ಬೆಂಗಳೂರು: ಕರ್ನಾಟಕದಲ್ಲಿ ಪತ್ತೆಯಾದ ಎರಡು ಒಮಿಕ್ರಾನ್ ಸೋಂಕಿತರ ಪೈಕಿ ಓರ್ವರೊಬ್ಬರು ಬೆಂಗಳೂರು ಮೂಲದ ಅರಿವಳಿಕೆ ತಜ್ಞರಾಗಿದ್ದು, ಇವರು ಈಗ ಆಸ್ಪತ್ರೆ ನಿಗಾದಲ್ಲಿದ್ದಾರೆ. “ಇವರಿಗೆ ರೂಪಾಂತರಿ ಸೋಂಕಿನ ಯಾವುದೇ ತೀವ್ರ ಸ್ವರೂಪದ ಲಕ್ಷಣಗಳು ಕಂಡುಬಂದಿಲ್ಲ. ಜ್ವರ, ನೆಗಡಿಯಂತಹ ಸಾಮಾನ್ಯ ಲಕ್ಷಣಗಳು ಮಾತ್ರ ಕಂಡುಬಂದಿದೆ” ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ: e Paper – December 5, 2021
ಹೀಗಾಗಿ ರೂಪಾಂತರಿ ಒಮಿಕ್ರಾನ್ ಅಷ್ಟೊಂದು ಅಪಾಯಕಾರಿ ಸೋಂಕು ಅಲ್ಲ ಎಂಬಂತಹ ಅಭಿಪ್ರಾಯಗಳಿಗೆ ಇನ್ನಷ್ಟು ಇಂಬು ಕೊಡುತ್ತಿದೆ. ಅರಿವಳಿಕೆ ತಜ್ಞರ ಪ್ರಾಥಮಿಕ ಸಂಪರ್ಕದಲ್ಲಿದ್ದ ಅವರ ಪತ್ನಿ, ಮಗಳು ಮತ್ತು ವೈದ್ಯೆಯೊಬ್ಬರಿಗೆ ಸೋಂಕಿನ ಸೌಮ್ಯ ಲಕ್ಷಣಗಳು ಕಾಣಿಸಿಕೊಂಡಿತ್ತು. ಇದೀಗ ಅವರು ಕೂಡ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: IND vs NZ Test: ಎಜಾಜ್ 10 ವಿಕೆಟ್ ಸಾಧನೆ ಬಳಿಕ ಮಂಕಾದ ನ್ಯೂಜಿಲೆಂಡ್, ಮೊದಲ ಇನ್ನಿಂಗ್ಸ್‌ನಲ್ಲಿ 62ಕ್ಕೆ ಆಲೌಟ್
ಅರಿವಳಿಕೆ ತಜ್ಞರ ಆರೋಗ್ಯ ಸ್ಥಿತಿಯ ಕುರಿತು ಮೂಲಗಳು ಮಾಹಿತಿ ನೀಡಿದ್ದು, “ಅರಿವಳಿಕೆ ತಜ್ಞರಿಗೆ ಮೊದಲು ಮೈಕೈ ನೋವು, ನೆಗಡಿ, ಜ್ವರದಂತಹ ಸೋಂಕಿನ ಸೌಮ್ಯ ಲಕ್ಷಣಗಳು ಕಾಣಿಸಿಕೊಂಡಿದೆ. ಇಲ್ಲಿಯವರೆಗೂ ಯಾವುದೇ ಉಸಿರಾಟ ಸಮಸ್ಯೆ ಎದುರಾಗಿಲ್ಲ. ತಲೆಸುತ್ತು ಬಂದ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಅವರಿಗೆ ಮೊನೊಕ್ಲೋನಲ್ ಪ್ರತಿಕಾಯಗಳೊಂದಿಗೆ ಚಿಕಿತ್ಸೆ ನೀಡಲಾಗಿದ್ದು, ಸಹಜ ಸ್ಥಿತಿಗೆ ಮರಳಿದ್ದಾರೆ” ಎಂದು ತಿಳಿಸಿದೆ.
ಇದನ್ನೂ ಓದಿ: ಒಮಿಕ್ರಾನ್ ಭೀತಿ ಮಧ್ಯೆ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಲಿದೆ ಟೀಂ ಇಂಡಿಯಾ: ಸಿಎಸ್‌ಎ
ಇವರ ಐದು ವರ್ಷದ ಮಗಳು ಮತ್ತು ಪತ್ನಿ ಕೂಡ ಇದೇ ಆಸ್ಪತ್ರೆಯಲ್ಲಿದ್ದಾರೆ. ಮಗಳಿಗೆ ಯಾವುದೇ ಕೋವಿಡ್ ಲಕ್ಷಣಗಳಿಲ್ಲ, ಪರೀಕ್ಷೆ ವರದಿ ಕೂಡ ನೆಗೆಟಿವ್ ಬಂದಿದೆ” ಎಂದು ಮೂಲಗಳು ವಿವರಿಸಿದೆ. ಬಿಬಿಎಂಪಿ ಅಧಿಕಾರಿಗಳು ಅರಿವಳಿಕೆ ತಜ್ಞರ ಮನೆಯನ್ನು ಸೀಲ್ ಡೌನ್ ಮಾಡಿದ್ದು, ಇವರ ಪೋಷಕರು ಮತ್ತು ಸಹೋದರನ ಕುಟುಂಬದವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ: ಪುನೀತ್ ಹಾಡಿರುವ ‘ಅರೇಸ ಡಂಕಣಕ ಹಾಡು ಬಿಡುಗಡೆ
Mutant Omykron is not such a dangerous infection
Discussion about this post