ನವದೆಹಲಿ: ದೇಶದ ಒಟ್ಟಾರೆ ಕೊರೊನಾ ಪ್ರಕರಣದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ. 0.67ಕ್ಕಿಂತ ತಗ್ಗಿದ್ದು, ಕಳೆದ ವರ್ಷ ಮಾರ್ಚ್ ನಂತರ ಅತ್ಯಂತ ಕಡಿಮೆ ಮಟ್ಟ ಇದಾಗಿದೆ. ಸೋಮವಾರ ಬೆಳಗ್ಗೆಗೆ ಕೊನೆಗೊಂಡ ಕಳದೆ 24 ತಾಸಿನಲ್ಲಿ 18,132 ಹೊಸ ಪ್ರಕರಣಗಳು ವರದಿಯಾಗಿದ್ದು, ಭಾನುವಾರಕ್ಕಿಂತ (18,166) ತುಸು ಕಡಿಮೆ ಆಗಿದೆ. 24 ತಾಸಿನಲ್ಲಿ 193 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ವಾಣಿಜ್ಯ ಸಚಿವಾಲಯ ತಿಳಿಸಿದೆ.
ಕೊರೊನಾ ನಿತ್ಯದ ಪ್ರಕರಣಗಳ ಸಂಖ್ಯೆ ಸೋಮವಾರ 18,132ಕ್ಕೆ ಕುಸಿದಿದ್ದು, ಭಾನುವಾರಕ್ಕಿಂತ ತುಸು ಕಡಿಮೆ ಆಗಿದೆ. ಪಾಸಿಟಿವಿಟಿ ದರ ಕೂಡ ಇಳಿಕೆಯಾಗಿದ್ದು, 100ಕ್ಕೆ ಶೇ. 1.75ರಷ್ಟಿದೆ. ಕಳೆದ 42 ದಿನಗಳಲ್ಲಿ ಇದು ಶೇ. 3ಕ್ಕಿಂತ ಕಡಿಮೆ ಆಗಿದೆ. ಸಾಪ್ತಾಹಿಕ ಪಾಸಿಟಿವಿಟಿ ದರ ಶೇ. 1.53ರಷ್ಟಿದೆ. ಕಳೆದ 24 ತಾಸಿನಲ್ಲಿ 21,563 ಮಂದಿ ಗುಣಮುಖರಾಗಿದ್ದು, ಒಟ್ಟಾರೆ ಚೇತರಿಕೆಯ ಸಂಖ್ಯೆ 3,32,93,478ಕ್ಕೆ ಏರಿದೆ. ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇ. 98ಕ್ಕೆ ಏರಿದ್ದು, ಇದು ಕೂಡ ಕಳೆದ ವರ್ಷದ ಮಾರ್ಚ್ ನಂತರ ಉತ್ತಮಗೊಂಡಿದೆ.
ಭಾನುವಾರ 66,85,415 ಮಂದಿಗೆ ಲಸಿಕೆ ನೀಡಲಾಗಿದ್ದು, ಚುಚ್ಚುಮದ್ದು ಪಡೆದರ ಒಟ್ಟಾರೆ ಸಂಖ್ಯೆ 94 ಕೋಟಿ ಮೀರಿದೆ. ಕೇರಳದಲ್ಲಿ 24 ತಾಸಿನಲ್ಲಿ 10,691 ಕೋವಿಡ್ ಪ್ರಕರಣ ವರದಿಯಾಗಿದ್ದು, 85 ಮಂದಿ ಸಾವನ್ನಪ್ಪಿದ್ದಾರೆ. ದೇಶದ ನಿತ್ಯದ ಸೋಂಕಿತರ ಹೊಸ ಪ್ರಕರಣದಲ್ಲಿ ಕೇರಳವೇ ಮೊದಲ ಸ್ಥಾನದಲ್ಲಿ ಇದೆ. ಇಲ್ಲಿ ಕೋವಿಡ್ ಪರೀಕ್ಷೆ ಪಾಸಿಟಿವಿಟಿ ದರ ಶೇ. 13.05 ಇದೆ. ತಮಿಳುನಾಡಿಲ್ಲಿ 1,329 ಹೊಸ ಪ್ರಕರಣಗಳು ವರದಿಯಾಗಿದ್ದು, 15 ಮಂದಿ ಸಾವನ್ನಪ್ಪಿದ್ದಾರೆ. ಮೃತರ ಒಟ್ಟು ಸಂಖ್ಯೆ 35,783ಕ್ಕೆ ಏರಿದೆ.
Coronavirus Covid 19 India Numbers
ಇದನ್ನೂ ಓದಿ: ಕೊರೊನಾ ರೂಪಾಂತರ ವೈರಸ್: ವ್ಯಾಕ್ಸಿನ್ ಗಳಿಗೆ ಬಗ್ಗದ ವಿನಾಶಕ ತಳಿ
ಇದನ್ನೂ ಓದಿ: ಕೊರೊನಾ ಸಾವು: ಅರ್ಧಕ್ಕೆ ಇಳಿದ ಪರಿಹಾರ ಮೊತ್ತ: ₹1 ಲಕ್ಷ ಪರಿಹಾರ ಆದೇಶ ವಾಪಾಸ್
Discussion about this post