ಕಂಕುಳಿನ ದುರ್ಗಂಧ ಓಡಿಸಲು ಏನು ಮಾಡಬೇಕು..?
ನಾವು ಯಾರ ಬಳಿಯಾದರೂ ಮಾತನಾಡುವಾಗ, ಯಾವುದಾದರೂ ಕಾರ್ಯಕ್ರಮಕ್ಕೆ ಹೋಗುವಾಗ ನಮಗೆ ಕಾನ್ಫಿಡೆನ್ಸ್ ಬರಬೇಕು ಅಂದ್ರೆ, ನಮ್ಮ ಉಡುಪು ಚೆನ್ನಾಗಿರಬೇಕು. ಅದರ ಜತೆಗೆ ನಮ್ಮ ದೇಹ ಫ್ರೆಶ್ ಆಗಿರಬೇಕು. ಹಾಗಿರಬೇಕು ಅಂದ್ರೆ ನಮ್ಮ ದೇಹದಿಂದ ವಾಸನೆ ಬರಬಾರದು. ಕೆಲವರು ಯಾವುದೇ ಸೋಪ್, ಪರ್ಫ್ಯೂಮ್ ಹಾಕಿದ್ರೂ, ಕಂಕುಳಿನ ದುರ್ಗಂಧ ಮಾತ್ರ ಹೋಗೋದಿಲ್ಲ. ಅಂಥ ಸಮಯದಲ್ಲಿ ನಾವು ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ನಿಮ್ಮ ಕಂಕುಳಿನ ದುರ್ವಾಸನೆ ಹೋಗಬೇಕು ಅಂದ್ರೆ, ನೀವು ಸ್ನಾನ ಮಾಡುವ ನೀರಿಗೆ ಕಲ್ಲುಪ್ಪು ಮತ್ತು ರೋಸ್ ವಾಟರ್ ಹಾಕಿ ಸ್ನಾನ ಮಾಡಿ. ಇದರಿಂದ ಇಡೀ ದೇಹದ ದುರ್ಗಂಧ ಹೋಗುತ್ತದೆ. ಅಲ್ಲದೇ, ಹೆಚ್ಚು ಬಿಸಿಯೂ ಅಲ್ಲದ, ಹೆಚ್ಚು ತಣ್ಣಗೆಯೂ ಅಲ್ಲದ ನೀರಿನಿಂದ ಸ್ನಾನ ಮಾಡಿ.
ಇನ್ನು ಸ್ನಾನ ಮಾಡುವ ಮುನ್ನ ಕಂಕುಳಲ್ಲಿ ಆ್ಯಲೋವೆರಾ ಜೆಲ್‌ನಿಂದ ಮಸಾಜ್ ಮಾಡಿ. ನ್ಯಾಚುರಲ್ ಆ್ಯಲೋವೆರಾ ಜೆಲ್‌ನಿಂದ ಮಸಾಜ್ ಮಾಡಿದ್ರೆ, ವಾಸನೆ ದೂರವಾಗುತ್ತದೆ. ಆ್ಯಪಲ್ ಸೈಡರ್ ವಿನೇಗರ್ ಬಳಸಿದರೂ, ಕಂಕುಳ ದುರ್ಗಂಧ ಹೋಗುತ್ತದೆ.
ಆಹಾರದ ವಿಷಯಕ್ಕೆ ಬಂದರೆ, ನೀವು ಹಸಿ ಬೆಳ್ಳುಳ್ಳಿ, ಹಸಿ ಈರುಳ್ಳಿ ಹೆಚ್ಚು ತಿಂದರೆ ಬೆವರಿನ ವಾಸನೆ ಕೂಡ ಹಾಗೆಯೇ ಇರುತ್ತದೆ. ಹಾಗಾಗಿ ಎಲ್ಲಾದರೂ ಹೋಗುವಾಗ ಹಸಿ ಈರುಳ್ಳಿ, ಬೆಳ್ಳುಳ್ಳಿ ತಿನ್ನುವುದು ಬೇಡ. ಆದಷ್ಟು ಕಿತ್ತಳೆ, ನಿಂಬೆರಸ ಸೇರಿಸಿ, ಜ್ಯೂಸ್ ಶರ್ಬತ್ ಮಾಡಿ ಕುಡಿಯಿರಿ. ವಿಟಮಿನ್ ಸಿ ದೇಹ ಸೇರುವುದರಿಂದ ದೇಹದ ದುರ್ಗಂಧ ಕಡಿಮೆಯಾಗುತ್ತದೆ. ಹಾಗೇ ಹೆಚ್ಚೆಚ್ಚು ನೀರು ಕುಡಿಯಿರಿ.
ಹೆಚ್ಚು ಡಿಯೋ, ಪರ್ಫ್ಯೂಮ್ ಬಳಸಿದರೆ, ಅದು ನಿಮ್ಮ ಮಾನಸಿಕ ನೆಮ್ಮದಿ ಹಾಳು ಮಾಡುತ್ತದೆ. ಹಾರ್ಮೋನು ಏರುಪೇರಾಗುವಂತೆ ಮಾಡುತ್ತದೆ. ಹಾಗಾಗಿ ಆದಷ್ಟು ನ್ಯಾಚುರಲ್ ಆಗಿ, ಮನೆ ಮದ್ದಿನಿಂದಲೇ ನಿಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕ“ಳ್ಳಿ.
===============
ಉಗುರಿನ ಮೇಲೆ ಬಿಳಿ ಕಲೆ, ಚುಕ್ಕೆ, ಗೆರೆ ಬರಲು ಕಾರಣವೇನು..?
ನೀವು ಕೆಲವು ಬಾರಿ ನಿಮ್ಮ ಅಥವಾ ಇತರರ ಉಗುರಿನ ಮೇಲೆ ಬಿಲಿ ಕಲೆ, ಚುಕ್ಕೆ, ಗೆರೆ ಬರುವುದನ್ನು ನೋಡಿರುತ್ತೀರಿ. ಹಾಗಾದ್ರೆ ಈ ಕಲೆ ಬರಲು ಕಾರಣವೇನು..? ನಮ್ಮ ದೇಹದಲ್ಲಿ ಯಾವ ಅಂಶ ಕಡಿಮೆಯಾದಾಗ ಈ ಕಲೆ ಬರುತ್ತದೆ ಅಂತಾ ತಿಳಿಯೋಣ ಬನ್ನಿ..
ನಿಮಗೆ ಲಿವರ್ ಸಮಸ್ಯೆ ಅಥವಾ ಹೃದಯ ಸಮಸ್ಯೆ ಇದ್ದಲ್ಲಿ, ಅದು ಉಗುರಿನ ಮೇಲೆ ಕಾಣಿಸಿಕ“ಳ್ಳುತ್ತದೆ. ಉಗುರಿನ ಮೇಲೆ ಬಿಳಿ ಚುಕ್ಕೆ, ಗೆರೆ, ಕಲೆ ಕಾಣಿಸಿದರೆ ನಿಮಗೆ ಹೃದಯ ಸಮಸ್ಯೆ, ಲಿವರ್ ಸಮಸ್ಯೆ ಇದೆ ಎಂದರ್ಥ.
ಅಥವಾ ನೀವು ತೆಗೆದುಕ“ಳ್ಳುವ ಯಾವ ಔಷಧವಾದರೂ ಅಡ್ಡ ಪರಿಣಾಮ ಬೀರುತ್ತಿದ್ದಲ್ಲಿ, ಅದು ಉಗುರಿನ ಮೇಲೆ ಬಿಳಿ ಕಲೆ ಮೂಡಿ ಸೂಚನೆ ನೀಡುತ್ತದೆ. ಅಥವಾ ನಿಮ್ಮ ಉಗುರಿನಲ್ಲೇ ಸಮಸ್ಯೆ ಇದ್ದರೂ, ಅಲರ್ಜಿ ಇದ್ದರೂ ಈ ರೀತಿ ಕಲೆಯಾಗುತ್ತದೆ.
ದೇಹದಲ್ಲಿ ಕಬ್ಬಿಣ, ಕ್ಯಾಲ್ಶಿಯಂ ಅಂಶ ಕಡಿಮೆ ಇದ್ದಲ್ಲೂ ಈ ರೀತಿ ಬಿಳಿ ಚುಕ್ಕೆ ಕಾಣಿಸಕ“ಳ್ಳುತ್ತದೆ. ಹೀಗಿದ್ದಾಗ ನೀವು ಬೀಟ್ರೂಟ್, ಶೇಂಗಾ ಚಿಕ್ಕಿ, ಬೆಲ್ಲ- ಹಸಿ ಶೇಂಗಾ, ಪಾಲಕ್ ಸೇರಿ, ದೇಹಕ್ಕೆ ಕ್ಯಾಲ್ಶಿಯಂ ನೀಡುವ ಆಹಾರ ಸೇವನೆ ಮಾಡಿ. ಆದರೂ ನಿಮ್ಮ ಉಗುರಿನ ಮೇಲಿನ ಬಿಳಿ ಕಲೆ ಹೋಗದಿದ್ದಲ್ಲಿ, ವೈದ್ಯರ ಬಳಿ ಚಿಕಿತ್ಸೆ ಪಡೆಯುವುದು ಉತ್ತಮ.
=================
ಮುಟ್ಟಿನ ಸಮಯದಲ್ಲಿ ಫ್ರಿಜ್‌ನಲ್ಲಿರಿಸಿದ ಆಹಾರ ತಿನ್ನಬಾರದು ಅಂತಾ ಹೇಳುವುದೇಕೆ..?
ಮುಟ್ಟು ಅನ್ನೋದು ಪ್ರತೀ ತಿಂಗಳು ಪ್ರತೀ ಹೆಣ್ಣು ಮಕ್ಕಳು ಅನುಭವಿಸಲೇಬೇಕಾದ ಕಷ್ಟ. ಈ ವೇಳೆ ಆದಷ್ಟು ಆಕೆಯ ಕಾಳಜಿ ಮಾಡುವುದು ಅವಶ್ಯಕ. ಈ ವೇಳೆ ಆಹಾರದ ಬಗ್ಗೆಯೂ ಗಮನ ಹರಿಸಬೇಕು. ಅದರಲ್ಲೂ ತಣ್ಣಗಿನ ಅಂದ್ರೆ ಫ್ರಿಜ್‌ನಲ್ಲಿರುವ ಆಹಾರಗಳನ್ನು ಹೆಣ್ಣು ಮಕ್ಕಳು ಈ ದಿನಗಳಲ್ಲಿ ಸೇವಿಸಲೇಬಾರದು. ಹಾಗಾದ್ರೆ ಯಾಕೆ ತಣ್ಣಿಗಿನ ಆಹಾರವನ್ನು ಸೇವಿಸಬಾರದು ಅಂತಾ ತಿಳಿಯೋಣ ಬನ್ನಿ..
ನೀವು ಪಿರಿಯಡ್ಸ್ ಸಮಯದಲ್ಲಿ ಫ್ರಿಜ್‌ನಲ್ಲಿ ಇರಿಸಿದ ಆಹಾರ, ಕೋಲ್ಡ್ ಕಾಫಿ, ಐಸ್‌ಕ್ರೀಮ್, ಕೂಲ್‌ಡ್ರಿಂಕ್ಸ್ ಇವನ್ನೆಲ್ಲ ಸೇವಿಸಿದರೆ, ಅದು ಭವಿಷ್ಯದಲ್ಲಿ ನಿಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ. ಹಾರ್ಮೋನುಗಳಲ್ಲಿ ಬದಲಾವಣೆ ತರುತ್ತದೆ. ಹಾಗಾಗಿ ಭವಿಷ್ಯದಲ್ಲಿ ನಿಮ್ಮ ಆರೋಗ್ಯಕ್ಕೆ ಹಾನಿಯಾಗಬಾರದು ಅಂದ್ರೆ ನಾವು ವರ್ತಮಾನದಲ್ಲಿ ಆರೋಗ್ಯಕರ ಆಹಾರ ಸೇವನೆ ಮಾಡಬೇಕು.
ನಾವು ತಣ್ಣಗಿನ ಆಹಾರ ತಿನ್ನುವುದರಿಂದ ದೇಹದಲ್ಲಿ ರಕ್ತಸಂಚಲನಕ್ಕೆ ಅಡ್ಡಿಯಾಗುತ್ತದೆ. ಹಾಗಾಗಿ ಪಿರಿಯಡ್ಸ್ ಸಮಯದಲ್ಲಿ ತಣ್ಣನೆಯ ಆಹಾರ ಸೇವನೆ ಮಾಡಿದರೆ, ರಕ್ತಸ್ರಾವದಲ್ಲೂ ಏರುಪೇರಾಗಬಹುದು. ಸರಿಯಾದ ರೀತಿಯಲ್ಲಿ ರಕ್ತಸ್ರಾವವಾಗದಿದ್ದಲ್ಲಿ, ದೇಹದಲ್ಲಿ ಏರುಪೇರಾಗಿ, ಆರೋಗ್ಯಕ್ಕೂ ಹಾನಿಯಾಗಬಹುದು.
ಹಾಗಾಗಿ ಪಿರಿಯಡ್ಸ್ ಸಮಯದಲ್ಲಿ ಆರೋಗ್ಯಕರ ಆಹಾರಗಳಾದ ಬಿಸಿ ನೀರು, ಡ್ರೈಫ್ರೂಟ್ಸ್, ನೆನೆಸಿದ ಕಾಳು, ಹಣ್ಣು, ತರಕಾರಿ, ತುಪ್ಪ, ಹಾಲು, ಎಳನೀರು ಇಂಥ ಆಹಾರಗಳನ್ನು ಸೇವಿಸಬೇಕು.
=====================
ಬಿಗಿಯಾಗಿರುವ ಜೀನ್ಸ್ ಹೆಚ್ಚು ಬಳಸಿದರೆ ಏನಾಗತ್ತೆ..?
ಇಂದಿನ ಕಾಲದಲ್ಲಿ ಜೀನ್ಸ್ ಧರಿಸದ ಹುಡುಗಿಯರು ಸಿಗೋದು ತುಂಂಬಾ ಅಪರೂಪ. ಯಾಕಂದ್ರೆ ಫ್ಯಾಷನ್ ಅನ್ನೋದು ಇಂದಿನ ಹೆಣ್ಣುಮಕ್ಕಳ ಜೀವನದ ಭಾಗವಾಗಿದೆ. ಫ್ಯಾಷನ್ ಅನ್ನೋದು ಮುಖ್ಯ ಅನ್ನೋದು ಎಷ್ಟು ನಿಜವೋ, ಅದರಿಂದ ನಮ್ಮ ಆರೋಗ್ಯವೂ ಹಾಳಾಗುತ್ತದೆ ಅನ್ನೋದು ಅಷ್ಟೇ ಸತ್ಯ. ಹಾಗಾಗಿ ಇಂದು ನಾನು ದೇಹಕ್ಕೆ ಟೈಟ್ ಆಗುವ ಜೀನ್ಸ್ ಧರಿಸಿದರೆ, ಏನೇನು ಸಮಸ್ಯೆ ಉದ್ಭವಿಸುತ್ತದೆ ಅಂತಾ ತಿಳಿಯೋಣ ಬನ್ನಿ..
ಜೀನ್ಸ್ ದಪ್ಪ ಉಡುಪಾಗಿದ್ದು, ಇದು ಮೈಗಂಟಿಕ“ಳ್ಳುವಂತೆ ಹಾಕಿದರೆ, ಇದರಿಂದ ಚರ್ಮಕ್ಕೆ ಗಾಳಿ ತಾಕುವುದು ನಿಲ್ಲುತ್ತದೆ. ಚರ್ಮಕ್ಕೆ ಗಾಳಿ ತಾಕದಿದ್ದಲ್ಲಿ, ತುರಿಕೆ, ಕಿರಿಕಿರಿ ಉಂಟಾಗುತ್ತದೆ. ಅಲ್ಲದೇ ದೇಹದ ದುರ್ಗಂಧ ಹೆಚ್ಚಾಗುತ್ತದೆ.
ಅಲ್ಲದೇ ಜೀನ್ಸ್ ಬಿಗಿಯಾಗಿದ್ದರೆ, ದೇಹದಲ್ಲಿ ರಕ್ತ ಸಂಚಲನೆಗೂ ಅಡಚಣೆ ಉಂಟಾಗುತ್ತದೆ. ಹಾಗಾಗಿ ನೀವು ನಿರಂತರವಾಗಿ ಬಿಗಿಯಾಗಿರುವ ಜೀನ್ಸ್ ಧರಿಸಿದರೆ, ನಿಮ್ಮ ಆರೋಗ್ಯ ಕ್ರಮೇಣ ಹಾಳಾಗುತ್ತದೆ. ಹಾಗಾಗಿ ಯಾವುದೇ ಉಡುಪಾಗಲಿ, ಗಾಳಿಯಾಡುವಂತೆ ಹಾಕಬೇಕು. ಇದು ಧರಿಸಲು ಹಾಯಾಗಿದ್ದು, ಆರೋಗ್ಯವನ್ನೂ ಕಾಪಾಡುತ್ತದೆ. ಹಾಗಾಗಿಯೇ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಸೆಲೆಬ್ರಟಿಗಳು ಕೂಡ ಇಗೀಗ ಲೂಸ್ ಆಗಿರುವ ಉಡುಪನ್ನೇ ಧರಿಸಲು ಇಚ್ಛಿಸುತ್ತಿದ್ದಾರೆ.
ಅಲ್ಲದೇ ನಮ್ಮ ಜೀರ್ಣಕ್ರಿಯೆ ನಿಧಾನ ಆಗುವಂತೆ ಮಾಡಿ, ಉದರ ಸಮಸ್ಯೆ ಉದ್ಭವಿಸುವ ಎಲ್ಲಾ ಸಾಧ್ಯತೆಗಳು ಈ ಬಿಗಿಯಾದ ಜೀನ್ಸ್ ಧರಿಸುವುದರಿಂದ ಬರುತ್ತದೆ. ಅಲ್ಲದೇ ಮನುಷ್ಯನಿಗೆ ಎಷ್ಟು ಬೆವರು ಬರುತ್ತದೆಯೋ, ಅವರು ಅಷ್ಟು ಆರೋಗ್ಯವಂತನಾಗಿರುತ್ತಾನೆ. ಆದರೆ ಬಿಗಿಯಾದ ಉಡುಪು ಧರಿಸಿದರೆ, ಬೆವರು ಬಾರದೇ, ಆರೋಗ್ಯವೂ ಹಾಳಾಗುತ್ತದೆ.
ಜೀನ್ಸ್ ಪ್ರತಿದಿನ ವಾಶ್ ಮಾಡುವುದಿಲ್ಲ. ಹಾಗಾಗಿ ಅದರಲ್ಲಿರುವ ಗಲೀಜಿನಿಂದಲೂ ಸೋಂಕಾಗಬಹುದು. ಹಾಗಾಗಿ 1 ರಿಂದ 2 ಬಾರಿ ಜೀನ್ಸ್ ಧರಿಸಿದರೆ, ಅದನ್ನು ವಾಶ್ ಮಾಡಲೇಬೇಕು.
======================
ಬಿಪಿ ಇದ್ದವರು ಸಡನ್ ಆಗಿ ಏಕೆ ಮಾತ್ರೆ ಸೇವನೆ ನಿಲ್ಲಿಸಬಾರದು..?
ಮುಂಚೆ ಎಲ್ಲಾ ಬರೀ ವಯಸ್ಸಾದವರಿಗೆ ಮಾತ್ರ ಬಿಪಿ, ಶುಗರ್ ಬರುತ್ತಿತ್ತು. ಇದೀಗ ಚಿಕ್ಕಂದಿನಲ್ಲೇ ಬಿಪಿ, ಶುಗರ್ ಲಗ್ಗೆ ಇಡುತ್ತಿದೆ. ಶಾಲೆಗೆ ಹೋಗುವ ಮಕ್ಕಳಿಗೂ ಬಿಪಿ, ಶುಗರ್ ಬರುತ್ತಿದೆ. ಇದಕ್ಕೆಲ್ಲ ಕಾರಣ ನಮ್ಮ ಜೀವನ ಶೈಲಿ ಮತ್ತು ನಾವು ಸೇವಿಸುವ ಆಹಾರ. ಇನ್ನು ಬಿಪಿ ಬಂದವರು ಮಾತ್ರೆ ಸೇವಿಸಿ ಸೇವಿಸಿ ಸುಸ್ತಾಗಿ, ತಮ್ಮಷ್ಟಕ್ಕೆ ತಾವೇ ಬಿಪಿ ಮಾತ್ರ ಸೇವಿಸುವುದನ್ನು ಬಿಡುವ ನಿರ್ಧಾರ ಮಾಡುತ್ತಾರೆ. ಹಾಗಾದ್ರೆ ಇದು ತಪ್ಪಾ..? ಸರಿಯಾ ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..
ಬಿಪಿ ಮಾತ್ರೆ ಸೇವಿಸುತ್ತಿದ್ದಲ್ಲಿ, ನೀವು ವೈದ್ಯರ ಸಲಹೆ ಇಲ್ಲದೇ, ಮಾತ್ರೆ ಸೇವನೆ ಬಿಡಬಾರದು. ಹೀಗೆ ಮಾಡುವುದರಿಂದ ಸಮಸ್ಯೆ ಇನ್ನೂ ಹೆಚ್ಚಾಗುತ್ತದೆ. ಮಾತ್ರೆ ಸೇವನೆ ಬಿಡುವ ಮುನ್ನ ವೈದ್ಯರ ಬಳಿ ವಿಚಾರಿಸುವುದು ಉತ್ತಮ.
ಬಿಪಿ ಅದೆಷ್ಟರ ಮಟ್ಟಿಗೆ ಕೆಟ್ಟದ್ದು ಎಂದರೆ, ಬಿಪಿ ನಿಯಂತ್ರಣ ತಪ್ಪಿದರೆ, ನಿಮ್ಮ ಕಿಡ್ನಿ, ಹೃದಯ ಸೇರಿ ದೇಹದ ಮುಖ್ಯ ಭಾಗಗಳಿಗೆ ಸಮಸ್ಯೆ ತರುತ್ತದೆ. ಪ್ರಾಣಹಾನಿ ಮಾಡುವ ಎಲ್ಲ ಸಾಧ್ಯತೆಗಳಿದೆ. ಹಾಗಾಗಿ ಬಿಪಿಯನ್ನು ಎಂದಿಗೂ ನಿರ್ಲಕ್ಷಿಸಬೇಡಿ.
ಯಾವುದೇ ಮಾತ್ರೆಗಳನ್ನು ಸಡನ್ ಆಗಿ ನಿಲ್ಲಿಸಬಾರದು. ಬದಲಾಗಿ ಅದರ ಡೋಸೇಜ್ ಕಡಿಮೆ ಮಾಡಬೇಕು. ಕ್ರಮೇಣ ವೈದ್ಯರ ಸಲಹೆ ಪಡೆದು, ನಿಲ್ಲಿಸಬೇಕು. ಸಡನ್ ಆಗಿ ಮಾತ್ರೆ ನಿಲ್ಲಿಸಿದರೆ, ದೇಹದಲ್ಲಿ ಅಡ್ಡಪರಿಣಾಮವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
====================
ಈರುಳ್ಳಿ ಸೇವನೆಯಿಂದ ಎಷ್ಟೆಲ್ಲ ಆರೋಗ್ಯ ಲಾಭಗಳಿದೆ ನೋಡಿ..
ಈರುಳ್ಳಿ ಇಲ್ಲಾ ಅಂದ್ರೆ, ಚಾಟ್‌ಗಳು ಸಪ್ಪೆ ಸಪ್ಪೆಯಾಗತ್ತೆ. ಜೋಳದ ರೋಟ್ಟಿ ತಿನ್ನುವಾಗಲೂ ಈರುಳ್ಳಿ ಇರಲೇಬೇಕು. ಖಾರ ತಿಂಡಿಯ ರುಚಿ ಹೆಚ್ಚಿಸಲು ಕೂಡ ಈರುಳ್ಳಿ ಅವಶ್ಯಕ. ಇಂಥ ಈರುಳ್ಳಿ ಬರೀ ರುಚಿ ಹೆಚ್ಚಿಸಲಷ್ಟೇ ಅಲ್ಲದೇ, ನಮ್ಮ ಆರೋಗ್ಯವನ್ನೂ ಕಾಪಾಡುತ್ತದೆ. ಹಾಗಾದ್ರೆ ಈರುಳ್ಳಿ ಸೇವನೆಯ ಲಾಭವೇನು ಅಂತಾ ತಿಳಿಯೋಣ ಬನ್ನಿ..
ಈರುಳ್ಳಿ ಸೇವನೆಯಿಂದ ನಮ್ಮ ದೇಹದಲ್ಲಿರುವ ವಿಷಕಾರಕ ಅಂಶ ಆಚೆ ಹೋಗುತ್ತದೆ. ಇದರಿಂದ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಹಳ್ಳಿ ಕಡೆ ಜನ ಹಸಿ ತರಕಾರಿಯನ್ನು ಊಟದ ಜತೆ ತಿನ್ನುವುದರಿಂದಲೇ, ಅವರ ಆರೋಗ್ಯ ಅಷ್ಟು ಚೆನ್ನಾಗಿರುತ್ತದೆ.
ಈರುಳ್ಳಿ ಸೇವನೆಯಿಂದ ಲೈಂಗಿಕ ಸಮಸ್ಯೆ ದೂರವಾಗುತ್ತದೆ. ಲೈಂಗಿಕ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಊಟದಲ್ಲಿ ಈರುಳ್ಳಿ ಬಳಕೆ ಮಾಡುವುದರಿಂದ ಲೈಂಗಿಕ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ನಿಮ್ಮ ಹೃದಯದ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ, ನೀವು ಪ್ರತಿದಿನ ಈರುಳ್ಳಿ ಸೇವನೆ ಮಾಡಬೇಕು. ಏಕೆಂದರೆ ಇದು ಬಿಪಿ ಕಂಟ್ರೋಲಿನಲ್ಲಿ ಇರಿಸಲು ಸಹಾಯಕವಾಗಿದೆ. ರಕ್ತ ಸಂಚಲನವನ್ನು ಸರಿಯಾಗಿರಿಸಿ, ನಮ್ಮ ಆರೋಗ್ಯ ಅಭಿವೃದ್ಧಿಪಡಿಸಲು ಇದು ಸಹಾಯಕವಾಗಿದೆ.
ನೀವು ತಿಂದ ಆಹಾರ ಚೆನ್ನಾಗಿ ಜೀರ್ಣವಾಗಿ ನಿಮ್ಮ ಆರೋಗ್ಯ ಅಭಿವೃದ್ಧಿಯಾಗಬೇಕು, ಜೀರ್ಣಕ್ರಿಯೆಗೆ ಸಂಬಂಧಿಸಿದ, ಮಲ ಮೂತ್ರ ವಿಸರ್ಜನೆಗೆ ಸಂಬಂಧಿಸಿದ ಆರೋಗ್ಯ್ ಸಮಸ್ಯೆ ಕಾಡಬಾರದು ಅಂದ್ರೆ, ನೀವು ಈರುಳ್ಳಿ ಸೇವನೆ ಮಾಡಬೇಕು.
ಬಿಪಿ ಅಷ್ಟೇ ಅಲ್ಲದೇ, ಶುಗರ್ ಕೂಡ ಕಂಟ್ರೋಲಿನಲ್ಲಿಡಲು ಈರುಳ್ಳಿ ಸಹಾಯಕವಾಗಿದೆ. ಈರುಳ್ಳಿ ಇನ್ಸುಲಿನ್ ಉತ್ಪಾದಿಸಿ, ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಕಾರಿಯಾಗಿದೆ.
ಇನ್ನು ಪ್ರತಿದಿನ ಈರುಳ್ಳಿ ತಿನ್ನಲಾಗದಿದ್ದರೂ, ವಾರದಲ್ಲಿ ಮೂರು ಬಾರಿ ಸೇವಿಸಬಹುದು. ನಿಮಗೇನಾದರೂ ಈರುಳ್ಳಿ ಸೇವಿಸಿದರೆ, ಅಲರ್ಜಿ ಎಂದಾದಲ್ಲಿ ವೈದ್ಯರ ಬಳಿ ವಿಚಾರಿಸಿ, ಬಳಿಸ ಸೇವಿಸುವುದು ಉತ್ತಮ.
===============
ಶೇಂಗಾ ಚಿಕ್ಕಿ ಅಥವಾ ಹಸಿ ಶೇಂಗಾ-ಬೆಲ್ಲ ಸೇವಿಸಿ, ನಿಮ್ಮ ಆರೋಗ್ಯ ಉತ್ತಮವಾಗಿಸಿ..
ಶೇಂಗಾ ಚಿಕ್ಕಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲಾ ಹೇಳಿ..? ಚಿಕ್ಕ ಮಕ್ಕಳಿಂದ ಹಿಡಿದು, ಹಿರಿಯರವರೆಗೂ ಶೇಂಗಾ ಚಿಕ್ಕಿಯನ್ನು ಜನ ಇಷ್ಟಪಟ್ಟು ತಿನ್ನುತ್ತಾರೆ. ಈ ಶೇಂಗಾ ಚಿಕ್ಕಿ ಬರೀ ರುಚಿ ಮಾತ್ರವಲ್ಲ. ಬದಲಾಗಿ ಆರೋಗ್ಯಕರವೂ ಹೌದು. ಅದು ಹೇಗೆ ಅಂತಾ ತಿಳಿಯೋಣ ಬನ್ನಿ..
ಶೇಂಗಾ ಚಿಕ್ಕಿ ಅಥವಾ ಶೇಂಗಾ ಮತ್ತು ಬೆಲ್ಲ ಸೇರಿಸಿ ಸೇವಿಸಿದರೆ, ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚಾಗುತ್ತದೆ. ನೀವು ಹಸಿ ಶೇಂಗಾ ಮತ್ತು ಬೆಲ್ಲವನ್ನು ಸೇರಿಸಿ, ಸ್ವಲ್ಪ ಸ್ವಲ್ಪ ತಿಂದರೆ, ನಿಮ್ಮ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚಾಗಿ, ನಿಮ್ಮ ದೇಹ ಶಕ್ತಿಯುತವಾಗುತ್ತದೆ.
ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆ ಇದೆ ಎಂದಲ್ಲಿ ನೀವು, ಬೆಲ್ಲ ಮತ್ತು ಶೇಂಗಾವನ್ನು ಸೇವಿಸಿ. ಇದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ಹೆಚ್ಚಾಗಿ, ಲೋ ಬಿಪಿ ಸರಿಯಾಗುತ್ತದೆ. ನ್ಯಾಚುರಲ್ ಆಗಿ ಲೋ ಬಿಪಿ ಸರಿಪಡಿಸಿಕ“ಳ್ಳಲು ಇದು ಸರಿಯಾದ ಮಾರ್ಗವಾಗಿದೆ.
ಶೇಂಗಾ ಮತ್ತು ಬೆಲ್ಲದ ಸೇವನೆಯಿಂದ ನಿಮ್ಮ ದೇಹಕ್ಕೆ ಹೆಚ್ಚು ಶಕ್ತಿ ಸಿಗುತ್ತದೆ. ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಮಲ ವಿಸರ್ಜನೆಗೆ ಸಮಸ್ಯೆಯಾಗುತ್ತಿದ್ದಲ್ಲಿ, ಶೇಂಗಾ ಮತ್ತು ಬೆಲ್ಲ ಸೇವನೆ ಮಾಡಿದ್ದಲ್ಲಿ, ಈ ಎಲ್ಲ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.
==================
ಪುದೀನಾ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು.?
ಪುದೀನಾ ಬಳಸದೇ ಹಲವು ಚಾಟ್‌ಗಳನ್ನು ತಯಾರಿಸಲು ಸಾಧ್ಯವೇ ಇಲ್ಲ. ಪಾನೀಪುರಿ, ಮಸಾಲೆ ಪುರಿ, ಕಚೋರಿ, ಸಮೋಸಾ ಸೇರಿ ಹಲವು ತಿಂಡಿಗಳಲ್ಲಿ ಹಸಿರು ಚಟ್ನಿ ತಯಾರಿಸಲು ಪುದೀನಾ ಅವಶ್ಯಕ. ಆದರೆ ಪುದೀನಾ ಬರೀ ರುಚಿಕರ ತಿಂಡಿ ಮಾಡಲಷ್ಟೇ ಅಲ್ಲ. ಬದಲಾಗಿ ನಮ್ಮ ದೇಹಕ್ಕಾಗುವ ಹಲವು ಸಮಸ್ಯೆಗಳನ್ನು ನಿವಾರಿಸಲು ಪುದೀನಾ ಬಳಸಬಹುದು. ಹಾಗಾದ್ರೆ ಪುದೀನಾ ಸಮಸ್ಯೆಯಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..
ನಿಮಗೆ ಹೊಟ್ಟೆನೋವು, ಹೊಟ್ಟೆಗೆ ಸಂಬಂದಿಸಿದ ಸಮಸ್ಯೆ ಯಾವುದೇ ಇದ್ದರೂ, ನೀವು ನಾಲ್ಕು ಪುದೀನಾ ಎಲೆಗಳನ್ನು ಅಗಿದು ತಿನ್ನಬಹುದು. ಇದರಿಂದ ಹೊಟ್ಟೆ ಸಮಸ್ಯೆ ಕಡಿಮೆಯಾಗುತ್ತದೆ.
ಗರ್ಭಿಣಿಯಾಗಿದ್ದಾಗ, ನಿಮಗೆ ಪದೇ ಪದೇ ವಾಕರಿಕೆ ಬಂದಂತಾಗುತ್ತಿದ್ದರೆ, ನೀವು ಪುದೀನಾ ಸೇವನೆ ಮಾಡುವುದರಿಂದ ವಾಕರಿಕೆ ಸಮಸ್ಯೆ ಕಡಿಮೆಯಾಗುತ್ತದೆ.
ಕ್ಯಾನ್ಸರ್ ಇದ್ದವರಿಗೆ ಕಿಮೋ ಥೆರೆಪಿ ಮಾಡಿದ್ದಲ್ಲಿ, ಬಳಿಕ ವಾಕರಿಕೆ ಬಂದ ಹಾಗೆ ಆಗುತ್ತದೆ. ಇಂಥ ಸಮಯದಲ್ಲೂ ಪುದೀನಾ ಸೇವನೆ ಸಹಕಾರಿಯಾಗಿದೆ.ತಿಂಗಳ ಸಮಸ್ಯೆ ಇದ್ದಾಗಲೂ ಪುದೀನಾ ಸೇವನೆ ಮಾಡಬಹುದು.
ಮುಖ್ಯವಾದ ವಿಚಾರ ಅಂದ್ರೆ, ನಿಮಗೆ ಪುದೀನಾ ತಿಂದರೆ ಅಲರ್ಜಿ ಎಂದಾದರೆ, ಅಥವಾ ಪುದೀನಾ ತಿಂದರೂ ನಿಮ್ಮ ಆರೋಗ್ಯ ಸಮಸ್ಯೆ ಸಂಪೂರ್ಣವಾಗಿ ಗುಣಮುಖವಾಗದಿದ್ದಲ್ಲಿ, ನೀವು ವೈದ್ಯರ ಬಳಿ ಚಿಕಿತ್ಸೆ ಪಡೆಯುವುದು ಉತ್ತಮ. ಏಕೆಂದರೆ, ಇಂಥ ಮನೆ ಮದ್ದು ಸಣ್ಣ ಸಣ್ಣ ಆರೋಗ್ಯ ಸಮಸ್ಯೆಗಳಿಗೆ ಮಾತ್ರ ಸಹಾಯ ಮಾಡುತ್ತದೆ.
Discussion about this post