲವರ ದೇಹಕ್ಕೆ ಒಗ್ಗುತ್ತದೆ. ಮತ್ತು ಕೆಲವರ ದೇಹಕ್ಕೆ ಒಗ್ಗುವುದಿಲ್ಲ. ಹಾಗಾಗಿ ಪಪ್ಪಾಯಿ ಸೇವನೆ ಮಾಡದೇ ಇದ್ದರೆ ಉತ್ತಮ.
ದಾಳಿಂಬೆ ಹಣ್ಣಿನ ಸೇವನೆ ಮಾಡಿದ್ರೆ, ನಿಮ್ಮ ಆರೋಗ್ಯದ್ದಲ್ಲಿ ಆಗತ್ತೆ ಅತ್ಯದ್ಭುತ ಬದಲಾವಣೆ
6.. ಇನ್ನು ಹೆಣ್ಣು ಮಕ್ಕಳು ಮುಟ್ಟಿನ ಸಮಸ್ಯೆಯಿಂದ (Periods Problem) ಬಳಲುತ್ತಿದ್ದಲ್ಲಿ ವೈದ್ಯರ ಸಲಹೆ ಪಡೆದು ಪಪ್ಪಾಯಿ ಹಣ್ಣು ಸೇವಿಸಿ. ಅಲ್ಲದೇ ಮುಟ್ಟಿನ ದಿನ ಹತ್ತಿರ ಬಂದಾಗ ಪಪ್ಪಾಯಿ ಹಣ್ಣು ಸೇವಿಸಿದ್ದಲ್ಲಿ ಇದು ಪ್ರಿಪೋನ್ ಮಾತ್ರೆಯಂತೆ ಕೆಲಸ ಮಾಡಲಿದ್ದು, ಒಂದೆರಡು ದಿನ ಮುನ್ನವೇ ಮುಟ್ಟಾಗುತ್ತಾರೆ. ಹಾಗಂತ ಅಗತ್ಯಕ್ಕಿಂತ ಹೆಚ್ಚು ಪಪ್ಪಾಯಿ ತಿಂದ್ರೆ, ಹೊಟ್ಟೆ ನೋವು ಬರುವುದು ಗ್ಯಾರಂಟಿ.
7.. ನಿಮ್ಮದು ಹೆಚ್ಚಿನ ಉಷ್ಣ ಹೊಂದಿರುವ ದೇಹವಾಗಿದ್ದಲ್ಲಿ, ಪಪ್ಪಾಯಿ ಸೇವಿಸದಿರಿ. ಉದಾಹರಣೆಗೆ ಉರಿಮೂತ್ರ ಸಮಸ್ಯೆ, ಪದೇ ಪದೇ ಮುಟ್ಟಾಗುವ ಸಮಸ್ಯೆ ಇದ್ದಲ್ಲಿ ಪಪ್ಪಾಯಿ ತಿನ್ನಬೇಡಿ. ದೇಹದಲ್ಲಿ ಉಷ್ಣತೆಯ ಪ್ರಮಾಣ ಹೆಚ್ಚಾಗಿದ್ದಲ್ಲಿ, ಈ ರೀತಿ ಮುಟ್ಟಿನ ಸಮಸ್ಯೆ, ಉರಿಮೂತ್ರ ಸಮಸ್ಯೆ ಉಂಟಾಗುತ್ತದೆ. ಪಪ್ಪಾಯಿ ಉಷ್ಣ ಹೆಚ್ಚಿರುವ ಹಣ್ಣಾಗಿರುವ ಕಾರಣ, ಪಪ್ಪಾಯಿ ಸೇವನೆ ಅತೀಯಾದರೆ, ದೇಹದಲ್ಲಿ ಉಷ್ಣತೆಯ ಪ್ರಮಾಣವೂ ಹೆಚ್ಚಾಗುತ್ತದೆ. ಹಾಗಾಗಿ ಈಗಾಗಲೇ ಉಷ್ಣತೆಯ ಸಮಸ್ಯೆ ಅನುಭವಿಸುತ್ತಿರುವವರು, ಪಪ್ಪಾಯಿ ಕಡಿಮೆ ಸೇವಿಸುವುದು ಉತ್ತಮ.
Beauty Tips: ಮನೆಯಲ್ಲಿ ತಯಾರಿಸಿ ನ್ಯಾಚುರಲ್ ಸ್ಕ್ರಬ್
8.. ಅಗತ್ಯಕ್ಕೂ ಹೆಚ್ಚಾಗಿದ್ದಲ್ಲಿ ಅಮೃತವೂ ವಿಷವೇ ಎಂಬಂತೆ ಹೆಚ್ಚಿನ ಪಪ್ಪಾಯಿ ಸೇವನೆ ಬೇಡ. ಅಲ್ಲದೇ, ಪಪ್ಪಾಯಿ ತಿಂದರೆ ನಿಮಗೆ ಅಲರ್ಜಿ ಎಂದಾದಲ್ಲಿ ವೈದ್ಯರ ಬಳಿ ಸಲಹೆ ಪಡೆಯಿರಿ.
Discussion about this post