ನವದೆಹಲಿ: ಕೋವ್ಯಾಕ್ಸಿನ್ ಕೋವಿಡ್–19 ಲಸಿಕೆಯನ್ನು 2ರಿಂದ 18 ವರ್ಷ ವಯಸ್ಸಿನವರಿಗೆ ನೀಡಲು ವಿಷಯ ತಜ್ಞರ ಸಮಿತಿಯು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ (ಡಿಸಿಜಿಐ) ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಕೆಲವು ಷರತ್ತುಗಳೊಂದಿಗೆ ಮಕ್ಕಳಿಗೆ ಲಸಿಕೆ ನೀಡಲು ಪ್ರಾಥಮಿಕ ಹಂತದ ಅನುಮೋದನೆ ದೊರೆತಿದೆ. ಮಕ್ಕಳಿಗೆ ನೀಡಲು ಅನುಮೋದನೆ ಪಡೆದ ಮೊದಲ ಕೋವಿಡ್ ಲಸಿಕೆ ಇದಾಗಿದೆ. ಇನ್ನಷ್ಟು ಅನುಮೋದನೆಗಾಗಿ ಕಾಯಲಾಗುತ್ತಿದೆ ಎಂದು ಭಾರತ್ ಬಯೋಟೆಕ್ ಕಂಪನಿ ತಿಳಿಸಿದೆ.
ಮಕ್ಕಳ ಮೇಲಿನ ಕ್ಲಿನಿಕಲ್ ಪ್ರಯೋಗಕ್ಕೆ ಸಂಬಂಧಿಸಿದ ದತ್ತಾಂಶವನ್ನು ಕಂಪನಿಯು ಅಕ್ಟೋಬರ್ 6ರಂದು ಡಿಸಿಜಿಐಗೆ ಸಲ್ಲಿಸಿತ್ತು.
ಓದಿ: ಮಗುವಿನ ಲಿಂಗ ಬಹಿರಂಗಪಡಿಸಲು ವಿಡಿಯೋದಲ್ಲಿ ಹುಲಿಯನ್ನು ಬಳಸಿಕೊಂಡ ದಂಪತಿ, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ಅಂತಿಮ ಅನುಮೋದನೆಗಾಗಿ ತಜ್ಞರ ಸಮಿತಿ ಮಾಡಿರುವ ಶಿಫಾರಸ್ಸು ಪರಿಶೀಲನಾ ಹಂತದಲ್ಲಿದ್ದು ಶೀಘ್ರವೇ ಅನುಮೋದನೆ ದೊರೆಯುವ ನಿರೀಕ್ಷೆ ಇದೆ.
ಕೋವಿಡ್ ವಿರುದ್ಧದ ಹೋರಾಟದ ಅಂಗವಾಗಿ ದೇಶದಾದ್ಯಂತ ಈವರೆಗೆ 95 ಕೋಟಿಗೂ ಹೆಚ್ಚು ಡೋಸ್ ಲಸಿಕೆ ನೀಡಲಾಗಿದೆ.
Discussion about this post