ನವದೆಹಲಿ: ಪುಣೆ ಮೂಲದ ಸೆರಂ ಇನ್ಸ್ಟಿಟ್ಯೂಟ್ ಅಭಿವೃದ್ಧಿ ಪಡಿಸಿರುವ ನ್ಯಾನೊಪಾಟಿರ್ಕಲ್ ಅಂಶದ ಕೋವೊವಾಕ್ಸ್ ಮತ್ತು ಹೈದರಾಬಾದ್ ಮೂಲದ ಬಯೋಲಾಜಿಕಲ್-ಇ ಕಂಪನಿ ದೇಶೀಯ ತಂತ್ರಜ್ಞಾನದಲ್ಲಿ ಅಭಿವೃದ್ಧಿ ಪಡಿಸಿದ, ಆರ್ಬಿಡಿ ಪ್ರೋಟೀನ್ ಹೊಂದಿರುವ ಕಾರ್ಬೆವಾಕ್ಸ್ ಲಸಿಕೆಗಳ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಅಮೆರಿಕದ ಮೆರ್ಕ್ ಕಂಪನಿಯ ಮೊಲ್ನುಪಿರವಿರ್ ಮಾತ್ರೆಗೂ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್ಸಿಒ) ಒಪ್ಪಿಗೆ ಕೊಟ್ಟಿದೆ.
ಹೊಸದಾಗಿ ಒಪ್ಪಿಗೆ ನೀಡಲಾದ ಎರಡು ಲಸಿಕೆಯೂ ಸೇರಿದಂತೆ ದೇಶದಲ್ಲಿ ತುರ್ತು ಬಳಕೆಗೆ ಅನುಮತಿ ನೀಡಲಾದ ಕೊರೊನಾ ತಡೆಯ ಲಸಿಕೆಗಳ ಸಂಖ್ಯೆ 8ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ. ಈ ಮಾತ್ರೆಗೆ ಅಮೆರಿಕ ಮತ್ತು ಬ್ರಿಟನ್ ಔಷಧ ಪ್ರಾಧಿಕಾರಗಳು ಈಗಾಗಲೇ ಅನುಮತಿ ನೀಡಿವೆ ಎಂದು ತಿಳಿಸಿದ್ದಾರೆ.
15ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ಹಾಗೂ ಕೊರೊನಾ ವಾರಿಯರ್ಸ್ಗೆ ಹಾಗೂ ಬೇರೆ ಕಾಯಿಲೆಗಳಿಂದ ಬಳಲುತ್ತಿರುವ 60 ವರ್ಷ ಮೇಲ್ಪಟ್ಟವರಿಗೆ ಮೂರನೇ ಡೋಸ್ ಲಸಿಕೆ ಘೋಷಣೆಯಾದ ನಂತರ ಎರಡು ಲಸಿಕೆಗಳು ಮತ್ತು ಒಂದು ಮಾತ್ರೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್, ಪುಣೆಯ ಸೆರಂ ಸಂಸ್ಥೆಯ ಕೋವಿಶೀಲ್ಡ್, ರಷ್ಯಾದ ಸ್ಪುಟ್ನಿಕ್-ವಿ, ಅಹಮದಾಬಾದ್ನ ಮೂಲದ ಝೈಡಸ್ ಕ್ಯಾ ಡಿಲಾ ಕಂಪನಿಯ ಝೈಕೋವ್-ಡಿ, ಅಮೆರಿಕದ ಮೂಲದ ಮಾರ್ಡನಾ ಮತ್ತು ಜಾನ್ಸನ್ ಆ್ಯಂಡ್ ಜಾನ್ಸನ್ ಲಸಿಕೆಗಳು ಈಗಾಗಲೇ ಸಿಡಿಎಸ್ಸಿಒ ಅನುಮತಿ ಪಡೆದುಕೊಂಡಿವೆ.
ಇದನ್ನೂ ಓದಿ: Vaccine for children: ಭಾರತದಾದ್ಯಂತ ಜನವರಿ 3 ರಿಂದ ಮಕ್ಕಳಿಗೆ ಲಸಿಕೆ
(Covid Vaccine India Clears 2 New Vaccines And Mercks Covid Pil)
Discussion about this post