ಚೆನ್ನೈ: ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಭಾನುವಾರದ ಬೆಳಗು ಎಂದಿನಂತೆ ಇರಲಿಲಿಲ್ಲ. ಮನೆಯ ಬಾಗಿಲು ತೆಗೆದು ಮುಂದಿಡಿ ಇಟ್ಟವರನ್ನು ಮಂಡಿಯುದ್ದದ ನೀರು ಸ್ವಾಗತಿಸಿತು. ಶನಿವಾರ ರಾತ್ರಿಯಿಂದ ಭಾನುವಾರ ಬೆಳಗ್ಗೆಯವರೆಗೆ ಸುರಿದ ಭಾರಿ ಮಳೆಯಿಂದ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತ್ತು. ಬಹುತೇಕ ಎಲ್ಲ ರಸ್ತೆಗಳಲ್ಲಿ ನದಿ ನೀರನಂತೆ ಪ್ರವಾಹ ಉಂಟಾಗಿತ್ತು. ಇದರಿಂದ ವಾಹನಗಳು ಮುಳುಗಿದ್ದವು. ಆದರೆ, ವಿಮಾನ ಸಂಚಾರಕ್ಕೆ ಅಡಚಣೆ ಆಗಿಲ್ಲ.
ಅಣ್ಣಾ ನಗರ, ಕೆ.ಕೆ.ನಗರ, ಎಗ್ಮೋರ್, ಪಾಡಿ ಸೇತುವೆ, ಜವಾಹರ್ ನಗರ ಮುಂತಾದ ಕಡೆಗಳ ರಸ್ತೆಯಲ್ಲಿ ಮಂಡಿಮಟ್ಟದ ನೀರಿತ್ತು. ಇಲ್ಲಿನ ಅಪಾರ್ಟ್ಮೆಂಟ್ಗಳ ತಳಮಹಡಿಯಲ್ಲಿ ಮೂರು ಅಡಿಗೂ ಹೆಚ್ಚು ನೀರು ನಿಂತಿತ್ತು.
ಭಾನುವಾರ ಬೆಳಗ್ಗೆ ವರೆಗೆ 21 ಸೆಂಟಿಮೀಟರ್ ಮಳೆ ಆಗಿರುವುದರಿಂದ ಚೆನ್ನೈ ಬಳಿಯ ಎಲ್ಲ ಕೆರೆಗಳು ತುಂಬಿ ಹೋಗಿವೆ. ನಗರಕ್ಕೆ ನೀರು ಪೂರೈಕೆ ಮಾಡುವ 85.4 ಅಡಿ ಸಂಗ್ರಹ ಸಾಮರ್ಥ್ಯದ ಚೆಂಬರಾಂಬಕ್ಕಂ ಕೆರೆಯಲ್ಲಿ 82.35 ಅಡಿ ಭತಿರ್ಯಾಗಿದ್ದು, ನೀರು ಬಿಡಲಾಗುತ್ತಿದೆ. ಕೆಳಪ್ರದೇಶದಲ್ಲಿ ಎಚ್ಚರಿಕೆ ಘೋಷಿಸಲಾಗಿದೆ.
ಅಡ್ಯಾರ್ ನದಿ ಅಪಾಯ ಮಟ್ಟಮೀರಿ ಹರಿಯುತ್ತಿದ್ದು, ಇದರ ದಂಡೆಗಿರುವ ಊರುಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.ಮದುರೈ, ಅರಕೋಣಂ, ತಿರುವಳ್ಳೂರ್, ಚೆಂಗಲ್ಪಟ್ಟು, ಜಿಲ್ಲೆಗಳಿಗೆ ಎನ್ಡಿಆರ್ಎ್ ತಂಡಗಳನ್ನು ರವಾನಿಸಲಾಗಿದೆ. 2015ರ ನವೆಂಬರ್ 16ರಂದು ಚೆನ್ನೆ$ನಲ್ಲಿ 24 ಸೆಂಟಿಮೀಟರ್ ಮಳೆ ಸುರಿದಿತ್ತು.
ತೀವ್ರ ಮಳೆಯ ಮುನ್ಸೂಚನೆ
ವೆಲ್ಲುಪುರಂ, ಕಡಲೂರು, ತಿರುವಣ್ಣಾಮಲೈ, ತಿರುಚಿ, ತಿರುವಳ್ಳೂರು, ರಾಣಿಪೇಟ್, ವೆಲ್ಲೂರು, ತಿರುಪತ್ತೂರು, ಕಲ್ಲಕುರುಚಿ, ಕೃಷ್ಣಗಿರಿ, ಈರೋಡ್, ನಾಮಕ್ಕಲ್, ಕಾಂಚಿಪುರಂ ಚೆಂಗಲ್ಪುಟ್ಟು, ನೀಲಗಿರಿ, ಸೇಲಂ ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುಂದಿನ ಕೆಲವು ದಿನ ಅಧಿಕವಾಗಿ ಮಳೆ ಬೀಳಲಿದೆ ಎಂದು ಮುನ್ಸೂಚನೆ ನೀಡಿದೆ.
ಕೇರಳದಲ್ಲಿ 12 ದಶಕದಲ್ಲೇ ದಾಖಲೆಯ ವರ್ಷಧಾರೆ
ಕೇರಳದಲ್ಲಿ ಕಳೆದ ತಿಂಗಳು 589.9 ಮಿಲಿಮೀಟರ್ ಮಳೆಯಾಗಿದ್ದು, ಇದು 120 ವರ್ಷಗಳಲ್ಲಿ ಸುರಿದ ಅತ್ಯಧಿಕ ವರ್ಷಧಾರೆ ಆಗಿದೆ ಎಂದು ಐಎಂಡಿ ತಿಳಿಸಿದೆ. ಈ ಹನ್ನೆರಡು ದಶಕದಲ್ಲಿ ರಾಜ್ಯದಲ್ಲಿ ಸರಾಸರಿ 200ರಿಂದ 400 ಎಂ.ಎಂ. ಮಳೆ ಆಗಿದ್ದು, 1932ರಲ್ಲಿ 524.2 ಮಿಲಿಮೀಟರ್, 1999ರಲ್ಲಿ ಮಿಲಿಮೀಟರ್ ಮತ್ತು 2002ರಲ್ಲಿ 511.7 ಮಿಲಿಮೀಟರ್ ವರ್ಷಧಾರೆ ಸುರಿದಿದೆ. 1989ರಲ್ಲಿ ಸುರಿದ 100 ಮಿಲಿಮೀಟರ್ ಮಳೆ ಅತ್ಯಂತ ಕಡಿಮೆ ಮಟ್ಟದ್ದಾಗಿದೆ.
ಇದನ್ನೂ ಓದಿ: ಮಳೆಯ ಅಬ್ಬರ: ಮುಂದಿನ ನಾಲ್ಕು ದಿನವೂ ಮಳೆಯಾಗುವ ಸಾಧ್ಯತೆ.
Heavy Rain in Chennai Record Rainfall
Discussion about this post