ನವದೆಹಲಿ: ಅತ್ಯಾಧುನಿಕವಾದ ಎಕೆ-203 ಅಸಾಲ್ಟ್ ರೈಫಲ್ಸ್ ಅನ್ನು ರಷ್ಯಾದಿಂದ ಖರೀದಿಸಲಾಗುತ್ತಿದ್ದು, ಈ ಕುರಿತ ಒಪ್ಪಂದಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೋಮವಾರ (ಡಿ.6) ಭಾರತಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಸಹಿ ಬೀಳಲಿದೆ. 7 ಲಕ್ಷ ರೈಫಲ್ಗಳನ್ನು ರಷ್ಯಾ ನೇರವಾಗಿ ಸರಬರಾಜು ಮಾಡಲಿದೆ. ಉಳಿದ 50,000 ರೈಲ್ಗಳನ್ನು ಉತ್ತರ ಪ್ರದೇಶದ ಅಮೇಠಿಯ ಕೊರ್ವಾ ಕಾರ್ಖಾನೆಯಲ್ಲಿ ತಯಾರಿಸಲಾಗುತ್ತದೆ.
ಇದು ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮದಲ್ಲಿ ಸಾಕಾರಗೊಳ್ಳಲಿದೆ. ಇದರಿಂದ ಉದ್ಯೋಗ ಸೃಷ್ಟಿ ಮತ್ತು ಕಚ್ಚಾ ಸಾಮಗ್ರಿಗಳಿಗಾಗಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳನ್ನು ಅವಲಂಬಿಸಬೇಕಿರುವುದರಿಂದ ಈ ಉದ್ದಿಮೆಗಳಿಗೆ ಬೇಡಿಕೆ ಹೆಚ್ಚಲಿದೆ. ರಷ್ಯಾದಿಂದ ಭಾರತ ಎಕೆ-203 ಅಸಾಲ್ಟ್ ರೈಫಲ್ಸ್ ಖರೀದಿಸುತ್ತಿದ್ದು, ಉತ್ತರ ಪ್ರದೇಶದ ಅಮೇಠಿಯ ಘಟಕದಲ್ಲೂ ಇದು ತಯಾರಿಕೆ ಆಗಲಿದೆ.
ಎಕೆ -203 ರೈಫಲ್ಸ್ ಸಾಮರ್ಥ್ಯ
ಇಂಡೋ-ರಷ್ಯನ್ ರೈಲ್ಸ್ ಪ್ರೈವೇಟ್ ಲಿಮಿಟೆಡ್ (ಐಆರ್ಆರ್ಪಿಎಲ್) ಈ ರೈಫಲ್ಸ್ಗಳನ್ನು ತಯಾರಿಸಲಿದ್ದು, ಎಕೆ-47 ರೈಫಲ್ಸ್ನ ಸುಧಾರಿತ ರೂಪ ಇದಾಗಿದೆ. ಗಾತ್ರದಲ್ಲಿ ಹೆಚ್ಚು ದೊಡ್ಡದಾಗಿರುವ ಈ ರೈಲ್, 7.62 ಎಂಎಂ ಸುತ್ತು ಗುಂಡನ್ನು ಹಾರಿಸುವ ಸಾಮರ್ಥ್ಯ ಹೊಂದಿದೆ. ಇದೇ ಶ್ರೇಣಿಯ ಇತರ ರೈಫಲ್ಸ್ಗಳು 5.56 ಎಂಎಂ ಸುತ್ತಿನದ್ದಾಗಿವೆ. 300 ಮೀಟರ್ಗೂ ಅಧಿಕ ದೂರದವರೆಗೆ ಗುಂಡು ಹಾರಲಿದ್ದು, ಗುರಿ ಇಡುವ ಕಿಂಡಿಯನ್ನು ವಿಶೇಷವಾಗಿ ರೂಪಿಸಲಾಗಿದೆ. ರೈಫಲ್ನ ಹಿಡಿಕೆ (ಗ್ರಿಪ್) ಉತ್ತಮವಾಗಿದೆ. ವಿಶೇಷ ಕಾರ್ಯಾಚರಣೆಗೆ ಹೇಳಿ ಮಾಡಿಸಿದಂತೆ ಇದೆ.
ಸೇನೆಯಲ್ಲಿ ಮೂರು ದಶಕದಿಂದ ಬಳಕೆಯಲ್ಲಿರುವ ಇನ್ಸಾಸ್ ರೈಫಲ್ಸ್ಗಳ ಬದಲಿಗೆ ಇದನ್ನು ಖರೀದಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಉಭಯ ರಾಷ್ಟ್ರಗಳ ಸೇನಾ ಸಹಕಾರ, ಪಾಲುದಾರಿಕೆ ವಿಚಾರದಲ್ಲಿ ಈ ಒಪ್ಪಂವು ಅಧ್ಯಾಯವಾಗಿ ಸೇರ್ಪಡೆಯಾಗಲಿದೆ ಎಂದು ಹೇಳಿವೆ.
ಇದನ್ನೂ ಓದಿ: ಭಾರತದಲ್ಲಿ 6.20 ಕೋಟಿ ಬೀದಿ ನಾಯಿ, 91 ಲಕ್ಷ ಬೆಕ್ಕುಗಳಿವೆ!
(Indian Army will soon get indigenous AK-203 Assault Rifles)
Discussion about this post