ಇಸ್ಲಾಮಾಬಾದ್: ಪಾಕಿಸ್ತಾನದ ಬೇಹುಗಾರಿಕಾ ದಳ ಐಎಸ್ಐನ ನಿಕಟಪೂರ್ವ ಮುಖ್ಯಸ್ಥ ಮತ್ತು ಹಾಲಿ ಪೆಶಾವರದ 11ನೇ ಕಾರ್ಪ್ಸ್ ಕಮಾಂಡರ್ ಆಗಿರುವ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಪಾಕ್ ಭೂಸೇನೆಯ ಜನರಲ್ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಸೇನೆಯ ಅತ್ಯುಚ್ಚ ಹುದ್ದೆಗೆ ಆಯ್ಕೆಯಾಗಬೇಕಾದರೆ ಯಾವುದಾದರೊಂದು ಕಾರ್ಪ್ಸ್ ಕಮಾಂಡರ್ ಆಗಿ ಕನಿಷ್ಠ ಒಂದು ವರ್ಷ ಸೇವೆ ಸಲ್ಲಿಸಿರಬೇಕು. ಹೀಗಾಗಿಯೇ ಹಮೀದ್ ಕಾಬೂಲ್ಗೆ ಭೇಟಿ ನೀಡಿದ್ದ ಬಂದ ಒಂದು ತಿಂಗಳಲ್ಲೇ ಅವರನ್ನು ಪಾಕ್ನ ಸೇನಾ ನೆಲೆಗಳಲ್ಲಿ ಪ್ರಮುಖ ಮತ್ತು ಪ್ರಭಾವಿ ಎನಿಸಿದ ಪೆಶಾವರಕ್ಕೆ ವರ್ಗಾಯಿಸಲಾಗಿದೆ ಎನ್ನಲಾಗಿದೆ.
ಅಫ್ಘಾನಿಸ್ತಾನದ ತಾಲಿಬಾನ್ ಮಧ್ಯಂತರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಮೀದ್ರನ್ನು ಸೇನಾ ಮುಖ್ಯಸ್ಥರನ್ನಾಗಿ ನೇಮಿಸುವುದರಿಂದ ಜಾಗತಿಕ ಗಮನ ಸೆಳೆದಿರುವ ಅಫ್ಘನ್ ವಿದ್ಯಮಾನದ ಹಿನ್ನೆಲೆಯಲ್ಲಿ ಒಳ್ಳೆಯದು ಎಂಬುದು ಪಾಕ್ ಆಡಳಿತಾರ ಅಭಿಪ್ರಾಯವಾಗಿದೆ ಎಂಬ ಮಾತೂ ಕೇಳಿಬರುತ್ತಿದೆ. ಆದರೆ, ಸೇನೆಯ ಹಾಲಿ ಮುಖಸ್ಥ ಜನರಲ್ ಖಮರ್ ಜಾವೆದ್ ಬಜ್ವಾ ಅವರ ಆರು ವರ್ಷಗಳ ಸೇವಾ ಅವಧಿಯು ಮುಂದಿನ ವರ್ಷ ನವೆಂಬರ್ಗೆ ಮುಕ್ತಾಯವಾಗಲಿದ್ದು; ಅವರು ಇನ್ನೆರಡು ವರ್ಷ ಇದೇ ಹುದ್ದೆಯಲ್ಲಿ ಮುಂದುವರಿಯಲು ಬಯಸಿದ್ದಾರೆಂದು ಮೂಲಗಳು ತಿಳಿಸಿವೆ.
ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ತಾಲಿಬಾನ್ಗಳಲ್ಲಿ ಅಧಿಕಾರಕ್ಕಾಗಿ ಕಚ್ಚಾಟ ಶುರುವಾದಾಗ ಹಕ್ಕಾನಿ ಜಾಲವನ್ನು ಬೆಂಬಲಿಸಿ ಸರ್ಕಾರದಲ್ಲಿ ಸಿರಾಜುದ್ದೀನ್ ಹಕ್ಕಾನಿಯಂತಹ ಉಗ್ರ ನಾಯಕರಿಗೆ ಸ್ಥಾನ ಕಲ್ಪಿಸುವಲ್ಲಿ ಹಮೀದ್ ಶ್ರಮಿಸಿದರು. ಹಮೀದ್ ಐಎಸ್ಐ ಮಹಾನಿರ್ದೇಶಕರಾಗುವುದಕ್ಕೂ ಮೊದಲು ರಾವಲ್ಪಿಂಡಿಯ ಜಿಎಚ್ಕ್ಯೂ ಸ್ಟಾಫ್ ಮುಖ್ಯಸ್ಥರಾಗಿದ್ದರು. ಅದಕ್ಕೂ ಹಿಂದೆ 2015ರಿಂದ 2017ರವೆಗೆ ಸಿಂಧ್ ಪ್ರಾಂತ್ಯದ ಪನೊ ಅಕಿಲ್ ಇನ್ಫೆಂಟ್ರಿ ವಿಭಾಗವನ್ನು ಮುನ್ನಡೆಸಿದ್ದರು. ಹಮೀದ್ ವರ್ಗಾವಣೆಯಿಂದ ತೆರವಾದ ಐಎಸ್ಐ ಮಹಾನಿರ್ದೇಶಕರ ಸ್ಥಾನಕ್ಕೆ ಸ್ಥಾನಕ್ಕೆ ಕರಾಚಿ ಕಾರ್ಪ್ಸ್ ಕಮಾಂಡರ್ ಆಗಿದ್ದ ಲೆಫ್ಟಿನೆಂಟ್ ಜನರಲ್ ನದೀಮ್ ಅಂಜುಮ್ ಅವರನ್ನು ಎರಡು ದಿನಗಳ ಹಿಂದೆ ನೇಮಿಸಲಾಗಿದೆ.
ಪಾಕ್ನಲ್ಲಿ ಸೇನೆಯೇ ಪ್ರಭಾವಿ: ಪಾಕಿಸ್ತಾನದಲ್ಲಿ ಚುನಾಯಿತ ಸರ್ಕಾರಕ್ಕಿಂತ ಸೇನೆಯೇ ಹೆಚ್ಚು ಪ್ರಭಾವಿ. ಸೇನೆಯ ಬೆಂಬಲವಿರುವ ಪಕ್ಷವೇ ಅಧಿಕಾರಕ್ಕೆ ಬರುತ್ತದೆ. ಹೀಗಾಗಿ ಪಾಕ್ನ ಬೇಹುಗಾರಿಕಾ ದಳ ಐಎಸ್ಐ ಮತ್ತು ಭೂಸೇನೆಯ ಮುಖ್ಯಸ್ಥನ ಹುದ್ದೆ ಅತ್ಯಂತ ಅಯಕಟ್ಟಿನ ಸ್ಥಾನವಾಗಿದೆ. ಸೇನಾ ಮುಖ್ಯುಸ್ಥರನ್ನು ಎದುರುಹಾಕಿಕೊಂಡರೆ ಅಧಿಕಾರ ಚ್ಯುತಿಯಾಗುವ ನಿರ್ದೇಶನ ಪಾಕ್ನಲ್ಲಿದೆ. 1953-53, 1958-71, 1978-88, 1999-2008ರ ಅವಧಿಯಲ್ಲಿ ಸೇನಾ ಮುಖ್ಯಸ್ಥರು ದೇಶವನ್ನು ಮುನ್ನಡೆಸಿದ್ದರು.
Faiz Hameed eye on Army General Post
ಇದನ್ನು ಓದಿ: ಕಮಲಾ ಹ್ಯಾರಿಸ್ ನಿಂದ ಪಾಕಿಸ್ತಾನಕ್ಕೊಂದು ಕಿವಿಮಾತು
ಇದನ್ನು ಓದಿ: ಪಾಕ್ ಹನಿಟ್ರ್ಯಾಪ್ ಮೂಲ ದೇಶದ್ರೋಹಕ್ಕೆ ಪ್ರಚೋದನೆ
Discussion about this post