• Home
  • About Us
  • Contact Us
  • Terms of Use
  • Privacy Policy
Thursday, September 24, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಬ್ಯೂಟಿ ಟಿಪ್ಸ್

Gravy Recipe: ಚಪಾತಿಗೆ ಮ್ಯಾಚ್ ಆಗುವ 6 ವೆರೈಟಿ ಗ್ರೇವಿ ರೆಸಿಪಿ

News Desk by News Desk
Jun 16, 2025, 05:29 pm IST
in ಬ್ಯೂಟಿ ಟಿಪ್ಸ್
Share on FacebookShare on TwitterTelegram

ಕಾರ್ನ್ ಮಸಾಲಾ (Corn Masala)

ಬೇಕಾಗುವ ಸಾಮಗ್ರಿ: 1ರಿಂದ 2 ಕ್ಯಾಪ್ಸಿಕಂ, 1 ಬೌಲ್ ಸ್ವೀಟ್ ಕಾರ್ನ್, 2 ಈರುಳ್ಳಿ, 1 ಟಮೆಟೋ ಪ್ಯೂರಿ, 2 ಸ್ಪೂನ್ ತುಪ್ಪ ಅಥವಾ ಬೆಣ್ಣೆ, ಜಿಂಜರ್ ಗಾರ್ಲಿಕ್ ಪೇಸ್ಟ್, ಅರಿಶಿನ, ಉಪ್ಪು, ಖಾರದ ಪುಡಿ, ಗರಂ ಮಸಾಲೆ, ಧನಿಯಾ ಪುಡಿ, 3ಸ್ಪೂನ್ ಎಣ್ಣೆ, 2 ಸ್ಪೂನ್ ತುಪ್ಪ, ಉಪ್ಪು.

ಮಾಡುವ ವಿಧಾನ: ಮ“ದಲು ಪ್ಯಾನ್ ಬಿಸಿ ಮಾಡಿ, ಎಣ್ಣೆ, ತುಪ್ಪ, 1 ಸಣ್ಣಗೆ ಕತ್ತರಿಸಿದ ಈರುಳ್ಳಿ, ಹಸಿಮೆಣಸು, ಜೀರಿಗೆ, ಜಿಂಜರ್ ಗಾರ್ಲಿಕ್ ಪೇಸ್ಟ್ ಹಾಕಿ ಹುರಿಯಿರಿ. ಬಳಿಕ ಅರಿಶಿನ, ಉಪ್ಪು, ಖಾರದ ಪುಡಿ, ಗರಂ ಮಸಾಲೆ, ಧನಿಯಾ ಪುಡಿ, ಟಮೆಟೋ ಪ್ಯೂರಿ ಹಾಕಿ ಮಿಕ್ಸ್ ಮಾಡಿ.

2 ನಿಮಿಷ ಕುದಿಸಿದರೆ, ಗ್ರೇವಿಯ ಕಲರ್ ಚೇಂಜ್ ಆಗುತ್ತದೆ. ಬಳಿಕ ಕ್ಯಾಪ್ಸಿಕಂ, ಈರುಳ್ಳಿ ಹಾಕಿ ಸ್ವಲ್ಪ ಬೇಯಿಸಿ. ನಂತರ್ ಕ್ರೀಮ್ ಹಾಕಿ ಮಿಕ್ಸ್ ಮಾಡಿ. ಇದು ಆಪ್ಶನಲ್. ಬಳಿಕ ಬೇಯಿಸಿದ ಕಾರ್ನ್ ಸೇರಿಸಿ. ನಂತರ ನೀರು ಉಪ್ಪು, ಹಾಕಿ ಕುದಿಸಿ. ಕೊನೆಗೆ ಕೊತ್ತಂಬರಿ ಸ“ಪ್ಪು ಹಾಕಿ ಮಿಕ್ಸ್ ಮಾಡಿದ್ರೆ, ಕಾರ್ನ್ ಮಸಾಲಾ ರೆಡಿ. ಚಪಾತಿ ಜತೆ ಇದು ಉತ್ತಮ ಕಾಂಬಿನೇಷನ್.

==========

ಇದನ್ನು ಓದಿ: Recipe: ಬೇಗ ಬೇಗ ಮಾಡಬಹುದಾದ ಪಾಲಕ್ ದೋಸೆ ರೆಸಿಪಿ

ಆಲೂ ಬಟಾಣಿ ಸುಕ್ಕೆ (ಗ್ರೇವಿ) (Aloo Gravy)

ಬೇಕಾಗುವ ಸಾಮಗ್ರಿ: ಒಂದು ಕಪ್ ನೆನೆಸಿದ ಬಟಾಣಿ, ಎರಡು ಆಲೂ,  ನಿಮಗೆ ಇಷ್ಟವಾದಲ್ಲಿ ಒಂದು ಕಪ್ ಹೂಕೋಸು ಬಳಸಿಕೊಳ್ಳಿ, ಅವಶ್ಯಕತೆ ಇದ್ದಲ್ಲಿ ಒಂದು ಈರುಳ್ಳಿ , ಒಂದು ಕಪ್ ಕೊಬ್ಬರಿ ತುರಿ, ಸ್ವಲ್ಪ ಹುಣಸೆಹಣ್ಣು, 4-5 ಎಣ್ಣೆಯಲ್ಲಿ ಹುರಿದ ಒಣ ಮೆಣಸಿನಕಾಯಿ, ಚಿಕ್ಕ ತುಂಡು ಹಸಿ ಶುಂಠಿ, 2 ಸ್ಪೂನ್ ಜೀರಿಗೆ, 2 ಸ್ಪೂನ್ ಕೊತ್ತಂಬರಿ ಕಾಳು, 2 ಸ್ಪೂನ್ ಉದ್ದಿನ ಬೇಳೆ, ಅರ್ಧ ಕಪ್ ಬೆಲ್ಲ, ಚಿಟಿಕೆ ಅರಿಷಿನ, ಒಗ್ಗರಣೆಗೆ 2 ಸ್ಪೂನ್ ಎಣ್ಣೆ, ಅರ್ಧ ಸ್ಪೂನ್ ಸಾಸಿವೆ, ಅರ್ಧ ಸ್ಪೂನ್ ಜೀರಿಗೆ, ಅರ್ಧ ಸ್ಪೂನ್ ಉದ್ದಿನ ಬೆಳೆ, 5ರಿಂದ 6 ಎಸಳು ಕರಿಬೇವು, ಒಂದು ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಆಲೂವನ್ನ ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ ಕತ್ತರಿಸಿ ಬಟಾಣಿಯೊಂದಿಗೆ ಸೇರಿಸಿ ಉಪ್ಪು ನೀರಿನಲ್ಲಿ ಹಾಕಿ, ಪಕ್ಕಕ್ಕಿರಿಸಿ. ಈಗ ಮಿಕ್ಸಿ ಜಾರ್‌ಗೆ ಕೊಬ್ಬರಿ ತುರಿ, ಹುಣಸೆಹಣ್ಣು, ಎಣ್ಣೆಯಲ್ಲಿ ಹುರಿದ ಒಣ ಮೆಣಸಿನಕಾಯಿ, ಚಿಕ್ಕ ತುಂಡು ಹಸಿ ಶುಂಠಿ ಜಜ್ಜಿ ಹಾಕಿ ಒಮ್ಮೆ ರುಬ್ಬಿ. ಈಗ ಒಂದು ಪ್ಯಾನ್‌ಗೆ ಜೀರಿಗೆ, ಕೊತ್ತಂಬರಿ ಕಾಳು, ಉದ್ದಿನ ಬೇಳೆ ಹಾಕಿ, ಕಂದು ಬಣ್ಣಕ್ಕೆ ತಿರುಗಿ ಘಮ ಬರುವಷ್ಟು ಹುರಿದು, ರುಬ್ಬಿರುವ ಮಿಶ್ರಣಕ್ಕೆ ಸೇರಿಸಿ ಮತ್ತೊಮ್ಮೆ ರುಬ್ಬಿ. ಈಗ ಸುಕ್ಕೆಗೆ ಬೇಕಾಗಿರುವ ಮಸಾಲೆ ರೆಡಿ.

ಈಗ ಪ್ಯಾನ್‌ಗೆ ಸ್ವಲ್ಪ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಹಸಿ ಮೆಣಸು, ಕರಿಬೇವು, ಈರುಳ್ಳಿ ಹಾಕಿ ಹುರಿಯಿರಿ. ಈಗ ಇದಕ್ಕೆ ಉಪ್ಪು ನೀರಿನಲ್ಲಿ ನೆನೆಸಿದ ಬಟಾಣಿ ಮತ್ತು ಆಲೂ ಹಾಕಿ 2 ರಿಂದ 3 ನಿಮಿಷ ಹುರಿಯಿರಿ. ರುಬ್ಬಿದ ಮಸಾಲೆ ಮಿಶ್ರಣದ ಜೊತೆ ಅಗತ್ಯವಿದ್ದಷ್ಟು ನೀರು, ಅರಿಷಿಣ, ಬೆಲ್ಲ, ಹೀಂಗೂ, ಉಪ್ಪು ಹಾಕಿ ಮಂದ ಉರಿಯಲ್ಲಿ 15 ನಿಮಿಷ ಬೇಯಿಸಿದರೆ ಆಲೂ ಮಟರ್ ಸುಕ್ಕೆ ರೆಡಿ.

===========

ಇದನ್ನು ಓದಿ: Recipe: ಬದನೇಕಾಯಿ- ಬಟಾಣಿ ಬೋಳುಕೊದ್ಲು ರೆಸಿಪಿ

ಬದನೆಕಾಯಿ ಗ್ರೇವಿ (Brinjal Gravy)
ಬೇಕಾಗುವ ಸಾಮಗ್ರಿ: 3 ಬದನೇಕಾಯಿ, ಒಂದು ಕಪ್ ಕೊಬ್ಬರಿ ತುರಿ, ಸ್ವಲ್ಪ ಹುಣಸೆಹಣ್ಣು, 4-5 ಎಣ್ಣೆಯಲ್ಲಿ ಹುರಿದ ಒಣ ಮೆಣಸಿನಕಾಯಿ, ಚಿಕ್ಕ ತುಂಡು ಹಸಿ ಶುಂಠಿ, 2 ಸ್ಪೂನ್ ಜೀರಿಗೆ, 2 ಸ್ಪೂನ್ ಕೊತ್ತಂಬರಿ ಕಾಳು, 2 ಸ್ಪೂನ್ ಉದ್ದಿನ ಬೇಳೆ, ಅರ್ಧ ಕಪ್ ಬೆಲ್ಲ, ಚಿಟಿಕೆ ಹೀಂಗೂ, ಚಿಟಿಕೆ ಅರಿಷಿನ, ಒಗ್ಗರಣೆಗೆ 2 ಸ್ಪೂನ್ ಎಣ್ಣೆ, ಅರ್ಧ ಸ್ಪೂನ್ ಸಾಸಿವೆ, ಅರ್ಧ ಸ್ಪೂನ್ ಜೀರಿಗೆ, ಅರ್ಧ ಸ್ಪೂನ್ ಉದ್ದಿನ ಬೆಳೆ, ಅಗತ್ಯವಿದ್ದರೆ 10ರಿಂದ15 ಶೇಂಗಾ ಬೀಜ, 5ರಿಂದ 6 ಎಸಳು ಕರಿಬೇವು, ಖಾರ ಹೆಚ್ಚಿಗೆ ಬೇಕಾದಲ್ಲಿ ಹಸಿ ಮೆಣಸು ಅಥವಾ ಖಾರದ ಪುಡಿ ಬಳಸಬಹುದು, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಬದನೆಕಾಯಿಯನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ ಕತ್ತರಿಸಿ ಉಪ್ಪು ನೀರಿನಲ್ಲಿ ಹಾಕಿ, ಪಕ್ಕಕ್ಕಿರಿಸಿ. ಈಗ ಮಿಕ್ಸಿ ಜಾರ್‌ಗೆ ಕೊಬ್ಬರಿ ತುರಿ, ಹುಣಸೆಹಣ್ಣು, ಎಣ್ಣೆಯಲ್ಲಿ ಹುರಿದ ಒಣ ಮೆಣಸಿನಕಾಯಿ, ಚಿಕ್ಕ ತುಂಡು ಹಸಿ ಶುಂಠಿ ಜಜ್ಜಿ ಹಾಕಿ ಒಮ್ಮೆ ರುಬ್ಬಿ. ಈಗ ಒಂದು ಪ್ಯಾನ್‌ಗೆ ಜೀರಿಗೆ, ಕೊತ್ತಂಬರಿ ಕಾಳು, ಉದ್ದಿನ ಬೇಳೆ ಹಾಕಿ, ಕಂದು ಬಣ್ಣಕ್ಕೆ ತಿರುಗಿ ಘಮ ಬರುವಷ್ಟು ಹುರಿದು, ರುಬ್ಬಿರುವ ಮಿಶ್ರಣಕ್ಕೆ ಸೇರಿಸಿ ಮತ್ತೊಮ್ಮೆ ರುಬ್ಬಿ. ಈಗ ಸುಕ್ಕೆಗೆ ಬೇಕಾಗಿರುವ ಮಸಾಲೆ ರೆಡಿ.

ಈಗ ಪ್ಯಾನ್‌ಗೆ ಸ್ವಲ್ಪ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಶೇಂಗಾಬೀಜ, ಕರಿಬೇವು ಹಾಕಿ ಹುರಿಯಿರಿ. ಈಗ ಇದಕ್ಕೆ ಉಪ್ಪು ನೀರಿನಲ್ಲಿ ನೆನೆಸಿದ ಬದನೇಕಾಯಿ ಹಾಕಿ 2 ರಿಂದ 3 ನಿಮಿಷ ಹುರಿಯಿರಿ. ರುಬ್ಬಿದ ಮಸಾಲೆ ಮಿಶ್ರಣದ ಜೊತೆ ಅಗತ್ಯವಿದ್ದಷ್ಟು ನೀರು, ಅರಿಷಿಣ, ಬೆಲ್ಲ, ಹೀಂಗೂ, ಉಪ್ಪು ಹಾಕಿ ಮಂದ ಉರಿಯಲ್ಲಿ 10 ನಿಮಿಷ ಬೇಯಿಸಿದರೆ ಬದನೇಕಾಯಿ ಸುಕ್ಕೆ ರೆಡಿ.

=============

ಇದನ್ನು ಓದಿ: ಟೀ ಟೈಮ್‌ನಲ್ಲಿ ಸುಲಭವಾಗಿ ತಯಾರಿಸಬಹುದಾದ ನಾರ್ತ್‌ ಸ್ಟೈಲ್ ಆಲೂ ಬೋಂಡಾ ರೆಸಿಪಿ

ಮಿಕ್ಸ್ ವೆಜಿಟೇಬಲ್ ಗ್ರೇವಿ (Mix Vegetable Gravy)

ಬೇಕಾಗುವ ಸಾಮಗ್ರಿ: ಒಂದು ಬೀಟ್‌ರೂಟ್‌, ಒಂದು ಕ್ಯಾರೆಟ್, ಒಂದು ಆಲೂ, ಅರ್ಧ ಕ್ಯಾಪ್ಸಿಕಂ, ಒಂದು ನವಿಲುಕೋಸು, ಒಂದು ಈರುಳ್ಳಿ. ಇದರೊಂದಿಗೆ ನಿಮಗೆ ಇಷ್ಟವಾದಲ್ಲಿ ಬೀನ್ಸ್, ಹೂಕೋಸು, ಎಲೆಕೋಸು ಬಳಸಿಕೊಳ್ಳಬಹುದು. ಒಂದು ಬೌಲ್ ನೆನೆಸಿಟ್ಟುಕೊಂಡ ಬಟಾಣಿ, ಕಡಲೆ, ಶೇಂಗಾಬೀಜ, ಹೆಸರು ಕಾಳಿನ ಮಿಶ್ರಣ. ಒಂದು ಕಪ್ ಕೊಬ್ಬರಿ ತುರಿ, ಸ್ವಲ್ಪ ಹುಣಸೆಹಣ್ಣು, 4-5 ಎಣ್ಣೆಯಲ್ಲಿ ಹುರಿದ ಒಣ ಮೆಣಸಿನಕಾಯಿ, ಚಿಕ್ಕ ತುಂಡು ಹಸಿ ಶುಂಠಿ, 2 ಸ್ಪೂನ್ ಜೀರಿಗೆ, 2 ಸ್ಪೂನ್ ಕೊತ್ತಂಬರಿ ಕಾಳು, 2 ಸ್ಪೂನ್ ಉದ್ದಿನ ಬೇಳೆ, ಅರ್ಧ ಕಪ್ ಬೆಲ್ಲ, ಚಿಟಿಕೆ ಅರಿಷಿನ, ಚಿಟಿಕೆ ಹೀಂಗೂ, ಒಗ್ಗರಣೆಗೆ 2 ಸ್ಪೂನ್ ಎಣ್ಣೆ, ಅರ್ಧ ಸ್ಪೂನ್ ಸಾಸಿವೆ, ಅರ್ಧ ಸ್ಪೂನ್ ಜೀರಿಗೆ, ಅರ್ಧ ಸ್ಪೂನ್ ಉದ್ದಿನ ಬೆಳೆ, 5ರಿಂದ 6 ಎಸಳು ಕರಿಬೇವು, ಖಾರ ಹೆಚ್ಚಿಗೆ ಬೇಕಾದಲ್ಲಿ ಹಸಿ ಮೆಣಸು ಅಥವಾ ಖಾರದ ಪುಡಿ ಬಳಸಬಹುದು, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಬೀಟ್‌ರೂಟ್, ಕ್ಯಾರೆಟ್, ಆಲೂ, ನವಿಲುಕೋಸು, ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ ಕತ್ತರಿಸಿ ಉಪ್ಪು ನೀರಿನಲ್ಲಿ ಹಾಕಿ, ಪಕ್ಕಕ್ಕಿರಿಸಿ. ಈಗ ಮಿಕ್ಸಿ ಜಾರ್‌ಗೆ ಕೊಬ್ಬರಿ ತುರಿ, ಹುಣಸೆಹಣ್ಣು, ಎಣ್ಣೆಯಲ್ಲಿ ಹುರಿದ ಒಣ ಮೆಣಸಿನಕಾಯಿ, ಚಿಕ್ಕ ತುಂಡು ಹಸಿ ಶುಂಠಿ ಜಜ್ಜಿ ಹಾಕಿ ಒಮ್ಮೆ ರುಬ್ಬಿ. ಈಗ ಒಂದು ಪ್ಯಾನ್‌ಗೆ ಜೀರಿಗೆ, ಕೊತ್ತಂಬರಿ ಕಾಳು, ಉದ್ದಿನ ಬೇಳೆ ಹಾಕಿ, ಕಂದು ಬಣ್ಣಕ್ಕೆ ತಿರುಗಿ ಘಮ ಬರುವಷ್ಟು ಹುರಿದು, ರುಬ್ಬಿರುವ ಮಿಶ್ರಣಕ್ಕೆ ಸೇರಿಸಿ ಮತ್ತೊಮ್ಮೆ ರುಬ್ಬಿ. ಈಗ ಸುಕ್ಕೆಗೆ ಬೇಕಾಗಿರುವ ಮಸಾಲೆ ರೆಡಿ.

ಬೀಟರೂಟ್, ನವಿಲುಕೋಸು ಅಷ್ಟು ಈಸಿಯಾಗಿ ಬೇಯೋದಿಲ್ಲ. ಹಾಗಾಗಿ ಕುಕ್ಕರಿನಲ್ಲಿ ಬೀಟರೂಟ್, ಕ್ಯಾರೆಟ್, ಆಲೂ, ನವಿಲುಕೋಸು, ಕಡಲೆ, ಬಟಾಣಿ, ಹೆಸರುಕಾಳು, ಹಾಕಿ 3 ವಿಶಲ್ ಕೂಗಿಸಿ, ಆರಲು ಬಿಡಿ.

ಈಗ ಪ್ಯಾನ್‌ಗೆ ಸ್ವಲ್ಪ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕರಿಬೇವು, ನೆನೆಸಿಟ್ಟುಕೊಂಡ ಶೇಂಗಾ ಈರುಳ್ಳಿ, ಕ್ಯಾಪ್ಸಿಕಂ ಹಾಕಿ ಹುರಿಯಿರಿ. ಈಗ ಇದಕ್ಕೆ ಬೇಯಿಸಿಟ್ಟುಕೊಂಡ ತರಕಾರಿ, ಕಾಳಿನ ಮಿಶ್ರಣ ಹಾಕಿ 2 ರಿಂದ 3 ನಿಮಿಷ ಹುರಿಯಿರಿ. ರುಬ್ಬಿದ ಮಸಾಲೆ ಮಿಶ್ರಣದ ಜೊತೆ ಅಗತ್ಯವಿದ್ದಷ್ಟು ನೀರು, ಅರಿಷಿಣ, ಬೆಲ್ಲ, ಹೀಂಗೂ, ಉಪ್ಪು ಹಾಕಿ ಮಂದ ಉರಿಯಲ್ಲಿ 10ರಿಂದ 15 ನಿಮಿಷ ಬೇಯಿಸಿದರೆ ಮಿಕ್ಸ್ಡ್ ವೆಜಿಟೇಬಲ್ ಸುಕ್ಕೆ ರೆಡಿ.

===============

ಇದನ್ನು ಓದಿ: Masala Murmura Recipe: ಮಸಾಲೆ ಮಂಡಕ್ಕಿ ರೆಸಿಪಿ

ಬೇಂಡೆಕಾಯಿ ಗ್ರೇವಿ (Lady Finger Gravy)

ಬೇಕಾಗುವ ಸಾಮಗ್ರಿ: 15ರಿಂದ 20 ಬೇಂಡೆಕಾಯಿ, ಒಂದು ಈರುಳ್ಳಿ, ಒಂದು ಕಪ್ ಕೊಬ್ಬರಿ ತುರಿ, ಸ್ವಲ್ಪ ಹುಣಸೆಹಣ್ಣು, 4-5 ಎಣ್ಣೆಯಲ್ಲಿ ಹುರಿದ ಒಣ ಮೆಣಸಿನಕಾಯಿ, ಚಿಕ್ಕ ತುಂಡು ಹಸಿ ಶುಂಠಿ, 2 ಸ್ಪೂನ್ ಜೀರಿಗೆ, 2 ಸ್ಪೂನ್ ಕೊತ್ತಂಬರಿ ಕಾಳು, 2 ಸ್ಪೂನ್ ಉದ್ದಿನ ಬೇಳೆ, ಅರ್ಧ ಕಪ್ ಬೆಲ್ಲ, ಚಿಟಿಕೆ ಅರಿಷಿನ, ಚಿಟಿಕೆ ಹೀಂಗೂ, ಒಗ್ಗರಣೆಗೆ 2 ಸ್ಪೂನ್ ಎಣ್ಣೆ, ಅರ್ಧ ಸ್ಪೂನ್ ಸಾಸಿವೆ, ಅರ್ಧ ಸ್ಪೂನ್ ಜೀರಿಗೆ, ಅರ್ಧ ಸ್ಪೂನ್ ಉದ್ದಿನ ಬೆಳೆ, 5ರಿಂದ 6 ಎಸಳು ಕರಿಬೇವು, ಖಾರ ಹೆಚ್ಚಿಗೆ ಬೇಕಾದಲ್ಲಿ ಹಸಿ ಮೆಣಸು ಅಥವಾ ಖಾರದ ಪುಡಿ ಬಳಸಬಹುದು, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಬೇಂಡೆಕಾಯಿಯನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ ಕತ್ತರಿಸಿ ಕೊಂಚ ಎಣ್ಣೆ ಹಾಕಿ ಹುರಿದುಕೊಳ್ಳಿ. ಅದರಲ್ಲಿರುವ ಲೋಳೆ ಹೋಗುವವರೆಗೂ ಹುರಿದು ಪಕ್ಕಕ್ಕಿರಿಸಿ. ಈಗ ಮಿಕ್ಸಿ ಜಾರ್‌ಗೆ ಕೊಬ್ಬರಿ ತುರಿ, ಹುಣಸೆಹಣ್ಣು, ಎಣ್ಣೆಯಲ್ಲಿ ಹುರಿದ ಒಣ ಮೆಣಸಿನಕಾಯಿ, ಚಿಕ್ಕ ತುಂಡು ಹಸಿ ಶುಂಠಿ ಜಜ್ಜಿ ಹಾಕಿ ಒಮ್ಮೆ ರುಬ್ಬಿ. ಈಗ ಒಂದು ಪ್ಯಾನ್‌ಗೆ ಜೀರಿಗೆ, ಕೊತ್ತಂಬರಿ ಕಾಳು, ಉದ್ದಿನ ಬೇಳೆ ಹಾಕಿ, ಕಂದು ಬಣ್ಣಕ್ಕೆ ತಿರುಗಿ ಘಮ ಬರುವಷ್ಟು ಹುರಿದು, ರುಬ್ಬಿರುವ ಮಿಶ್ರಣಕ್ಕೆ ಸೇರಿಸಿ ಮತ್ತೊಮ್ಮೆ ರುಬ್ಬಿ. ಈಗ ಸುಕ್ಕೆಗೆ ಬೇಕಾಗಿರುವ ಮಸಾಲೆ ರೆಡಿ.

ಈಗ ಪ್ಯಾನ್‌ಗೆ ಸ್ವಲ್ಪ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕರಿಬೇವು, ಈರುಳ್ಳಿ ಹಾಕಿ ಹುರಿಯಿರಿ. ಈಗ ಇದಕ್ಕೆ ಈಗಾಗಲೇ ಹುರಿದಿಟ್ಟುಕೊಂಡ ಬೇಂಡೆಕಾಯಿ ಹಾಕಿ ಮತ್ತೆ 2 ರಿಂದ 3 ನಿಮಿಷ ಹುರಿಯಿರಿ. ರುಬ್ಬಿದ ಮಸಾಲೆ ಮಿಶ್ರಣದ ಜೊತೆ ಕೊಂಚ ನೀರು, ಅರಿಷಿಣ, ಬೆಲ್ಲ, ಹೀಂಗೂ, ಉಪ್ಪು ಹಾಕಿ ಮಂದ ಉರಿಯಲ್ಲಿ 10 ನಿಮಿಷ ಬೇಯಿಸಿದರೆ ಬೇಂಡೆಕಾಯಿ ಸುಕ್ಕೆ ರೆಡಿ.

ನಾರ್ಮಲ್ ಆಗಿ ಬೆಂಡೇಕಾಯಿ ಪಲ್ಯಕ್ಕೆ ನೀರು ಹಾಕೋದಿಲ್ಲ. ಆದ್ರೆ, ಇದು ಸುಕ್ಕೆ ಆಗಿರುವುದರಿಂದ, ಇದಕ್ಕೆ ಮಸಾಲೆ ಹಾಕಲೇಬೇಕಾಗಿರುವುದರಿಂದ ನೀರು ಸೇರಿಸಬೇಕು. ಈ ಕಾರಣಕ್ಕಾಗಿಯೇ ಬೇಂಡೆಕಾಯಿಯನ್ನು ಮೊದಲೇ ಎಣ್ಣೆಯಲ್ಲಿ ಚೆನ್ನಾಗಿ ಫ್ರೈ ಮಾಡಿಕೊಂಡಿರಬೇಕು.

=========

ಇದನ್ನು ಓದಿ: Recipe: ಮನೆಯಲ್ಲೇ ಸುಲಭವಾಗಿ ತಯಾರಿಸಿ ಮಿಸಳ್ ಪಾವ್

ಕಡ್ಲೆ ಘಶಿ (Kadle Gravy)

ಬೇಕಾಗುವ ಸಾಮಗ್ರಿ: ಕಡಲೆ, 5 ಸ್ಪೂನ್ ಎಣ್ಣೆ, 15 ಎಸಳು ಬೆಳ್ಳುಳ್ಳಿ, ಸಣ್ಣ ತುಂಡು ಶುಂಠಿ, 2 ಈರುಳ್ಳಿ, 2 tomato, ಅರ್ಧ ಕಪ್ ಕಾಯಿತುರಿ, ಕರಿಬೇವು, ಹಸಿಮೆಣಸು, ಕೊತ್ತೊಂಬರಿ ಸೋಪ್ಪು, ಅರಿಶಿನ, ಗರಂ ಮಸಾಲೆ, ಹಿಂಗು, ಉಪ್ಪು.

ಮಾಡುವ ವಿಧಾನ: ಮ“ದಲು ನೆಂದ ಕಡ್ಲೆಯನ್ನು ನೀರು ಹಾಕಿ, ಕುಕ್ಕರ್‌ನಲ್ಲಿ ಬೇಯಿಸಿ. ಬಳಿಕ ಪ್ಯಾನ್‌ಗೆ ಎಣ್ಣೆ ಹಾಕಿ, ಅದಕ್ಕೆ ಬೆಳ್ಳುಳ್ಳಿ , ಶುಂಠಿ, ಈರುಳ್ಳಿ ಹಾಕಿ ಹುರಿದುಕ“ಳ್ಳಿ. ಬಳಿಕ Tomato ಹಾಕಿ ಬಾಡಿಸಿ. ನಂತರ ಕಾಯಿತುರಿ, ಕರಿಬೇವು, ಹಸಿಮೆಣಸು, ಕೊತ್ತೊಂಬರಿ ಸೋಪ್ಪು ಹಾಕಿ ಹುರಿಯಿರಿ.

ಇವೆಲ್ಲವನ್ನೂ ಮಧ್ಯಮ ಉರಿಯಲ್ಲಿ ಹುರಿದ ಬಳಿಕ ತಣ್ಣಗಾಗಲು ಬಿಡಿ. ನಂತರ ಮಿಕ್ಸಿ ಜಾರ್‌ಗೆ ಈ ಮಿಶ್ರಣ, ಕಾಲು ಕಪ್ ಬೇಯಿಸಿದ ಕಡಲೆ, ಅರಿಶಿನ, ಗರಂ ಮಸಾಲೆ ಪುಡಿ ಹಾಕಿ ರುಬ್ಬಿ. ಮತ್ತೆ ಪ್ಯಾನ್ ಬಿಸಿ ಮಾಡಿ, ಎಣ್ಣೆ, ಬೆಳ್ಳುಳ್ಳಿ ಕರಿಬೇವು, ಹಿಂಗು, ಈರುಳ್ಳಿ ಹಾಕಿ ಹುರಿಯಿರಿ.

ನಂತರ Tomato ಹಾಕಿ ಬಾಡಿಸಿ. ನಂತರ ಬೆಂದ ಕಡಲೆ ಕಾಳು, ರುಬ್ಬಿದ ಮಸಾಲೆ, ಉಪ್ಪು, ನೀರು ಹಾಕಿ ಮಂದ ಉರಿಯಲ್ಲಿ ಬೇಯಿಸಿ. ಬಳಿಕ ಕೊತ್ತೊಂಬರಿ ಸೋಪ್ಪು ಹಾಕಿ ಮಿಕ್‌ಸ್ ಮಾಡಿದ್ರೆ ಕಡ್ಲೆ ಘಶಿ ರೆಡಿ.

Tags: Aloo GravyBeauty tipsbjpBrinjal GravyCM SiddaramaiahCongressCorn MasalaHealth TipsInternational NewsJDSKadle GravyKannada NewsKannada StoriesKarnataka NewsKTVLady Finger GravyMix Vegetable GravyNational NewsPM ModiPolitical NewsRahul Gandhishri NewsSpecial StoriesSpecial StorySports NewsState News
ShareSendTweetShare
Join us on:

Related Posts

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Health Tips: ಕೂದಲು, ತ್ವಚೆ, ದೈಹಿಕ, ಮಾನಸಿಕ ಎಲ್ಲ ಆರೋಗ್ಯ ಅಭಿವೃದ್ಧಿಗೂ ಇಲ್ಲಿದೆ ರಾಶಿ ರಾಶಿ ಟಿಪ್ಸ್

Health Tips: ಕೂದಲು, ತ್ವಚೆ, ದೈಹಿಕ, ಮಾನಸಿಕ ಎಲ್ಲ ಆರೋಗ್ಯ ಅಭಿವೃದ್ಧಿಗೂ ಇಲ್ಲಿದೆ ರಾಶಿ ರಾಶಿ ಟಿಪ್ಸ್

Health Tips: ಮಲಗುವ ಮುನ್ನ ಈ 1 ಕೆಲಸ ಮಾಡಿದ್ರೆ ಸಾಕು, ಸುಸ್ತು ಅಂದ್ರೇನು ಅಂತಾ ಮರೆತೇ ಹೋಗತ್ತೆ..

Health Tips: ಮಲಗುವ ಮುನ್ನ ಈ 1 ಕೆಲಸ ಮಾಡಿದ್ರೆ ಸಾಕು, ಸುಸ್ತು ಅಂದ್ರೇನು ಅಂತಾ ಮರೆತೇ ಹೋಗತ್ತೆ..

Life Lesson: ತಾಳ್ಮೆಯಿಂದ ಇದ್ದು ಶ್ರೀಮಂತರಾಗುವುದನ್ನು ಕಲಿಯಿರಿ..

Life Lesson: ತಾಳ್ಮೆಯಿಂದ ಇದ್ದು ಶ್ರೀಮಂತರಾಗುವುದನ್ನು ಕಲಿಯಿರಿ..

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಪನೀರ್ ಚಿಲ್ಲಿ ರೆಸಿಪಿ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In