ಹಾರರ್ ಖ್ಯಾತಿಯ ನಟಿ ಜಾನ್ಹವಿ ಕಪೂರ್ ನಿರುಮ್ಮಳಳಾಗಿದ್ದಾಳೆ. ನಾನು ಈಗ ಪಾತ್ರದಿಂದ ಹೊರಬಂದಿದ್ದೇನೆ ಅಂತ ಆಕೆಯೇ ಹೇಳಿಕೊಂಡಿದ್ದಾಳೆ. ಅದಕ್ಕೆ ಕಾರಣ ಮಲೆಯಾಳಂನ ಹೆಲೆನ್ ಎಂಬ ಹಾರರ್ ಚಿತ್ರ. ಇದರ ಹಿಂದಿ ರಿಮೇಕ್ನಲ್ಲಿ ಜಾನ್ಹವಿ ಪ್ರಮುಖ ಪಾತ್ರಮಾಡುತ್ತಿದ್ದಾರೆ.
ಜಾನ್ಹವಿಗೆ ಹಾರರ್ ಹೊಸತೇನಲ್ಲ. ಗುಂಜನ್ ಸಕ್ಸೇನಾ, ಗೋಸ್ಟ್ ಸ್ಟೋರಿಸ್ ಗಳಂಥ ಚಿತ್ರಗಳಲ್ಲಿ ನಟಿಸಿ ಗೆದ್ದ, ಅನುಭವಿ ನಟಿ. ಈಕೆ ನಟಿಸಿರುವ ಹಾರರ್ ಕಾಮಿಡಿ ರೋಹಿ ತೆರೆಕಾಣಲಿದೆ. ಜಾನ್ಹವಿ 2018ರಲ್ಲಿ ತೆರೆಕಂಡ ದಡಕ್ ಮೂಲಕ ಬಾಲಿವುಡ್ಗೆ ಕಾಲಿಟ್ಟರು.
ಜಾನ್ಹವಿಯನ್ನು ಕಾಡಿಸಿದ್ದು, ದೈಹಿಕ, ಮಾನಸಿಕವಾಗಿ ಸುಸ್ತು ಮಾಡಿದ್ದು ಹೆಲೆನ್ ಚಿತ್ರದ ಕೊನೆಯ ಷೆಡ್ಯುಲ್. ಈ ಚಿತ್ರವನ್ನು ಮಲೆಯಾಳಂನ ಮುತ್ತುಕುಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ಆದರೆ, ಈ ಬಗ್ಗೆ ಬಾಯಿ ಬಿಟ್ಟಿರುವ ಜಾನ್ಹವಿ ‘ನಾನು ಪಾತ್ರಕ್ಕೆ ಸಂಪೂರ್ಣ ಒಪ್ಪಿಸಿಕೊಂಡು ಬಿಡುತ್ತೇನೆ. ಪಾತ್ರಕ್ಕಾಗಿ ಬಹಳ ಕಷ್ಟಪಟ್ಟು ಸಿದ್ಧತೆ ಮಾಡಿಕೊಳ್ಳುವುದು ನನ್ನ ಗುಣ. ಶೇ. 100ಕ್ಕೆ 100ರಷ್ಟು ಪಾತ್ರಕ್ಕೆ ನ್ಯಾಯ ಸಲ್ಲಿಸಬೇಕು ಅನ್ನೋದು ನನ್ನ ಗುರಿ. ಪಾತ್ರ ಮುಗಿಸುವ ಹೊತ್ತಿಗೆ ನಾನು ಸಂಪೂರ್ಣ ದಣಿದು ಸುಸ್ತಾಗಿರಬೇಕು. ಸಾಕಪ್ಪಾ ಸಾಕು ಅಂತ ಮನಸ್ಸು ಹೇಳಬೇಕು. ಹೀಗಾಗದೇ ಇದ್ದರೆ, ಪಾತ್ರಕ್ಕೆ ನನ್ನ ಕೊಡುಗೆ ಇಲ್ಲ ಅಂತ. ಪ್ರತಿ ಸಿನಿಮಾದಿಂದ ನಾನು ಹೊಸತೇನಾದರು ಕಲಿಯುತ್ತಿರುತ್ತೇನೆ’ ಅಂತ ಅರ್ಥ ಎಂದು ವಿವರಣೆ ನೀಡಿದರು.
ಹೆಲನ್ ಚಿತ್ರದ ಕೊನೆಭಾಗದ ಚಿತ್ರೀಕರಣ ಇಂಥದೇ ಅನುಭವ ನೀಡಿದೆಯಂತೆ. ಸಾಮಾನ್ಯಕ್ಕಿಂತ ವಿಭಿನ್ನ ಪಾತ್ರ. ಹಾಗಾಗಿ, ಪಾತ್ರಕ್ಕಾಗಿ ನನ್ನ ಮೇಲೆ ಸ್ವಲ್ಪ ಆತಂಕವನ್ನು ಎಳೆದು ಕೊಳ್ಳಬೇಕಾಯಿತು. ದೈಹಿಕವಾಗಿ, ಮಾನಸಿಕವಾಗಿ ಸಂಪೂರ್ಣ ಸೊರಗುವಂತೆ ಮಾಡಿದೆ. ಅದರಿಂದ ಹೊರಬಂದ ಮೇಲೆ ಈಗ ವಿಶ್ರಾಂತಿ ಪಡೆಯುತ್ತಿದ್ದೇನೆ ಎಂದು ಹೇಳಿ ಕೊಂಡಿರುವ ಜಾನ್ಙವಿ, ಈ ಚಿತ್ರದ ನಿರ್ದೇಕರಿಂದ ಬಹಳಷ್ಟು ಕಲಿತಿದ್ದೇನೆ ಎಂದಿದ್ದಾರೆ.
Janhvi kapoor talks about Film which mentally broke her
ಇದನ್ನೂ ಓದಿ: ಮತ್ತೆ ಸಿನಿಮಾ ಮಾಡುತ್ತಿರುವ ಯಾಮಿ ಗೌತಮ್-ಆದಿತ್ಯ ಧರ್: ಹೆಂಡತಿ ನಟಿ, ಗಂಡ ನಿರ್ದೇಶಕ
ಇದನ್ನೂ ಓದಿ: ಲವ್, ಸಸ್ಪೆನ್ಸ್, ಕ್ರೈಮ್: ಅಮೃತಾ ಅಪಾರ್ಟ್ಮೆಂಟ್ಸ್ ಸಿನಿಮಾ ಬಿಡುಗಡೆಗೆ ಸಜ್ಜು
Discussion about this post