ವಾಷಿಂಗ್ಟನ್: ಜಗತ್ತಿನ ಅತಿ ದೊಡ್ಡ ಸಾಮಾಜಿಕ ಜಾಲತಾಣ ಸಂಸ್ಥೆಯಾಗಿರುವ ಫೇಸ್ಬುಕ್ ತನ್ನ ಬ್ರ್ಯಾಂಡ್ ಹೆಸರನ್ನು ಬದಲಾಯಿಸಲು ಮುಂದಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ದಿ ವರ್ಜ್’ ಸುದ್ದಿತಾಣ ವರದಿ ಮಾಡಿದೆ.
ಅಕ್ಟೋಬರ್ 28ರಂದು ಕಂಪನಿಯ ವಾರ್ಷಿಕ ಸಮಾವೇಶ ನಡೆಯಲಿದ್ದು ಅದರಲ್ಲಿ ಸಿಇಓ ಮಾರ್ಕ್ ಜುಕರ್ಬರ್ಗ್ ಅವರು ಹೆಸರು ಬದಲಾವಣೆ ಪ್ರಸ್ತಾವ ಮಂಡಿಸಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಆದರೆ ಈ ಕುರಿತು ಪ್ರತಿಕ್ರಿಯಿಸಲು ಫೇಸ್ಬುಕ್ ನಿರಾಕರಿಸಿದೆ. ವದಂತಿಗಳು ಹಾಗೂ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದ ಅದು ಹೇಳಿದೆ.
ಇದನ್ನೂ ಓದಿ: RTPCR Report : ವಿದೇಶಗಳಿಂದ ಬೆಂಗಳೂರಿಗೆ ಬರುವವರಿಗೆ ಬೇಡ ಆರ್ಟಿಪಿಸಿಅರ್ ರಿಪೋರ್ಟ್..!
ಫೇಸ್ಬುಕ್ ವ್ಯವಹಾರಗಳ ಮೇಲೆ ಅಮೆರಿಕ ಸರ್ಕಾರದಿಂದ ಪರಿಶೀಲನೆಗಳು ಹೆಚ್ಚುತ್ತಿರುವ ಸಮಯದಲ್ಲಿ ಇಂಥದ್ದೊಂದು ವರದಿ ಪ್ರಕಟಗೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಬ್ರ್ಯಾಂಡ್ ಹೆಸರು ಬದಲಾವಣೆ ಮಾಡುವುದರಿಂದ ಫೇಸ್ಬುಕ್ ಒಡೆತನದ ಇನ್ಸ್ಟಾಗ್ರಾಂ, ವಾಟ್ಸ್ಆ್ಯಪ್ ಮತ್ತು ಇತರ ಆ್ಯಪ್ಗಳಲ್ಲಿಯೂ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ವರದಿ ಉಲ್ಲೇಖಿಸಿದೆ.
Discussion about this post