ಮುಂಬೈ: ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್ ನಟಿಯರಾದ ನೋರಾ ಫತೇಹಿ ಹಾಗೂ ಜಾಕ್ವೆಲಿನ್ ಫರ್ನಾಂಡೀಸ್ ಅವರಿಗೆ ಜಾರಿ ನಿರ್ದೇಶನಲಾಯ (ಇ.ಡಿ) ಸಮನ್ಸ್ ಜಾರಿ ಮಾಡಿದೆ.
ಈ ಮಧ್ಯೆ, ನೋರಾ ಫತೇಹಿ ಅವರು ಇಂದು (ಗುರುವಾರ) ನವದೆಹಲಿಗೆ ತೆರಳಿ ಜಾರಿ ನಿರ್ದೇಶನಾಲಯ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ಜಾಕ್ವೆಲಿನ್ ಶೀಘ್ರವೇ ವಿಚಾರಣೆಗೆ ಹಾಜರಾಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.
ಓದಿ: ತಮಿಳುನಾಡು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆ: ಸದ್ದಿಲ್ಲದೇ ರಾಜಕೀಯಕ್ಕಿಳಿದರೇ ನಟ ವಿಜಯ್?
ಅಕ್ರಮ ಹಣಕಾಸು ವರ್ಗಾವಣೆ ತಡೆ ಕಾಯ್ದೆ ಅಡಿ ನೋರಾ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದೂ ಮೂಲಗಳು ತಿಳಿಸಿವೆ. ವಂಚನೆ ಹಾಗೂ ಸುಲಿಗೆ ಪ್ರಕರಣದಲ್ಲಿ ಆರೋಪಿಯಾಗಿರುವ ಚಂದ್ರಶೇಖರ್ (ನಟಿ ಲೀನಾ ಮರಿಯಾ ಪೌಲ್ ಪತಿ) ವಿಚಾರಣೆ ವೇಳೆ ನೋರಾ ಮತ್ತು ಜಾಕ್ವೆಲಿನ್ ಹೆಸರು ಕೇಳಿಬಂದಿತ್ತು.
ಈ ಹಿಂದೆ ಆಗಸ್ಟ್ನಲ್ಲಿ ಜಾಕ್ವೆಲಿನ್ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸಿತ್ತು.
ಚಂದ್ರಶೇಖರ್ ವಿರುದ್ಧ 200 ಕೋಟಿ ರೂಪಾಯಿ ವಂಚನೆ ಮತ್ತು ಸುಲಿಗೆ ಆರೋಪವಿದೆ.
Discussion about this post