ನವದೆಹಲಿ: ಬಾಲಿವುಡ್ ನಟಿ ದಿಶಾ ಪಟಾನಿ ತಂಗಿ ಲೆಫ್ಟಿನೆಂಟ್ ಆಗಿದ್ದಾರಾ? ಈ ಅನುಮಾನ ಬರಲು ಕಾರಣ. ದಿಶಾ ಪೋಸ್ಟ್ ಮಾಡಿರುವ ಫೋಟೋ ಭಾರೀ ವೈರಲ್ ಆಗಿದೆ. ಆಕೆಯ ಪ್ರಕಾರ ಅದು ಅದು ಮತ್ಯಾರದ್ದೂ ಅಲ್ಲ, ಆಕೆಯ ಹಿರಿಯ ಸಹೋದರಿ ಖುಷ್ಬು ಅವರದ್ದು. ಖುಷ್ಬು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿದ್ದಾರಂತೆ. ಇಬ್ಬರೂ ನಗುತ್ತಿರುವ ಬಾಲ್ಯದ ಅಮೂಲ್ಯವಾದ ಭಾವಚಿತ್ರವನ್ನು ತನ್ನ ಇನ್ಸ್ಟ್ರಾಗ್ರಾಮ್ನಲ್ಲಿ ಪೋಸ್ಟ್ ಮಾಡಿರುವ ದಿಶಾ, ಹ್ಯಾಪಿ ಬರ್ತಡೇ ಡುಬ್ಬು ಅಂತ ಹೇಳುವ ಮೂಲಕ ಖುಷ್ಬು ತನ್ನ ತಂಗಿ ಅನೋದನ್ನು ಸಾರಿದ್ದಾರೆ. ಡುಬ್ಬು ಅನ್ನೋದು ಖುಷ್ಬು ಬಾಲ್ಯದಲ್ಲಿ ಇಟ್ಟ ಅಡ್ಡ ಹೆಸರು.
ಖುಷ್ಬು ಪೋಸ್ಟ್ ಮಾಡಿದ್ದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದ ಪಾರ್ಟಿ ಚಿತ್ರಗಳನ್ನು ದಿಶಾ ಶೇರ್ ಮಾಡಿದ್ದಾರೆ. ಪಾರ್ಟಿಯಲ್ಲಿ ಖುಷ್ಬು ಟೈಟ್ ಡ್ರಸ್ನಲ್ಲಿ ಡ್ಯಾನ್ಸ್ ಮಾಡುತ್ತಿರುವ ವೀಡಿಯೋವನ್ನು ತನ್ನ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿ, ಖುಷ್ಬು ನಿನಗೆ ಹುಟ್ಟುಹಬ್ಬದ ಶುಭಾಶಯಗಳು, ನನಗೂ ನಿನ್ನ ರೀತಿ ಡ್ಯಾನ್ಸ್ ಮಾಡಬೇಕು ಅನಿಸುತ್ತಿದೆ ಎಂದು ಬರೆದುಕೊಂಡಿದ್ದಾಳೆ.
ಬಾಲಿವುಡ್ ನಟಿ ದಿಶಾ 2016ರಲ್ಲಿ ತೆರೆಕಂಡ ಎಂ.ಎಸ್. ಧೋನಿ ಅನ್ ಟೋಲ್ಡ್ ಸ್ಟೋರಿ ಸಿನಿಮಾದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದರು. ಪ್ರಸ್ತುತ ಏಕ್ ವಿಲನ್ ರಿಟರ್ನ್ಸ್ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ.
ಇದನ್ನೂ ಓದಿ: ಮಗಳು ವಮಿಕಾ, ಮುಂದಿನ ವೃತ್ತಿಜೀವನದ ಬಗ್ಗೆ ಏನಂತಾರೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ?
Discussion about this post