ತೈಪೆಯಿ: ಭಾರತ, ಯುರೋಪ್ ಮತ್ತು ಲ್ಯಾಟಿನ್ ಅಮೆರಿಕದಲ್ಲಿ ವಿದ್ಯುತ್ ಚಾಲಿತ ವಾಹನ (ಎಲೆಕ್ಟ್ರಿಕ್ ವೆಹಿಕಲ್) ತಯಾರಿಕೆಗೆ ತೈವಾನ್ನ ಫಾಕ್ಸ್ಕಾನ್ ಕಂಪನಿ ಮುಂದಾಗಿದೆ.
ಜಾಗತಿಕ ಮಟ್ಟದಲ್ಲಿ ವಿದ್ಯುತ್ ಚಾಲಿತ ವಾಹನಗಳ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ಬಗ್ಗೆ ಕಂಪನಿ ಆಸಕ್ತಿ ಹೊಂದಿದೆ. ಈ ದಿಸೆಯಲ್ಲಿ ಅಮೆರಿಕದ ಸ್ಟಾರ್ಟಪ್ ಫಿಸ್ಕರ್ ಮತ್ತು ಥಾಯ್ಲೆಂಡ್ನ ಪಿಟಿಟಿ ಜತೆ ಈಗಾಗಲೇ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಫಾಕ್ಸ್ಕಾನ್ ಅಧ್ಯಕ್ಷ ಲಿಯು ಯಂಗ್ ವೇ ತಿಳಿಸಿದ್ದಾರೆ.
ವಿದ್ಯುತ್ ಚಾಲಿತ ವಾಹನಗಳ ತಯಾರಿ ಯೋಜನೆ ವಿಚಾರವಾಗಿ ಲಿಯು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ ಆದರೆ, ಮಾಹಿತಿ ಬಹಿರಂಗಪಡಿಸುವಿಕೆ ವಿಚಾರದಲ್ಲಿ ಇರುವ ಕೆಲವು ನಿರ್ಬಂಧಗಳಿಂದಾಗಿ ಭಾರತ, ಯುರೋಪ್ ಹಾಗೂ ಲ್ಯಾಟಿನ್ ಅಮೆರಿಕದಲ್ಲಿ ವಾಹನ ತಯಾರಿಕೆ ಯೋಜನೆಗಳ ಬಗ್ಗೆ ಹೆಚ್ಚು ಮಾಹಿತಿ ನೀಡಲಾಗದು ಎಂದು ಅವರು ಹೇಳಿದ್ದಾರೆ.
ಓದಿ: Old woman who gave birth to a baby: 70ರ ಹರೆಯದಲ್ಲಿ ಮೊದಲ ಮಗುವಿಗೆ ಜನ್ಮನೀಡಿದ ವೃದ್ಧೆ
ವಿದ್ಯುತ್ ಚಾಲಿತ ವಾಹನಗಳ ತಯಾರಿ ಕೆಲಸ ಮೊದಲು ಯುರೋಪ್ನಲ್ಲಿ ಆರಂಭವಾಗಲಿದೆ. ಆ ಬಳಿಕ ಭಾರತದಲ್ಲಿ ಹಾಗೂ ಲ್ಯಾಟಿನ್ ಅಮೆರಿಕದಲ್ಲಿ ಯೋಜನೆ ಆರಂಭಿಸಲಿದ್ದೇವೆ ಎಂದಷ್ಟೇ ಅವರು ಹೇಳಿದ್ದಾರೆ.
ವಿದ್ಯುತ್ ಚಾಲಿತ ವಾಹನಗಳ ಸಂಖ್ಯೆಯನ್ನು 2030ರ ವೇಳೆಗೆ ದೇಶದಲ್ಲಿ ಗಣನೀಯವಾಗಿ ಹೆಚ್ಚಿಸುವ ಗುರಿ ಹೊಂದಿರುವುದಾಗಿ ಇತ್ತೀಚೆಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದರು. ವಿದ್ಯುತ್ ಚಾಲಿತ ವಾಹನ ತಯಾರಿಕಾ ಕಂಪನಿಗಳಿಗೆ ಸರ್ಕಾರ ಎಲ್ಲ ರೀತಿಯ ನೆರವು, ಪ್ರೋತ್ಸಾಹ ನೀಡಲಿದೆ ಎಂದೂ ಹೇಳಿದ್ದರು.
Discussion about this post