ಉತ್ತರ ಭಾರತದ ಸುಂದರ ಗಿರಿಪ್ರದೇಶಗಳಲ್ಲಿ ರಜಾದಿನಗಳನ್ನು ಕಳೆದು ಬಂದ ಬೋನಿ ಕಪೂರ್ ಮತ್ತು ಜಾಹ್ನವಿ ಕಪೂರ್ ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿದಾಗ ಈ ಘಟನೆ ನಡೆದಿದೆ. ಪಾಪರಾಜಿಗಳು ತಂದೆ-ಮಗಳಿಬ್ಬರ ಛಾಯಾಚಿತ್ರಗಳನ್ನು ತೆಗೆಯಲು ಮುಂದಾಗಿ ಬೋನಿ ಕಪೂರ್ರಿಗೆ ಮಾಸ್ಕ್ ತೆಗೆಯಲು ಹೇಳಿದಾಗ ಅವರು ಅದನ್ನು ತೆಗೆಯಲು ಮುಂದಾದರು.
ಪಕ್ಕದಲ್ಲಿದ್ದ, ಜಾಹ್ನವಿ ಇದಕ್ಕೆ ಒಪ್ಪದೇ ತಮ್ಮ ತಂದೆಗೆ ಮತ್ತೆ ಮಾಸ್ಕ್ ಧರಿಸುವಂತೆ ಹೇಳಿದರು. ಈ ಸಂದರ್ಭದಲ್ಲಿ ಪಾಪರಾಜಿಗಳು “ಮಾಸ್ಕ್ ತೆಗೆಯಿರಿ, ಏನೂ ಆಗುವುದಿಲ್ಲ” ಎಂದಾಗ ಕೆರಳಿದ ಜಾಹ್ನವಿ “ನೀವು ತಪ್ಪು ಸಲಹೆಗಳನ್ನೂ ನೀಡಬೇಡಿ” ಎಂದು ಅವರನ್ನು ತರಾಟೆಗೆ ತೆಗೆದುಕೊಂಡರು. ಇದಾದ ನಂತರ ತಂದೆ-ಮಗಳಿಬ್ಬರೂ ಮಾಸ್ಕ್ ಧರಿಸಿಯೇ ಛಾಯಾಚಿತ್ರಗಳಿಗೆ ಪೋಸ್ ನೀಡಿದರು.
ಇದಕ್ಕೂ ಮೊದಲು ಜಾಹ್ನವಿ ತಾವು ರಜಾದಿನಗಳನ್ನು ಕಳೆಸ ಸುಂದರ ಗಿರಿ ಪ್ರದೇಶಗಳ ಮನಮೋಹಕ ಛಾಯಾಚಿತ್ರಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು
Janhvi Kapoor reacted strongly to paparazzi when they asked her father Boney Kapoor to remove the mask for photos
View this post on Instagram
ಇದನ್ನೂ ಓದಿ: Viral Video: ಮುರಿದ ಮನಗಳನ್ನು ಬೆಸೆದ ‘ಕೌನ್ ಬನೇಗಾ ಕರೋಡ್ಪತಿ
ಇದನ್ನೂ ಓದಿ: Viral Video: ಜಾಣಮರಿ ಆನೆಮರಿ ಮಲಗು ಪುಟಾಣಿ: ತುಂಟ ಆನೆಯ ಚಿಣ್ಣಾಟ
Discussion about this post