Special Story: ಪ್ರಪಂಚದ ಟಾಪ್ ಟೆನ್ ಶ್ರೀಮಂತರಲ್ಲಿ ಬಿಲ್‌ಗೇಟ್ಸ್ ಕೂಡ ಒಬ್ಬರು.. ಇವರ ಬಳಿ 90 ಬಿಲಿಯನ್ ಯುಎಸ್ ಡಾಲರ್‌ಗಳಿದೆ. ಅಂದ್ರೆ 5ಲಕ್ಷ, 800 ಸಾವಿರ ಕೋಟಿ ರೂಪಾಯಿಯ ಸರದಾರ ಈ ಬಿಲ್‌ಗೇಟ್ಸ್. ಅವರದ್ದು ಯಾವುದಾದರೂ ದೇಶವಿದ್ದಿದ್ದರೆ, ಆ ದೇಶ ಪ್ರಪಂಚದ 37ನೇ ಅತೀ ಶ್ರೀಮಂತ ದೇಶವಾಗಿರುತ್ತಿತ್ತು. ಈಗ ನೀವೇ ಯೋಚಿಸಿ, ಬಿಲ್‌ಗೇಟ್ಸ್ ಯಾವ ರೇಂಜಿಗೆ ಶ್ರೀಮಂತರೆಂದು. ಹಾಗಾದ್ರೆ ಬಿಲ್‌ಗೇಟ್ಸ್ ಶ್ರೀಮಂತನಾಗಿದ್ದು ಹೇಗೆ..? ಇವರ ಜೀವನದ ರೋಚಕ ಕಥೆಯನ್ನ ಇವತ್ತು ನಾವು ನಿಮಗೆ ಹೇಳಲಿದ್ದೇವೆ.
28 ಅಕ್ಟೋಬರ್, 1955ರಲ್ಲಿ ಅಮೇರಿಕದ ವಾಶಿಂಗ್‌ಟನ್ನ ಸೀಯಾಟಲ್ ಎಂಬಲ್ಲಿ ಬಿಲ್‌ಗೇಟ್ಸ್ ಜನನವಾಯಿತು. ವಿಲಿಯಂ ಹೆನ್ರಿಗೇಟ್ಸ್ ಅನ್ನೋದು ಬಿಲ್‌ಗೇಟ್ಸ್ ಅವರ ನಿಜನಾಮ. ಬಿಲ್‌ಗೇಟ್ಸ್ ಹೈಸ್ಕೂಲಿಗೆ ಹೋಗುವ ಸಂದರ್ಭದಲ್ಲಿ ಕಂಪ್ಯೂಟರ್ ಕ್ಲಾಸಿಗೆ ಹೋಗಲು ಶುರು ಮಾಡಿದರು. ಬಿಲ್‌ಗೇಟ್ಸ್‌ಗೆ ಕಂಪ್ಯೂಟರ್ ಬಗ್ಗೆ ಹೆಚ್ಚಿನ ಆಸಕ್ತಿ ಇತ್ತು. ಗಣಕ ಯಂತ್ರ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬ ಬಗ್ಗೆ ಬಿಲ್ಗೇಟ್ಸ್ ಅಭ್ಯಸಿಸುತ್ತಿದ್ದರು.
ಈ ವೇಳೆ ಇವರಿಗೆ ಪರಿಚಯವಾಗಿದ್ದೇ, ಪೋಲ್ ಏಲನ್. ಬಿಲ್‌ಗೇಟ್ಸ್‌ಗಿಂತ 2 ವರ್ಷ ದೊಡ್ಡವರಾಗಿದ್ದ ಪೋಲ್ ಏಲನ್, ಬಿಲ್‌ಗೇಟ್ಸ್‌ಗೆ ಕಂಪ್ಯೂಟರ್ ಕಲಿಯಲು ಸಹಕರಿಸಿದರು. ಇವರಿಬ್ಬರು ಸೇರಿ ಹಲವು ಪ್ರಯೋಗಗಳನ್ನ ಮಾಡಿ, ಮಿಷನ್‌ಗಳನ್ನ ಮಾಡುತ್ತಿದ್ದರು. ಬಿಲ್‌ಗೇಟ್ಸ್‌ಗೆ 15 ವರ್ಷ ತುಂಬುವುದರೊಳಗಾಗಿ ಆತ ಟೆಕ್ನಾಲಜಿ ಜಗತ್ತಿಗೆ ಕಾಲಿರಿಸಿದ್ದ. ತಂತ್ರಜ್ಞಾನದಲ್ಲಿ ಏನಾದರೂ ಸಾಧಿಸಬೇಕೆಂದು ಪಣತೊಟ್ಟಿದ್ದ.
Special Story: ಈ ದೇಶದಲ್ಲಿ ಬೆಕ್ಕುಗಳಿಗೂ ಕೊಡುತ್ತಾರೆ ಸರ್ಕಾರಿ ನೌಕರಿ
ತಂತ್ರಜ್ಞಾನದ ಬಗ್ಗೆ ಹೆಚ್ಚಿನ ವಿಷಯಗಳನ್ನ ತಿಳಿದಿದ್ದ ಬಿಲ್‌ಗೇಟ್ಸ್, ಪೋಲ್ ಜೊತೆ ಸೇರಿ ಸ್ವಂತ ಕಂಪನಿ ತೆರೆಯಲು ನಿರ್ಧರಿಸಿದರು. ಆದ್ರೆ ಇದಕ್ಕೆ ಒಪ್ಪದ ಬಿಲ್ ತಂದೆ ತಾಯಿ, ಮೊದಲು ಹೈಸ್ಕೂಲ್ ಶಿಕ್ಷಣ ಮುಗಿಸಿ, ಕಾಲೇಜು ಸೇರು ಎಂದಿದ್ದರು. ಬಿಲ್‌ಗೇಟ್ಸ್ ತಂದೆ ವಕೀಲರಾಗಿದ್ದರಿಂದ, ಮಗನೂ ಕೂಡ ಎಲ್‌ಎಲ್‌ಬಿ ಮಾಡಲಿ ಎಂಬುದು ಬಿಲ್ ತಂದೆಯ ಆಸೆಯಾಗಿತ್ತು.
ಅಂತೂ ಇಂತೂ ಹೈಸ್ಕೂಲು ಶಿಕ್ಷಣ ಮುಗಿಸಿದ ಬಿಲ್, ಅತ್ಯುತ್ತಮ ಅಂಕ ಗಳಿಸಿ, ಹಾರ್ವರ್ಡ್ ಯುನಿವರ್ಸಿಟಿಗೆ ಸೇರಿದರು. ಅಪ್ಪನ ಆಸೆಯಲ್ಲಿ ಎಲ್‌ಎಲ್‌ಬಿ ಓದಲು ಒಪ್ಪಿದರು. ಆದ್ರೆ ಅವರಿಗೆ ಲಾ ಓದುವುದರಲ್ಲಿ ಆಸಕ್ತಿ ಇರಲೇ ಇಲ್ಲ. ಲಾ ಪುಸ್ತಕ ಕೈಯಲ್ಲಿದ್ದರೂ, ಧ್ಯಾನ ಮಾತ್ರ ಕಂಪ್ಯೂಟರ್, ತಂತ್ರಜ್ಞಾನ ಕಡೆ ಇತ್ತು. ಈ ಮಧ್ಯೆ ಅವರಿಗೆ ಕಂಪ್ಯೂಟರ್‌ಗೆ ಸಂಬಂಧಿಸಿದ ಕೆಲ ಸಾಫ್ಟ್‌ವೇರ್ ತಯಾರಿಸುವ ಆಫರ್ ಸಹ ಬಂದಿತ್ತು. ಅದರಲ್ಲಿ ಸಫಲತೆ ಸಹ ಕಂಡಿದ್ದರು.
Spiritual: ಈ ದೇವಸ್ಥಾನಕ್ಕೆ ಭೇಟಿ ಕೊಟ್ಟವರಿಗೆ ಎಂದೂ ಸೋಲಿಲ್ಲ.. ಸೆಲೆಬ್ರಿಟಿ, ರಾಜಕಾರಣಿಗಳ ನೆಚ್ಚಿನ ದೇವರೀತ..
ಇದಾದ ಬಳಿಕ 1975ರಲ್ಲಿ ಪೋಲ್ ಜೊತೆ ಸೇರಿದ ಬಿಲ್‌ಗೇಟ್ಸ್ ಮೈಕ್ರೋಸಾಫ್ಟ್ ಕಂಪನಿ ಶುರು ಮಾಡಿಯೇ ಬಿಟ್ಟರು. ಇದರ ಮಧ್ಯೆ ಎಲ್‌ಎಲ್‌ಬಿ ಶಿಕ್ಷಣಕ್ಕೆ ಎಳ್ಳುನೀರು ಬಿಟ್ಟ ಬಿಲ್‌ಗೇಟ್ಸ್, ಹಾರ್ವರ್ಡ್ ಡ್ರಾಪ್‌ಔಟ್ ಎನ್ನಿಸಿಕೊಂಡು ಬಿಟ್ಟರೂ. ಆದ್ರೆ ತಂತ್ರಜ್ಞಾನದ ಮೇಲೆ ವಿಶ್ವಾಸವಿಟ್ಟ ಬಿಲ್‌ಗೇಟ್ಸ್, ಕಂಪನಿಯನ್ನ ಉನ್ನತಮಟ್ಟಕ್ಕೇರಿಸಲು ಹಗಲು ರಾತ್ರಿ ದುಡಿದರು.
ಈ ವೇಳೆ ಅನೇಕ ಅಡೆತಡೆಗಳು ಎದುರಾದವು. ಆದ್ರೂ ಕೂಡ ಛಲಬಿಡದ ಬಿಲ್‌ಗೇಟ್ಸ್, ಕಂಪನಿ ಕೆಲಸ ಮಾಡುವವ ಒಬ್ಬಬ್ಬರ ಕೆಲಸವನ್ನ ಚೆಕ್ ಮಾಡಲು ಶುರು ಮಾಡಿದರು. ತಪ್ಪಿದ್ದನ್ನ ತಾವೇ ತಿದ್ದಿದ್ದರು. ಈ ರೀತಿಯಾಗ ಬಿಲ್‌ಗೇಟ್ಸ್ ಕಂಪನಿ ಉನ್ನತಿಯ ಉತ್ತುಂಗಕ್ಕೇರತೊಡಗಿತು.
ಸೊಕ್ಕಿನ ಮಾತನ್ನಾಡಿದ್ದ ವಿದೇಶಿ ಉದ್ಯಮಿಗೆ ರತನ್ ಕೊಟ್ಟ ತಿರುಗೇಟು ಎಂಥದ್ದು..? ಟಾಟಾ ಜೀವನದ ರೋಚಕ ಕಥೆ
ಆ್ಯಪಲ್, ಇಂಟೆಲ್, ಐಬಿಎಂನಂಥ ಹಾರ್ಡ್‌ವೇರ್ ಕಂಪನಿಗಳು ಬಿಲ್‌ಗೇಟ್ಸ್ ಕಂಪನಿಗೆ ಹಣ ಸುರಿದು ಸಾಫ್ಟ್‌ವೇರ್ ಖರೀದಿಸತೊಡಗಿದವು. ಬಿಲ್ ಮತ್ತು ಪೋಲ್ ಸೇರಿ ಶುರು ಮಾಡಿದ ಕಂಪನಿಯಲ್ಲಿ ಮೊದಲು ಬರೀ 13 ಜನ ಕೆಲಸ ಮಾಡುತ್ತಿದ್ದರು. ನಂತರ 128 ಜನ ಕೆಲಸ ಮಾಡತೊಡಗಿದರು. ಹೀಗೆ ಕಂಪನಿ ಫೇಮಸ್ ಆಗತೊಡಗಿತು.
ಕಂಪ್ಯೂಟರ್ ತಯಾರಿಸುವ ಕಂಪನಿಗಳೆಲ್ಲ ಬಿಲ್‌ಗೇಟ್ಸ್‌ರಿಂದ ಮೈಕ್ರೋಸಾಫ್ಟ್ ಸಾಫ್ಟ್‌ವೇರ್ ಖರೀದಿಸತೊಡಗಿತ್ತು. ಇದಾದ ಬಳಿಕ ಬಿಲ್‌ಗೇಟ್ಸ್ ಮೈಕ್ರೋಸಾಫ್ಟ್ ಕಂಪನಿಯ ಪ್ರೆಸಿಡೆಂಟ್, ಪೋಲ್ ವೈಸ್ ಪ್ರೆಸಿಡೆಂಟ್ ಆದರು. ಹೀಗೆ ವರ್ಷದಿಂದ ವರ್ಷಕ್ಕೆ ಮೈಕ್ರೋಸಾಫ್ಟ್ ಕಂಪನಿಯ ಟರ್ನ್‌ಓವರ್ ಹೆಚ್ಚಾಗುತ್ತಾ ಹೋಗುತ್ತಿತ್ತು. ಬಿಲ್ ಮತ್ತು ಪೋಲ್ ಶ್ರೀಮಂತರಾಗುತ್ತ ಹೋದರು. ಇದರ ಮಧ್ಯೆ ಪೋಲ್‌ಗೆ ಕ್ಯಾನ್ಸರ್ ರೋಗ ಆವರಿಸಿತು. ಒಂದು ವರ್ಷದಲ್ಲೇ ಪೋಲ್ ಚೇತರಿಸಿಕೊಂಡರು. ಆದರೆ ಕೆಲಸ ಮಾಡಲಾಗದ ಕಾರಣ, ಮೈಕ್ರೋಸಾಫ್ಟ್ ಕಂಪನಿಯಲ್ಲಿ ಕೆಲಸ ಬಿಡಬೇಕಾಯಿತು.
ಈಗ ಬಿಲ್‌ಗೇಟ್ಸ್ ಒಬ್ಬರೇ ಕಂಪನಿಯ ಜವಾಬ್ದಾರಿ ಹೊತ್ತಿದ್ದರು. 30 ವಯಸ್ಸಿನವರಾಗಿದ್ದ ಬಿಲ್ ಅದಾಗಲೇ, ಜನಪ್ರಿಯರಾಗಿದ್ದರು. ಪ್ರಪಂಚದ ಶ್ರೀಮಂತರಲ್ಲಿ ಒಬ್ಬರಾಗಿದ್ದರು. ಆದ್ರೆ ಇದೇ ವೇಳೆ ಅವರು ನಷ್ಟ ಅನುಭವಿಸುವ ಪರಿಸ್ಥಿತಿ ಬಂದೊಗಿತು. ಪ್ರತಿಷ್ಠಿತ ಐಬಿಎಂ ಕಂಪನಿ, ಮೈಕ್ರೋಸಾಫ್ಟ್ ಬದಲು ಓಎಸ್‌ಟೂ ಎಂಬ ಸಾಫ್ಟ್‌ವೇರ್ ಖರೀದಿಸಲು ನಿರ್ಧರಿಸಿತ್ತು. ಇದು ಬಿಲ್‌ಗೇಟ್ಸ್ ತಮ್ಮ ಉದ್ಯಮದಲ್ಲಿ ಕಂಡ ಮೊದಲ ಮತ್ತು ದೊಡ್ಡ ಸೋಲಾಗಿತ್ತು.
ಆದರೂ ಧೃತಿಗೆಡದ ಬಿಲ್‌ಗೇಟ್ಸ್, ತಮ್ಮ ಕೆಲಸ ಮುಂದುವರಿಸಿದರು. ಲಾಭವಾಗಬೇಕಂದ್ರೆ, ಹೊಸ ಹೊಸ ಸಾಫ್ಟ್‌ವೇರ್ ಕ್ರಿಯೇಟ್ ಮಾಡಬೇಕು. ಬೆಲೆ ಕೊಂಚ ಕಡಿಮೆ ಮಾಡಬೇಕೆಂದು ಅರಿತ ಬಿಲ್‌ಗೇಟ್ಸ್, ಮೈಕ್ರೋಸಾಫ್ಟ್ ವಿಂಡೋವನ್ನ ಜಾರಿಗೆ ತಂದರು. ಅದನ್ನ ಅಪ್‌ಗ್ರೇಡ್ ಮಾಡಿದರು. ಸತತ ಪ್ರಯತ್ನದ ಫಲವಾಗಿ ಬಿಲ್‌ಗೇಟ್ಸ್ ಗೆಲುವಿನ ಶಿಖರಕ್ಕೇರಿದರು. ಮತ್ತು ಐಬಿಎಂ ಕಂಪನಿ ಖರೀದಿಸಿದ್ದ ಓಎಸ್‌ಟೂ ಎಂಬ ಸಾಫ್ಟ್‌ವೇರ್ ನೆಲಕಚ್ಚಿತು.
Special Story: ಈ ದೇಶದಲ್ಲಿ ಈ ದಿನವನ್ನು ಶ್ರೇಯಾಘೋಶಾಲ್ ಡೇ ಅಂತಾನೇ ಆಚರಿಸಲಾಗುತ್ತದೆ
ಆದ್ರೆ ಕೆಲ ವರ್ಷಗಳ ಬಳಿಕ ಮೈಕ್ರೋಸಾಫ್ಟ್ ಕಂಪನಿಯ ಮೇಲೆ ಸಾಫ್ಟ್‌ವೇರ್ ಕುರಿತಾದ ವಿಷಯಕ್ಕೆ ಸಂಬಂಧಿಸಿದಂತೆ ಕೇಸ್ ಹಾಕಲಾಯಿತು. ತದನಂತರ ತನ್ನ ತಪ್ಪನ್ನ ಅರಿತ ಕಂಪನಿ, ತಪ್ಪುಗಳನ್ನ ಸರಿದೂಗಿಸುವ ಪ್ರಯತ್ನ ಮಾಡಿತು. ಕೇಸ್ ಕೂಡ ಕ್ಲೋಸ್ ಆಯಿತು.
1994ರಲ್ಲಿ 37 ವರ್ಷದ ಬಿಲ್‌ಗೇಟ್ಸ್, ತಮ್ಮ ಕಂಪನಿಯಲ್ಲೇ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಮೆಲಿಂಡಾ ಫ್ರೆಂಚ್‌ರನ್ನ ವಿವಾಹವಾದರು. ಇವರಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಓರ್ವ ಗಂಡುಮಗನಿದ್ದಾನೆ. ಇನ್ನು ಇತ್ತೀಚೆಗಷ್ಟೇ ಬಿಲ್‌ಗೇಟ್ಸ್ ಮೆಲಿಂಡಾಗೆ ವಿಚ್ಛೇದನ ನೀಡಿದ್ದಾರೆ.
ಮುಸ್ಲಿಂರ ವೇಷ ಧರಿಸಿ, 124 ಮೇಕೆ ಖರೀದಿಸಿದ ಜೈನರು: ಇದರ ಹಿಂದಿದೆ ರೋಚಕ ಕಥೆ
ಈ ರೀತಿ ಚಿಕ್ಕ ವಯಸ್ಸಿನಲ್ಲಿಯೇ ಶ್ರೀಮಂತರೆನ್ನಿಸಿಕೊಂಡ ಬಿಲ್‌ಗೇಟ್ಸ್ 90 ಬಿಲಿಯನ್ ಯುಎಸ್ ಡಾಲರ್‌ಗಳ ಒಡೆಯರಾಗಿದ್ದಾರೆ. ಆದ್ರೆ ಇವರು ತಮ್ಮ ಮಕ್ಕಳಿಗೆ ಬರೀ 10 ಮಿಲಿಯನ್ ಡಾಲರ್‌ಗಳನ್ನಷ್ಟೇ ಕೊಡಲು ನಿರ್ಧರಿಸಿದ್ದಾರೆ. ಯಾಕಂದ್ರೆ ನನ್ನ ಬಳಿ ಇರುವ ಹಣ ಸಮಾಜ ನನಗೆ ಕೊಟ್ಟಿದ್ದು, ನಾನು ಅದನ್ನ ಸಮಾಜಕ್ಕೇ ಕೊಡಲು ಬಯಸುತ್ತೇನೆ ಹೊರತು, ನನ್ನ ಮಕ್ಕಳಿಗಲ್ಲ. ಅವರಿಗೆ ಬೇಕಾದ್ರೆ ಅವರು ನನ್ನಂತೆ ದುಡಿದು, ಶ್ರೀಮಂತರಾಗಲಿ ಎನ್ನುತ್ತಾರೆ.
Discussion about this post