ನ್ಯೂಯಾರ್ಕ್: ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್ಬುಕ್ನ (Facebook) ಹೆಸರು ಮೆಟಾ (Meta) ಎಂದು ಬದಲಾಗಿದೆ. ಈವರೆಗೆ ಸಾಮಾಜಿಕ ಜಾಲತಾಣವಾಗಿಯಷ್ಟೇ ಜನಜನಿತವಾಗಿದ್ದ ಕಂಪನಿಯ ಕಾರ್ಯವ್ಯಾಪ್ತಿಯನ್ನು ಟೆಕ್ನಾಲಜಿ ವಲಯಕ್ಕೆ ವಿಸ್ತರಿಸುವ ಉದ್ದೇಶದಿಂದ ಫೇಸ್ಬುಕ್ ಸಿಇಒ ಮಾರ್ಕ್ ಝುಕರ್ಬರ್ಗ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಹೆಸರು ಬದಲಿಸುವ ನಿರ್ಧಾರವನ್ನು ಫೇಸ್ಬುಕ್ನ ಫೇಸ್ಬುಕ್ ಕನೆಕ್ಟ್ ಆಗ್ಮೆಂಟೆಡ್ ಮತ್ತು ವರ್ಚ್ಯುವಲ್ ರಿಯಾಲಿಟಿ ಸಮಾವೇಶದಲ್ಲಿ ಘೋಷಿಸಲಾಗಿದೆ.
ವೈಜ್ಞಾನಿಕ ಪದ ಮೆಟಾವರ್ಸ್ ಅನ್ನು ಆಧರಿಸಿ ಹೊಸ ಹೆಸರಿನ ನಾಮಕರಣ ಮಾಡಲಾಗಿದೆ. ನಾವು ಕೇವಲ ಸಾಮಾಜಿಕ ಜಾಲತಾಣವಷ್ಟೇ ಅಲ್ಲ, ಜನರು ಪರಸ್ಪರ ಸಂವಹನ ನಡೆಸಲು ಅನುಕೂಲ ಕಲ್ಪಿಸುವ ತಂತ್ರಜ್ಞಾನ ಬೆಳೆಸುವ ಕಂಪನಿ ನಮ್ಮದು. ಫೇಸ್ಬುಕ್ ಮಾದರಿಯಲ್ಲಿಯೇ ಸಾಮಾಜಿಕ ನೆಟ್ವರ್ಕಿಂಗ್ ಕಂಪನಿಯಂತೆಯೇ ಮೆಟಾವರ್ಸ್ ಸಹ ಕೆಲಸ ಮಾಡಲಿದೆ ಎಂದು ಝುಕರ್ಬರ್ಗ್ ಹೇಳಿದರು.
ಷೇರುಪೇಟೆಯಲ್ಲಿ ಎಫ್ಬಿ ಎಂದು ಫೇಸ್ಬುಕು ಲಿಸ್ಟಿಂಗ್ ಆಗಿದೆ. ಇದನ್ನು ಎಂವಿಆರ್ಎಸ್ ಎಂದು ಡಿಸೆಂಬರ್ 1ರಿಂದ ಬದಲಿಸಲಾಗುವುದು. ಪ್ರಸ್ತುತ ಕಂಪನಿಯ ಹಾರ್ಡ್ವೇರ್ ವಿಭಾಗದ ಮುಖ್ಯಸ್ಥರಾಗಿರುವ ಆಂಡ್ರ್ಯೂ ಬೋಸ್ವರ್ತ್ ಅವರನ್ನು 2022ರಲ್ಲಿ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ನೇಮಿಸುವುದಾಗಿ ಕಂಪನಿ ಮಾಹಿತಿ ನೀಡಿದೆ.
Facebook Name Changed to META
ಇದನ್ನೂ ಓದಿ: ಬ್ರ್ಯಾಂಡ್ ಹೆಸರು ಬದಲಾಯಿಸಲು ಫೇಸ್ಬುಕ್ ಚಿಂತನೆ: ವರದಿ
ಇದನ್ನೂ ಓದಿ: ಒಂದೇ ವಾರದಲ್ಲಿ ಎರಡು ಬಾರಿ ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸ್ಆಪ್ ಕಾರ್ಯನಿರ್ವಹಣೆಯಲ್ಲಿ ಸಮಸ್ಯೆ: ಕ್ಷಮೆಯಾಚಿಸಿದ ಕಂಪನಿ
Discussion about this post