ಚಿಕ್ಕಮಗಳೂರು: ದತ್ತಪೀಠಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿರುವ ಆದೇಶವನ್ನು ಆಧಾರವಾಗಿಟ್ಟುಕೊಂಡು ಕಾನೂನಿನ ಚೌಕಟ್ಟಿನೊಳಗೆ ಸಂಪುಟದ ಉಪ ಸಮಿತಿ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ. ಸುನಿಲ್‌ಕುಮಾರ್ ಹೇಳಿದ್ದಾರೆ.
ದತ್ತಪೀಠದಲ್ಲಿ ಭಾನುವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ತೀರ್ಪು ಗಂಭೀರವಾಗಿ ತೆಗೆದುಕೊಂಡು ಸರ್ಕಾರ ಈಗಾಗಲೇ ಸಂಪುಟದ ಉಪ ಸಮಿತಿ ರಚನೆ ಮಾಡಿದೆ. ಹಿಂದೂ ಸಂಘಟನೆಗಳು ಕೊಟ್ಟಿರುವ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದರು.
ದತ್ತಪೀಠಕ್ಕೆ ಹಿಂದೂ ಅರ್ಚಕರು ನೇಮಕ ಆಗಬೇಕು. ತ್ರಿಕಾಲ ಪೂಜೆ ಆಗಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಈ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದಾಗಿದೆ ಎಂದು ಹೇಳಿದರು.
ಉಪ ಸಮಿತಿ ನ್ಯಾಯಯುತ ತೀರ್ಮಾನ: ದತ್ತಪೀಠಕ್ಕೆ ಸಂಬಂಧಿಸಿದಂತೆ ರಾಜ್ಯ ಸಚಿವ ಸಂಪುಟದ ಉಪ ಸಮಿತಿ ನ್ಯಾಯಯುತ ತೀರ್ಮಾನ ತೆಗೆದುಕೊಳ್ಳುವ ವಿಶ್ವಾಸ ಇದೆ ಎಂದು ಶಾಸಕ ಸಿ.ಟಿ. ರವಿ ಹೇಳಿದರು.
ಪ್ರತಿ ವರ್ಷದಂತೆ ಈ ಬಾರಿಯೂ ರಾಜ್ಯದ ವಿವಿಧೆಡೆಯಿಂದ ದೊಡ್ಡ ಸಂಖ್ಯೆಯಲ್ಲಿ ದತ್ತಭಕ್ತರು ದತ್ತಪೀಠಕ್ಕೆ ಆಗಮಿಸಿದ್ದಾರೆ ಎಂದರು. ದತ್ತಪೀಠಕ್ಕೆ ಬರುವ ಭಕ್ತರು, ರಾಷ್ಟ್ರ ಮತ್ತು ಸಮಾಜ ಹಿತದ ದೃಷ್ಟಿಯಲ್ಲಿ ಕೆಲಸ ಮಾಡುವ ಸಂಕಲ್ಪದೊಂದಿಗೆ ಹೋಗಬೇಕು. ಸಮಾಜದಲ್ಲಿನ ದೌರ್ಬಲ್ಯ, ಜಾತೀಯತೆ, ಅಸ್ಪೃಶ್ಯತೆ ಇದರಿಂದ ಹೊರತಾದ ಬಲಿಷ್ಟವಾದ ಹಿಂದು ಸಮಾಜವನ್ನು ಕಟ್ಟುವ ಸಂಕಲ್ಪದೊಂದಿಗೆ ಇಲ್ಲಿಂದ ಹೋಗಬೇಕು. ಹಾಗೆ ಆದಾಗ ಹಿಂದೂ ಸಮಾಜವನ್ನು ವಕ್ರದೃಷ್ಟಿಯಿಂದ ನೋಡುವವರಿಗೆ ನಮ್ಮ ಸಮಬಲ ಸಮಾಜ ಉತ್ತರ ನೀಡುತ್ತದೆ ಎಂದು ಹೇಳಿದರು.
ಉಪ ಸಮಿತಿ ನ್ಯಾಯಯುತ ತೀರ್ಮಾನ: ದತ್ತಪೀಠಕ್ಕೆ ಸಂಬಂಧಿಸಿದಂತೆ ರಾಜ್ಯ ಸಚಿವ ಸಂಪುಟದ ಉಪ ಸಮಿತಿ ನ್ಯಾಯಯುತ ತೀರ್ಮಾನ ತೆಗೆದುಕೊಳ್ಳುವ ವಿಶ್ವಾಸ ಇದೆ ಎಂದು ಶಾಸಕ ಸಿ.ಟಿ. ರವಿ ಅವರು ಹೇಳಿದರು.
ಪ್ರತಿ ವರ್ಷದಂತೆ ಈ ಬಾರಿಯೂ ರಾಜ್ಯದ ವಿವಿಧೆಡೆಯಿಂದ ದೊಡ್ಡ ಸಂಖ್ಯೆಯಲ್ಲಿ ದತ್ತಭಕ್ತರು ದತ್ತಪೀಠಕ್ಕೆ ಆಗಮಿಸಿದ್ದಾರೆ ಎಂದರು.
ದತ್ತಪೀಠಕ್ಕೆ ಬರುವ ಭಕ್ತರು, ರಾಷ್ಟ್ರ ಮತ್ತು ಸಮಾಜ ಹಿತದ ದೃಷ್ಟಿಯಲ್ಲಿ ಕೆಲಸ ಮಾಡುವ ಸಂಕಲ್ಪದೊಂದಿಗೆ ಹೋಗಬೇಕು. ಸಮಾಜದಲ್ಲಿನ ದೌರ್ಬಲ್ಯ, ಜಾತೀಯತೆ, ಅಸ್ಪೃಶ್ಯತೆ ಇದರಿಂದ ಹೊರತಾದ ಬಲಿಷ್ಟವಾದ ಹಿಂದು ಸಮಾಜವನ್ನು ಕಟ್ಟುವ ಸಂಕಲ್ಪದೊಂದಿಗೆ ಇಲ್ಲಿಂದ ಹೋಗಬೇಕು. ಹಾಗೆ ಆದಾಗ ಹಿಂದೂ ಸಮಾಜವನ್ನು ವಕ್ರದೃಷ್ಟಿಯಿಂದ ನೋಡುವವರಿಗೆ ನಮ್ಮ ಸಮಬಲ ಸಮಾಜ ಉತ್ತರ ನೀಡುತ್ತದೆ ಎಂದು ಹೇಳಿದರು.
Dattapeetha Viveda

























Discussion about this post