ಮುಂಬೈ: ಬಾಲಿವುಡ್ ನಟಿ ತಮನ್ನಾ ಭಾಟಿಯಾ ಇಂದು (ಮಂಗಳವಾರ) 32ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಚಿತ್ರರಂಗದ ಅನೇಕ ಗಣ್ಯರು, ಬಾಲಿವುಡ್ ನಟ, ನಟಿಯರು ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ಕಳೆದ 16 ವರ್ಷಗಳಿಂದ ಚಿತ್ರರಂಗದಲ್ಲಿರುವ ಅವರು ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜನ್ಮದಿನದ ಅಂಗವಾಗಿ ಸೋಮವಾರ ರಾತ್ರಿ ಕುಟುಂಬದವರು ಹಾಗೂ ಸ್ನೇಹಿತರಿಗಾಗಿ ವಿಶೇಷ ಪಾರ್ಟಿ ಆಯೋಜಿಸಿದ್ದರು. ಬರ್ತ್ ಡೇ ಪಾರ್ಟಿಯ ವಿಭಿನ್ನ ಫೋಟೊಗಳನ್ನೂ ಅವರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಮಗಳು ವಮಿಕಾ ಫೋಟೊ ಪ್ರಕಟಿಸದ ಮಾಧ್ಯಮಗಳಿಗೆ ಅನುಷ್ಕಾ ಶರ್ಮಾ ಧನ್ಯವಾದ
ಗೆಳೆಯ, ಗೆಳತಿಯರೂ ಪಾರ್ಟಿಯ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಇವುಗಳನ್ನೂ ತಮನ್ನಾ ಶೇರ್ ಮಾಡಿದ್ದಾರೆ.
ತಮನ್ನಾ ಶೇರ್ ಮಾಡಿರುವ ಚಿತ್ರಗಳು ಇಲ್ಲಿವೆ ನೋಡಿ…
Discussion about this post