• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಆರೋಗ್ಯ

Opinion: ವಯಸ್ಸಾದ ಮಾತ್ರಕ್ಕೆ ಭಾರ ಎನಿಸಬೇಕೆ? ಹಿರಿಯ ನಾಗರಿಕರ ನೆಮ್ಮದಿಗೆ ಕಿರಿಯರು ಏನು ಮಾಡಬಹುದು?

ತಾವು ಸ್ವಾವಲಂಬಿಗಳಾದ ಮೇಲೆ ಮಕ್ಕಳು ಪೋಷಕರನ್ನು ಮರೆತುಬಿಡುವುದು ನ್ಯಾಯವೆ?

Shri News Desk by Shri News Desk
Oct 8, 2021, 01:35 pm IST
in ಆರೋಗ್ಯ
Senior Citizen

ವೃದ್ಧಾಪ್ಯದಲ್ಲಿ ನೆಮ್ಮದಿ ಮರೀಚಿಕೆಯೇ? (ಪ್ರಾತಿನಿಧಿಕ ಚಿತ್ರ)

Share on FacebookShare on TwitterTelegram

ನಮ್ಮ ಸಮಾಜವನ್ನು ಬಾಧಿಸುತ್ತಿರುವ ಅನೇಕ ಜ್ವಲಂತ ಸಮಸ್ಯೆಗಳಲ್ಲಿ ಪ್ರಮುಖವಾದ ಸಮಸ್ಯೆಯೆಂದರೆ ವೃದ್ಧರನ್ನು ಸಂವೇದನಾರಹಿತವಾಗಿ ನೋಡಿಕೊಳ್ಳುತ್ತಿರುವುದು, ನಡೆಸಿಕೊಳ್ಳುತ್ತಿರುವುದು.  ತಾವು ಹೆತ್ತ ಮಕ್ಕಳೇ ತಮ್ಮನ್ನು ಹೀನಾಯವಾಗಿ ನಡೆಸಿಕೊಂಡಾಗ ಆ ಹಿರಿಯ ಜೀವಗಳು ಅನುಭವಿಸುವ ಮಾನಸಿಕ ಯಾತನೆ ಊಹೆಗೂ ನಿಲುಕದ್ದು.  ಹುಟ್ಟಿದಾರಭ್ಯ ಮಕ್ಕಳೇ ತಮ್ಮ ಸರ್ವಸ್ವವೆಂದು ಭಾವಿಸಿ ತಮ್ಮ  ಸುಖ-ಸಂತೋ‍ಷಗಳನ್ನೂ ತ್ಯಾಗ ಮಾಡಿ ಸಾಕಿ ಸಲಹುವ ತಂದೆ-ತಾಯಿಯರು ಅನಿವಾರ್ಯವಾಗಿ ವೃದ್ಧಾಪ್ಯದಲ್ಲಿ ತಮ್ಮ ಮಕ್ಕಳನ್ನೇ ಅವಲಂಬಿಸಬೇಕಾಗುತ್ತದೆ.  ಅಲ್ಲಿಯ ತನಕ ಪೋಷಕರ ಬೆಂಬಲದಲ್ಲೇ ಬೆಳೆದು, ವಿದ್ಯಾರ್ಜನೆ ಮಾಡಿ, ತಮ್ಮ ಬೇಕು-ಬೇಡಗಳನ್ನೆಲ್ಲಾ ಈಡೇರಿಸಿಕೊಳ್ಳುವ ಮಕ್ಕಳು ಒಮ್ಮೆ ತಾವು ಸ್ವಾವಲಂಬಿಗಳಾದ ಮೇಲೆ ಈ ಸ್ಥಿತಿಗೆ ಬರಲು ಕಾರಣರಾದ ಪೋಷಕರು, ಅವರು ತಮಗೆ ನೀಡಿದ ಬೆಂಬಲ ಎಲ್ಲವನ್ನೂ ಮರೆತುಬಿಡುತ್ತಾರೆ.

ಎಲ್ಲಿಯವರೆಗೂ ಪೋಷಕರು ಆರೋಗ್ಯವಾಗಿದ್ದು ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಲು ಶಕ್ತರಾಗಿರತ್ತಾರೋ ಅಲ್ಲಿಯವರೆಗೆ ಹೆಚ್ಚಿನ ಸಮಸ್ಯೆ ಇರದು.  ಒಂದೊಮ್ಮೆ ದುರದೃಷ್ಟವಶಾತ್ ಅನಾರೋಗ್ಯಪೀಡಿತರಾಗಿ ಹಾಸಿಗೆ ಹಿಡಿದುಬಿಟ್ಟರೆ ಕೆಲವೇ ದಿನಗಳಲ್ಲಿ ಮಕ್ಕಳ ತಾಳ್ಮೆ ಕಳೆದುಹೋಗುವ ಸಾಧ್ಯತೆಗಳೇ ಹೆಚ್ಚು.  ತಾವು ಮಕ್ಕಳಾಗಿದ್ದಾಗ ವರ್ಷಾನುಗಟ್ಟಲೆ ಪೋಷಕರಿಂದ ಪಡೆದ ಸೇವೆ-ಸಹಾಯ ಎಲ್ಲಾ ಮರೆತು ಈ ಸಮಸ್ಯೆಯಿಂದ ಆದಷ್ಟು ಬೇಗ ಹೊರಬರುವ ದಾರಿ ಕುರಿತು ಯೋಚಿಸತೊಡಗುತ್ತಾರೆ.  ಆಗ ಅವರಿಗೆ ಹೊಳೆಯುವ ಉಪಾಯವೇ ವೃದ್ಧಾಶ್ರಮಗಳು.

ಒಂದು ವೇಳೆ ಮದುವೆಯಾಗಿ ಮನೆಗೆ ಬಂದ ಸೊಸೆಯಂದಿರೂ ಇದೇ ಮನೋಭಾವದವರಾಗಿಬಿಟ್ಟರಂತೂ ಮುಗಿದೇ ಹೋಯಿತು, ವೃದ್ಧರ ಜೀವನ ನರಕಸದೃಶವಾಗಿಬಿಡುತ್ತದೆ.

ಪೋಷಕರೇನಾದರೂ ಆರ್ಥಿಕವಾಗಿ ಸಬಲರಾಗಿದ್ದರೆ, ಆಸ್ತಿವಂತರಾಗಿದ್ದರೆ ಹೆಚ್ಚಿನ ಸಮಸ್ಯೆಯಿರದು.  ದುರದೃಷ್ಟದಿಂದ ಆರ್ಥಿಕವಾಗಿ ದುರ್ಬಲರಾದರೆ ಅವರದು ಅತ್ಯಂತ ದಯನೀಯ ಸ್ಥಿತಿ.   ಎಷ್ಟೋ ಜನ ಸ್ಥಿತಿವಂತ ಮಕ್ಕಳೇ ತಮ್ಮ ತಾಯಿಯನ್ನೋ ಅಥವಾ ತಂದೆಯನ್ನೋ ತಮ್ಮದೇ ವಾಹನಗಳಲ್ಲಿ ಕರೆತಂದು ಕಾಣದ ಪ್ರದೇಶಗಳಲ್ಲಿ, ಪರಿಚಯವೇ ಇಲ್ಲದ ಊರುಗಳಲ್ಲಿ ಬಿಟ್ಟುಹೋಗಿರುವ ನಿದರ್ಶನಗಳು ಬೇಕಾದಷ್ಟಿವೆ, ಆಗಾಗ ವರದಿಯಾಗುತ್ತಿವೆ.

ವಿವಾಹ ಸಂದರ್ಭದಲ್ಲಿ ಕೆಲವೊಂದು ನಕ್ಷತ್ರಗಳಲ್ಲಿ ಜನಿಸಿದ ಹೆಣ್ಣುಮಕ್ಕಳಿಗೆ ಅತ್ತೆ/ಮಾವನಿಲ್ಲದ ಮನೆ ಹಾಗೂ ಭಾವ/ಮೈದುನರಿಲ್ಲದ ಮನೆ ಬೇಕೆಂದು ಹುಡುಕುವ ಕಾಲವೊಂದಿತ್ತು. ಆದರೆ, ಈಗ ತಮ್ಮ ಮಗಳನ್ನು ಅತ್ತೆ-ಮಾವಂದಿರಿಲ್ಲದ ಮನೆಗೆ ಮಾತ್ರ ಕೊಡುತ್ತೇವೆನ್ನುವವರೆಗೆ ಹೆಣ್ಣಿನ ಪೋಷಕರು ಬಂದಿರುವುದು ನಾಚಿಕೆಯಿಂದ ತಲೆ ತಗ್ಗಿಸಬೇಕಾಗಿರುವ ವಿಚಾರ.   ಪೋಷಕರಿಗೇ ಇಂತಹ ಮನೋಭಾವವಿದ್ದರೆ ಅವರು ಬೆಳೆಸಿದ ಹೆಣ್ಣುಮಕ್ಕಳಲ್ಲಿ ಇನ್ನೆಂಥ ಅಭಿಪ್ರಾಯವಿರುತ್ತದೆನ್ನುವುದನ್ನು ಊಹಿಸಲು ಹೆಚ್ಚೇನೂ ಕಷ್ಟ ಪಡಬೇಕಾಗಿಲ್ಲ.  ಅತ್ತೆ-ಮಾವಂದಿರನ್ನೇ ತನ್ನ ತಂದೆ-ತಾಯಿಯಂತೆ ಭಾವಿಸಿ ಸಲಹುತ್ತಿದ್ದ, ಸಲಹುತ್ತಿರುವ ಹೆಣ್ಣುಮಕ್ಕಳು ಇಂದಿಗೂ ಬಹುತೇಕರು ನಮ್ಮಲ್ಲಿದ್ದಾರೆ.

ಉದಾತ್ತವಾದ ಭಾರತೀಯ ಸಂಸ್ಕೃತಿಯಲ್ಲಿ ತಂದೆ-ತಾಯಿಯರನ್ನು ದೈವಸಮಾನವೆಂದು ಭಾವಿಸಿ ಪೋ‍ಷಿಸುತ್ತಿದ್ದ ನಾವು ತಲುಪಿರುವ ಅಧೋಗತಿಗೆ ಇದು ಕನ್ನಡಿ ಹಿಡಿಯುವ ವಿಷಯ.  ವಿದ್ಯಾವಂತರೂ, ಸ್ಥಿತಿವಂತರೂ, ಸಮಾಜದಲ್ಲಿ ಗಣ್ಯಸ್ಥಾನಗಳನ್ನು ಹೊಂದಿರುವವರೂ ಇಂತಹ ಕೃತ್ಯಗಳಲ್ಲಿ ತೊಡಗುತ್ತಿರುವುದು ಅತ್ಯಂತ ಶೋಚನೀಯ, ಖಂಡನೀಯ. ಅಂಧ ಮಾತಾಪಿತೃಗಳನ್ನು ಕಾವಡಿಯಲ್ಲಿ ಹೊತ್ತು ತೀರ್ಥಯಾತ್ರೆ ಮಾಡಿಸಿದ ಶ್ರವಣಕುಮಾರನಂಥ ಸಹೃದಯಿಗಳು ಜನಿಸಿದ ನಾಡು, ಸಂಸ್ಕೃತಿ ನಮ್ಮದು.

ನಮ್ಮನ್ನು ಹೆತ್ತು-ಹೊತ್ತು ಸಾಕಿ-ಸಲಹಲು ಅನೇಕ ಕಷ್ಟಗಳನ್ನು ನಗು-ನಗುತ್ತ ಎದುರಿಸಿ, ನಮ್ಮ ಸಂತೋಷಕ್ಕಾಗಿ ತಮ್ಮ ಸುಖ-ಸಂತೋಷಗಳನ್ನು ತ್ಯಾಗಮಾಡಿದ ನಮ್ಮ ಪೋಷಕರನ್ನು ಅವರ ಅಂತ್ಯಕಾಲದಲ್ಲಿ ಪ್ರೀತ್ಯಾದರಗಳಿಂದ ಹಾಗೂ ಅವರ  ಗೌರವಕ್ಕೆ ಧಕ್ಕೆಬಾರದಂತೆ, ಮನಸ್ಸಿಗೆ ಘಾಸಿಯಾಗದಂತೆ ನೋಡಿಕೊಳ್ಳಬೇಕಾದದ್ದು ಮಕ್ಕಳಾಗಿ ನಮ್ಮ ಆದ್ಯ ಕರ್ತವ್ಯವಲ್ಲವೇ? ಅಷ್ಟೂ ಮಾನವೀಯತೆ ನಮ್ಮಲ್ಲಿಲ್ಲದಿದ್ದರೆ ನಮ್ಮ ಮನುಷ್ಯ ಜನ್ಮಕ್ಕೆ ಅರ್ಥವೆಲ್ಲಿದೆ?  ಇನ್ನಾದರೂ ನಮ್ಮ ಜವಾಬ್ದಾರಿಯರಿತು ಮೃಗೀಯತೆ ತೊರೆದು ಹಿರಿಯ ಜೀವಗಳು ತಮ್ಮ ಅಂತಿಮ ದಿನಗಳನ್ನು ಸಂತೃಪ್ತಿಯಿಂದ ಕಳೆಯುವಂತೆ ಮಾಡುವುದೇ ನಮ್ಮ ಜೀವನದ ಗುರಿಯಾಗಬೇಕಲ್ಲವೇ?

how to care old-age people senior citizen

ಇದನ್ನೂ ಓದಿ: ಪೆರಿಯಾರ್ ರಾಮಸ್ವಾಮಿ ಜನ್ಮದಿನ;ಸಾಮಾಜಿಕ ನ್ಯಾಯದಿನ
ಇದನ್ನೂ ಓದಿ:ಧಾರ್ಮಿಕ ಮತ್ತು ಸಾಮಾಜಿಕ ಬದಲಾವಣೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಕೊಡುಗೆ ಅವಿಸ್ಮರಣೀಯ

Tags: Old AgeSenior CitizensTOP NEWS
ShareSendTweetShare
Join us on:

Related Posts

5 lifestyle to lose belly fat

ಹೊಟ್ಟೆಯ ಬೊಜ್ಜು ಕರಗಿಸಲು ಬದಲಿಸಿ ನಿಮ್ಮ ಜೀವನ ಶೈಲಿಯನ್ನು

Bare Fruit

Bare Fruit Benefits: ಬಡವರ ಸೇಬು ಬೋರೆ ಹಣ್ಣು: ರುಚಿಗೂ ಸೈ ಆರೋಗ್ಯಕ್ಕೂ ಜೈ

ದೇಶದ 14 ಸಿಟಿಗಳಲ್ಲಿ ಕೋವಿಡ್‌ ಸೋಂಕು ಏರಿಕೆ: 8 ರಾಜ್ಯಗಳಿಗೆ ಕೇಂದ್ರ ಪತ್ರ

ದೇಶದ 14 ಸಿಟಿಗಳಲ್ಲಿ ಕೋವಿಡ್‌ ಸೋಂಕು ಏರಿಕೆ: 8 ರಾಜ್ಯಗಳಿಗೆ ಕೇಂದ್ರ ಪತ್ರ

Omicron

ಓಮಿಕ್ರಾನ್ ಬಂದರೆ ಆರೋಗ್ಯದಲ್ಲಿ ಆಗುವ ಬದಲಾವಣೆಗಳೇನು?

ನೀಟ್‌ ಪಿಜಿ ಕೌನ್ಸಲಿಂಗ್‌ ವಿಳಂಬ ವಿರೋಧಿಸಿ ದೆಹಲಿ ವೈದ್ಯರ ತೀವ್ರ ಪ್ರತಿಭಟನೆ

ನೀಟ್‌ ಪಿಜಿ ಕೌನ್ಸಲಿಂಗ್‌ ವಿಳಂಬ ವಿರೋಧಿಸಿ ದೆಹಲಿ ವೈದ್ಯರ ತೀವ್ರ ಪ್ರತಿಭಟನೆ

ಕೋವಿಡ್‌ ಸೋಂಕು ಹೆಚ್ಚಳದ ಕಾರಣ ವಿಶ್ವದಾದ್ಯಂತ 11,500 ವಿಮಾನಗಳ ಸಂಚಾರ ರದ್ದು

ಕೋವಿಡ್‌ ಸೋಂಕು ಹೆಚ್ಚಳದ ಕಾರಣ ವಿಶ್ವದಾದ್ಯಂತ 11,500 ವಿಮಾನಗಳ ಸಂಚಾರ ರದ್ದು

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In