Health Tips: ತುಪ್ಪದ ಬಳಕೆ ಬಗ್ಗೆ ಹಲವರಲ್ಲಿ ಹಲವು ತರಹದ ಪ್ರಶ್ನೆಗಳಿದೆ. ತುಪ್ಪ ತೂಕ ಹೆಚ್ಚಿಸುತ್ತಾ ಅಥವಾ ತೂಕ ಇಳಿಯುತ್ತಾ..? ಅನ್ನೋ ಪ್ರಶ್ನೆ ತುಂಬಾ ಜನ ಕೇಳ್ತಾರೆ. ಅಲ್ಲದೇ, ತುಪ್ಪದ ಸೇವನೆ ಮಾಡುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಅಂತಾ ಕೆಲವರು ಹೇಳುತ್ತಾರೆ. ಹಾಗಾದ್ರೆ ತುಪ್ಪ ತಿಂದ್ರೆ ದಪ್ಪ ಆಗ್ತಾರಾ ಇಲ್ಲಾ ಸಧೃಡವಾಗ್ತಾರಾ ಅನ್ನೋದನ್ನ ತಿಳಿಯೋಣ ಬನ್ನಿ.
Recipe: ಚಪಾತಿಗೆ ಸಖತ್ ಕಾಂಬಿನೇಷನ್ ಈ ಕೊಂಕಣಿ ಶೈಲಿಯ ಬದ್ನೇಕಾಯಿ ಸುಕ್ಕೆ
- ತುಪ್ಪ ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ ಎಂಬುದು ಸುಳ್ಳು ಎನ್ನುತ್ತದೆ ಆಯುರ್ವೇದ. ಆಯುರ್ವೇದದ ಪ್ರಕಾರ ತುಪ್ಪ ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳಿದೆ. ಕಟ್ಟುಮಸ್ತಾದ ದೇಹ ಹೊಂದಲು, ಸುಂದರ ತ್ವಚೆಗಾಗಿ, ಕೂದಲ ಆರೋಗ್ಯಕ್ಕಾಗಿ ತುಪ್ಪದ ಉಪಯೋಗ ಲಾಭಕಾರಿಯಾಗಿದೆ. ಅದರಲ್ಲೂ ಎಮ್ಮೆಯ ಹಾಲಿನಿಂದ ಮಾಡಿದ ತುಪ್ಪಕ್ಕಿಂತ, ದೇಶಿಯ ತಳಿಯ ಆಕಳಿನ ಹಾಲಿನಿಂದ ಮಾಡಿದ ತುಪ್ಪ ಸೇವಿಸಿದ್ದಲ್ಲಿ ಹಲವು ರೋಗಗಳಿಂದ ಮುಕ್ತಿ ಪಡೆಯಬಹುದು.
- ಆಯುರ್ವೇದದ ಪ್ರಕಾರ ತುಪ್ಪ ಹಳೆಯದಾದಷ್ಟು ಅದರಲ್ಲಿ ಔಷಧಿಯ ಅಂಶ ಹೆಚ್ಚಾಗುತ್ತದೆ. ಫ್ರೆಶ್ ಆಗಿರುವ ತುಪ್ಪಕ್ಕಿಂತ, ವರ್ಷಗಳ ಹಿಂದೆ ಮಾಡಿದ ತುಪ್ಪ ಉಪಯೋಗಿಸಿದರೆ ತುಂಬ ಲಾಭಕಾರಿ. ಆದರೆ ತುಪ್ಪವನ್ನು ಹೇಗೆ ಸಂಸ್ಕರಿಸಿ ಇಡುತ್ತೇವೆಂಬುದರ ಮೇಲೆ ತುಪ್ಪ ಹಾಳಾಗದಿರುವುದು ಅವಲಂಬಿತವಾಗಿರುತ್ತದೆ. ಪ್ಲಾಸ್ಟಿಕ್ ಡಬ್ಬದಲ್ಲಿ ಇಡುವ ಬದಲು ಗಾಜಿನ ಡಬ್ಬದಲ್ಲಿ, ಅಥವಾ ಗಾಳಿಯಾಡದ ಡಬ್ಬದಲ್ಲಿ ತುಂಬಿಟ್ಟರೆ ಹಲವು ದಿನಗಳವರೆಗೆ ತುಪ್ಪ ಹಾಳಾಗುವುದಿಲ್ಲ.
ಕಿವಿ ಫ್ರೂಟ್ ಎಂಥ ಆರೋಗ್ಯಕರ ಹಣ್ಣು ಗೊತ್ತಾ..? ಆ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ
- ಹಲವು ಆಯುರ್ವೇದ ಔಷಧಿಗಳನ್ನು ಸಹ ತುಪ್ಪದಲ್ಲಿ ಹುರಿಯಲಾಗುತ್ತದೆ. ಆದರೆ ತುಪ್ಪವನ್ನು ಕರಿಯಲು ಅಥವಾ ಹುರಿಯಲು ಬಳಸುವುದಕ್ಕಿಂತ ಹಾಗೇ ಸೇವಿಸುವುದು ಆರೋಗ್ಯಕ್ಕೆ ಉತ್ತಮ.
- ಒಂದೆರಡು ಹನಿ ತುಪ್ಪವನ್ನ ಮೂಗಿನಲ್ಲಿ ಹಾಕುವುದರಿಂದ ಶೀತ, ಕೆಮ್ಮು, ನಿಶ್ಯಕ್ತಿ, ಬಳಲುವಿಕೆಯಿಂದ ಮುಕ್ತಿ ಸಿಗುತ್ತದೆ.
- ಎಣ್ಣೆ ಉಪಯೋಗಕ್ಕಿಂತ, ತುಪ್ಪದ ಉಪಯೋಗ ಒಳ್ಳೆಯದು. ಅಡುಗೆ ಮಾಡುವಾಗ ತುಪ್ಪ ಬಳಸಿದ್ರೆ, ಆರೋಗ್ಯ ಉತ್ತಮವಾಗಿರುತ್ತದೆ. ಅಂಥ ಆಹಾರ ಸೇವನೆಯಿಂದ ನಮ್ಮ ದೇಹದಲ್ಲಿ ಶಕ್ತಿಯೂ ಹೆಚ್ಚುತ್ತದೆ.
ತರಕಾರಿ ಸುಕ್ಕೆ ರೆಸಿಪಿ: Mixed Vegetable Sukke recipe
- ನೆನಪಿನ ಶಕ್ತಿ, ಚುರುಕುತನವಿಲ್ಲದವರು ಹಾಲಿನೊಂದಿಗೆ ಸ್ವಲ್ಪ ತುಪ್ಪ ಬೆರೆಸಿ ಕುಡಿಯಬಹುದು. ಬಹುತೇಕ ವಿದ್ಯಾರ್ಥಿಗಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುವುದರಿಂದ ಅಂಥವರು ಇದನ್ನ ಬಳಸಬಹುದು.
- ನಿದ್ರಾಹೀನತೆಯಿಂದ ಬಳಲುವವರು ಹಾಲಿನಲ್ಲಿ ತುಪ್ಪ ಬೆರೆಸಿ ಕುಡಿಯುವುದರಿಂದ ಒಳ್ಳೆ ನಿದ್ದೆ ಬರುತ್ತದೆ.
- ಇನ್ನು ತುಪ್ಪ ಸೌಂದರ್ಯವರ್ಧಕವಾಗಿಯೂ ಕಾರ್ಯನಿರ್ವಹಿಸುತ್ತದೆ.ತುಪ್ಪ ಮಾಯಿಶ್ಚರಾಯ್ಸರ್ ರೀತಿ ಕೆಲಸ ಮಾಡುವುದರಿಂದ, ಒಣತ್ವಚೆಯುಳ್ಳವರು ಕೆಲ ಹನಿ ತುಪ್ಪವನ್ನು ತ್ವಚೆಗೆ ಹಚ್ಚಿಕೊಳ್ಳಬಹುದು.
ಹೆಸರು ಬೇಳೆ ಸಲಾಡ್ ರೆಸಿಪಿ ಮತ್ತು ಅದರ ಸೇವನೆಯ ಉಪಯೋಗಗಳು: Video
- ತುಪ್ಪ ತಿಂದ ಮೇಲೆ ಅಥವಾ ತುಪ್ಪದಿಂದ ಮಾಡಿದ ಯಾವುದೇ ಪದಾರ್ಥ ಸೇವಿಸಿದ ಮೇಲೆ ತಣ್ಣಿರು ಕುಡಿಯುವಂತಿಲ್ಲ. ಇದರಿಂದ ಕೆಮ್ಮು , ಎದೆ ನೋವು ಇತ್ಯಾದಿ ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ತುಪ್ಪ ಸೇವನೆಯ ನಂತರ ಬಿಸಿನೀರಿ ಸೇವನೆ ಅತ್ಯಗತ್ಯ.
- ಚಳಿಗಾಲದಲ್ಲಿ ತುಟಿ ಒಡೆಯುವುದು ಸಾಮಾನ್ಯ, ಈ ಸಮಸ್ಯೆಗೆ ತುಪ್ಪ ರಾಮಬಾಣವಾಗಿದೆ. ಹನಿ ತುಪ್ಪವನ್ನ ರಾತ್ರಿ ತುಟಿಗೆ ಹಚ್ಚುವುದರಿಂದ ತುಟಿಯ ಅಂದ ಕಾಪಾಡಿಕೊಳ್ಳಬಹುದು.
Special Story: ಬಿಲ್‌ಗೇಟ್ಸ್ ಮಕ್ಕಳಿಗೆ ತಮ್ಮ ಆಸ್ತಿಯಲ್ಲಿ ಎಷ್ಟು ಭಾಗ ಕೊಡಲಿದ್ದಾರೆ ಗೊತ್ತಾ..?
- ತುಪ್ಪ ಮತ್ತು ಮೊಸರು ಬೆರೆಸಿ ತಿನ್ನುವಂತಿಲ್ಲ. ಹೀಗೆ ಮಾಡಿದಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು. ಉದಾಹರಣೆಗೆ ರೊಟ್ಟಿ, ಅನ್ನ ಅಥವಾ ಚಪಾತಿಯೊಂದಿಗೆ ತುಪ್ಪ ಬೆರೆಸಿದ್ದಲ್ಲಿ ಮೊಸರು ಸೇವಿಸಬಾರದು. ಮೊಸರಿನಿಂದ ಮಾಡಿದ ಪದಾರ್ಥಕ್ಕೆ ತುಪ್ಪದ ಒಗ್ಗರಣೆ ಕೊಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.
- ಹೆಚ್ಚಿಗೆ ಕುಡಿದರೆ ಅಮೃತವೂ ವಿಷವೇ ಎಂಬಂತೆ, ತುಪ್ಪದ ಸೇವನೆ ಅತಿಯಾದರೆ ದೇಹಕ್ಕೆ ಹಾನಿಯುಂಟಾಗುತ್ತದೆ. ಅದರಲ್ಲೂ ದೇಹದಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಾಗುತ್ತಿದೆ ಎಂದಲ್ಲಿ, ತುಪ್ಪ ಎಣ್ಣೆಯ ಸೇವನೆಯನ್ನು ಕಡಿಮೆ ಮಾಡಬೇಕಂತೆ. ಹಾಗಾಗಿ ತುಪ್ಪ ತಿನ್ನುವ ಮುನ್ನ ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗಿದೆಯಾ ಇಲ್ಲವಾ ಅಂತಾ ಒಮ್ಮೆ ಪರೀಕ್ಷಿಸಿಕೊಳ್ಳಿ.
Discussion about this post