ಚಿಕ್ಕಮಗಳೂರು: ಮಲೆನಾಡು ಸೇರಿದಂತೆ ಜಿಲ್ಲೆಯ ಹಲವು ಗ್ರಾಮಗಳಿಗೆ ನರನಾಡಿಯಂತಿದ್ದ , ಕೊಪ್ಪದ ಸಾರಿಗೆ ಸಂಸ್ಥೆಯ ಸಮಸ್ಯೆ ವರ್ಷ ಕಳೆದರೂ ಸಮಸ್ಯೆ ಕಗ್ಗಂಟಾಗಿಯೇ ಉಳಿದಿದೆ. ಅಲ್ಪ ಸಮಯದಲ್ಲಿ ಜನಮನ್ನಣೆ ಗಳಿಸಿ ಏಷ್ಯಾದಲ್ಲಿ ಪ್ರಥಮ ಸಾರಿಗೆ ಎನ್ನುವ ಹೆಗ್ಗಳಿಕೆ ಹೊಂದಿದ್ದ ಸಹಕಾರ ಸಾರಿಗೆ ಇದೀಗ ಜನಮಾಸನದಿಂದ ಕಣ್ಮರೆಯಾಗುವ ಸನಿಹದಲ್ಲಿದೆ.
ಸಂಸ್ಥೆಯಿಂದ ವಿವಿಧ ರೂಪದಲ್ಲಿ ಲಾಭ ಪಡದವರು ಇಂದು ಮೌನಕ್ಕೆ ಶರಣಾಗಿದ್ದಾರೆ. ಏಕಪಕ್ಷೀಯ ತೀರ್ಮಾನ, ಭ್ರಷ್ಟಚಾರದ ಆರೋಪ, ಅಸಮರ್ಪಕ ಆರ್ಥಿಕ ನಿರ್ವಹಣೆ, ಒಳಹೊರಗಿನ ರಾಜಕೀಯ, ಹೀಗೆ ಹತ್ತು ಹಲವು ಸಮಸ್ಯೆಗಳ ಕಪ್ಪುಚುಕ್ಕೆ ಅಂಟಿಸಿಕೊಂಡು ಸಹಕಾರ ಸಾರಿಗೆ ಸಂಸ್ಥೆ ನಿಂತಿದೆ. ಪಡೆದ ಸಾಲ ತೀರಿಸಿಲ್ಲ ಎಂಬ ಕಾರಣಕ್ಕೆ ಹಣಕಾಸು ಸಂಸ್ಥೆ ಮುಟ್ಟುಗೋಲು ಹಾಕಿಕೊಂಡಿದೆ. ಪಿಎಫ್ ಸೇರಿದಂತೆ ಅನೇಕ ಸವಲತ್ತುಗಳನ್ನು ಕಾರ್ಮಿ‍್ಕರಿಗೆ ನೀಡಿಲ್ಲ ಎಂಬ ಗಂಭೀರ ಆರೋಪವು ಇದೆ. ತಮಗೂ ಆಡಳಿತ ಮಂಡಳಿಗೆ ಯಾವುದೇ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದೆ.
ಶಾಸಕರು-ಮಾಜಿ ಶಾಸಕರ ಅಂಗಳವನ್ನು ದಾಟಿ ಚೆಂಡು ಇದೀಗಗ ಜಿಲ್ಲಾ ಉಸ್ತುವಾರಿ ಸಚಿವರ ಅಖಾಡಕ್ಕೆ ತಲುಪಿದೆ. ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಅವರು ಸೂಚನೆ ನೀಡಿದ್ದಾರೆ. ಈ ಮಧ್ಯೆ ಸಹಕಾರ ಸಾರಿಗೆ ಸಂಸ್ಥೆ ಮತ್ತೇ ಪುರ್ನಜನ್ಮ ತಳೆಯದಂತೆ ಕಾಣದ ಕೈಗಳು ವ್ಯವಸ್ಥಿತ ಪಿತೂರಿ ನಡೆಸಿದೆ ಎನ್ನವ ಟೀಕೆಗಳು ವ್ಯಕ್ತವಾಗುತ್ತಿವೆ. ಇಲ್ಲಿನ ಊಹಾಪೋಹಗಳಿಗೆ ಉಸ್ತುವಾರಿ ಸಚಿವರು ಇತಿಶ್ರೀ ಹಾಡಿ ಸಹಕಾರ ಸಾರಿಗೆ ಸಂಸ್ಥೆ ನಂಬಿಕೊಂಡವರ ಬಾಳಲ್ಲಿ ಬೆಳಕು ಮೂಡಿಸುತ್ತಾರೆಯೋ ಕಾದು ನೋಡಬೇಕಿದೆ.

























Discussion about this post