ಬೆಂಗಳೂರು: ಕನ್ನಡದ ಬಹು ಬೇಡಿಕೆಯ ನಟಿಯಾಗಿರುವ ಅದಿತಿ ಪ್ರಭುದೇವ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಹರಿದಾಡಿತ್ತು. ಇದನ್ನು ಸ್ವತಃ ಅವರೇ ಖಚಿತಪಡಿಸಿಕೊಂಡಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಸಂದೇಶ ಪ್ರಕಟಿಸಿರುವ ಅದಿತಿ ಪ್ರಭುದೇವ, ‘ಕನಸೊಂದು ಕನಸಿನಂತೆಯೇ ನಿಜವಾಗಿದೆ’ ಎಂದು ಬರೆದುಕೊಂಡಿದ್ದಾರೆ. ಜತೆಗೆ ಉಂಗುರದ ಚಿಹ್ನೆಯನ್ನೂ #Engaged ಹ್ಯಾಷ್‌ಟ್ಯಾಗ್ ಅನ್ನೂ ಲಗತ್ತಿಸಿದ್ದಾರೆ.
ಈ ಸಂದೇಶಕ್ಕೆ ಅದಿತಿ ಅವರ ಅಭಿಮಾನಿಗಳು, ಸಿನಿಮಾ ರಂಗದ ಗಣ್ಯರು ಸೇರಿದಂತೆ ನೂರಾರು ಮಂದಿ ಶುಭಾಶಯ ಕೋರಿದ್ದಾರೆ.
ಅಂದಹಾಗೆ, ದಾವಣಗೆರೆ ಮೂಲದ ಉದ್ಯಮಿಯೊಂದಿಗೆ ಅದಿತಿ ಪ್ರಭುದೇವ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. ಆದರೆ ಈ ವಿಚಾರವನ್ನು ಅವರು ಸಂದೇಶದಲ್ಲಿ ದೃಢಪಡಿಸಿಲ್ಲ.
ಇನ್ನಷ್ಟು ಸುದ್ದಿಗಳು…
ಇನ್‌ಸ್ಟಾಗ್ರಾಂನಲ್ಲಿ ನಿಕ್ ಜೋನಸ್ ಹೆಸರು ಕೈಬಿಟ್ಟಿದ್ದೇಕೆ? ಇಲ್ಲಿದೆ ಪ್ರಿಯಾಂಕಾ ಚೋಪ್ರಾ ಉತ್ತರ…
ಸೋನಂ ಕಪೂರ್ ಅಥವಾ ಸಾರಾ ಅಲಿ ಖಾನ್, ಯಾರು ಉತ್ತಮ ಸಹ ನಟಿ? ಹೀಗಂದ್ರು ಧನುಷ್…
View this post on Instagram
























Discussion about this post