ನವದೆಹಲಿ: ನವರಾತ್ರಿಯ ಅಂತ್ಯಕ್ಕೆ ಬರುವ ಆಯುಧ ಪೂಜೆ ಸಡಗರದ ಮಧ್ಯೆ ಭಾರತೀಯ ವಾಯುಪಡೆ ಚಿನೂಕ್, ಮಿಗ್-17, ಅಪಾಚೆ ಮತ್ತು ಚೀತಾ ಹೆಲಿಕಾಪ್ಟರ್ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿ ಹಬ್ಬಕ್ಕೆ ಮೆರುಗು ನೀಡಿದೆ.
ವಿಂಗ್ ಕಮಾಂಡರ್ ಇಂದ್ರನಿಲ್ ನಂದಿ ಕ್ಲಿಕಿಸಿರುವ ಚಿತ್ರಗಳು ವಾಯು ಸೇನೆಯ ಮಾಧ್ಯಮ ಸಂಯೋಜಕರ ಅಧಿಕೃತ ಹ್ಯಾಂಡಲ್ನಿಂದಲೇ ಹ್ಯಾಷ್ಟ್ಯಾಗ್ “ಶೋಸ್ಟಾರ್ಸ್’ ಸಂಗಡ ಪೋಸ್ಟ್ ಆಗಿದೆ. ಈ ಹೆಲಿಕಾಪ್ಟರ್ಗಳು ಪವರ್ತದ ಸಾಲಿನ ಹಿನ್ನೆಲಯಲ್ಲಿ, ಸೊಗಸಾದ ಬೆಳಕಿನ ಸಂಯೋಜನೆಯಲ್ಲಿ ಒಂದೇ ಸಾಲಿನಲ್ಲಿ ಶ್ರೇಣಿಕೃತವಾಗಿ ಲ್ಯಾಂಡ್ ಆಗುತ್ತಿರುವ ಮತ್ತು ಲ್ಯಾಂಡ್ ಆದ ಮೇಲೆ ರನ್ ವೇನಲ್ಲಿ ಶಿಸ್ತಿನ ಸಿಪಾಯಿಗಳಂತೆ ನಿಂತಿರುವ ಕ್ಷಣದಲ್ಲಿ ಕ್ಲಿಕಿಸಲ್ಪಟ್ಟಿರುವುದು ಚಿತ್ರ ಸೊಬಗನ್ನು ಇಮ್ಮಡಿಸಿದೆ. ನೆಟ್ಟಿಗರು ವಿವಿಧ ಅಡಿ ಶೀರ್ಷಿಕೆಯಲ್ಲಿ ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಹಬ್ಬದ ಸಾಲಿನಲ್ಲಿ ಹೆಲೋ ಲವ್” ಎಂದು ಔಚಿತ್ಯಪೂರ್ಣವಾಗಿ ಹೇಳಿದ್ದಾರೆ.
9 ಸಾವಿರ ಜನರು ಈ ಪೋಸ್ಟ್ ಅನ್ನು ಲೈಕ್ ಮಾಡಿದ್ದು, 1 ಸಾವಿರ ಸಾರಿ ರೀಟ್ವೀಟ್ ಆಗಿದೆ. ಅನೇಕರು ಹೆಲಿಕಾಪ್ಟರ್ ಹೆಸರನ್ನು ಗುರುತಿಸುವ ಪ್ರಯತ್ನವನ್ನೂ ಮಾಡಿದ್ದಾರೆ.
‘ನನಗೆ ಮೊದಲ ಬಾರಿಗೆ ಹೆಲಿಕಾಪ್ಟರ್ ಬಗ್ಗೆ ಒಲವು ಮೂಡಿತು’ ಎಂದು ಒಬ್ಬರು ಹೇಳಿದ್ದರೆ, “ಬೆಟ್ಟದ ಸಾಲಿನ ಹಿನ್ನೆಲೆ ತೆಗೆದ ಚಿತ್ರ ಅದ್ಭುತ ಫೋಟೋಗ್ರಫಿ’ ಎಂದು ಮತ್ತೊಬ್ಬರು ಶ್ಲಾಘಿಸಿದ್ದಾರೆ. ‘ವಾವ್ ಮೆಜಸ್ಟಿಕ್ ಬ್ಯಾಕ್ ಡ್ರಾಪ್ನಲ್ಲಿರುವ ಸುಂದರ ಚಿತ್ರ’ವೆಂದು ಇನ್ನೊಬ್ಬರು ಹೇಳಿದ್ದಾರೆ.
IAF Showcases Its Helicopter
ಇದನ್ನು ಓದಿ: ಏರ್ ಲಿಫ್ಟ್ ನಿಂದ ಭಾರತೀಯರ ಸುಖಾಗಮನ:ಭಾರತೀಯ ವಾಯುಸೇನೆ ಶ್ಲಾಘನೆ
ಇದನ್ನು ಓದಿ: ಅಪರೇಷನ್ ಕಾಬೂಲ್: ನೂರಾರು ಭಾರತೀಯರು ತಾಯ್ನಾಡಿಗೆ ಏರ್ ಲಿಫ್ಟ್
Discussion about this post