ಚಿಕ್ಕಮಗಳೂರು: ರಾಹುಲ್ ಗಾಂಧಿಯವರ ಬಗ್ಗೆ ಅತ್ಯಂತ ಕೀಳುಮಟ್ಟದ ಹಾಗೂ ಆಧಾರರಹಿತ ಹೇಳಿಕೆ ಕೊಟ್ಟಿರುವ ಸಂಸದ ನಳಿನ್ ಕಟೀಲ್ ರನ್ನು ಸಂಸದ ಸ್ಥಾನದಿಂದ ವಜಾಗೊಳಸ ಬೇಕೆಂದು ಜಿಲ್ಲಾ ಕಾಂಗ್ರೆಸ್ ಮಾಹಿತಿ ಮತ್ತು ತಂತ್ರಜ್ಞಾನ ಅಧ್ಯಕ್ಷ ಕಾರ್ತಿಕ್ ಜಿ ಚೆಟ್ಟಿಯಾರ್ ಆಗ್ರಹಿಸಿದ್ದಾರೆ.
ಕಟೀಲ್ ರಾಜ್ಯಾಧ್ಯಕ್ಷರಾಗಿ ಹಾಗೂ ಸಂಸದರಾಗಿ ಈ ಹೇಳಿಕೆ ಕಟೀಲ್‌ರವರ ಕೊಳಕು ಮನಃಸ್ಥಿತಿಯನ್ನು ಅನಾವರಣ ಮಾಡಿದ್ದಾರೆ, ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿಯಾಗಿ ಮಾತಾನಾಡಲು ಕಟೀಲ್‌ರವರಿಗೆ ಯಾವ ನೈತಿಕತೆಯಿದೆ. ರಾಜೀವ್ ಗಾಂಧಿ, ಇಂದಿರಾ ಗಾಂಧಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಹೆಗ್ಗಳಿಕೆ ನೆಹರೂ ಕುಟುಂಬದವರದ್ದು. ದೇಶಕ್ಕಾಗಿ ಬಿಜೆಪಿಯವರ ತ್ಯಾಗವೇನು.? ಕಟೀಲ್‌ರವರ ಕೊಡುಗೆಯೇನು.? ಎಂದು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ ರವರ ವಿರುದ್ಧ ನೀಡಿರುವ ಕೀಳು ಮಟ್ಟದ ಸುಳ್ಳು ಹೇಳಿಕೆಯನ್ನು ತಕ್ಷಣವೇ ವಾಪಸ್ ಪಡೆದು ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಆಗ್ರಹಪಡಿಸಿದ್ದೆನೆ. ರಾಹುಲ್ ಗಾಂಧಿರವರನ್ನು ಡ್ರಗ್ ಅಡಿಟ್ ಮತ್ತು ಪೆಡ್ಲರ್ ಎಂದು ಬಳಸಿರುವಂತಹ ಭಾಷೆಯನ್ನು ಗಮನಿಸಿದಾಗ ಅವರು ಬೆಳೆದುಬಂದಿರುವ ಸಂಸ್ಕಾರವನ್ನು ತೋರಿಸುತ್ತಿದೆ ಎಂದಿದ್ದಾರೆ.
ಒಬ್ಬ ಸಂಸದರಾಗಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವುದು ದುರದೃಷ್ಟಕರದ ಸಂಗತಿಯಾಗಿದೆ ಇವರು ಈ ಸ್ಥಾನದಲ್ಲಿ ಮುನ್ನಡೆಯಲು ಅನರ್ಹರಾಗಿದ್ದಾರೆ ಆದ್ದರಿಂದ ಕಟೀಲ್ ರವರನ್ನು ಸಂಸತ್ ಸದಸ್ಯ ಸ್ಥಾನದಿಂದ ವಜಾಮಾಡಬೇಕೆಂದು ರಾಷ್ಟ್ರಪತಿಗಳಿಗೆ ಒತ್ತಾಯಿಸುತ್ತೆನೆ ಹರಕುಬಾಯಿ ರಾಜಕಾರಣಿಯಾಗಿ ಬಾಲಿಶತನದ ಹಾಗೂ ಜೋಕರ್ ರೀತಿಯ ಹೇಳಿಕೆ ನೀಡಿರುವ ಕಟೀಲ್ ರಿಗೆ ಮಾನಸಿಕ ಸ್ಥಿಮಿತತೆ ಇಲ್ಲವೇ ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

























Discussion about this post