ಚಿಕ್ಕಮಗಳೂರು: ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರು ಉತ್ತಮವಾದ ಸ್ಪರ್ಧೆ ನೀಡಿದ್ದಾರೆ ಎನ್ನುವುದನ್ನು ಒಪ್ಪಿಕೊಂಡ ವಿಜೇತ ಅಭ್ಯರ್ಥಿ ಬಿಜೆಪಿಯ ಎಂ.ಕೆ.ಪ್ರಾಣೇಶ್ ಆರೋಗ್ಯಕರವಾಗಿ ಈ ಚುನಾವಣೆ ಮಾಡಿದ್ದೇವೆ ಎಂದರು.
ಮತ ಎಣಿಕೆ ಕೇಂದ್ರದ ಬಳಿ ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಜನ ವಿಶ್ವಾಸ ಇಟ್ಟು ನನ್ನನ್ನು ಗೆಲ್ಲಿಸಿದ್ದಾರೆ, ಅಂತರ ಎಷ್ಟು ಎನ್ನುವುದು ಮುಖ್ಯಲ್ಲ. ಪ್ರೀತಿ ವಿಶ್ವಾಸದ ರಾಜಕಾರಣಕ್ಕೆ ಗೆಲುವು ಸಿಕ್ಕಿದೆ ಎಂದರು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ನಮ್ಮೆಲ್ಲಾ ಶಾಸಕರು, ಮುಖಂಡರು, ಚಿನ್ನದಂತಹ ಕಾರ್ಯಕರ್ತರು ಎಲ್ಲರೂ ಒಗ್ಗಟ್ಟಿನ ಪ್ರಯತ್ನ ಮಾಡಿ ನನ್ನನ್ನು ಗೆಲ್ಲಿಸಿದ್ದಾರೆ. ಇದಕ್ಕಾಗಿ ಎಲ್ಲಾ ಗ್ರಾ.ಪಂ.ಸದಸ್ಯರು ಇನ್ನಿತರೆ ಸ್ಥಳೀಯ ಸಂಸ್ಥೆ ಸದಸ್ಯರನ್ನು ಅಭಿನಂದಿಸುತ್ತೇವೆ ಎಂದರು.
ಜಿಲ್ಲೆಯಲ್ಲಿ ಬಿಜೆಪಿ ಮತಗಳಿವೆ ಎಂದು ನಾವು ಭಾವಿಸಿದ್ದೆವು. ೧೪೩೧ ಈಗ ಅವುಗಳಲ್ಲಿ ಜೊಳ್ಳುಗಳೆಷ್ಟು, ಗಟ್ಟಿ ಮತಗಳೆಷ್ಟು ಎನ್ನುವುದು ನನಗೆ ಅರಿವಾಗಿದೆ. ಕೆಲವರು ಯಾವುದೋ ಆಮಿಷಕ್ಕೆ ಬಲಿಯಾಗಿ ವಿರೋಧವಾಗಿ ಮತಚಲಾಯಿಸಿರಬಹುದು ಅವರೇ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದರು.
ಗ್ರಾಮ ಪಂಚಾಯ್ತಿ ಸದಸ್ಯರಿಗೆ ಗೌರವ ಧನ ಹೆಚ್ಚಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದೇನೆ. ಅದನ್ನು ಖಂಡಿತ ಮಾಡುತ್ತೇನೆ ಎಂದರು.
Good competition

























Discussion about this post