ನವದೆಹಲಿ: ದೇಶದಾದ್ಯಂತ ದೈನಂದಿನ ಕೋವಿಡ್–19 ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಗಣನೀಯ ಏರಿಕೆ ಕಂಡುಬಂದಿದೆ. ಒಂದೇ ದಿನ 16,764 ಹೊಸ ಪ್ರಕರಣಗಳು ದೃಢಪಟ್ಟಿದ್ದು, 220 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ ಈಗ 91,361ಕ್ಕೆ ಹೆಚ್ಚಳವಾಗಿದೆ. 7,585 ಮಂದಿ ಸೋಂಕಿತರು 24 ಗಂಟೆ ಅವಧಿಯಲ್ಲಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕೊರೊನಾ ವೈರಸ್ನ ಹೊಸ ರೂಪಾಂತರ ತಳಿ ಒಮಿಕ್ರಾನ್ನಿಂದ ಸೋಂಕು ತಗುಲುತ್ತಿರುವ ಪ್ರಮಾಣದಲ್ಲಿಯೂ ಭಾರಿ ಹೆಚ್ಚಳ ಕಂಡುಬಂದಿದೆ. ದೇಶದಲ್ಲೀಗ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 1,270ಕ್ಕೆ ತಲುಪಿದೆ.
ದೇಶದಲ್ಲೇ ಅತಿಹೆಚ್ಚು ಒಮಿಕ್ರಾನ್ ಪ್ರಕರಣಗಳು (450) ಮಹಾರಾಷ್ಟ್ರದಲ್ಲಿ ದೃಢಪಟ್ಟಿವೆ. ಕರ್ನಾಟಕದಲ್ಲಿ 34, ದೆಹಲಿಯಲ್ಲಿ 320, ಕೇರಳದಲ್ಲಿ 109, ಗುಜರಾತ್ನಲ್ಲಿ 97 ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಒಮಿಕ್ರಾನ್ ಪೀಡಿತರ ಪೈಕಿ 374 ಮಂದಿ ಈವರೆಗೆ ಚೇತರಿಸಿಕೊಂಡಿದ್ದಾರೆ.
ಇನ್ನಷ್ಟು ಸುದ್ದಿಗಳು…
India vs South Africa Test: ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವಿನ ನಗು ಬೀರಿದ ಭಾರತ
ಭಾರತದ ವಿರುದ್ಧ ಸೋಲಿನ ಬೆನ್ನಲ್ಲೇ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಕ್ವಿಂಟನ್ ಡಿಕಾಕ್
Discussion about this post